Exit polls 2024; ಲೋಕಸಭಾ ಚುನಾವಣೆ 2019, 2014, 2009ರ ಮತಗಟ್ಟೆ ಸಮೀಕ್ಷೆಗಳು ಮತ್ತು ಫಲಿತಾಂಶಗಳ ಚಿತ್ರಣ ಹೀಗಿದ್ದವು
Exit polls 2024; ಲೋಕಸಭಾ ಚುನಾವಣೆ 2024 ಮತಗಟ್ಟೆ ಸಮೀಕ್ಷೆಯ ಫಲಿತಾಂಶ ಎದುರು ನೋಡುತ್ತಿರುವ ಹೊತ್ತು. ಈ ಹಿಂದಿನ ಸಮೀಕ್ಷೆಗಳ ಫಲಿತಾಂಶಗಳ ಕುರಿತು ಕುತೂಹಲ ಮೂಡುವುದು ಸಹಜ. ಲೋಕಸಭಾ ಚುನಾವಣೆ 2019, 2014, 2009ರ ಮತಗಟ್ಟೆ ಸಮೀಕ್ಷೆಗಳು ಮತ್ತು ಫಲಿತಾಂಶಗಳ ಚಿತ್ರಣ ಹೀಗಿದ್ದವು ನೋಡಿ.
ನವದೆಹಲಿ: ದೀರ್ಘ ಅವಧಿಯ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನದ ಅವಧಿ ಮುಗಿಯುತ್ತ ಬಂತು. ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ಶುರುವಾಗಿದ್ದು, 43 ದಿನಗಳ ನಂತರ ಶನಿವಾರ (ಜೂನ್ 1) ಲೋಕಸಭೆ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಅಂದರೆ ಮತದಾನ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಇದಾಗಿ ಅರ್ಧ ಗಂಟೆ ಬಳಿಕ ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶ (Lok Sabha Election Exit polls Results) ಪ್ರಕಟವಾಗಲಿವೆ. ಜೂನ್ 4ಕ್ಕೆ ನಿಖರ ಫಲಿತಾಂಶವನ್ನು ಭಾರತದ ಚುನಾವಣಾ ಆಯೋಗ ಪ್ರಕಟಿಸಲಿದೆ.
ಎರಡು ಅವಧಿಗೆ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಎದುರಿಸಲು ಕಾಂಗ್ರೆಸ್ ಪಕ್ಷ ಐಎನ್‌ಡಿಎಐಎ ಒಕ್ಕೂಟವನ್ನು ಕಟ್ಟಿದ್ದು, ಮತದಾರರ ಒಲವು ಗಳಿಸಲು ಕರ್ನಾಟಕ, ತೆಲಂಗಾಣದ ಮಾದರಿಯನ್ನು ಮುಂದಿಟ್ಟಿತ್ತು. ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿತ್ತು. ಚುನಾವಣಾ ಪ್ರಚಾರದಲ್ಲೂ ಗ್ಯಾರೆಂಟಿ ಸದ್ದು ಬಹಳ ಜೋರಾಗಿಯೇ ಇತ್ತು. ಹೀಗಾಗಿ ಈ ಸಲದ ಎಕ್ಸಿಟ್ ಪೋಲ್ ಹೆಚ್ಚು ಕುತೂಹಲ ಕೆರಳಿಸಿದೆ.
ಮತಗಟ್ಟೆ ಸಮೀಕ್ಷೆಗಳು ನಿಖರವಾಗಿರುತ್ತವಾ ಎನ್ನುವ ಸಂದೇಹ ಸಹಜ. ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳು ಅಂದರೆ 2014 ಮತ್ತು 2019 ರ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‌ಗಳ ಫಲಿತಾಂಶ ಮತ್ತು ಚುನಾವಣಾ ಫಲಿತಾಂಶದ ಎಷ್ಟು ನಿಖರವಾಗಿದ್ದವು, ಗಮನಿಸಬೇಕಾದ ವಿಚಾರ. ಇವೆರಡನ್ನೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭಾರಿ ಅಂತರದಿಂದ ಗೆದ್ದಿದೆ. 2014 ರ ಲೋಕಸಭಾ ಚುನಾವಣೆಯು ಏಪ್ರಿಲ್ 7 ಮತ್ತು ಮೇ 12 ರ ನಡುವೆ ನಡೆದಿದ್ದರೆ, ಮೇ 16 ರಂದು ಫಲಿತಾಂಶಗಳನ್ನು ಪ್ರಕಟಿವಾಯಿತು. 2019 ರ ಆವೃತ್ತಿಯು ಏಪ್ರಿಲ್ 11 ರಿಂದ ಮೇ 19 ರವರೆಗೆ ಮತ್ತು ಮೇ 23 ರಂದು ಫಲಿತಾಂಶ ಪ್ರಕಟವಾಗಿತ್ತು.
ಲೋಕಸಭಾ ಚುನಾವಣೆ 2019 ಮತಗಟ್ಟೆ ಸಮೀಕ್ಷೆ vs ಫಲಿತಾಂಶ
ಲೋಕಸಭಾ ಚುನಾವಣೆ 2019 ರಲ್ಲಿ, ಸರಾಸರಿ 13 ಎಕ್ಸಿಟ್ ಪೋಲ್‌ಗಳು ಎನ್‌ಡಿಎಯ ಒಟ್ಟು ಸ್ಥಾನಗಳನ್ನು 306 ಮತ್ತು ಯುಪಿಎ 120 ಸ್ಥಾನಗಳಲ್ಲಿ ಗೆಲುವು ದಾಖಲಿಸಬಹುದು ಎಂದು ಅಂದಾಜಿಸಿದ್ದವು. ಮತ್ತೊಮ್ಮೆ NDA ಯ ಕಾರ್ಯಕ್ಷಮತೆಯನ್ನು ಕಡಿಮೆ ಅಂದಾಜು ಮಾಡಿದೆ, ಅದು 353 ಸ್ಥಾನಗಳನ್ನು ಗೆದ್ದಿದೆ. ಯುಪಿಎ 93. ಈ ಪೈಕಿ ಬಿಜೆಪಿ 303 ಮತ್ತು ಕಾಂಗ್ರೆಸ್ 52 ಗೆದ್ದುಕೊಂಡಿದ್ದವು.
ಲೋಕಸಭಾ ಚುನಾವಣೆ 2019ರ ಎಕ್ಸಿಟ್ ಪೋಲ್ ಮತ್ತು ಫಲಿತಾಂಶದ ಚಿತ್ರಣ
ಏಜೆನ್ಸಿ | ಬಿಜೆಪಿ ನೇತೃತ್ವದ ಎನ್‌ಡಿಎ | ಕಾಂಗ್ರೆಸ್ ನೇತೃತ್ವದ ಯುಪಿಎ |
ಇಂಡಿಯಾ ಟುಡೆ- ಏಕ್ಸಿಸ್ | 352 | 93 |
ನ್ಯೂಸ್ 24 - ಟುಡೇ'ಸ್ ಚಾಣಕ್ಯ | 350 | 95 |
ನ್ಯೂಸ್ 18- ಇಪ್ಸೋಸ್ | 336 | 82 |
ಸುದರ್ಶನ್ ನ್ಯೂಸ್ | 313 | 121 |
ವಿಡಿಪಿ ಅಸೋಸಿಯೇಟ್ಸ್ | 333 | 115 |
ಟೈಮ್ಸ್ ನೌ - ವಿಎಂಆರ್ | 306 | 132 |
ಏಷ್ಯಾನೆಟ್ ಸುವರ್ಣ ನ್ಯೂಸ್ | 305 | 124 |
ಇಂಡಿಯಾ ಟಿವಿ - ಸಿಎನ್‌ಎಕ್ಸ್ | 300 | 120 |
ಸಿ ವೋಟರ್ | 287 | 128 |
ಇಂಡಿಯಾ ನ್ಯೂಸ್- ಪೋಲ್‌ಸ್ಟ್ರಾಟ್ | 287 | 128 |
ನ್ಯೂಸ್ ನೇಷನ್ | 286 | 122 |
ಎಬಿಪಿ- ಸಿಎಸ್‌ಡಿಎಸ್ | 277 | 130 |
ನ್ಯೂಸ್ ಎಕ್ಸ್ - ನೇತಾ | 242 | 164 |
ಎಕ್ಸಿಟ್ ಪೋಲ್ ಸರಾಸರಿ | 306 | 120 |
ಚುನಾವಣಾ ಫಲಿತಾಂಶ | 353 | 93 |
ವ್ಯತ್ಯಾಸ ಎಷ್ಟು= ಚುನಾವಣಾ ಫಲಿತಾಂಶ- ಎಕ್ಸಿಟ್ ಪೋಲ್ ಸರಾಸರಿ | - 47= (353- 306) | -27 = (93-120) |
ಲೋಕಸಭಾ ಚುನಾವಣೆ 2014ರ ಫಲಿತಾಂಶ vs ಮತಗಟ್ಟೆ ಸಮೀಕ್ಷೆಗಳು
ಲೋಕಸಭಾ ಚುನಾವಣೆ 2014 ರಲ್ಲಿ, ಸರಾಸರಿ ಎಂಟು ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎ 283 ಸ್ಥಾನಗಳನ್ನು ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ 105 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಿದ್ದವು. ಆ ವರ್ಷ 'ಮೋದಿ ಅಲೆ'ಯ ವ್ಯಾಪ್ತಿಯನ್ನು ಅಂದಾಜು ಮಾಡಲು ಈ ಮತಗಟ್ಟೆ ಸಮೀಕ್ಷೆಗಳು ವಿಫಲವಾಗಿದ್ದವು. ಎನ್‌ಡಿಎ 336 ಸ್ಥಾನಗಳನ್ನು ಗಳಿಸಿತು ಮತ್ತು ಯುಪಿಎ ಕೇವಲ 60. ಇವುಗಳಲ್ಲಿ ಬಿಜೆಪಿ 282 ಮತ್ತು ಕಾಂಗ್ರೆಸ್ 44 ಗೆದ್ದುಕೊಂಡವು.
2014ರ ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು vs ಫಲಿತಾಂಶದ ಚಿತ್ರಣ
ಏಜೆನ್ಸಿ | ಬಿಜೆಪಿ ನೇತೃತ್ವದ ಎನ್‌ಡಿಎ | ಕಾಂಗ್ರೆಸ್ ನೇತೃತ್ವದ ಯುಪಿಎ |
ನ್ಯೂಸ್ 24 - ಚಾಣಕ್ಯ | 340 | 70 |
ಇಂಡಿಯಾ ಟಿವಿ- ಸಿ ವೋಟರ್ | 280 | 101 |
ಸಿಎನ್‌ಎನ್‌ಐಬಿಎನ್ - ಸಿಎಸ್‌ಡಿಎಸ್ | 280 | 97 |
ಸಿಎನ್‌ಎನ್‌ಐಬಿಎನ್ - ಸಿಎಸ್‌ಡಿಎಸ್-ಲೋಕನೀತಿ | 276 | 97 |
ಎನ್‌ಡಿಟಿವಿ - ಹನ್ಸ ರೀಸರ್ಚ್ | 279 | 103 |
ಎಬಿಪಿ ನ್ಯೂಸ್ - ನೀಲ್ಸನ್ | 274 | 97 |
ಇಂಡಿಯಾ ಟುಡೇ - ಸಿಸೆರೋ | 272 | 115 |
ಟೈಮ್ಸ್ ನೌ - ಓಆರ್‌ಜಿ | 249 | 148 |
ಎಕ್ಸಿಟ್ ಪೋಲ್ ಸರಾಸರಿ | 283 | 105 |
ಚುನಾವಣೆಯ ಫಲಿತಾಂಶ | 336 | 60 |
ವ್ಯತ್ಯಾಸ ಎಷ್ಟು = ಚುನಾವಣೆ ಫಲಿತಾಂಶ - ಎಕ್ಸಿಟ್ ಪೋಲ್ ಸರಾಸರಿ | 53 = 336- 283 | - 45 = 60- 105 |
ಲೋಕಸಭಾ ಚುನಾವಣೆ 2009ರ ಫಲಿತಾಂಶ vs ಮತಗಟ್ಟೆ ಸಮೀಕ್ಷೆ
2009 ರಲ್ಲಿಯೂ, ಯುಪಿಎ ಮತ್ತೆ ಅಧಿಕಾರಕ್ಕೆ ಬಂದಾಗ, ಸರಾಸರಿ ನಾಲ್ಕು ಎಕ್ಸಿಟ್ ಪೋಲ್‌ಗಳು ಪಕ್ಷಗಳ ಸ್ಥಾನಗಳ ಸಂಖ್ಯೆಯನ್ನು ಕಡಿಮೆ ಅಂದಾಜು ಮಾಡಿದೆ. ಅವರು ಯುಪಿಎಗೆ 195 ಮತ್ತು ಎನ್‌ಡಿಎಗೆ 185 ಸ್ಥಾನಗಳನ್ನು ಅಂದಾಜಿಸಿದ್ದವು. ಅಂತಿಮವಾಗಿ ಯುಪಿಎ 262 ಸ್ಥಾನಗಳನ್ನು ಗೆದ್ದುಕೊಂಡಿತು, ಎನ್‌ಡಿಎ 158 ಸ್ಥಾನಗಳಿಗೆ ಹೋಲಿಸಿದರೆ. ಇವುಗಳಲ್ಲಿ ಕಾಂಗ್ರೆಸ್ 206 ಮತ್ತು ಬಿಜೆಪಿ 116 ಸ್ಥಾನಗಳನ್ನು ಗಳಿಸಿದ್ದವು.
2009ರ ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಮತ್ತು ಫಲಿತಾಂಶದ ಚಿತ್ರಣ
ಏಜೆನ್ಸಿಗಳು | ಕಾಂಗ್ರೆಸ್ ನೇತೃತ್ವದ ಯುಪಿಎ | ಬಿಜೆಪಿ ನೇತೃತ್ವದ ಎನ್‌ಡಿಎ |
ಸ್ಟಾರ್ - ನೀಲ್ಸನ್ | 199 | 196 |
ಇಂಡಿಯಾ ಟಿವಿ- ಸಿ ವೋಟರ್ | 195 | 189 |
ಸಿಎನ್‌ಎನ್ ಐಬಿಎನ್- ದೈನಿಕ್ ಭಾಸ್ಕರ್ | 195 | 175 |
ಹೆಡ್‌ಲೈನ್ಸ್ ಟುಡೇ | 191 | 180 |
ಎಕ್ಸಿಟ್ ಪೋಲ್‌ಗಳ ಸರಾಸರಿ | 195 | 185 |
ಚುನಾವಣಾ ಫಲಿತಾಂಶ | 262 | 158 |
ವ್ಯತ್ಯಾಸ ಎಷ್ಟು= ಚುನಾವಣಾ ಫಲಿತಾಂಶ- ಎಕ್ಸಿಟ್ ಪೋಲ್‌ಗಳ ಸರಾಸರಿ | 67 = (262- 195) | -27 = (158-185) |
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.