Exit polls: ಲೋಕಸಭೆ ಚುನಾವಣೆ ಎಕ್ಸಿಟ್ ಪೋಲ್‌ಗೆ ಕ್ಷಣಗಣನೆ; ಕರ್ನಾಟಕದ ಮಾಹಿತಿ ಎಲ್ಲಿ ಸಿಗಲಿದೆ
ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ( Exit polls) ಶನಿವಾರ ಸಂಜೆ ಕರ್ನಾಟಕದ ಕ್ಷೇತ್ರಗಳಿಗೂ ಸಂಬಂಧಿಸಿದಂತೆ ಪ್ರಕಟವಾಗಲಿವೆ.
ಬೆಂಗಳೂರು: ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಕೆಲವೇ ಗಂಟೆ ಬಾಕಿಯಿದೆ. ಸಂಜೆಯಾಗುತ್ತಲೇ ಲೋಕಸಭೆ ಚುನಾವಣೆ 2024ಯ ಮತಗಟ್ಟೆ ಸಮೀಕ್ಷೆ( Exit poll)ಗಳು ಪ್ರಕಟವಾಗಲಿವೆ. ಇದು ಬಹುತೇಕ ಚುನಾವಣೆ ಫಲಿತಾಂಶದ ಟ್ರೆಂಡ್ ಆದರೂ ಒಂದು ರೀತಿ ಒಟ್ಟಾರೆ ಯಾವ ರೀತಿ ಇರಬಹುದು ಎನ್ನುವ ದಿಕ್ಸೂಚಿಯಂತೂ ಹೌದು. ಇಡೀ ದೇಶ ಇದಕ್ಕಾಗಿ ಕಾಯುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರಮುಖ ನೆಲೆ ಒದಗಿಸಿರುವ ಕರ್ನಾಟಕದ ಫಲಿತಾಂಶದ ಕುತೂಹಲವೂ ಇದೆ. ಲೋಕಸಭೆ ಚುನಾವಣೆಗೂ ಮುನ್ನ ನಡೆಸಿರುವ ಕರ್ನಾಟಕದಲ್ಲಿ ಸಮೀಕ್ಷೆಯೂ ಇದೇ ದಿನ ಪ್ರಕಟಗೊಳ್ಳಲಿದೆ.
ಕರ್ನಾಟಕದ ಒಟ್ಟು 28 ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಏಕಾಂಗಿಯಾಗಿ ಎಲ್ಲಾ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದೆ. ಕಳೆದ ಬಾರಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಈ ಬಾರಿ ಬಿಜೆಪಿ ಜತೆಗೆ ಸಖ್ಯ ಸಾಧಿಸಿ ಲೋಕಸಭೆ ಚುನಾವಣೆ ಎದುರಿಸಿದೆ. ಹಿಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸಿದ್ದ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿತ್ತು. ಹಿಂದಿನ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಎಚ್ಚೆತ್ತ ಬಿಜೆಪಿ ಈ ಬಾರಿ ಜೆಡಿಎಸ್ ಜತೆಗೆ ಕೈ ಜೋಡಿಸಿದೆ. ಈ ಕಾರಣದಿಂದ ಇಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮುನ್ನಡೆ ಸಾಧಿಸಲಿದಯೇ ಅಥವಾ ಬಿಜೆಪಿ ಜೆಡಿಎಸ್ ಹೆಚ್ಚಿನ ಸ್ಥಾನ ಪಡೆದುಕೊಳ್ಳಲಿವೆಯೇ ಎನ್ನುವ ಕುತೂಹಲವಂತೂ ಇದೆ. ಈ ಕಾರಣದಿಂದಲೇ ಇಂದು ಪ್ರಕಟಗೊಳ್ಳುವ ಮತಗಟ್ಟೆ ಸಮೀಕ್ಷೆ ಕೂಡ ಕರ್ನಾಟಕದ ಚುನಾವಣೆ ಫಲಿತಾಂಶ ಹೇಗಿರಬಹುದು ಎನ್ನುವ ದಿಕ್ಸೂಚಿಯೂ ಆಗಲಿದೆ.
ಈ ಬಾರಿ ಇಡೀ ದೇಶದಲ್ಲಿಯೇ ಮತಗಟ್ಟೆ ಸಮೀಕ್ಷೆಯನ್ನು ಹಲವು ಮಾಧ್ಯಮ ಸಂಸ್ಥೆ, ಖಾಸಗಿ ಸಂಸ್ಥೆಗಳು ನಡೆಸಿವೆ. ಹತ್ತಕ್ಕೂ ಹೆಚ್ಚು ಸಂಸ್ಥೆಗಳು ಕರ್ನಾಟಕದಲ್ಲಿ ಸಮೀಕ್ಷೆ ನಡೆಸಿದ್ದು, ಸಂಜೆ ನಂತರ ಪ್ರಕಟಿಸಲಿವೆ.
ಈ ಆಕ್ಸಿಸ್ ಮೈ ಇಂಡಿಯಾ(Axis My India), ಸೀ ಓಟರ್(CVoter), ಇಂಡಿಯಾ ಟುಡೆ ಆಕ್ಸಿಸ್(India Today-Axis), ಎಬಿಪಿ ನ್ಯೂಸ್- ಸಿ ವೋಟರ್(ABP News-CVoter), ಟೈಂಸ್ ನೌ(Times Now), ನ್ಯೂಸ್- 18 ಐಪಿಎಸ್‌ಒಎಸ್(News18-IPSOS), ರಿಪಬ್ಲಿಕ್ ಟಿವಿ- ಜನ್ ಕೀ ಬಾತ್( Republic TV-Jan Ki Baat), ಟುಡೇಸ್ ಚಾಣಕ್ಯ(Today's Chanakya) ಪ್ರಮುಖ ಎಕ್ಸಿಟ್ ಪೋಲ್ ನೀಡುವ ಸಂಸ್ಥೆಗಳು. ಈ ಸಂಸ್ಥೆಗಳು ಇಡೀ ದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಆಯಾ ರಾಜ್ಯವಾರು ಗಮನ ಸೆಳೆದಿವೆ. ಅದರಲ್ಲೂ ಆಯಾ ರಾಜ್ಯಗಳಲ್ಲಿ ಪಕ್ಷವಾರು ಪಡೆಯಬಹುದಾದ ಕ್ಷೇತ್ರಗಳ ವಿವರ ಹಾಗೂ ಟ್ರೆಂಡ್ ಅನ್ನು ಪ್ರಕಟಿಸಲಿವೆ. ಈಗಾಗಲೇ ನಾಲ್ಕೈದು ಚುನಾವಣೆಗಳಿಂದಲೂ ಈ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆಗಳನ್ನು ಪ್ರಕಟಿಸುತ್ತಾ ಬರುತ್ತಿವೆ. ಕರ್ನಾಟಕದ ಮತಗಟ್ಟೆ ಸಮೀಕ್ಷೆಗಳು ಇದರಲ್ಲಿ ಸೇರಿವೆ.
ಕರ್ನಾಟಕದಲ್ಲಿ ಟಿವಿ9 ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್, ರಿಪಬ್ಲಿಕ್ ಕನ್ನಡ ಚಾನೆಲ್‌ಗಳೂ ಮತಗಟ್ಟೆ ಸಮೀಕ್ಷೆಗಳ ವಿವರಗಳನ್ನು ಪ್ರಕಟಿಸಲಿವೆ. ಈ ಸಂಸ್ಥೆಗಳಿಂದಲೂ ಕೆಲವು ಸಂಸ್ಥೆಗಳ ಸಹಯೋಗದೊಂದಿಗೆ ಸಮೀಕ್ಷೆ ನಡೆದಿದೆ. ಹಿಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲೂ ಈ ಸಂಸ್ಥೆಗಳು ಸಮೀಕ್ಷೆಗಳನ್ನು ಪ್ರಕಟಿಸಿವೆ. ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ಪ್ರಮುಖ ಕ್ಷೇತ್ರಗಳ ಮೇಲೆ ಜನರ ಕಣ್ಣಿದೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ, ಮೈಸೂರು, ಹಾಸನ, ಶಿವಮೊಗ್ಗ, ಹಾವೇರಿ, ಕಲಬುರಗಿ, ಧಾರವಾಡ, ಬೆಳಗಾವಿ ಕ್ಷೇತ್ರದ ಮೇಲೆ ಜನರ ಗಮನ ನೆಟ್ಟಿದೆ.
ಲೋಕಸಭೆ ಚುನಾವಣೆಯ ಕರ್ನಾಟಕದ ಮತಗಟ್ಟೆ ಸಮೀಕ್ಷೆ ಕುರಿತು ಲೈವ್ ಅಪ್ಡೇಟ್ಸ್ ಅನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲೂ ಕ್ಷಣ ಕ್ಷಣಕ್ಕೂ ಒದಗಿಸಲಾಗುತ್ತಿದ್ದು, ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಬಹುದು.
ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.