ಧನಶ್ರೀ ಜೊತೆಗಿನ ವಿಚ್ಛೇದನ ವದಂತಿ ಮಧ್ಯೆ ಯುಜ್ವೇಂದ್ರ ಚಹಲ್ ಹಳೆಯ ಲವ್ಸ್ಟೋರಿ ವೈರಲ್, ಯಾರು ಆ ಕನ್ನಡ ನಟಿ?
ಧನಶ್ರೀ ವರ್ಮಾ ಅವರೊಂದಿಗೆ ಯುಜ್ವೇಂದ್ರ ಚಹಲ್ ಮದುವೆ ಆಗೋದಕ್ಕೂ ಮುನ್ನ ಬೇರೊಬ್ಬರನ್ನು ಪ್ರೀತಿಸುತ್ತಿದ್ದ ಎಂಬ ಸಂಗತಿ ಬಹುತೇಕರಿಗೆ ಗೊತ್ತಿಲ್ಲ. ಇಷ್ಟಕ್ಕೂ ಚಹಲ್ ಜೊತೆಗೆ ಲವ್ನಲ್ಲಿ ಬಿದ್ದ ಆ ಬ್ಯೂಟಿ ಯಾರು? ಇಲ್ಲಿದೆ ವಿವರ.
ಟೀಮ್ ಇಂಡಿಯಾ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ಜೊತೆಗೆ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಹಬ್ಬಿದೆ. ಇಬ್ಬರು ಬೇರ್ಪಡುವುದು ಖಚಿತ ಎನ್ನುವುದನ್ನು ಖಚಿತಪಡಿಸಿವೆ ಮೂಲಗಳು. ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಇಬ್ಬರು ಅನ್‌ಫಾಲೋ ಮಾಡಿರುವುದು ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಚಹಲ್, ತನ್ನ ಪತ್ನಿ ಧನಶ್ರೀ ಜೊತೆಗಿನ ಫೋಟೋಗಳನ್ನು ಅಳಿಸಿದ್ದಾರೆ. ಪ್ರಸ್ತುತ ಕ್ರಿಕೆಟ್ ಸರ್ಕಲ್ನಲ್ಲಿ ಈ ವಿಷಯವೇ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ.
ಪ್ರಸ್ತುತ ಭಾರತ ತಂಡದೊಂದಿಗೆ ಬಹುತೇಕ ಅವಕಾಶ ಕಳೆದುಕೊಂಡಿರುವ ಯುಜ್ವೇಂದ್ರ ಚಹಲ್, 2025ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ನವೆಂಬರ್ ಅಂತ್ಯದಲ್ಲಿ ಜರುಗಿದ ಐಪಿಎಲ್ ಮೆಗಾ ಆಕ್ಷನ್ನಲ್ಲಿ 18 ಕೋಟಿ ರೂಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾದರು. ಸದ್ಯ ಡಿವೋರ್ಸ್ ವದಂತಿಯ ನಡುವೆ ಚಹಲ್ ಹಳೆಯ ಲವ್ಸ್ಟೋರಿ ವೈರಲ್ ಆಗುತ್ತಿದೆ. ಚಹಲ್ ಮದುವೆ ಆಗುವುದಕ್ಕೂ ಮುನ್ನ ಬೇರೊಬ್ಬರನ್ನು ಪ್ರೀತಿಸುತ್ತಿದ್ದರು. ಈ ಸಂಗತಿ ಬಹುತೇಕ ಮಂದಿಗೆ ಗೊತ್ತಿಲ್ಲ. ಇಷ್ಟಕ್ಕೂ ಚಹಲ್ ಜೊತೆಗೆ ಲವ್ನಲ್ಲಿ ಬಿದ್ದಿದ್ದ ಆ ಬ್ಯೂಟಿ ಯಾರು?
ಯುಜ್ವೇಂದ್ರ ಚಹಲ್ ಫಸ್ಟ್ ಲವ್?
ಧನಶ್ರೀಗೂ ಮುಂಚೆ ಚಹಲ್ ಡೇಟಿಂಗ್ ನಡೆಸುತ್ತಿದ್ದ ಹುಡುಗಿಯ ಹೆಸರು ತನಿಷ್ಕಾ ಕಪೂರ್ (Tanishka Kapoor). ಆದರೆ ಆಕೆ ಯೂಟ್ಯೂಬರ್, ನರ್ತಕಿ ಅಲ್ಲ. ಸಾಮಾಜಿಕ ಮಾಧ್ಯಮದ ಪ್ರಭಾವಿಯಂತೂ ಅಲ್ಲವೇ ಅಲ್ಲ. ಆಕೆ ನಟಿ ಮತ್ತು ಉದ್ಯಮಿ. ತನಿಷ್ಕಾ ಅವರು ಒಬ್ಬ ಉದ್ಯಮಿ. ಮಹಿಳೆಯರ ಉಡುಪುಗಳಿಗೆ ಸಂಬಂಧಿಸಿ ಸ್ವಂತ ಆನ್‌ಲೈನ್ ವ್ಯಾಪಾರ ಪ್ರಾರಂಭಿಸಿದ್ದರು ಎಂದು ವರದಿಗಳು ತಿಳಿಸಿವೆ. ಅವರು ಕನ್ನಡದ ನಟಿಯೂ ಹೌದು ಎಂಬುದು ವಿಶೇಷ. ಕನ್ನಡದ ಫಸ್ಟ್ ರ್ಯಾಂಕ್ ರಾಜು ಸಿನಿಮಾದಲ್ಲಿ ಅವರು ನಟಿಸಿದ್ದರು. ತನಿಷ್ಕಾ-ಚಹಲ್ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಬ್ಬರು ಮದುವೆಯಾಗುತ್ತಾರೆ ಎಂದೂ ವರದಿಯಾಗಿತ್ತು.
ಚಹಲ್-ತನಿಷ್ಕಾ ತುಂಬಾ ಆಪ್ತರಾಗಿದ್ದ ಕಾರಣ ಅವರಿಬ್ಬರು ಲವ್ನಲ್ಲಿದ್ದಾರೆ ಎಂಬ ಗುಸು ಗುಸು ಆರಂಭಗೊಂಡಿತ್ತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ತನಿಷ್ಕಾ ಮತ್ತು ಯುಜಿ ಒಟ್ಟಿಗೆ ಅನೇಕ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರು ಪರಸ್ಪರ ಲವ್ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಹೀಗಿದ್ದವರು ದಿಢೀರ್ ಆಗಿ ಬೇರೆಯಾದರು. ಆದಾಗ್ಯೂ, ಈ ಪ್ರೇಮ ಪಕ್ಷಿಗಳು ಬೇರ್ಪಡಲು ಕಾರಣವೇನು? ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರೂ ಅನ್‌ಫಾಲೋ ಮಾಡಿಕೊಳ್ಳಲು ಅಸಲಿ ಕಾರಣ ಏನು ಎಂಬುದು ರಹಸ್ಯವಾಗಿಯೇ ಉಳಿದಿದೆ ಎಂದು ವರದಿಯಾಗಿದೆ.
ಚಹಲ್-ಧನಶ್ರೀ ಲವ್ಸ್ಟೋರಿ
ಚಹಲ್ ಮತ್ತು ಧನಶ್ರೀ ಮಧ್ಯೆ ಲವ್ ಹುಟ್ಟಿದ್ದು ಲಾಕ್ಡೌನ್ ಅವಧಿಯಲ್ಲಿ. ಕೊರೊನಾ ಕಾಲಘಟ್ಟದಲ್ಲಿ ಮನೆಯಲ್ಲೇ ಕೂತಿದ್ದ ಚಹಲ್, ಡ್ಯಾನ್ಸ್ ಕೊರಿಯೋಗ್ರಾಫರ್ ಧನಶ್ರೀ ಅವರ ವಿಡಿಯೋಗಳನ್ನು ನೋಡಿ ಇಂಪ್ರೆಸ್ ಆಗಿದ್ದರು. ಇದೇ ವೇಳೆ ತಾನು ಡ್ಯಾನ್ಸ್ ಕಲಿಯಬೇಕು ಎಂದು ನಿರ್ಧರಿಸಿದ್ದ ಸ್ಪಿನ್ನರ್, ಧನಶ್ರೀ ಅವರಿಗೆ ಮೆಸೇಜ್ ಮಾಡಿದ್ದರು. ನನಗೂ ಡ್ಯಾನ್ಸ್ ಕಲಿಸಬೇಕು ಎಂದು ಕೇಳಿದ್ದರು. ಇದಕ್ಕೆ ಒಪ್ಪಿದ್ದ ಧನಶ್ರೀ ಆನ್ಲೈನ್ನಲ್ಲೇ ಕ್ಲಾಸ್ ಆರಂಭಿಸಿದ್ದರು. ಇಲ್ಲಿಂದ ಇಬ್ಬರ ಪರಿಚಯ ಸ್ನೇಯವಾಯಿತು. ಬಳಿಕ ಪ್ರೀತಿಗೆ ಬಿದ್ದರು. ಈ ಬಗ್ಗೆ ಮನೆಯಲ್ಲೂ ಒಪ್ಪಿಸಿದ್ದರು.
ಚಹಲ್ ಮತ್ತು ಧನಶ್ರೀ ಇಬ್ಬರ ಮೊದಲ ಪರಿಚಯದಲ್ಲಿ ಡ್ಯಾನ್ಸ್ ಬಿಟ್ಟು ಬೇರೆ ಏನನ್ನೂ ಮಾತನಾಡಿರಲಿಲ್ಲವಂತೆ. ನಂತರದ ದಿನಗಳಲ್ಲಿ ಲಾಕ್‌ಡೌನ್‌ನಲ್ಲಿ ಹೇಗೆ ಇಷ್ಟೊಂದು ಸಂತೋಷದಿಂದ ಇದ್ದೀರಾ ಎಂದು ಆಕೆಗೆ ಚಹಲ್, ಕೇಳಿದ್ದರಂತೆ. ಈ ಮೆಸೇಜ್ ಅವರ ಪರಿಚಯ ಮತ್ತಷ್ಟು ಹೆಚ್ಚಾಗುವಂತೆ ಮಾಡಿತು. ಮನೆಯಲ್ಲಿ ಒಪ್ಪಿಸಿದ್ದ ಈ ಜೋಡಿ, ಯಾವುದೇ ಡೇಟಿಂಗ್ ನಡೆಸಿರಲಿಲ್ಲ. ಡೇಟಿಂಗ್ ಎಲ್ಲಾ ಇಷ್ಟವಿಲ್ಲ, ಡೈರೆಕ್ಟ್ ಮದುವೆ ಆಗೋಣ ಎಂದು ಧನಶ್ರೀಗೆ ಚಹಲ್ ಪ್ರಪೋಸ್ ಮಾಡಿದ್ದರಂತೆ. ಅದಕ್ಕೆ ಧನಶ್ರೀ ಅವರು ಒಪ್ಪಿಗೆ ನೀಡಿದ್ದರಂತೆ. ತಮ್ಮ ಲವ್ಸ್ಟೋರಿ ಬಗ್ಗೆ ಧನಶ್ರೀ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದರು.