ಕನ್ನಡ ಸುದ್ದಿ  /  ಕ್ರಿಕೆಟ್  /  ಜಿಂಬಾಬ್ವೆ ಮಾರಕ ದಾಳಿಗೆ ಕುಸಿದ ಟೀಮ್ ಇಂಡಿಯಾ; ಹೀನಾಯ ಸೋಲಿಗೆ ಶರಣಾದ ಟಿ20 ವಿಶ್ವಕಪ್ ಚಾಂಪಿಯನ್

ಜಿಂಬಾಬ್ವೆ ಮಾರಕ ದಾಳಿಗೆ ಕುಸಿದ ಟೀಮ್ ಇಂಡಿಯಾ; ಹೀನಾಯ ಸೋಲಿಗೆ ಶರಣಾದ ಟಿ20 ವಿಶ್ವಕಪ್ ಚಾಂಪಿಯನ್

Zimbabwe beat India: ಹರಾರೆಯ ಸ್ಪೋರ್ಟ್ಸ್ ಕ್ಲಬ್​ನಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡ 13 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಸೋತ ಭಾರತ ಮುಖಭಂಗಕ್ಕೆ ಒಳಗಾಗಿದೆ.

ಜಿಂಬಾಬ್ವೆ ಮಾರಕ ದಾಳಿಗೆ ಕುಸಿದ ಟೀಮ್ ಇಂಡಿಯಾ; ಹೀನಾಯ ಸೋಲಿಗೆ ಶರಣಾದ ಟಿ20 ವಿಶ್ವಕಪ್ ಚಾಂಪಿಯನ್
ಜಿಂಬಾಬ್ವೆ ಮಾರಕ ದಾಳಿಗೆ ಕುಸಿದ ಟೀಮ್ ಇಂಡಿಯಾ; ಹೀನಾಯ ಸೋಲಿಗೆ ಶರಣಾದ ಟಿ20 ವಿಶ್ವಕಪ್ ಚಾಂಪಿಯನ್

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡ, ಇಂದಿನಿಂದ (ಜುಲೈ 6) ಆರಂಭಗೊಂಡ ಐದು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ (Ind vs Zim 1st T20) ವಿರುದ್ಧ ಸಾಧಾರಣ ಗುರಿ ಬೆನ್ನಟ್ಟಲು ವಿಫಲವಾಗಿ ಅವಮಾನಕರ ಸೋಲಿಗೆ ಶರಣಾಗಿದೆ. ಶುಭ್ಮನ್ ಗಿಲ್ ನೇತೃತ್ವದ ಯುವಕರ ತಂಡವು ಜಿಂಬಾಬ್ವೆ ತಂಡವನ್ನು ಸೋಲಿಸುವ ಅತಿಯಾದ ಆತ್ಮವಿಶ್ವಾಸದಲ್ಲಿತ್ತು. ಆದರೀಗ ಹಗುರವಾಗಿ ಪರಿಗಣಿಸಿ 13 ರನ್​ಗಳ ಅಂತರದಿಂದ ಸೋತು ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಇದರೊಂದಿಗೆ ಆತಿಥೇಯ ತಂಡ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಮತ್ತೊಂದೆಡೆ ಜಿಂಬಾಬ್ವೆ ರೋಚಕ ಗೆಲುವು ಸಾಧಿಸಿ ಟೀಮ್ ಇಂಡಿಯಾ ವಿರುದ್ಧ ಟಿ20ಐ ಗೆಲುವುಗಳ ಸಂಖ್ಯೆಯನ್ನು 3ಕ್ಕೆ ವಿಸ್ತರಿಸಿಕೊಂಡಿತು. ಸಿಕಂದರ್ ರಾಜಾ ಪಡೆಯ ಚಾಣಾಕ್ಷ ಆಟಕ್ಕೆ ಮತ್ತು ಮಾರಕ ದಾಳಿಗೆ ಭಾರತದ ಯುವ ಪಡೆ ಆಘಾತಕಾರಿ ಕುಸಿತ ಕಂಡಿತು. ಹರಾರೆ ಸ್ಪೋರ್ಟ್ಸ್​​ ಕ್ಲಬ್​ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆತಿಥೇಯ ತಂಡವು ತನ್ನ ಪಾಲಿನ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಗಳಿಸಿದ್ದು, 102 ಮಾತ್ರ. ಈ ಗುರಿ ಬೆನ್ನಟ್ಟಿದ ಭಾರತ 19.5 ಓವರ್​​ಗಳಲ್ಲಿ 102 ರನ್ ಗಳಿಸಲಷ್ಟೇ ಶಕ್ತವಾಯಿತು. ಟೆಂಡೈ ಚಾತರ ಮತ್ತು ಸಿಕಂದರ್ ರಾಜಾ ತಲಾ 3 ವಿಕೆಟ್ ಪಡೆದು ಮೆನ್ ಇನ್ ಬ್ಲ್ಯೂ ಕುಸಿತಕ್ಕೆ ಕಾರಣರಾದರು.

ಎರಡಂಕಿ ದಾಟಿದ್ದೇ ಮೂವರು

ಐಪಿಎಲ್​ನಲ್ಲಿ ಅಬ್ಬರಿಸಿದ್ದ ಯುವ ಆಟಗಾರರನ್ನು ಈ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ಶುಭ್ಮನ್ ಗಿಲ್ ನಾಯಕತ್ವದಲ್ಲಿ ಯುವಕರ ತಂಡವನ್ನು ಜಿಂಬಾಬ್ವೆಗೆ ಕಳುಹಿಸಲಾಗಿದೆ. ಆದರೆ, ಮೊದಲ ಬಾರಿಗೆ ಟೀಮ್ ಇಂಡಿಯಾ ನಾಯಕತ್ವ ವಹಿಸಿದ ಗಿಲ್​ ಸೋಲಿನ ಕಹಿ ಕಂಡಿದ್ದಾರೆ. ಅಲ್ಲದೆ, 116 ರನ್​​ಗಳ ಅಲ್ಪಮೊತ್ತವನ್ನು ಬೆನ್ನಟ್ಟಲು ವಿಫಲವಾದ ಯಂಗ್ ಇಂಡಿಯಾ ಪರ ಮೂವರಷ್ಟೇ ಎರಡಂಕಿ ಸ್ಕೋರ್ ಮಾಡಿದ್ದಾರೆ. ಶುಭ್ಮನ್ ಗಿಲ್ (31), ವಾಷಿಂಗ್ಟನ್ ಸುಂದರ್​ (27), ಆವೇಶ್ ಖಾನ್ (16) ಎರಡಂಕಿ ಸ್ಕೋರ್ ಮಾಡಿದ್ದಾರೆ. ಉಳಿದವರು ರನ್ ಗಳಿಸಲು ತಿಣುಕಾಡಿದ್ದಾರೆ.

ಟಿ20ಐ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅಭಿಷೇಕ್​ ಶರ್ಮಾ ಡಕೌಟ್ ಆದರೆ, ರಿಯಾನ್ ಪರಾಗ್ 2 ರನ್​ಗೆ ಸುಸ್ತಾದರು. ಮತ್ತೊಂದೆಡೆ ಧ್ರುವ್ ಜುರೆಲ್ 6 ರನ್ ಗಳಿಸಲಷ್ಟೇ ಶಕ್ತರಾದರು. ಮೂವರು ಐಪಿಎಲ್​​ನಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. ಆದರೆ ಭಾರತ ಪರ ತಮ್ಮ ಮೊದಲ ಟಿ20ಐನಲ್ಲೇ ನಿರಾಸೆ ಮೂಡಿಸಿದರು. ಈಗಾಗಲೇ ಭಾರತದ ಪರ ಆಡಿದ ಅನುಭವ ಹೊಂದಿರುವ ಋತುರಾಜ್ ಗಾಯಕ್ವಾಡ್ 7, ರಿಂಕು ಸಿಂಗ್ ಡಕೌಟ್ ಆಗಿ ಸೋಲಿಗೆ ಕಾರಣರಾದರು. ಜಿಂಬಾಬ್ವೆ ಪರ ಟೆಂಡೈ ಚಾತರ ಮತ್ತು ಸಿಕಂದರ್ ರಾಜಾ ತಲಾ ಮೂರು ವಿಕೆಟ್ ಪಡೆದು ಅಬ್ಬರಿಸಿದರು. ಬ್ರಿಯಾನ್ ಬೆನ್ನೆಟ್, ವೆಲ್ಲಿಂಗ್ಟನ್ ಮಸಕಡ್ಜಾ, ಮುಜರಾಬಾನಿ, ಲ್ಯೂಕ್ ಜೊಂಗ್ವೆ ತಲಾ 1 ವಿಕೆಟ್ ಪಡೆದರು.

ಭಾರತೀಯ ಬೌಲರ್​​ಗಳು ಅಬ್ಬರ

ಜಿಂಬಾಬ್ವೆ ಬ್ಯಾಟಿಂಗ್​ ವೇಳೆ ಭಾರತೀಯ ಬೌಲರ್​​ಗಳು ಅಬ್ಬರದ ಪ್ರದರ್ಶನ ನೀಡಿದರು. ಜಿಂಬಾಬ್ವೆ ಬ್ಯಾಟರ್​ಗಳು ಸಹ ರನ್ ಗಳಿಸಲು ಪರದಾಡಿದರು. ರವಿ ಬಿಷ್ಣೋಯ್ 4 ವಿಕೆಟ್ ಉರುಳಿಸಿ ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ವೆಸ್ಲಿ ಮಾಧೆವೆರೆ (21), ಬ್ರಿಯಾನ್ ಬೆನೆಟ್ (22), ಸಿಕಂದರ್ ರಾಜಾ (17), ಡಿಯೋನ್ ಮೈಯರ್ಸ್ (23), ಕ್ಲೈವ್ ಮದಂಡೆ (29) ಅವರು ತಕ್ಕಮಟ್ಟಿಗೆ ಸ್ಕೋರ್ ಮಾಡಿದರು. ಇನ್ನೋಸೆಂಟ್ ಕಿಯಾ, ಜೋನಾಥನ್ ಕ್ಯಾಂಪ್ಬೆಲ್, ವೆಲ್ಲಿಂಗ್ಟನ್ ಮಸಕಡ್ಜಾ, ಮುಜರಾಬಾನಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಭಾರತದ ಪರ ಬಿಷ್ಣೋಯ್​ಗೆ ವಾಷಿಂಗ್ಟನ್ ಸುಂದರ್ 2 ವಿಕೆಟ್, ಮುಕೇಶ್ ಕುಮಾರ್, ಆವೇಶ್ ಖಾನ್ ತಲಾ 1 ವಿಕೆಟ್ ಪಡೆದು ಸಾಥ್ ಕೊಟ್ಟರು. ಆದರೆ ಬೌಲರ್​​ಗಳು ಅಬ್ಬರಿಸಿದರೂ ಬ್ಯಾಟರ್​ಗಳು ಕೈಕೊಟ್ಟ ಕಾರಣ ಭಾರತ ಸೋಲು ಕಂಡಿತು.