Kerala News: ಕಾಸರಗೋಡಿನಲ್ಲಿ ಲೋಕಸಭೆ ಚುನಾವಣೆಗೆ ಬೆಂಗಳೂರು ಕನ್ನಡತಿ ಬಿಜೆಪಿ ಅಭ್ಯರ್ಥಿ, 10 ಭಾಷೆ ಬಲ್ಲ ಪ್ರವೀಣೆ-lok sabha elections 2024 born bought up in bangalore ashwini is bjp candidate in kasaragod knows 10 languages kub ,ಚುನಾವಣೆಗಳು ಸುದ್ದಿ
ಕನ್ನಡ ಸುದ್ದಿ  /  ಚುನಾವಣೆಗಳು  /  Kerala News: ಕಾಸರಗೋಡಿನಲ್ಲಿ ಲೋಕಸಭೆ ಚುನಾವಣೆಗೆ ಬೆಂಗಳೂರು ಕನ್ನಡತಿ ಬಿಜೆಪಿ ಅಭ್ಯರ್ಥಿ, 10 ಭಾಷೆ ಬಲ್ಲ ಪ್ರವೀಣೆ

Kerala News: ಕಾಸರಗೋಡಿನಲ್ಲಿ ಲೋಕಸಭೆ ಚುನಾವಣೆಗೆ ಬೆಂಗಳೂರು ಕನ್ನಡತಿ ಬಿಜೆಪಿ ಅಭ್ಯರ್ಥಿ, 10 ಭಾಷೆ ಬಲ್ಲ ಪ್ರವೀಣೆ

ಭಾಷೆಗಳು ತಿಳಿದಷ್ಟು ಸಂವಹನ ಸುಲಭ. ಇದು ರಾಜಕಾರಣಕ್ಕೂ ಅನ್ವಯಿಸುತ್ತದೆ. ಕೇರಳದ ಕಾಸರಗೋಡಿನಲ್ಲಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಎಂ.ಎಲ್‌.ಅಶ್ವಿನಿ.

ಕಾಸರಗೋಡು ಬಿಜೆಪಿ ಅಭ್ಯರ್ಥಿ ಕನ್ನಡತಿ ಅಶ್ವಿನಿ.
ಕಾಸರಗೋಡು ಬಿಜೆಪಿ ಅಭ್ಯರ್ಥಿ ಕನ್ನಡತಿ ಅಶ್ವಿನಿ.

ಕಾಸರಗೋಡು: ಗಡಿ ಭಾಗದಲ್ಲಿರುವವರಿಗೆ ಬಹು ಭಾಷೆಯ ಲಾಭ. ಅದೂ ಭಾಷೆ ಗೊತ್ತಿದ್ದರಂತೂ ಬದುಕು ಸುಲಭ. ಇನ್ನು ಚುನಾವಣೆಗೆ ಸ್ಪರ್ಧಿಸುವವರು, ಮತ ಕೇಳುವವರಾದರೂ ಅವರಿಗೆ ಇನ್ನೂ ಒಳ್ಳೆಯದೇ. ಏಕೆಂದರೆ ಮತದಾರರು ಯಾವ ಭಾಷೆಯವರು ಎಂದು ತಿಳಿದು ಅದೇ ಭಾಷೆಯಲ್ಲಿ ಮಾತನಾಡಿದರೆ ಸಂವಹನ ಅತಿ ಸುಲಭ. ಅವರ ಮನ ಒಲಿಸಿ ಮತ ಪಡೆದುಕೊಳ್ಳಲು ಸಹಕಾರಿಯೇ. ಅದೂ ಕುಟುಂಬ ದೊಡ್ಡದಾಗಿದ್ದರಂತೂ ಮತಗಳು ಹೆಚ್ಚು ಪಡೆಯಲು ಬಹುಭಾಷೆ ಪ್ರಾವಿಣ್ಯಕ್ಕೆ ಬರಬಹುದು.

ಲೋಕಸಭೆ ಚುನಾವಣೆಗೆ ಈಗಾಗಲೇ ದಿನಾಂಕಗಳು. ಅಭ್ಯರ್ಥಿಗಳ ಘೋಷಣೆಯಾಗಿದೆ. ಕರ್ನಾಟಕಕ್ಕೆ ಹೊಂದಿಕೊಂಡಂತೆ ಇರುವ. ಹೆಚ್ಚು ಕನ್ನಡ ಮಾತನಾಡುವವರು ಇರುವ ಕೇರಳದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಹುಭಾಷೆ ಚತುರೆಯೊಬ್ಬರು ಕಣದಲ್ಲಿದ್ದಾರೆ. ಅವರಿಗೆ ಬರೋಬ್ಬರಿ ಹತ್ತು ಭಾಷೆಗಳು ಬರುತ್ತವೆ. ಹತ್ತು ಭಾಷೆಗಳನ್ನು ಸುಸೂತ್ರವಾಗಿ ಮಾತನಾಡುವ ಕಾರಣಕ್ಕೆ ಅವರಿಗೆ ಪ್ರಚಾರವೂ ಕೊಂಚ ಸುಲಭವೇ ಆಗಿದೆ.

ಇವರ ಹೆಸರು ಎಂ.ಎಲ್‌. ಅಶ್ವಿನಿ. ವಯಸ್ಸು 38. ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲ್ಲೂಕಿನ ನಿವಾಸಿ. ಅವರ ಪೋಷಕರು ಮಂಜೇಶ್ವರದವರೇ. ಆದರೆ ಬಹಳ ವರ್ಷಗಳ ಹಿಂದೆಯೇ ಬೆಂಗಳೂರಿಗೆ ತೆರಳಿದರು. ಅಶ್ವಿನಿ ಕೂಡ ಬೆಂಗಳೂರಿನಲ್ಲಿಯೇ ಹುಟ್ಟಿ ಅಲ್ಲಿಯೇ ಶಿಕ್ಷಣ ಪೂರೈಸಿದವರು. ಪದವಿ ಶಿಕ್ಷಣದ ಬಳಿಕೆ ಬೆಂಗಳೂರಿನಲ್ಲಿಯೇ ಕೆಲಸ ಮಾಡಿಕೊಂಡಿದ್ದವರು. ಮದುವೆಯಾಗಿದ್ದ ಕಾಸರಗೋಡು ಮೂಲದವರನ್ನು. ಇದರಿಂದ ಪೋಷಕರು ಬೆಂಗಳೂರಿನಲ್ಲಿದ್ದರೆ ಅಶ್ವಿನಿ ಕಾಸರಗೋಡು ಜಿಲ್ಲೆಯವರಾಗಿದ್ದಾರೆ. ಸಮಾಜ ಸೇವೆಯಲ್ಲೂ ತೊಡಗಿಕೊಂಡು ಈಗ ಮಂಜೇಶ್ವರ ತಾಲ್ಲೂಕಿನ ಪಂಚಾಯಿತಿ ಒಂದರ ಸದಸ್ಯೆ. ಬಿಜೆಪಿಯಲ್ಲೂ ಹಲವಾರು ವರ್ಷಗಳಿಂದ ಸಕ್ರಿಯರಾಗಿದ್ದಾರೆ.

ಇದರೊಟ್ಟಿಗೆ ಅಶ್ವಿನಿ ಅವರಿಗೆ ಹತ್ತು ಭಾಷೆಗಳು ಬರುತ್ತವೆ. ಕೇರಳದ ಕಾಸರಗೋಡಿನಲ್ಲಿ ಮಲೆಯಾಳಂ, ಕನ್ನಡ, ಉರ್ದು, ತುಳು, ಕೊಂಕಣಿ, ಮರಾಠಿ, ಬ್ಯಾರಿ ಭಾಷೆ ಮಾತನಾಡವವರು ಇದ್ದಾರೆ. ಒಂದೊಂದು ಭಾಷೆಯೂ ಭಿನ್ನ. ಕೇರಳ ಹಾಗೂ ಕರ್ನಾಟಕದ ಗಡಿ ಭಾಗದವರಲ್ಲಿರುವವರಿಗೂ ಈ ಭಾಷೆಗಳು ಬರಬಹುದು. ಆದರೆ ಅಶ್ವಿನಿ ಇದೇ ಪರಿಸರದಲ್ಲಿರುವುದರಿಂದ ಈ ಏಳು ಭಾಷೆಗಳನ್ನು ಅರ್ಥ ಮಾಡಿಕೊಳ್ಳಬಲ್ಲರು. ಹಾಗೂ ಜನರೊಂದಿಗೆ ಈ ಭಾಷೆಗಳಲ್ಲಿ ಸಂವಹನ ಮಾಡಬಲ್ಲರು. ಬೆಂಗಳೂರಿನಲ್ಲಿದ್ದಾಗ ನೆರೆ ಹೊರೆಯವರು ತಮಿಳು ಮಾತನಾಡುತ್ತಿದ್ದುದರಿಂದ ಆ ಭಾಷೆಯೂ ಕೂಡ ಇವರಿಗೆ ಬರುತ್ತದೆ. ಇನ್ನು ಹಿಂದಿ ಹಾಗೂ ಇಂಗ್ಲೀಷ್‌ ಕೂಡ ಇವರಿಗೆ ತಿಳಿದಿದೆ. ಈ ಮೂಲಕ ಒಟ್ಟು ಹತ್ತು ಭಾಷೆಗಳ ಪ್ರವೀಣೆಯಾಗಿದ್ಧಾರೆ ಅಶ್ವಿನಿ.

2011ರ ಗಣತಿ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ಶೇ. 82.07 ಮಂದಿ ಮಲೆಯಾಳಂ ಮಾತನಾಡಿದರೆ. ಶೇ. 4.02 ಮಂದಿ ಕನ್ನಡ, ಶೇ. 8.08 ತುಳು, ಶೇ. 1.8 ರಷ್ಟು ಜನ ಮರಾಠಿ ಮಾತನಾಡವವರು ಇದ್ದಾರೆ. ಉರ್ದು ಹಾಗೂ ಕೊಂಕಣಿ ಮಾತನಾಡುವವರು ಪ್ರಮಾಣವೂ ಸಾಕಷ್ಟಿದೆ.

ಕಾಸರಗೋಡು ಮೊದಲಿಂದಲೂ ಎಡಪಕ್ಷಗಳ ಪ್ರಾಬಲ್ಯ ಇರುವ ಕ್ಷೇತ್ರ,. ಇಲ್ಲಿ ಅವರೇ ಗೆದ್ದುಕೊಂಡು ಬರುತ್ತಿದ್ದಾರೆ. ಎಡಪಕ್ಷಗಳಿಗೆ ಸ್ಪರ್ಧೆಯೊಡ್ಡೋದು ಕಾಂಗ್ರೆಸ್.‌ ಇಲ್ಲಿ ಬಿಜೆಪಿ ಕೂಡ ಇದೆ. ಇತ್ತೀಚಿನ ವರ್ಷಗಳಲ್ಲಿ ಬೆಳೆದಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ನ ರಾಜಮೋಹನ್‌ ಉನ್ನಿತನ್‌ ಗೆದ್ದಿದ್ದರು. ಹಿಂದಿನ ಅವಧಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರವೀಶ್‌ ತಂತ್ರಿ ಕುಂಟಾರ್‌ ಅವರು 1,76,049 ಮತ ಪಡೆದಿದ್ದರು.

ಈ ಬಾರಿ ಕನ್ನಡದ ಹಿನ್ನೆಲೆಯ ಜತೆಗೆ ಸ್ಥಳೀಯರು ಎನ್ನುವ ಕಾರಣಕ್ಕೆ ಅಶ್ವಿನಿ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ನಾನು ಇಲ್ಲಿ ಭಾಷಾ ಅಲ್ಪಸಂಖ್ಯಾತೆ. ಹತ್ತು ಭಾಷೆಗಳು ನನಗೆ ತಿಳಿದಿರುವುದು, ಮಾತನಾಡಲು ಬರುವುದು ಮತದಾರರೊಂದಿಗೆ ಸಂಪರ್ಕ ಸಾಧಿಸಲು ಸಹಕಾರಿಯಾಗಿದೆ ಎನ್ನುವುದು ಅಶ್ವಿನಿ ಅವರ ಮನದಾಳದಮಾತು.

ಕಾಸರಗೋಡು ಕೇರಳದ ಭಾಗವಾದರೂ ಈಗಲೂ ಕರ್ನಾಟಕದೊಂದಿಗೆ ಎಲ್ಲ ರೀತಿಯ ನಂಟು ಇದೆ. ವಹಿವಾಟು ಕೂಡ ದಕ್ಷಿಣ ಕನ್ನಡದಲ್ಲಿಯೇ ಹೆಚ್ಚು. ವಿದ್ಯಾರ್ಥಿಗಳೂ ಶಿಕ್ಷಣಕ್ಕೆ ಕರ್ನಾಟಕವನ್ನೇ ಅವಲಂಬಿಸಿದ್ದಾರೆ. ಇಲ್ಲಿ ಉತ್ತಮ ಕಾಲೇಜುಗಳ ಕೊರತೆಯಿದೆ. ಕುಡಿಯುವ ನೀರು, ರಸ್ತೆ ಸಹಿತ ಹಲವಾರು ಮೂಲಸೌಕರ್ಯಗಳ ಬೇಡಿಕೆ ಅಗಾಧವಾಗಿದೆ. ಬಿಜೆಪಿಯ ಸಂಘಟನೆಯೊಂದಿಗೆ ಗಟ್ಟಿಯಾಗಿಯೇ ಗುರುತಿಸಿಕೊಂಡಿದ್ದೇನೆ, ಸಂಘಟನೆಯೂ ಚೆನ್ನಾಗಿರುವುದರಿಂದ ಈ ಬಾರಿ ಉತ್ತಮ ವಾತಾವರಣವಿದೆ ಎಂದು ಅಶ್ವಿನಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.