ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‌ ಮುನ್ನಾದಿನ ಷೇರುಪೇಟೆ ಸೂಚ್ಯಂಕಗಳ ರ‍್ಯಾಲಿ, ಒಂದೇ ದಿನ ಹೂಡಿಕೆದಾರರಿಗೆ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಲಾಭ

ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‌ ಮುನ್ನಾದಿನ ಷೇರುಪೇಟೆ ಸೂಚ್ಯಂಕಗಳ ರ‍್ಯಾಲಿ, ಒಂದೇ ದಿನ ಹೂಡಿಕೆದಾರರಿಗೆ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಲಾಭ

ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‌ ಪ್ರಕಟವಾಗುವ ಮುನ್ನಾ ದಿನವಾದ ಇಂದು (ಮೇ 31) ಮುಂಬಯಿ ಷೇರುಪೇಟೆ ಸೂಚ್ಯಂಕಗಳು ಐದು ದಿನಗಳ ಬಳಿಕ ಏರಿಕೆ ದಾಖಲಿಸಿವೆ. ಸರಳವಾಗಿ ಹೇಳಬೇಕು ಎಂದರೆ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‌ ಮುನ್ನಾದಿನ ಷೇರುಪೇಟೆ ಸೂಚ್ಯಂಕಗಳ ರ‍್ಯಾಲಿ ನಡೆಯಿತು. ಒಂದೇ ದಿನ ಹೂಡಿಕೆದಾರರಿಗೆ 2 ಲಕ್ಷ ಕೋಟಿ ರೂ.ಗೂ ಅಧಿಕ ಲಾಭವಾಗಿದೆ. ಇದರ ವಿವರ ಇಲ್ಲಿದೆ.

ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‌ ಮುನ್ನಾದಿನ ಷೇರುಪೇಟೆ ಸೂಚ್ಯಂಕಗಳ ರ‍್ಯಾಲಿ ನಡೆಯಿತು. ಒಂದೇ ದಿನ ಹೂಡಿಕೆದಾರರಿಗೆ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಲಾಭವಾಗಿದೆ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‌ ಮುನ್ನಾದಿನ ಷೇರುಪೇಟೆ ಸೂಚ್ಯಂಕಗಳ ರ‍್ಯಾಲಿ ನಡೆಯಿತು. ಒಂದೇ ದಿನ ಹೂಡಿಕೆದಾರರಿಗೆ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಲಾಭವಾಗಿದೆ. (ಸಾಂಕೇತಿಕ ಚಿತ್ರ)

ಮುಂಬಯಿ: ಲೋಕಸಭೆ ಚುನಾವಣೆ ಕೊನೆಯ ಹಂತದ ಮತದಾನ ದಿನದ (ಜೂನ್ 1) ಮತ್ತು ಎಕ್ಸಿಟ್ ಪೋಲ್‌ ಮುನ್ನಾ ದಿನವಾದ ಇಂದು (ಮೇ 31) ಮುಂಬಯಿ ಷೇರುಪೇಟೆ ಸೂಚ್ಯಂಕಗಳು ಏರಿಕೆಯೊಂದಿಗೆ ವಹಿವಾಟುಮುಗಿಸಿವೆ. 5 ದಿನಗಳ ಬಳಿಕ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ದಾಖಲಿಸಿರುವಂಥದ್ದು. ಸೆನ್ಸೆಕ್ಸ್ 75 ಅಂಕ ಏರಿಕೆ ಕಂಡಿದೆ. ನಿಫ್ಟಿ 22,500 ದಾಟಿದೆ. ಇದರಿಂದಾಗಿ ಹೂಡಿಕೆದಾರರ ಸಂಪತ್ತು ಒಂದು ದಿನದಲ್ಲಿ ಸುಮಾರು 2.19 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ.

ಟ್ರೆಂಡಿಂಗ್​ ಸುದ್ದಿ

ಬಹುತೇಕ ಸೂಚ್ಯಂಕಗಳು ಹಸಿರು ಬಣ್ಣದಲ್ಲೇ ವಹಿವಾಟು ಮುಗಿಸಿರುವುದು ವಿಶೇಷ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ.0.06 ರಷ್ಟು ಏರಿಕೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು 0.76 ಶೇಕಡ ಹೆಚ್ಚಳ ದಾಖಲಿಸಿದೆ. ಇಂದಿನ ವಹಿವಾಟಿನಲ್ಲಿ ಯುಟಿಲಿಟಿ, ಪವರ್, ರಿಯಲ್ ಎಸ್ಟೇಟ್ ಮತ್ತು ಮೆಟಲ್ ಶೇರುಗಳು ಅತಿ ಹೆಚ್ಚು ಲಾಭ ಗಳಿಸಿದವು. ಮತ್ತೊಂದೆಡೆ, ಐಟಿ, ಫಾರ್ಮಾ ಮತ್ತು ಅಟೋಮೊಬೈಲ್‌ ಷೇರುಗಳಲ್ಲಿ ಕುಸಿತದ ಪ್ರವೃತ್ತಿ ಕಂಡುಬಂದಿದೆ.

ದಿನದ ವಹಿವಾಟಿನ ಅಂತ್ಯದ ವೇಳೆಗೆ, ಬಿಎಸ್‌ಇ ಸೆನ್ಸೆಕ್ಸ್ 75.71 ಪಾಯಿಂಟ್ ಅಥವಾ 0.10 ರಷ್ಟು ಏರಿಕೆಯಾಗಿ 73,961.31 ಕ್ಕೆ ಕೊನೆಗೊಂಡಿತು. ಏತನ್ಮಧ್ಯೆ, ಎನ್‌ಎಸ್‌ಇಯ 50-ಷೇರು ಸೂಚ್ಯಂಕ ನಿಫ್ಟಿ 42.05 ಪಾಯಿಂಟ್ ಅಥವಾ 0.19 ರಷ್ಟು ಏರಿಕೆಯಾಗಿ 22,530.70 ಕ್ಕೆ ಕೊನೆಗೊಂಡಿತು.

ಎಕ್ಸಿಟ್ ಪೋಲ್ ಮುನ್ನಾದಿನ ಹೂಡಿಕೆದಾರರಿಗೆ ಒಂದೇ ದಿನ 2.19 ಲಕ್ಷ ಕೋಟಿ ರೂಪಾಯಿ ಲಾಭ

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು ಇಂದು (ಮೇ 31) 412.55 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದು ಅದರ ಹಿಂದಿನ ವಹಿವಾಟಿನ ದಿನದಂದು ಅಂದರೆ ಗುರುವಾರ (ಮೇ 30) 410.36 ಲಕ್ಷ ಕೋಟಿ ರೂಪಾಯಿ ಇತ್ತು. ಈ ಮೂಲಕ ಇಂದು ಬಿಎಸ್‌ಇಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಮಾರುಕಟ್ಟೆ ಮೌಲ್ಯ ಸುಮಾರು 2.19 ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ. ಸರಳವಾಗಿ ಹೇಳಬೇಕು ಎಂದರೆ ಹೂಡಿಕೆದಾರರ ಸಂಪತ್ತು ಸುಮಾರು 2.19 ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ.

ಸೆನ್ಸೆಕ್ಸ್‌; ಅತಿ ಹೆಚ್ಚು ಏರಿದ ‍5 ಷೇರುಗಳು ಮತ್ತು ಅತಿ ಹೆಚ್ಚು ಕುಸಿದ 5 ಷೇರುಗಳು

ಬಿಎಸ್‌ಇ ಸೆನ್ಸೆಕ್ಸ್‌ನ 30 ರಲ್ಲಿ 17 ಷೇರುಗಳು ಇಂದು ಲಾಭದೊಂದಿಗೆ ಮುಕ್ತಾಯಗೊಂಡವು. ಇದರಲ್ಲೂ ಟಾಟಾ ಸ್ಟೀಲ್ ಷೇರುಗಳು ಗರಿಷ್ಠ ಶೇ.2.01ರಷ್ಟು ಏರಿಕೆ ಕಂಡಿವೆ. ಇದರ ನಂತರ, ಬಜಾಜ್ ಫೈನಾನ್ಸ್, ಇಂಡಸ್‌ಇಂಡ್ ಬ್ಯಾಂಕ್, ಮಹೀಂದ್ರಾ ಮತ್ತು ಮಹೀಂದ್ರಾ (ಎಂ ಮತ್ತು ಎಂ) ಮತ್ತು ಪವರ್ ಗ್ರಿಡ್ ಶೇರುಗಳು 0.96 ಶೇಕಡಾದಿಂದ 1.84 ರಷ್ಟು ಲಾಭ ಗಳಿಸಿದವು.

ಸೆನ್ಸೆಕ್ಸ್‌; ಅತಿ ಹೆಚ್ಚು ಏರಿದ ‍5 ಷೇರುಗಳು ಮತ್ತು ಅತಿ ಹೆಚ್ಚು ಕುಸಿದ 5 ಷೇರುಗಳು
ಸೆನ್ಸೆಕ್ಸ್‌; ಅತಿ ಹೆಚ್ಚು ಏರಿದ ‍5 ಷೇರುಗಳು ಮತ್ತು ಅತಿ ಹೆಚ್ಚು ಕುಸಿದ 5 ಷೇರುಗಳು

ಉಳಿದ 13 ಸೆನ್ಸೆಕ್ಸ್ ಷೇರುಗಳು ಇಂದು ನಷ್ಟದೊಂದಿಗೆ ಮುಕ್ತಾಯಗೊಂಡವು. ಈ ಪೈಕಿ ನೆಸ್ಲೆ ಇಂಡಿಯಾ ಷೇರುಗಳು ಶೇ.2.06 ರಷ್ಟು ಕುಸಿತದೊಂದಿಗೆ ಟಾಪ್ ಲೂಸರ್ ಆಗಿದೆ. ಇದರ ಹೊರತಾಗಿ, ಮಾರುತಿ ಸುಜುಕಿ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಏಷ್ಯನ್ ಪೇಂಟ್ಸ್ ಶೇರುಗಳು ಕ್ರಮವಾಗಿ 0.76 ರಿಂದ 1.51 ರಷ್ಟು ಕುಸಿತದೊಂದಿಗೆ ಕೆಂಪಾಗಿ ವಹಿವಾಟು ಕೊನೆಗೊಳಿಸಿದವು.

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (ಬಿಎಸ್‌ಇ) ಇಂದು, ಲಾಭಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯ ಷೇರುಗಳು ಕುಸಿತ ದಾಖಲಿಸಿವೆ. ಬಿಎಸ್‌ಇನಲ್ಲಿ ಒಟ್ಟು 3,915 ಷೇರುಗಳ ವಹಿವಾಟು ಇದ್ದು, ಈ ಪೈಕಿ 1,841 ಷೇರುಗಳು ಲಾಭದೊಂದಿಗೆ ವಹಿವಾಟು ಮುಗಿಸಿವೆ. 1,983 ಷೇರುಗಳು ನಷ್ಟ ಅನುಭವಿಸಿವೆ. 91 ಷೇರುಗಳು ಯಾವುದೇ ಏರಿಳಿತಗಳಿಲ್ಲದೆ ಫ್ಲಾಟ್ ಆಗಿ ಮುಚ್ಚಿದವು. ಇದಲ್ಲದೇ ಇಂದಿನ ವಹಿವಾಟಿನಲ್ಲಿ 131 ಶೇರುಗಳು ತಮ್ಮ ಹೊಸ 52 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿವೆ. ಆದರೆ 79 ಷೇರುಗಳು ತಮ್ಮ ಹೊಸ 52 ವಾರಗಳ ಕನಿಷ್ಠ ಮಟ್ಟವನ್ನು ಮುಟ್ಟಿವೆ.