ಚಹಲ್ ಲೆಗ್​ ಸ್ಪಿನ್​ಗೆ ಯುವತಿ ಕ್ಲೀನ್​ಬೋಲ್ಡ್, ಈಕೆಯೇ ಧನಶ್ರೀ ಜತೆ ವಿಚ್ಛೇದನಕ್ಕೆ ಕಾರಣವಾ? ಯಾರು ಈ ಮಿಸ್ಟರಿ ಗರ್ಲ್‌? VIDEO
ಕನ್ನಡ ಸುದ್ದಿ  /  ಕ್ರಿಕೆಟ್  /  ಚಹಲ್ ಲೆಗ್​ ಸ್ಪಿನ್​ಗೆ ಯುವತಿ ಕ್ಲೀನ್​ಬೋಲ್ಡ್, ಈಕೆಯೇ ಧನಶ್ರೀ ಜತೆ ವಿಚ್ಛೇದನಕ್ಕೆ ಕಾರಣವಾ? ಯಾರು ಈ ಮಿಸ್ಟರಿ ಗರ್ಲ್‌? Video

ಚಹಲ್ ಲೆಗ್​ ಸ್ಪಿನ್​ಗೆ ಯುವತಿ ಕ್ಲೀನ್​ಬೋಲ್ಡ್, ಈಕೆಯೇ ಧನಶ್ರೀ ಜತೆ ವಿಚ್ಛೇದನಕ್ಕೆ ಕಾರಣವಾ? ಯಾರು ಈ ಮಿಸ್ಟರಿ ಗರ್ಲ್‌? VIDEO

Yuzvendra Chahal: ಮುಂಬೈನ ಜುಹು ಹೋಟೆಲ್​ನಲ್ಲಿ ಮಿಸ್ಟರಿ ಗರ್ಲ್​ ಜೊತೆಗೆ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿದೆ ವಿಡಿಯೋ.

ಚಹಲ್ ಲೆಗ್​ ಸ್ಪಿನ್​ಗೆ ಯುವತಿ ಕ್ಲೀನ್​ಬೋಲ್ಡ್, ಈಕೆಯಿಂದಲೇ ಧನಶ್ರೀ ಜತೆ ವಿಚ್ಛೇದನ? ಯಾರು ಈ ಮಿಸ್ಟರಿ ಗರ್ಲ್‌? VIDEO
ಚಹಲ್ ಲೆಗ್​ ಸ್ಪಿನ್​ಗೆ ಯುವತಿ ಕ್ಲೀನ್​ಬೋಲ್ಡ್, ಈಕೆಯಿಂದಲೇ ಧನಶ್ರೀ ಜತೆ ವಿಚ್ಛೇದನ? ಯಾರು ಈ ಮಿಸ್ಟರಿ ಗರ್ಲ್‌? VIDEO

ದೀರ್ಘಕಾಲದಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ದೂರ ಇರುವ ಲೆಗ್​ ಸ್ಪಿನ್ನರ್​ ಯುಜ್ವೇಂದ್ರ ಚಹಲ್ (Yuzvendra Chahal) ಅವರು ತಮ್ಮ ಪತ್ನಿ ಧನಶ್ರೀ ವರ್ಮಾ (Dhanashree Verma) ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದು, ಶೀಘ್ರದಲ್ಲೇ ವಿಚ್ಛೇದನ ಪಡೆಯುತ್ತಾರೆ ಎಂದು ವರದಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪರಸ್ಪರ ಅನ್​ಫಾಲೋ ಮಾಡಿಕೊಂಡಿರುವುದು, ಧನಶ್ರೀ ಜತೆಗಿನ ಫೋಟೋಗಳನ್ನು ಚಹಲ್ ಡಿಲೀಟ್ ಮಾಡಿರುವುದು ಇದಕ್ಕೆ ಪುಷ್ಠಿ ನೀಡಿದೆ. ಹಾಗಂತ ಇಬ್ಬರು ಎಲ್ಲಿಯೂ ಹೇಳಿಲ್ಲ, ಅಧಿಕೃತ ಪೋಸ್ಟ್ ಮಾಡಿಲ್ಲ. ಇದಕ್ಕೆ ಕಾರಣವೂ ತಿಳಿದು ಬಂದಿಲ್ಲ. ಈ ವಿಚ್ಛೇದನ ವದಂತಿ ನಡುವೆ ಚಹಲ್​, ಮಿಸ್ಟರಿ ಗರ್ಲ್ (Mystery Girl) ಜತೆಗೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಮುಂಬೈನ ಜುಹುನ ಜೆಡಬ್ಲ್ಯು ಮ್ಯಾರಿಯಟ್​ ಹೋಟೆಲ್​ನಲ್ಲಿ ಒಬ್ಬ ಯುವತಿಯೊಂದಿಗೆ ಚಹಲ್ ಕಾಣಿಸಿಕೊಂಡಿದ್ದಾರೆ. ಬಳಿಕ ಅದೇ ಯುವತಿಯೊಂದಿಗೆ ಚಹಲ್ ಕಾರಿನಲ್ಲೂ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮದ ಕ್ಯಾಮರಾಗಳು ಅವರನ್ನು ಸೆರೆ ಹಿಡಿಯಲು ಪ್ರಯತ್ನಿಸಿದಾಗ, ಈ ಭಾರತೀಯ ಕ್ರಿಕೆಟಿಗ ತನ್ನ ಮುಖ ಮರೆಮಾಚಿದ್ದಾರೆ. ಇದೀಗ ಧನಶ್ರೀ-ಚಹಲ್ ವಿಚ್ಛೇದನದ ಸುದ್ದಿಗೆ ಈ ಮಿಸ್ಟರಿ ಗರ್ಲ್ ಕಾರಣವೇ ಎಂಬ ಚರ್ಚೆಗಳು ಆರಂಭಗೊಂಡಿವೆ. ಆದರೆ ಆ ಮಿಸ್ಟರಿ ಗರ್ಲ್​ ಯಾರು, ಎಲ್ಲಿಯವರು, ಚಹಲ್​ ಜೊತೆಗೆ ಇದ್ದಿದ್ದೇಕೆ ಎನ್ನುವ ಮಾಹಿತಿ ಎಲ್ಲಿಯೂ ಬಹಿರಂಗಗೊಂಡಿಲ್ಲ. ಅಲ್ಲದೆ, ಅಭಿಮಾನಿಗಳು ಸಹ ಬಗೆಬಗೆ ಕಾಮೆಂಟ್​ಗಳ ಮೂಲಕ ಪ್ರತಿಕ್ರಿಯಿಸಿ, ತರಾಟೆ ತೆಗೆದುಕೊಂಡಿದ್ದಾರೆ. ವಿಡಿಯೋ ಒಂದನ್ನು bollytellybuzz ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.

2023ರಲ್ಲೇ ಹಬ್ಬಿತ್ತು ವಿಚ್ಛೇದನದ ವದಂತಿ

2023ರಲ್ಲಿ ಧನಶ್ರೀ ವರ್ಮಾ ತಮ್ಮ ಇನ್​ಸ್ಟಾಗ್ರಾಂನಿಂದ ಚಹಲ್ ಉಪನಾಮ ತೆಗೆದುಹಾಕಿದ್ದರು. ಇಲ್ಲಿಂದ ವಿಚ್ಛೇದನ ವದಂತಿ ಆರಂಭವಾಯಿತು. ನಂತರ ಚಹಲ್ ಹೊಸ ಜೀವನ ಲೋಡಿಂಗ್ ಎಂದು ಪೋಸ್ಟ್ ಹಾಕಿದ್ದರು. ಇದು ವದಂತಿಗೆ ಪುಷ್ಠಿ ನೀಡಿತ್ತು. ಇದಾಗಿಯೂ ನಾನಾ ಕಥೆಗಳು ಹುಟ್ಟಿಕೊಂಡವು. ಇದೀಗ ವಿಷಯ ಇತ್ಯರ್ಥವಾಗಿದೆ ಎಂದು ಹೇಳಲಾಗುತ್ತಿದೆ. ಇಬ್ಬರು ಬೇರೆ ಬೇರೆ ದಾರಿಯಲ್ಲಿ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಇಬ್ಬರು ವಿಚ್ಛೇದನಕ್ಕೆ ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

ಲಾಕ್​ಡೌನ್​ನಲ್ಲಿ ಭೇಟಿ, ನಂತರ ಲವ್ ಮತ್ತು ಮದುವೆ

ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಮೊದಲು ಭೇಟಿಯಾಗಿದ್ದು ಲಾಕ್​ಡೌನ್​ನಲ್ಲಿ. ಚಹಲ್ ತನ್ನನ್ನು ಡ್ಯಾನ್ಸ್ ಕಲಿಯಲು ಸಂಪರ್ಕಿಸಿದ್ದಾಗಿ ಧನಶ್ರೀ ರಿಯಾಲಿಟಿ ಶೋವೊಂದರಲ್ಲಿ ಧನಶ್ರೀ ಹೇಳಿದ್ದಾರೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಪ್ರೀತಿಗೆ ತಿರುಗಿತ್ತು. ಚಹಲ್ ಮತ್ತು ಧನಶ್ರೀ 2020ರ ಡಿಸೆಂಬರ್​​ನಲ್ಲಿ ಅದ್ಧೂರಿಯಾಗಿ ವಿವಾಹವಾದರು. ಇದೀಗ 4 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮ ಇಡಲು ನಿರ್ಧರಿಸಿದ್ದಾರೆ ಎಂಬುದು ಅಚ್ಚರಿ ಮೂಡಿಸಿದೆ. ಇತ್ತೀಚೆಗಷ್ಟೇ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಡಿವೋರ್ಸ್ ಪಡೆದಿದ್ದರು. ಅದಕ್ಕೂ ಮುನ್ನ ಶಿಖರ್ ಧವನ್ ತನ್ನ ಪತ್ನಿ ಆಯೇಷಾ ಮುಖರ್ಜಿ ಅವರಿಂದ ವಿಚ್ಛೇದನ ಪಡೆದಿದ್ದರು.

Whats_app_banner