ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; ಕರ್ನಾಟಕದ ಮತಗಟ್ಟೆ ಸಮೀಕ್ಷೆ ಎಷ್ಟು ಗಂಟೆಗೆ ಪ್ರಸಾರವಾಗಲಿದೆ, ಎಲ್ಲಿ ನೋಡಬೇಕು- ಇಲ್ಲಿದೆ ವಿವರ

ಲೋಕಸಭಾ ಚುನಾವಣೆ; ಕರ್ನಾಟಕದ ಮತಗಟ್ಟೆ ಸಮೀಕ್ಷೆ ಎಷ್ಟು ಗಂಟೆಗೆ ಪ್ರಸಾರವಾಗಲಿದೆ, ಎಲ್ಲಿ ನೋಡಬೇಕು- ಇಲ್ಲಿದೆ ವಿವರ

Karnataka Lok Sabha Exit Poll Result 2024: ಕರ್ನಾಟಕದಲ್ಲಿ ಈಗಾಗಲೇ ಏಪ್ರಿಲ್ 26 ಮತ್ತು ಮೇ 7ರಂದು 2 ಹಂತದಲ್ಲಿ ಮತದಾನ ಯಶಸ್ವಿಯಾಗಿ ನಡೆದಿದೆ. ಪ್ರಜ್ವಲ್ ರೇವಣ್ಣ ಕೇಸ್‌ ರಾಜಕೀಯ ಸಂಚಲನ ಸೃಷ್ಟಿಸಿತ್ತು. ಇದು ಚುನಾವಣೆ ಮೇಲೆ ಪರಿಣಾಮ ಬೀರಿತಾ ಎಂಬ ಕುತೂಹಲವೂ ಇದೆ. ಕರ್ನಾಟಕದ ಮತಗಟ್ಟೆ ಸಮೀಕ್ಷೆ ಎಷ್ಟು ಗಂಟೆಗೆ ಪ್ರಸಾರವಾಗಲಿದೆ ಎಂಬಿತ್ಯಾದಿ ವಿವರ ಇಲ್ಲಿದೆ.

ಲೋಕಸಭಾ ಚುನಾವಣೆ; ಕರ್ನಾಟಕದ ಮತಗಟ್ಟೆ ಸಮೀಕ್ಷೆ ಇಂದು ಸಂಜೆ ಪ್ರಸಾರವಾಗಲಿದೆ. (ಸಾಂಕೇತಿಕ ಚಿತ್ಋ)
ಲೋಕಸಭಾ ಚುನಾವಣೆ; ಕರ್ನಾಟಕದ ಮತಗಟ್ಟೆ ಸಮೀಕ್ಷೆ ಇಂದು ಸಂಜೆ ಪ್ರಸಾರವಾಗಲಿದೆ. (ಸಾಂಕೇತಿಕ ಚಿತ್ಋ)

ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಎರಡೂ ಪಕ್ಷಕ್ಕೆ ಈ ಸಲದ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಸ್ಪರ್ಧೆಯಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಸ್ಥಾನಗಳನ್ನು ಉಳಿಸಿಕೊಳ್ಳುವ ಸವಾಲು ಬಿಜೆಪಿ ಎದುರಿದ್ದರೆ, ಕಾಂಗ್ರೆಸ್‌ಗೆ ಇರುವ ಸವಾಲು ಬೇರೆಯದೇ ರೀತಿಯದ್ದು. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದವರು. ಹೀಗಾಗಿ 28 ಕ್ಷೇತ್ರಗಳ ಪೈಕಿ ಗರಿಷ್ಠ ಸ್ಥಾನದಲ್ಲಿ ಪಕ್ಷ ಗೆಲ್ಲಲೇಬೇಕಾದ ಅನಿವಾರ್ಯತೆ ಅವರದ್ದು. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷವಾಗಿ ಕಾಂಗ್ರೆಸ್ ಇರುವ ಕಾರಣ ಇದು ಪ್ರತಿಷ್ಠೆಯ ವಿಚಾರ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದಲ್ಲಿ ಈಗಾಗಲೇ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತದಲ್ಲಿ ಮತದಾನ ಯಶಸ್ವಿಯಾಗಿ ನಡೆದಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಮಾಡಿಕೊಂಡಿದ್ದು, ಪ್ರಜ್ವಲ್ ರೇವಣ್ಣ ಕೇಸ್‌ ರಾಜಕೀಯ ಸಂಚಲನ ಸೃಷ್ಟಿಸಿತ್ತು. ಇದು ಚುನಾವಣೆ ಮೇಲೆ ಪರಿಣಾಮ ಬೀರಿತಾ ಎಂಬ ಕುತೂಹಲವೂ ಇದ್ದು, ಎಲ್ಲರ ಗಮನ ಈಗ ಇಂದು ಮುಸ್ಸಂಜೆ ಪ್ರಕಟವಾಗಲಿರುವ ಎಕ್ಸಿಟ್ ಪೋಲ್ ಅಥವಾ ಮತಗಟ್ಟೆ ಸಮೀಕ್ಷೆ (ಚುನಾವಣೋತ್ತರ ಸಮೀಕ್ಷೆ) ಕಡೆಗೆ ಹೊರಳಿದೆ. ಇಂದು ಪ್ರಕಟವಾಗುವುದು ನಿಖರ ಫಲಿತಾಂಶವಲ್ಲ. ಜೂನ್ 4 ರಂದು ಚುನಾವಣಾ ಆಯೋಗ ಪ್ರಕಟಿಸುವುದೇ ನಿಖರ ಫಲಿತಾಂಶ.

ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ ಎಷ್ಟು ಗಂಟೆಗೆ ಪ್ರಸಾರ

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಿತು. ಅಲ್ಲಿಂದೀಚೆಗೆ ಐದು ಹಂತಗಳ ಮತದಾನ ಪೂರ್ಣಗೊಂಡಿದ್ದು, ಇಂದು ಕೊನೆಯ ಹಂತದ ಮತದಾನ ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮತ್ತು ಛತ್ತೀಸ್‌ಗಢಗಳ 57 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಶುರುವಾಗಿದೆ. ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ.

ಇಂದು ಲೋಕಸಭೆಯ ಕೊನೆಯ ಹಂತದ ಮತದಾನ ನಡೆಯುತ್ತಿದ್ದು ಸಂಜೆ ಮತದಾನ ಪೂರ್ಣಗೊಂಡ ಬಳಿಕ ಮತಗಟ್ಟೆ ಸಮೀಕ್ಷೆ ಫಲಿತಾಂಶಗಳು ಪ್ರಕಟವಾಗಲಿವೆ. ಅಂದರೆ, ಇಂದು ಮುಸ್ಸಂಜೆ 6.30ರ ನಂತರ ಎಕ್ಸಿಟ್ ಪೋಲ್ ರಿಸಲ್ಟ್ ಪ್ರಕಟವಾಗಲಿದೆ.

ಲೋಕಸಭಾ ಚುನಾವಣೆ; ಕರ್ನಾಟಕದ ಮತಗಟ್ಟೆ ಸಮೀಕ್ಷೆ ಸಂಜೆ 6.30ಕ್ಕೆ ಶುರು

ಕರ್ನಾಟಕದಲ್ಲಿ 2024 ರ ಲೋಕಸಭಾ ಚುನಾವಣೆಯು 2019 ಮತ್ತು 2014 ರ ಕಳೆದ ಎರಡು ಚುನಾವಣೆಗಳಿಗೆ ಹೋಲಿಸಿದರೆ, ಅತ್ಯಂತ ಮಹತ್ವದ್ದು. ಸಾರ್ವತ್ರಿಕ ಚುನಾವಣೆಯಲ್ಲಿ ಇದುವರೆಗಿನ ಗರಿಷ್ಠ ಮತದಾನ ಪ್ರಮಾಣ ದಾಖಲಿಸಿದ್ದು ಶೇಕಡ 69.9 ಮತದಾನ ದಾಖಲಾಗಿದೆ. ಏಪ್ರಿಲ್ 26 ಮತ್ತು ಮೇ 7 ರಂದು ಹಂತಗಳಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಮತದಾನ ನಡೆಯಿತು. ಈ ಪೈಕಿ 5 ಸ್ಥಾನಗಳನ್ನು ಪರಿಶಿಷ್ಟ ಜಾತಿ ಮತ್ತು 2 ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿದೆ.

ಕರ್ನಾಟಕಕ್ಕೆ 2019 ರ ಲೋಕಸಭೆಯ ನಿರ್ಗಮನ ಸಮೀಕ್ಷೆ ಫಲಿತಾಂಶ ಪ್ರಕಟವಾದಾಗ, ಬಿಜೆಪಿಗೆ ಗರಿಷ್ಠ ಸ್ಥಾನ ಸೂಚಿಸಿತ್ತು. ಆದರೆ ನಿಜವಾದ ಫಲಿತಾಂಶ ಬಹಳ ಭಿನ್ನವಾಗಿತ್ತು. ಬಿಜೆಪಿಗೆ 28 ಸ್ಥಾನಗಳ ಪೈಕಿ 25, ಕಾಂಗ್ರೆಸ್ 1, ಜೆಡಿಎಸ್ 1, ಪಕ್ಷೇತರ 1 ಸ್ಥಾನಗಳಲ್ಲಿ ಗೆಲುವು ಕಂಡಿದ್ದವು.

ಇಂದು (ಜೂನ್ 1) ಅಂತಿಮ ಹಂತದ ಮತದಾನ ಮುಕ್ತಾಯವಾದ ನಂತರ ಮುಸ್ಸಂಜೆ 6.30ರ ಬಳಿಕ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ 2024 ರ ಮತಗಟ್ಟೆ ಸಮೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಆದಾಗ್ಯೂ, 2024 ರ ಲೋಕಸಭಾ ಚುನಾವಣೆಯ ಅಧಿಕೃತ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ. ಕರ್ನಾಟಕದಲ್ಲಿ ಪ್ರಮುಖ ಸುದ್ದಿಚಾನೆಲ್‌ಗಳು ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಿವೆ. ಇದರ ಲೈವ್ ಅಪ್ಡೇಟ್ಸ್ ಅನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲೂ ಒದಗಿಸಲಾಗುತ್ತಿದ್ದು, ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.