ಭಾರತದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ, 3ನೇ ಅವಧಿಗೆ ನರೇಂದ್ರ ಮೋದಿಗೆ ಅಧಿಕಾರ; ಭವಿಷ್ಯ ನುಡಿದ ಮತಗಟ್ಟೆ ಸಮೀಕ್ಷೆಗಳು
ಕನ್ನಡ ಸುದ್ದಿ  /  ಚುನಾವಣೆಗಳು  /  ಭಾರತದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ, 3ನೇ ಅವಧಿಗೆ ನರೇಂದ್ರ ಮೋದಿಗೆ ಅಧಿಕಾರ; ಭವಿಷ್ಯ ನುಡಿದ ಮತಗಟ್ಟೆ ಸಮೀಕ್ಷೆಗಳು

ಭಾರತದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ, 3ನೇ ಅವಧಿಗೆ ನರೇಂದ್ರ ಮೋದಿಗೆ ಅಧಿಕಾರ; ಭವಿಷ್ಯ ನುಡಿದ ಮತಗಟ್ಟೆ ಸಮೀಕ್ಷೆಗಳು

ಲೋಕಸಭಾ ಚುನಾವಣೆ 2024 ಅಂತಿಮ ಹಂತದ ಮತದಾನ ಮುಗಿದು ಈಗ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾದವು. ಭಾರತದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗುವುದು ಖಚಿತ ಮತ್ತು 3ನೇ ಅವಧಿಗೆ ನರೇಂದ್ರ ಮೋದಿಗೆ ಅಧಿಕಾರ ಸಿಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದರ ವಿವರ ಇಲ್ಲಿದೆ.

ಭಾರತದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ, 3ನೇ ಅವಧಿಗೆ ನರೇಂದ್ರ ಮೋದಿಗೆ ಅಧಿಕಾರ ಸಿಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಭಾರತದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ, 3ನೇ ಅವಧಿಗೆ ನರೇಂದ್ರ ಮೋದಿಗೆ ಅಧಿಕಾರ ಸಿಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಬೆಂಗಳೂರು/ನವದೆಹಲಿ: ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿದ್ದು, ಬಹುತೇಕ ಎಲ್ಲ ಸಮೀಕ್ಷೆಗಳು ಮತ್ತೊಂದು ಅವಧಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂಬ ಸುಳಿವು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಮೂರನೆ ಅವಧಿಗೆ ಆಡಳಿತ ನಡೆಸುವುದು ಬಹುತೇಕ ಖಚಿತವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಘೋ‍ಷಿಸಿದ ಪ್ರಕಾರ ಎನ್‌ಡಿಎಗೆ ಈ ಸಲ 400ಕ್ಕೂ ಹೆಚ್ಚು ಸ್ಥಾನಗಳಿಸುವ ಸುಳಿವು ಕಾಣದೇ ಇದ್ದರೂ, ಬಹುತೇಕ ಸಮೀಕ್ಷೆಗಳು ಎನ್‌ಡಿಎಗೆ ಬಹುಮತ ಎಂಬುದನ್ನು ಸ್ಪಷ್ಟಪಡಿಸಿವೆ. ಜನ್‌ ಕೀ ಬಾತ್ ಸಮೀಕ್ಷೆ ಮಾತ್ರ ಎನ್‌ಡಿಎ 392 ಸ್ಥಾನಗಳ ತನಕವೂ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.

ಲೋಕಸಭೆ ಚುನಾವಣೆಯ ಕೊನೆಯ ಹಂತದ ಮುಕ್ತಾಯದ ನಂತರ ಶನಿವಾರ ಪ್ರಕಟವಾದ ಬಹುತೇಕ ಎಕ್ಸಿಟ್ ಪೋಲ್ ಫಲಿತಾಂಶಗಳು, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 350 ಪ್ಲಸ್ ಸ್ಥಾನಗಳನ್ನು ಗಳಿಸುವ ಮೂಲಕ ಸರಳಬಹುಮತದ ಗಡಿಯನ್ನಷ್ಟೇ ಅಲ್ಲ ಸ್ಪಷ್ಟ ಬಹುಮತ ಪಡೆಯಲಿದೆ ಎಂಬುದನ್ನು ತೋರಿಸಿದೆ. ಇಂಡಿಯಾ ಬ್ಲಾಕ್ 180 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ.

ರಿಪಬ್ಲಿಕ್ ಟಿವಿ ಪಿಎಂಎಆರ್‌ಕ್ಯೂ ಮತಗಟ್ಟೆ ಸಮೀಕ್ಷೆ

ಎನ್‌ಡಿಎ 359

ಐಎನ್‌ಡಿಐಎ 154

ಇತರರು 30

ಜನ್‌ ಕೀ ಬಾತ್ ಮತಗಟ್ಟೆ ಸಮೀಕ್ಷೆ

ಎನ್‌ಡಿಎ 362 ರಿಂದ 392

ಐಎನ್‌ಡಿಎಐ 141- 161

ಇತರರು - 10- 20

ಇಂಡಿಯಾ ನ್ಯೂಸ್ ಡಿ - ಡೈನಾಮಿಕ್ಸ್ ಮತಗಟ್ಟೆ ಸಮೀಕ್ಷೆ

ಎನ್‌ಡಿಎ - 371

ಐಎನ್‌ಡಿಐಎ - 125

ಇತರರು- 47

ರಿಪಬ್ಲಿಕ್ ಟಿವಿ - ಮಾಟ್ರಿಝ್‌ ಮತಗಟ್ಟೆ ಸಮೀಕ್ಷೆ

ಎನ್‌ಡಿಎ - 353 ರಿಂದ 368

ಐಎನ್‌ಡಿಎಐ - 118 ರಿಂದ 133

ಇತರರು - 43 ರಿಂದ 48

ಎನ್‌ಡಿಟಿವಿ ಇಂಡಿಯಾ ಮತಗಟ್ಟೆ ಸಮೀಕ್ಷೆ

ಎನ್‌ಡಿಎ - 365

ಐಎನ್‌ಡಿಎಐ - 142

ಇತರರು - 36

ಲೋಕಸಭಾ ಚುನಾವಣೆಯ ನಾಲ್ಕು ಮತಗಟ್ಟೆ ಸಮೀಕ್ಷೆಗಳು (ಎಕ್ಸಿಟ್ ಪೋಲ್‌ಗಳು) ಎನ್‌ಡಿಎ 350 ಪ್ಲಸ್ ಸೀಟುಗಳನ್ನು ಪಡೆದರೂ 400 ಸೀಟುಗಳನ್ನು ದಾಟಲು ವಿಫಲವಾಗಲಿದೆ ಎಂದು ಸೂಚಿಸುತ್ತವೆ. ಆದರೆ, ಇಂಡಿಯಾ ಬ್ಲಾಕ್ ಹಿಂದೆಯೇ ಉಳಿದಿದೆ.

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರಕಟವಾಗುವ ಮೊದಲು, ಇಂಡಿಯಾ ಬ್ಲಾಕ್ ಪಕ್ಷಗಳು 295ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿವೆ. ನಮ್ಮ ಬಳಿ ಜನರ ಸಮೀಕ್ಷೆ ಇದೆ ಎಂದು ಹೇಳಿದರು.

ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು

Whats_app_banner