ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ 2024; ಎಕ್ಸಿಟ್ ಪೋಲ್ ರಿಸಲ್ಟ್‌ ಎಷ್ಟು ಗಂಟೆಗೆ, ಎಲ್ಲಿ, ಯಾವ ಚಾನೆಲ್‌ನಲ್ಲಿ ಪ್ರಸಾರವಾಗುತ್ತೆ, ಇಲ್ಲಿದೆ ವಿವರ

ಲೋಕಸಭಾ ಚುನಾವಣೆ 2024; ಎಕ್ಸಿಟ್ ಪೋಲ್ ರಿಸಲ್ಟ್‌ ಎಷ್ಟು ಗಂಟೆಗೆ, ಎಲ್ಲಿ, ಯಾವ ಚಾನೆಲ್‌ನಲ್ಲಿ ಪ್ರಸಾರವಾಗುತ್ತೆ, ಇಲ್ಲಿದೆ ವಿವರ

ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಇಂದು (ಜೂನ್ 1) ಪ್ರಗತಿಯಲ್ಲಿದೆ. ಎಲ್ಲರ ಗಮನವೂ ಈಗ ಚುನಾವಣೋತ್ತರ ಸಮೀಕ್ಷೆ ಮೇಲಿದೆ. ಲೋಕಸಭಾ ಚುನಾವಣೆ 2024ರ ಎಕ್ಸಿಟ್ ಪೋಲ್ ರಿಸಲ್ಟ್‌ ಎಷ್ಟು ಗಂಟೆಗೆ, ಎಲ್ಲಿ, ಯಾವ ಚಾನೆಲ್‌ನಲ್ಲಿ ಪ್ರಸಾರವಾಗುತ್ತೆ ಎಂಬಿತ್ಯಾದಿ ವಿವರ ಇಲ್ಲಿದೆ.

ಲೋಕಸಭಾ ಚುನಾವಣೆ 2024; ಎಕ್ಸಿಟ್ ಪೋಲ್ ರಿಸಲ್ಟ್‌ ಎಷ್ಟು ಗಂಟೆಗೆ, ಎಲ್ಲಿ, ಯಾವ ಚಾನೆಲ್‌ನಲ್ಲಿ ಪ್ರಸಾರವಾಗುತ್ತೆ. ಈ ಸಲ ಇಂಡಿಯಾ ಒಕ್ಕೂಟಕ್ಕೋ ಅಥವಾ ಎನ್‌ಡಿಎ ಒಕ್ಕೂಟಕ್ಕೋ ಜನಾದೇಶ ಎಂಬ ಕುತೂಹಲ ಹೆಚ್ಚಾಗಿದೆ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ 2024; ಎಕ್ಸಿಟ್ ಪೋಲ್ ರಿಸಲ್ಟ್‌ ಎಷ್ಟು ಗಂಟೆಗೆ, ಎಲ್ಲಿ, ಯಾವ ಚಾನೆಲ್‌ನಲ್ಲಿ ಪ್ರಸಾರವಾಗುತ್ತೆ. ಈ ಸಲ ಇಂಡಿಯಾ ಒಕ್ಕೂಟಕ್ಕೋ ಅಥವಾ ಎನ್‌ಡಿಎ ಒಕ್ಕೂಟಕ್ಕೋ ಜನಾದೇಶ ಎಂಬ ಕುತೂಹಲ ಹೆಚ್ಚಾಗಿದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಲೋಕಸಭಾ ಚುನಾವಣೆ ಅಂತಿಮ ಘಟ್ಟ ತಲುಪಿದ್ದು, ಇಂದು (ಜೂನ್ 1) ಕೊನೆಯ ಹಂತದ ಮತದಾನ ನಡೆಯುತ್ತಿದೆ. 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢದ 57 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಮತದಾನ ಪೂರ್ಣಗೊಂಡ ಒಂದು ಗಂಟೆ ನಂತರ ಚುನಾವಣೋತ್ತರ ಸಮೀಕ್ಷೆ ಅಥವಾ ಮತಗಟ್ಟೆ ಸಮೀಕ್ಷೆ (Exit Poll) ಪ್ರಕಟವಾಗಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ (NDA) ಅಥವಾ ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ (INDIA) ಒಕ್ಕೂಟಗಳ ಪೈಕಿ ಯಾರಿಗೆ ಜನಾದೇಶ ಸಿಗಬಹುದು ಎಂದು ಊಹಿಸುವ ಲೋಕಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆ ಕಡೆಗೆ ಈಗ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಟ್ರೆಂಡಿಂಗ್​ ಸುದ್ದಿ

ಮತದಾನದ ಕೊನೆಯ ದಿನವಾದ ಜೂನ್ 1 ರಂದು ಸಂಜೆ 6 ಗಂಟೆಯವರೆಗೆ ಎಕ್ಸಿಟ್ ಪೋಲ್ ಅಥವಾ ಮತಗಟ್ಟೆ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸದಂತೆ ಚುನಾವಣಾ ಆಯೋಗವು ಸುದ್ದಿ ವಾಹಿನಿಗಳಿಗೆ ನಿರ್ಬಂಧ ವಿಧಿಸಿದೆ.

ಚುನಾವಣೋತ್ತರ ಸಮೀಕ್ಷೆ/ ಮತಗಟ್ಟೆ ಸಮೀಕ್ಷೆ/ ಎಕ್ಸಿಟ್ ಪೋಲ್ ಎಂದರೇನು?

ಎಕ್ಸಿಟ್ ಪೋಲ್ ಎಂಬುದು ಚುನಾವಣೋತ್ತರ ಸಮೀಕ್ಷೆಯಾಗಿದ್ದು, ಇದು ಚುನಾವಣಾ ಪೂರ್ವ ಸಮೀಕ್ಷೆಯಾದ ಜನಾಭಿಪ್ರಾಯ ಸಮೀಕ್ಷೆಯನ್ನು ಹೋಲುತ್ತದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ, ಮತದಾನ ಕೇಂದ್ರದಿಂದ ನಿರ್ಗಮಿಸಿದ ನಂತರ ಮತದಾರರನ್ನು ಉದ್ದೇಶಿಸಿ, “ನೀವು ಯಾರಿಗೆ ಮತ ಚಲಾಯಿಸಿದ್ದೀರಿ” ಎಂದು ಕೇಳಲಾಗುತ್ತದೆ. ಮತ್ತೊಂದೆಡೆ, ಚುನಾವಣಾ ಪೂರ್ವ ಸಮೀಕ್ಷೆ (Opinion Poll)ಯಲ್ಲಿ ಜನರನ್ನು ಉದ್ದೇಶಿಸಿ, “ನೀವು ಯಾರಿಗೆ ಮತ ಚಲಾಯಿಸಲು ಬಯಸುತ್ತೀರಿ?” ಎಂದು ಕೇಳಲಾಗುತ್ತದೆ.

ಚುನಾವಣೋತ್ತರ ಸಮೀಕ್ಷೆಗಳನ್ನು ಎಲ್ಲಿ ವೀಕ್ಷಿಸಬಹುದು?

ಭಾರತದ ಬಹುತೇಕ ಸುದ್ದಿ ವಾಹಿನಿಗಳು ಶನಿವಾರ (ಜೂನ್ 1) ಸಂಜೆ 6:30-7 ಗಂಟೆಯ ವೇಳೆಗೆ ತಾವು ನಡೆಸಿದ ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಯ ವಿವರಗಳನ್ನು ಪ್ರಸಾರ ಮಾಡಲಾರಂಭಿಸುತ್ತವೆ. ಇವುಗಳನ್ನು ಯೂಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇವೆಲ್ಲದರ ಲೈವ್ ಅಪ್ಡೇಟ್ಸ್ ಅನ್ನು ನೀವು ನಿಮ್ಮ ನೆಚ್ಚಿನ ಹಿಂದೂಸ್ತಾನ್ ಟೈಮ್ಸ್ ಕನ್ನಡ ತಾಣದಲ್ಲೂ ನೋಡಬಹುದು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. ಲೋಕಸಭಾ ಚುನಾವಣೆಯ ಕರ್ನಾಟಕದ ಎಕ್ಸಿಟ್ ಪೋಲ್ ಲೈವ್ ಅಪ್ಡೇಟ್ಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಲೋಕಸಭಾ ಚುನಾವಣೆ 2024ರ ಚಿತ್ರಣ

ಲೋಕಸಭಾ ಚುನಾವಣೆ 2024 ಏಪ್ರಿಲ್ 19 ರಂದು ಮೊದಲ ಸುತ್ತಿನ ಮತದಾನದೊಂದಿಗೆ ಚುನಾವಣೆ ಪ್ರಾರಂಭವಾಯಿತು. ಏಪ್ರಿಲ್ 26, ಮೇ 7, 13, 20 ಮತ್ತು 25 ರಂದು 2 ರಿಂದ 6 ಹಂತಗಳ ಮತದಾನ ನಡೆದವು. ಇಂದು ಕೊನೆಯ ಹಂತದ ಅಂದರೆ 7ನೇ ಹಂತದ ಮತದಾನ ನಡೆಯುತ್ತಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇಂದ್ರದಲ್ಲಿ ಸತತ ಮೂರನೇ ಅವಧಿಗೆ ಮತ್ತು ಸತತ ಮೂರನೇ ಬಾರಿಗೆ ಏಕೈಕ ಪಕ್ಷದ ಬಹುಮತವನ್ನು ಬಯಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ದೇಶದ ಉನ್ನತ ಹುದ್ದೆಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಬಹುದು. 2014 ರಲ್ಲಿ ತಮ್ಮ ಮೊದಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಉತ್ತರ ಪ್ರದೇಶದ ವಾರಾಣಸಿಯ ಸಂಸತ್ ಸದಸ್ಯ (ಎಂಪಿ) ಪಿಎಂ ಮೋದಿ ಸತತ ಮೂರನೇ ಬಾರಿಗೆ ಈ ಸ್ಥಾನದಿಂದ ಸ್ಪರ್ಧಿಸುತ್ತಿದ್ದಾರೆ. 2014 ಮತ್ತು 2019 ರ ಚುನಾವಣೆಗಳಲ್ಲಿ ಮೂರನೇ ಸ್ಥಾನ ಪಡೆದ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಜಯ್ ರಾಯ್ ಅವರ ಮುಖ್ಯ ಪ್ರತಿಸ್ಪರ್ಧಿಯಾಗಿದ್ದಾರೆ. ವಾರಾಣಸಿ ಶನಿವಾರ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಒಂದಾಗಿದೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.