ಲೋಕಸಭಾ ಚುನಾವಣೆ; ಕೇಂದ್ರ ಸರ್ಕಾರದ ವಿಕಸಿತ ಭಾರತ್ ವಾಟ್ಸ್‌ಆಪ್ ಸಂದೇಶಕ್ಕೆ ಚುನಾವಣಾ ಆಯೋಗ ತಡೆ, ತತ್‌ಕ್ಷಣವೇ ನಿಲ್ಲಿಸಲು ನಿರ್ದೇಶನ
ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; ಕೇಂದ್ರ ಸರ್ಕಾರದ ವಿಕಸಿತ ಭಾರತ್ ವಾಟ್ಸ್‌ಆಪ್ ಸಂದೇಶಕ್ಕೆ ಚುನಾವಣಾ ಆಯೋಗ ತಡೆ, ತತ್‌ಕ್ಷಣವೇ ನಿಲ್ಲಿಸಲು ನಿರ್ದೇಶನ

ಲೋಕಸಭಾ ಚುನಾವಣೆ; ಕೇಂದ್ರ ಸರ್ಕಾರದ ವಿಕಸಿತ ಭಾರತ್ ವಾಟ್ಸ್‌ಆಪ್ ಸಂದೇಶಕ್ಕೆ ಚುನಾವಣಾ ಆಯೋಗ ತಡೆ, ತತ್‌ಕ್ಷಣವೇ ನಿಲ್ಲಿಸಲು ನಿರ್ದೇಶನ

ಲೋಕಸಭಾ ಚುನಾವಣೆ 2024; ಕೇಂದ್ರ ಸರ್ಕಾರವು ವಿಕಸಿತ್ ಭಾರತ್ ಸಂಪರ್ಕ್ ಖಾತೆ ಮೂಲಕ ವಾಟ್ಸ್‌ಆಪ್‌ ಸಂದೇಶ ಕಳುಹಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಭಾರತದ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಈ ವಿದ್ಯಮಾನದ ವಿವರ ವರದಿ ಇಲ್ಲಿದೆ.

ವಿಕಸಿತ್ ಭಾರತ್ ಸಂಪರ್ಕ್ ವಾಟ್ಸ್‌ಆಪ್‌ ಸಂದೇಶದ ಚಿತ್ರ (ಎಡ ಚಿತ್ರ); ಚುನಾವಣಾ ಆಯೋಗ (ಬಲ ಚಿತ್ರ)
ವಿಕಸಿತ್ ಭಾರತ್ ಸಂಪರ್ಕ್ ವಾಟ್ಸ್‌ಆಪ್‌ ಸಂದೇಶದ ಚಿತ್ರ (ಎಡ ಚಿತ್ರ); ಚುನಾವಣಾ ಆಯೋಗ (ಬಲ ಚಿತ್ರ)

ನವದೆಹಲಿ: ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಗೆ ಜಾರಿಗೆ ಬಂದಿರುವ ಕಾರಣ ವಾಟ್ಸ್‌ಆಪ್ ಮೂಲಕ ವಿಕಸಿತ್ ಭಾರತ್ ಸಂದೇಶ ರವಾನಿಸುವುದನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಭಾರತ ಸರ್ಕಾರಕ್ಕೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ)ವು ಈ ಸಂದೇಶವನ್ನು ವಾಟ್ಸ್ಆಪ್‌ನಲ್ಲಿ ಕಳುಹಿಸುತ್ತಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಾಗರಿಕರನ್ನು ಉದ್ದೇಶಿಸಿ ಬರೆದ ಪತ್ರದ ಪಿಡಿಎಫ್‌ ರವಾನಿಸಲಾಗಿತ್ತು. ಈ ಕುರಿತು ದೂರುಗಳು ಬಂದ ಕಾರಣ ತತ್‌ಕ್ಷಣವೇ ವಿಕಸಿತ್ ಭಾರತ್ ಸಂದೇಶ ರವಾನಿಸುವುದನ್ನು ನಿಲ್ಲಿಸಬೇಕು. ಇದಕ್ಕೆ ಸಂಬಂಧಿಸಿದ ಅನುಸರಣಾ ವರದಿಯನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದು ಸಚಿವಾಲಯಕ್ಕೆ ಭಾರತದ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ.

ಪ್ರತಿಯೊಬ್ಬರ ಮೊಬೈಲ್‌ಗೂ ವಿಕಸಿತ್ ಭಾರತ್ ಸಂದೇಶ

2024 ರ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದರೂ ಮತ್ತು ಎಂಸಿಸಿ (ಮಾದರಿ ನೀತಿ ಸಂಹಿತೆ) ಜಾರಿಗೆ ಬಂದಿದ್ದರೂ ಸರ್ಕಾರದ ಉಪಕ್ರಮಗಳನ್ನು ಎತ್ತಿ ತೋರಿಸುವ ಸಂದೇಶಗಳನ್ನು ವಿಕಿಸತ್ ಭಾರತ್‌ ಸಂಪರ್ಕ್ ಎಂಬ ಖಾತೆಯ ಮೂಲಕ ವಾಟ್ಸ್‌ಆಪ್‌ನಲ್ಲಿ ಕಳುಹಿಸಲಾಗುತ್ತಿದೆ. ಈ ಕುರಿತು ನಾಗರಿಕರಿಂದ ಆಯೋಗಕ್ಕೆ ಹಲವಾರು ದೂರುಗಳು ಬಂದಿದ್ದವು.

ಎಂಸಿಸಿ ಜಾರಿಗೆ ಬರುವ ಮೊದಲು ಪತ್ರಗಳನ್ನು ಕಳುಹಿಸಲಾಗಿತ್ತು. ಅವುಗಳಲ್ಲಿ ಕೆಲವು ವ್ಯವಸ್ಥಿತ ಮತ್ತು ನೆಟ್‌ವರ್ಕ್‌ ಮಿತಿಗಳಿಂದಾಗಿ ವಿಳಂಬದೊಂದಿಗೆ ಸ್ವೀಕರಿಸುವವರಿಗೆ ತಲುಪಿರಬಹುದು ಎಂದು ಎಂಇಐಟಿವೈ ಚುನವಣಾ ಆಯೋಗಕ್ಕೆ ತಿಳಿಸಿತ್ತು.

ಈ ಸಂದೇಶಗಳನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಿರುವ ಭಾರತದ ಚುನಾವಣಾ ಆಯೋಗದ ಕ್ರಮವು ಲೋಕಸಭೆ ಚುನಾವಣೆಯಲ್ಲಿ ಎಲ್ಲರಿಗೂ ಸಮಾನ ವೇದಿಕೆ, ಅವಕಾಶ ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ತೆಗೆದುಕೊಂಡ ನಿರ್ಧಾರಗಳ ಸರಣಿಯ ಒಂದು ಭಾಗ ಎಂದು ಆಯೋಗ ಸ್ಪಷ್ಟಪಡಿಸಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

3) ಬೆಂಗಳೂರಿನಿಂದ ಲಕ್ಷದ್ವೀಪದ ಅಗಟ್ಟಿಗೆ ಮಾರ್ಚ್‌ 31 ರಿಂದ ನೇರ ವಿಮಾನ ಯಾನ; ಇಂಡಿಗೋ, ಟಿಕೆಟ್ ದರ, ಪ್ರಯಾಣ ಅವಧಿ ವಿವರ

5) ಜಪಾನ್‌ನಲ್ಲಿ ಭೂಕಂಪದ ಭೀಕರ ಅನುಭವಕ್ಕೆ ತುತ್ತಾದ ಎಸ್‌ಎಸ್‌ ರಾಜಮೌಳಿ; ಮಗ ಕಾರ್ತಿಕೇಯ ಹಂಚಿಕೊಂಡ್ರು ಆ ಅನುಭವ

Whats_app_banner