Explainer: ಚುನಾವಣೆ ಟಿಕೆಟ್‌ ಎಂದರೇನು, ಬಿ ಫಾರಂನ ಮಹತ್ವ ಎಷ್ಟಿದೆ, ಸಿ ಫಾರಂ ಬಳಕೆ ಯಾವಾಗ?-explainer lok sabha elections 2024 what is getting of election ticket importance of b form when will be c form used kub ,ಚುನಾವಣೆಗಳು ಸುದ್ದಿ
ಕನ್ನಡ ಸುದ್ದಿ  /  ಚುನಾವಣೆಗಳು  /  Explainer: ಚುನಾವಣೆ ಟಿಕೆಟ್‌ ಎಂದರೇನು, ಬಿ ಫಾರಂನ ಮಹತ್ವ ಎಷ್ಟಿದೆ, ಸಿ ಫಾರಂ ಬಳಕೆ ಯಾವಾಗ?

Explainer: ಚುನಾವಣೆ ಟಿಕೆಟ್‌ ಎಂದರೇನು, ಬಿ ಫಾರಂನ ಮಹತ್ವ ಎಷ್ಟಿದೆ, ಸಿ ಫಾರಂ ಬಳಕೆ ಯಾವಾಗ?

ಯಾವುದೇ ಚುನಾವಣೆಯಲ್ಲಿ ಪ್ರಕ್ರಿಯೆಗಳೇ ಮುಖ್ಯ. ಅದರಲ್ಲೂ ಅಭ್ಯರ್ಥಿಗಳಲ್ಲದೇ ಚುನಾವಣೆಯೇ ನಡೆಯೋಲ್ಲ. ಅದರಲ್ಲೂ ಅಭ್ಯರ್ಥಿ ಆಯ್ಕೆ ಟಿಕೆಟ್‌ ಹಂಚಿಕೆ, ರಾಜಕೀಯ ಪಕ್ಷಗಳು ಘೋಷಿತ ಅಭ್ಯರ್ಥಿಗಳಿಗೆ ನೀಡುವ ಫಾರಂಗಳ ಕುರಿತು ಮಾಹಿತಿ ಇಲ್ಲಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.
ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

ಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಆ ಮೂಲಕ ಸರ್ಕಾರವನ್ನು ರಚಿಸಲು ನಮಗೆ ಸಂವಿಧಾನ ನೀಡಿರುವ ಅವಕಾಶ. ಇದಕ್ಕೆ ಮೂಲ ಚುನಾವಣೆ. ಅಂದರೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಅವರನ್ನು ಆಯಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸುವ ಕ್ರಮವೇ ಟಿಕೆಟ್‌ ನೀಡುವ ಪ್ರಕ್ರಿಯೆ. ಲೋಕಸಭೆ ಚುನಾವಣೆಗೂ ಈಗ ರಾಜಕೀಯ ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ಕ್ಷೇತ್ರವಾರು ಪ್ರಕಟಿಸಿವೆ. ಇನ್ನೂ ಕೆಲವು ಕಡೆ ಪ್ರಕಟಣೆ ಬಾಕಿ ಇವೆ. ಇದನ್ನು ಟಿಕೆಟ್‌ ಸಿಗುವುದು ಎಂದು ಚುನಾವಣೆ ಭಾಷೆಯಲ್ಲಿ ಹೇಳಲಾಗುತ್ತದೆ.

ಆ ಪಕ್ಷದ ಅಭ್ಯರ್ಥಿ ಎಂದು ಹೇಳುವುದನ್ನೇ ನಮ್ಮ ಕ್ಷೇತ್ರಕ್ಕೆ ಈ ಪಕ್ಷದ ಅಭ್ಯರ್ಥಿಗೆ ಟಿಕೆಟ್‌ ನೀಡಲಾಗಿದೆ ಎಂದು ಪ್ರಸ್ತಾಪಿಸಲಾಗುತ್ತದೆ. ಭಾರತದಲ್ಲಿ ಸ್ವಾತಂತ್ರಪೂರ್ವದಲ್ಲಿಯೂ ಚುನಾವಣೆಗಳೂ ನಡೆದಿದ್ದರೂ ಸ್ವಾತಂತ್ರ್ಯ ಬಂದ ನಂತರ ನಡೆಯುತ್ತಿರುವ ಚುನಾವಣೆಗಳಿಗೆ ಮಾನ್ಯತೆ. ಅದೂ ಸಾರ್ವತ್ರಿಕ ಚುನಾವಣೆಗಳು ಲೋಕಸಭೆಗೆ ಹಾಗೂ ಆಯಾ ರಾಜ್ಯಗಳ ವಿಧಾನಸಭೆಗಳಿಗೆ ನಡೆಯುವ ಚುನಾವಣೆಗಳು ಪ್ರಮುಖ ಸ್ಥಾನ ಪಡೆದಿವೆ. ಈ ಚುನಾವಣೆಗಳ ಅಭ್ಯರ್ಥಿಗಳ ಆಯ್ಕೆಯನ್ನೇ ಟಿಕೆಟ್‌ ಎನ್ನುವ ರೀತಿಯಲ್ಲಿಯೇ ಬಳಸಿಕೊಂಡು ಬರಲಾಗುತ್ತಿದೆ ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯ.

ಬಿಫಾರಂ ಮಹತ್ವ ಹೇಗೆ

ರಾಜಕೀಯ ಪಕ್ಷಗಳು ಘೋಷಿಸುವ ಅಧಿಕೃತ ಅಭ್ಯರ್ಥಿಯನ್ನು ಖಚಿತಪಡಿಸುವುದು ಬಿಫಾರಂ. ಚುನಾವಣೆ ಕಣಕ್ಕಿಳಿಯುವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ನಂತರ ಇಲ್ಲವೇ ಜತೆಯಲ್ಲಿಯೇ ಬಿಫಾರಂ ಸಲ್ಲಿಸಬಹುದು. ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ವೇಳೆ ಇರುವ ಫಾರಂಗಳಲ್ಲಿ ಬಿ ಫಾರಂ ಕೂಡ ಪ್ರಮುಖವಾಗಿರುತ್ತದೆ.

ರಾಜಕೀಯ ಪಕ್ಷದ ಅಧ್ಯಕ್ಷರು, ಕಾರ್ಯದರ್ಶಿ ಅಥವಾ ಅಧ್ಯಕ್ಷರು ನಿಯೋಜಿಸುವ ಪದಾಧಿಕಾರಿಗಳು ನೀಡುವ ಪತ್ರವಿದು. ಇದು ಅಧಿಕೃತ ಸಹಿ ಇದ್ದಾಗ ಮಾತ್ರ ಮಾನ್ಯತೆಗೆ ಬರುತ್ತದೆ. ಇಲ್ಲದೇ ಇದ್ದರೆ ಅದನ್ನು ತಿರಸ್ಕರಿಸುವ ಅಧಿಕಾರ ಚುನಾವಣಾಧಿಕಾರಿಗೆ ಇರುತ್ತದೆ.

ಕೆಲವೊಮ್ಮೆ ಒಂದೇ ಕ್ಷೇತ್ರಕ್ಕೆ ಇಬ್ಬರಿಗೆ ಬಿ ಫಾರಂ ನೀಡಿದ ಉದಾಹರಣೆಗಳೂ ಇವೆ. ಆಗ ಮೊದಲು ಬಿ ಫಾರಂ ಸಲ್ಲಿಸಿದವರಿಗೆ ಮಾನ್ಯತೆ ನೀಡಲಾಗುತ್ತದೆ. ಆಗ ಪಕ್ಷಗಳಲ್ಲಿಯೇ ಗೊಂದಲವಾಗಿ ಎರಡು ಬಿಫಾರಂ ಕೊಟ್ಟಾಗ ಸಿ ಫಾರಂ ಕೂಡ ಪಡೆಯಲಾಗುತ್ತದೆ. ಆಗ ಅಧಿಕೃತ ಅಭ್ಯರ್ಥಿಯ ಬಿ ಹಾಗೂ ಸಿ ಫಾರಂ ಮೂಲಕ ಅಭ್ಯರ್ಥಿತನವನ್ನು ಯಾವ ಪಕ್ಷ ಎಂದು ನಿರ್ಧರಿಸಲಾಗುತ್ತದೆ.

ಇದೇ ವೇಳೆ ಇಬ್ಬರು ಅಭ್ಯರ್ಥಿ ಇದ್ಧಾಗ ಅಧಿಕೃತ ಬಿಫಾರಂ ಮೊದಲು ಕೊಟ್ಟವರು ಪರಿಗಣನೆಗೆ ಬಂದು ಎರಡನೇಯವರದ್ದು ತಿರಸ್ಕೃತಗೊಳ್ಳುತ್ತದೆ. ಅಗ ಅವರು ಪಕ್ಷೇತರರಾಗಿ ಮುಂದುವರೆಬಹುದು. ಅಲ್ಲಿಯೂ ಬಿಫಾರಂ ನೀಡಿದವರಿಗೆ ಒಬ್ಬರು ಸೂಚಕರು ನಾಮಪತ್ರಕ್ಕೆ ಸಹಿ ಮಾಡಿದರೆ ಸಾಕು. ಅದೇ ಪಕ್ಷೇತರರಾಗಿ ಕಣಕ್ಕಿಳಿಯಬೇಕಾದರೆ ಕ್ಷೇತ್ರದ ಹತ್ತು ಮತದಾರರ ಸಹಿ ನೀಡಬೇಕಾಗುತ್ತದೆ. ಇಲ್ಲದೇ ಇದ್ದಾಗ ಆ ನಾಮಪತ್ರವೂ ತಿರಸ್ಕೃತಗೊಳ್ಳಲಿದೆ.

ಇದೆಲ್ಲವೂ ರಾಜಕೀಯ ಪಕ್ಷಗಳು ನೀಡುವ ಫಾರಂಗಳು. ಈ ಪಕ್ಷಗಳು ಅಧಿಕೃತ ಎಂದು ಚುನಾವಣೆ ಆಯೋಗ ಘೋಷಿಸಿ ಮಾನ್ಯತೆ ನೀಡಿದ್ದರೆ ಮಾತ್ರ ಬಿಫಾರಂಗೆ ಬೆಲೆ. ಇಲ್ಲದೇ ಇದ್ದರೆ ಅಂತಹ ಪಕ್ಷದವರು ಬಿ ಫಾರಂ ಸಲ್ಲಿಸಿದರೂ ಅದಕ್ಕೆ ಮಾನ್ಯತೆ ಇರುವುದಿಲ್ಲ. ಅವರನ್ನು ಪಕ್ಷೇತರ ಅಭ್ಯರ್ಥಿ ಎಂದೇ ಪರಿಗಣಿಸಲಾಗುತ್ತದೆ ಎಂದು ಎರಡು ದಶಕದಿಂದ ಕೆಎಎಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ, ಹಲವಾರು ಕಡೆ ಚುನಾವಣಾಧಿಕಾರಿಯಾಗಿರುವ ಎಸ್‌.ಎನ್‌.ರುದ್ರೇಶ್‌ ವಿವರಿಸುತ್ತಾರೆ.

ಬಿಫಾರಂ ಗೊಂದಲ

ಇಂತಹ ಹಲವು ಉದಾಹರಣೆಗಳೂ ಚುನಾವಣೆ ವೇಳೆ ನಡೆದಿವೆ. ಕುಣಿಗಲ್‌ನಲ್ಲಿ ದಶಕದ ಹಿಂದೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಡಾ.ರಂಗನಾಥ್‌ ಹಾಗೂ ಮುದ್ದ ಹನುಮೇಗೌಡರಿಗೆ ಟಿಕೆಟ್‌ ನೀಡಲಾಗಿತ್ತು. ಆನಂತರ ಮುದ್ದಹನುಮೇಗೌಡರ ಬಿಫಾರಂ ತಿರಸ್ಕೃತಗೊಂಡಿತ್ತು.

ಕೆಆರ್‌ಪೇಟೆಯಲ್ಲೂ ಜೆಡಿಎಸ್‌ ಕೆ.ಸಿ.ನಾರಾಯಣಗೌಡ ಹಾಗೂ ಬಿ.ಎಲ್‌.ದೇವರಾಜು ಅವರಿಗೆ ಬಿಫಾರಂ ನೀಡಿತ್ತು. ಕೊನೆಗೆ ಚುನಾವಣಾಧಿಕಾರಿ ಮೊದಲು ಬಿಫಾರಂ ನೀಡಿದವರು ಹಾಗೂ ಸಿ ಫಾರಂ ಕೊಟ್ಟವರಿಗೆ ಅಭ್ಯರ್ಥಿ ಎಂದು ಘೋಷಿಸಿ ನಾರಾಯಣಗೌಡ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದರು.

ದಾವಣಗೆರೆಯಲ್ಲೂ ಕಾಂಗ್ರೆಸ್‌ನಲ್ಲಿ ಹೀಗೆಯೇ ಬಿಫಾರಂ ಗೊಂದಲವಾಗಿತ್ತು.ಎಸ್‌ಎಸ್‌ ಮಲ್ಲಿಕಾರ್ಜುನ ಬದಲಿಗೆ ಇನ್ನೊಬ್ಬ ಅಭ್ಯರ್ಥಿಗೆ ಬಿಫಾರಂ ನೀಡಿತ್ತು. ಆದರೆ ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಸಿದ್ದರು. ಅವರಿಗೆ ಬಿಫಾರಂ ಅನ್ನು ಹೆಲಿಕಾಪ್ಟರ್‌ ನಲ್ಲಿ ತರಿಸಲಾಗಿತ್ತು. ಅಷ್ಟು ಹೊತ್ತಿಗೆ

ಸಿ ಫಾರಂ ಕೊಡುವುದೇಕೆ

ಇನ್ನು ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗೆ ಸಿ ಫಾರಂ ಕೂಡ ಮಹತ್ವದ್ದಾಗುತ್ತದೆ. ರಾಜಕೀಯ ಪಕ್ಷವೊಂದು ತನ್ನ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಲು ಬಿ ಫಾರಂ ನೀಡುತ್ತದೆ. ಅದರ ಆಧಾರದ ಮೇಲೆ ಅಭ್ಯರ್ಥಿಗಳು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸುತ್ತಾರೆ. ಕೆಲವೊಮ್ಮೆ ಅಭ್ಯರ್ಥಿಯನ್ನು ಬದಲಿಸಲು ನಿರ್ಧರಿಸಿದರೆ ಪಕ್ಷದ ವರಿಷ್ಠರು ಚುನಾವಣಾಧಿಕಾರಿಗೆ ಪರಿಷ್ಕರಣಾ ಪತ್ರ ನೀಡುವುದೂ ಕೂಡ ಇದೆ.ಇದನ್ನೇ ಸಿ ಫಾರಂ ಎಂದು ಹೇಳಲಾಗುತ್ತದೆ.

ಪರಿಷ್ಕರಣಾ ಪತ್ರದ ಜೊತೆ ಪಕ್ಷವು ಬದಲಾದ ಅಭ್ಯರ್ಥಿಗೆ ಮತ್ತೊಮ್ಮೆ ಬಿ ಫಾರಂ ಕೊಡಲಾಗುತ್ತದೆ. ಈ ಪತ್ರದ ಆಧಾರದ ಮೇಲೆ ಚುನಾವಣಾಧಿಕಾರಿಗಳು ಮೊದಲು ಸಲ್ಲಿಸಿದ್ದ ನಾಮಪತ್ರವನ್ನು ರದ್ದು ಮಾಡಿ ಬದಲಾದ ಅಭ್ಯರ್ಥಿಯ ನಾಮಪತ್ರವನ್ನು ಅಧಿಕೃತಗೊಳಿಸುವುದು ಚುನಾವಣೆ ಪ್ರಕ್ರಿಯೆಯ ಭಾಗ.