ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ 2024; ಮತಗಟ್ಟೆ ಸಮೀಕ್ಷೆ ಎಷ್ಟು ನಿಜವಾಗಿವೆ, 2019ರ ಫಲಿತಾಂಶ Vs ಎಕ್ಸಿಟ್‌ ಪೋಲ್‌

ಲೋಕಸಭಾ ಚುನಾವಣೆ 2024; ಮತಗಟ್ಟೆ ಸಮೀಕ್ಷೆ ಎಷ್ಟು ನಿಜವಾಗಿವೆ, 2019ರ ಫಲಿತಾಂಶ vs ಎಕ್ಸಿಟ್‌ ಪೋಲ್‌

ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ನಾಳೆ (ಜೂನ್ 1) ನಡೆಯಲಿದ್ದು, ರಾತ್ರಿ ಮತಗಟ್ಟೆ ಸಮೀಕ್ಷೆ (Exit Poll 2024) ಪ್ರಕಟವಾಗಲಿದೆ. ಲೋಕಸಭಾ ಚುನಾವಣೆ 2024ಯ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದ್ದು, ಈ ಹಿಂದಿನ ಮತಗಟ್ಟೆ ಸಮೀಕ್ಷೆ ಎಷ್ಟು ನಿಜವಾಗಿವೆ ಎಂಬುದರ ಅವಲೋಕನಕ್ಕಾಗಿ 2019ರ ಫಲಿತಾಂಶ vs ಎಕ್ಸಿಟ್‌ ಪೋಲ್‌ ವಿವರ ಗಮನಿಸೋಣ.

ಲೋಕಸಭಾ ಚುನಾವಣೆ 2024; ಮತಗಟ್ಟೆ ಸಮೀಕ್ಷೆ ಎಷ್ಟು ನಿಜವಾಗಿವೆ, 2019ರ ಫಲಿತಾಂಶ vs ಎಕ್ಸಿಟ್‌ ಪೋಲ್‌ ವಿವರ ಇಲ್ಲಿದೆ.
ಲೋಕಸಭಾ ಚುನಾವಣೆ 2024; ಮತಗಟ್ಟೆ ಸಮೀಕ್ಷೆ ಎಷ್ಟು ನಿಜವಾಗಿವೆ, 2019ರ ಫಲಿತಾಂಶ vs ಎಕ್ಸಿಟ್‌ ಪೋಲ್‌ ವಿವರ ಇಲ್ಲಿದೆ.

ಬೆಂಗಳೂರು/ ನವದೆಹಲಿ: ಲೋಕಸಭೆ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಮತದಾನ ನಾಳೆಯೇ (ಜೂನ್ 1) ನಡೆಯಲಿದೆ. ಇದಕ್ಕೂ ಮುನ್ನ ಏಪ್ರಿಲ್ 19 ರಿಂದ ಮೇ 25 ರವರೆಗೆ ಆರು ಸುತ್ತಿನ ಮತದಾನ ನಡೆಯಿತು. ಏಳನೇ ಹಂತದ ಮತದಾನ ಮುಗಿಯುವುದನ್ನೇ ಎಲ್ಲರೂ ಕಾಯುತ್ತಿದ್ದಾರೆ. 542 ಕ್ಷೇತ್ರಗಳ ಎಕ್ಸಿಟ್ ಪೋಲ್‌ಗಳತ್ತ ಎಲ್ಲರ ಗಮನವೂ ನೆಟ್ಟಿದೆ.

ಟ್ರೆಂಡಿಂಗ್​ ಸುದ್ದಿ

ಗುಜರಾತ್‌ನ ಸೂರತ್‌ನಿಂದ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2024 ರ ಲೋಕಸಭಾ ಚುನಾವಣೆಯ ಫಲಿತಾಂಶವು ಜೂನ್ 4 ರಂದು ಪ್ರಕಟವಾಗಲಿದೆ. ಇದಕ್ಕೂ ಮುನ್ನ ಜೂನ್ 1ರ ಸಂಜೆ ವಿವಿಧ ಏಜೆನ್ಸಿಗಳ ಎಕ್ಸಿಟ್ ಪೋಲ್‌ಗಳು ಪ್ರಕಟವಾಗಲಿವೆ. ಈ ಸಮೀಕ್ಷೆಗಳ ಮೂಲಕ, ಕೇಂದ್ರದಲ್ಲಿ ಯಾವ ಪಕ್ಷವು ಸರ್ಕಾರ ರಚಿಸಬಹುದು ಅಥವಾ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬ ಸುಳಿವು ಸಿಗಬಹುದು ಎಂಬ ಕಾತರ ಎಲ್ಲರದ್ದು. ಆದರೆ ಇದು ನಿಖರ ಫಲಿತಾಂಶವಲ್ಲ.

2019ರ ಲೋಕಸಭಾ ಚುನಾವಣೆಯ ಫಲಿತಾಂಶದ ಕಡೆಗೊಮ್ಮೆ ನೋಡೋಣ. 543 ಸ್ಥಾನಗಳ ಪೈಕಿ ಬಿಜೆಪಿ 303 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಆ ಮೂಲಕ ಸ್ಪಷ್ಟ ಬಹುಮತವನ್ನು ಎರಡನೆ ಬಾರಿ ಪಡೆಯಿತು. ಆದಾಗ್ಯೂ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳನ್ನೂ ಸೇರಿಸಿಕೊಂಡೇ ಸರ್ಕಾರ ರಚಿಸಿದೆ.

ಇನ್ನು 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಬರುವುದಕ್ಕೆ ಮೊದಲು ಎಕ್ಸಿಟ್ ಪೋಲ್ ಅಥವಾ ಮತಗಟ್ಟೆ ಸಮೀಕ್ಷೆಗಳು ಏನೇನು ಹೇಳಿದ್ದವು ಎಂಬುದರ ಕಡೆಗೆ ಗಮನಹರಿಸೋಣ. ಈ ತುಲನಾತ್ಮಕ ಗಮನಿಸುವಿಕೆಯು ಮತಗಟ್ಟೆ ಸಮೀಕ್ಷೆಗಳು ಎಷ್ಟು ನಿಖರವಾಗಿರುತ್ತವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಲು ನೆರವಾಗುತ್ತವೆ. ಹಾಗಾದರೆ, 2019 ರಲ್ಲಿ ಎಕ್ಸಿಟ್ ಪೋಲ್ ಫಲಿತಾಂಶಗಳು ಹೇಗಿದ್ದವು?

2019 ರ ಲೋಕಸಭಾ ಚುನಾವಣೆಯ ಬಹುತೇಕ ನಿರ್ಗಮನ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತೋರಿಸಿವೆ. ಎಕ್ಸಿಟ್ ಪೋಲ್‌ಗಳಲ್ಲಿ ಎನ್‌ಡಿಎ ಭಾರಿ ಬಹುಮತ ಪಡೆಯುತ್ತಿದೆ. ಎಕ್ಸಿಟ್ ಪೋಲ್ ಫಲಿತಾಂಶಗಳು, ವಿಶೇಷವಾಗಿ ಕಾಂಗ್ರೆಸ್‌ಗೆ ತುಂಬಾ ನಿರಾಶಾದಾಯಕವಾಗಿತ್ತು. ಅಂದು ಇಂದಿನಂತೆ ಇಂಡಿಯಾ ಬ್ಲಾಕ್ ಇರಲಿಲ್ಲ. ಯುಪಿಎ ಮೈತ್ರಿ ಚಾಲ್ತಿಯಲ್ಲಿತ್ತು. ಅದರಲ್ಲಿ ಎಲ್ಲ ಪಕ್ಷಗಳೂ ಒಟ್ಟುಗೂಡಿರಲಿಲ್ಲ.

ಲೋಕಸಭಾ ಚುನಾವಣೆ 2019ರ ಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ) ಫಲಿತಾಂಶ ಹೀಗಿತ್ತು

ಎರಡು ನಿರ್ಗಮನ ಸಮೀಕ್ಷೆಗಳನ್ನು ಹೊರತುಪಡಿಸಿ, ಸಾಮಾನ್ಯವಾಗಿ ಉಳಿದೆಲ್ಲ ಎಕ್ಸಿಟ್ ಪೋಲ್‌ಗಳ ಫಲಿತಾಂಶ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 300 ದಾಟಲಿವೆ ಎಂದು ತೋರಿಸಿದೆ. ಕಾಂಗ್ರೆಸ್ ಮೂರು ಅಂಕೆಗಳನ್ನು ತಲುಪುವ ಲಕ್ಷಣ ಯಾವುದರಲ್ಲೂ ಕಾಣಲಿಲ್ಲ. ಪ್ರತಿ ಎಕ್ಸಿಟ್ ಪೋಲ್ ಯುಪಿಎ 100 ಕ್ಕೂ ಹೆಚ್ಚು ಸ್ಥಾನಗಳನ್ನು ತಲುಪುತ್ತದೆ ಎಂದು ತೋರಿಸಿದೆ. 2019 ರ ಎಲ್ಲಾ ಎಕ್ಸಿಟ್ ಪೋಲ್‌ಗಳಲ್ಲಿ ಯುಪಿಎ 100 ರಿಂದ 120 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿತ್ತು. ಬಿಜೆಪಿ ನಂತರ ಅತಿ ಹೆಚ್ಚು ಸ್ಥಾನಗಳನ್ನು ಪಡೆಯುವಲ್ಲಿ ಕಾಂಗ್ರೆಸ್ ಎರಡನೇ ಅತಿದೊಡ್ಡ ಪಕ್ಷ ಎಂದು ಹೇಳಲಾಗಿತ್ತು.

2019ರ ಲೋಕಸಭಾ ಚುನಾವಣೆ; ಮತಗಟ್ಟೆ ಸಮೀಕ್ಷೆ (ಎಕ್ಸಿಟ್‌ ಪೋಲ್‌)ಗಳ ವಿವರ

ಮತಗಟ್ಟೆ ಸಮೀಕ್ಷೆ ನಡೆಸಿದ ಏಜೆನ್ಸಿಬಿಜೆಪಿ+ಕಾಂಗ್ರೆಸ್ +ಇತರೆ 
ಆಜ್ ತಕ್‌ - ಮೈ ಆಕ್ಸಿಸ್ ಇಂಡಿಯಾ339-36577-10879-111
ಎಬಿಪಿ -ನೀಲ್ಸನ್‌267127148
ಇಂಡಿಯಾ ಟಿವಿ- ಸಿಎನ್‌ಎಕ್ಸ್‌300120122
ನ್ಯೂಸ್ 18 - ಇಪ್ಸೋಸ್‌33682124
ನ್ಯೂಸ್ 24- ಚಾಣಕ್ಯ3509597
ಟೈಮ್ಸ್ ನೌ - ವಿಎಂಆರ್‌306132104
ನ್ಯೂಸ್ ನೇಷನ್282-290118-126130-138
ರಿಪಬ್ಲಿಕ್ - ಸಿ ವೋಟರ್‌305124113

2019ರ ಎಕ್ಸಿಟ್ ಪೋಲ್‌; ಯಾವ ಏಜೆನ್ಸಿ ಏನು ಅಂದಾಜಿಸಿತ್ತು

ನ್ಯೂಸ್ 24-ಚಾಣಕ್ಯ ಸಮೀಕ್ಷೆಯಲ್ಲಿ ಎನ್‌ಡಿಎಗೆ ಮೊದಲಿಗಿಂತ ಹೆಚ್ಚು ಸ್ಥಾನಗಳನ್ನು ಅಂದರೆ 350 ಸ್ಥಾನಗಳನ್ನು ನೀಡಲಾಗಿದೆ. ಆದರೆ ಯುಪಿಎಗೆ 95 ಸ್ಥಾನಗಳು ಮತ್ತು ಇತರರಿಗೆ 97 ಸ್ಥಾನಗಳನ್ನು ತೋರಿಸಲಾಗಿದೆ. ನ್ಯೂಸ್ 18-ಇಪ್ಸೋಸ್ ಸಮೀಕ್ಷೆಯು ಎನ್‌ಡಿಎ 336 ಸ್ಥಾನಗಳನ್ನು ತೋರಿಸಿದೆ. ಯುಪಿಎಗೆ 82 ಮತ್ತು ಇತರರಿಗೆ 124 ಸ್ಥಾನಗಳಿದ್ದವು. ಟೈಮ್ಸ್ ನೌ-ವಿಎಂಆರ್ ಎನ್‌ಡಿಎಗೆ 306, ಯುಪಿಎಗೆ 132 ಮತ್ತು ಇತರರಿಗೆ 104 ಸ್ಥಾನಗಳನ್ನು ನೀಡಿತ್ತು. ನ್ಯೂಸ್ ನೇಷನ್ ತನ್ನ ಎಕ್ಸಿಟ್ ಪೋಲ್ ನಲ್ಲಿ ಎನ್ ಡಿಎಗೆ 282 ರಿಂದ 290 ಸ್ಥಾನಗಳನ್ನು ನೀಡಿತ್ತು. ಯುಪಿಎ 118 ರಿಂದ 126 ಸ್ಥಾನಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಇತರರು 130 ರಿಂದ 138 ಸ್ಥಾನಗಳನ್ನು ಪಡೆಯುತ್ತಾರೆ ಎಂದು ತೋರಿಸಲಾಗಿದೆ. ಇಂಡಿಯಾ ಟಿವಿ-ಸಿಎನ್‌ಎಕ್ಸ್‌ನ ನಿರ್ಗಮನ ಸಮೀಕ್ಷೆಯು ಎನ್‌ಡಿಎ 300 ಸ್ಥಾನಗಳನ್ನು ಪಡೆಯುತ್ತದೆ ಎಂದು ತೋರಿಸಿದೆ. ಯುಪಿಎಗೆ 120 ಮತ್ತು ಇತರರಿಗೆ 122 ಸ್ಥಾನಗಳನ್ನು ತೋರಿಸಲಾಯಿತು. ನ್ಯೂಸ್ ಎಕ್ಸ್ ಎನ್ ಡಿಎಗೆ ಕನಿಷ್ಠ 242 ಸ್ಥಾನಗಳನ್ನು ನೀಡಿತ್ತು. ಯುಪಿಎಗೆ 162 ಮತ್ತು ಇತರರಿಗೆ 136 ಸ್ಥಾನಗಳನ್ನು ನೀಡಲಾಯಿತು.

ಎಕ್ಸಿಟ್‌ ಪೋಲ್‌ಗೆ ಹೊರತಾಗಿ, 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಹೀಗಿತ್ತು

2019ರ ಲೋಕಸಭಾ ಚುನಾವಣೆಯ ಫಲಿತಾಂಶ
2019ರ ಲೋಕಸಭಾ ಚುನಾವಣೆಯ ಫಲಿತಾಂಶ

ದೇಶಾದ್ಯಂತ 2019 ರಲ್ಲಿ ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಗಮನಿಸುವುದಾದರೆ, 543 ರಲ್ಲಿ 542 ಸ್ಥಾನಗಳಿಗೆ ಚುನಾವಣೆ ನಡೆಯಿತು. ಈ ಪೈಕಿ, ಸಾಮಾನ್ಯ-411, ಪರಿಶಿಷ್ಟ ಜಾತಿ-84 ಮತ್ತು ಪರಿಶಿಷ್ಟ ಪಂಗಡ-47 ಸ್ಥಾನಗಳಿದ್ದವು. ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ನಗದು ವಶಪಡಿಸಿಕೊಂಡ ನಂತರ ಲೋಕಸಭೆ ಚುನಾವಣೆಯನ್ನು ರದ್ದುಗೊಳಿಸಲಾಯಿತು. ಈ ಚುನಾವಣೆಯಲ್ಲಿ ಒಟ್ಟು 91.05 ಕೋಟಿ ಮತದಾರರು ನೋಂದಣಿಯಾಗಿದ್ದರು. 61.08 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ 2019ರ ಲೋಕಸಭೆ ಚುನಾವಣೆಯಲ್ಲಿ ಶೇ.67.09ರಷ್ಟು ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಪುರುಷರು ಶೇ.67.01, ಮಹಿಳೆಯರು ಶೇ.67.18 ಮತ್ತು ಇತರರು ಶೇ.14.58ರಷ್ಟು ಮತ ಚಲಾಯಿಸಿದ್ದರು.

ಲೋಕಸಭಾ ಚುನಾವಣೆ 2019ರ ಫಲಿತಾಂಶ ಅದೇ ವರ್ಷ ಮೇ 23 ರಂದು ಪ್ರಕಟಿಸಲಾಗಿತ್ತು. ಎಕ್ಸಿಟ್ ಪೋಲ್ ಭವಿಷ್ಯವಾಣಿಗಳು ಬಹುತೇಕ ಸರಿಯಾಗಿವೆ ಮತ್ತು ಭಾರತೀಯ ಜನತಾ ಪಕ್ಷವು ಸತತ ಎರಡನೇ ಬಾರಿಗೆ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿತು. ಬಿಜೆಪಿ ಗರಿಷ್ಠ 303 ಸ್ಥಾನಗಳನ್ನು ಗೆದ್ದಿದೆ. ಇದಾದ ನಂತರ ಕಾಂಗ್ರೆಸ್ 52 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಇದಲ್ಲದೆ ತೃಣಮೂಲ ಕಾಂಗ್ರೆಸ್‌ನ 22, ಬಿಎಸ್‌ಪಿಯ 10, ಸಿಪಿಐನ 2, ಸಿಪಿಐ(ಎಂ) 3 ಮತ್ತು ಎನ್‌ಸಿಪಿಯ 5 ಸಂಸದರು ಗೆದ್ದಿದ್ದಾರೆ. ಚುನಾವಣಾ ಫಲಿತಾಂಶದ ನಂತರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗಿದ್ದು, ನರೇಂದ್ರ ಮೋದಿ ಪ್ರಧಾನಿಯಾದರು. ವಾರಣಾಸಿ ಸಂಸದ ನರೇಂದ್ರ ಮೋದಿ ಅವರು 2019ರ ಮೇ 30ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.