ಕನ್ನಡ ಸುದ್ದಿ  /  Elections  /  Lok Sabha-elections  /  Lok Sabha Election <Span Class='webrupee'>₹</span>5 85 Cr Cash Alcohol Worth <Span Class='webrupee'>₹</span>21 48 Cr Seized In Run Up To Ls Polls In Karnataka Uks

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ 5.85 ಕೋಟಿ ರೂಪಾಯಿ ನಗದು, 21.48 ಕೋಟಿ ರೂ ಮೌಲ್ಯದ ಮದ್ಯ ವಶ

ಲೋಕಸಭಾ ಚುನಾವಣೆ 2024: ಮಾದರಿ ನೀತಿ ಸಂಹಿತೆ ಜಾರಿಯಾದ ಅಂದಿನಿಂದ ನಿನ್ನೆ (ಮಾರ್ಚ್ 20) ತನಕ ಕರ್ನಾಟಕದಲ್ಲಿ 5.85 ಕೋಟಿ ರೂಪಾಯಿ ನಗದು, 21.48 ಕೋಟಿ ರೂ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ವಿವರ ವರದಿ ಹೀಗಿದೆ.

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ 5.85 ಕೋಟಿ ರೂಪಾಯಿ ನಗದು, 21.48 ಕೋಟಿ ರೂ ಮೌಲ್ಯದ ಮದ್ಯವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ 5.85 ಕೋಟಿ ರೂಪಾಯಿ ನಗದು, 21.48 ಕೋಟಿ ರೂ ಮೌಲ್ಯದ ಮದ್ಯವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಕರ್ನಾಟಕದಲ್ಲಿ ಇದುವರೆಗೆ 5.85 ಕೋಟಿ ರೂಪಾಯಿ ನಗದು ಹಾಗೂ 21.48 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಬುಧವಾರ (ಮಾರ್ಚ್ 20) ತಿಳಿಸಿದೆ

ಕರ್ನಾಟಕದ 28 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ. ಮಾರ್ಚ್ 16 ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ನಿನ್ನೆ (ಮಾರ್ಚ್ 20) ತನಕ, ಕರ್ನಾಟಕದಲ್ಲಿ 5.85 ಕೋಟಿ ರೂಪಾಯಿ ನಗದು ಹಾಗೂ 21.48 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

ಲೋಕಸಭಾ ಚುನಾವಣೆ; ಆಯೋಗ ಕರ್ನಾಟಕದಲ್ಲಿ ವಶಪಡಿಸಿಕೊಂಡಿರುವುದೇನು

ಫ್ಲೈಯಿಂಗ್ ಸ್ಕ್ವಾಡ್ಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ನಿರಂತರ ತಪಾಸಣೆ, ಶೋಧದಲ್ಲಿ ತೊಡಗಿದ್ದು, 5.85 ಕೋಟಿ ರೂಪಾಯಿ ನಗದು, 5.87 ಲಕ್ಷ ಉಚಿತ ವಸ್ತುಗಳು, 21.48 ಕೋಟಿ ರೂ.ಗಳ ಮೌಲ್ಯದ 6.84 ಲಕ್ಷ ಲೀಟರ್ ಮದ್ಯ, 15 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ 24.3 ಕೆಜಿ ಮಾದಕ ವಸ್ತುಗಳು ಮತ್ತು 27 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಮೂಲ್ಯ ಲೋಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗ ಹೇಳಿದೆ.

ನಗದು, ಮದ್ಯ, ಮಾದಕ ದ್ರವ್ಯಗಳು, ಅಮೂಲ್ಯ ಲೋಹ ಮತ್ತು ಉಚಿತ ವಸ್ತುಗಳನ್ನು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿ 205 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. 47,868 ಶಸ್ತ್ರಾಸ್ತ್ರಗಳನ್ನು ಠೇವಣಿ ಇಡಲಾಗಿದೆ, 827 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಂಟು ಶಸ್ತ್ರಾಸ್ತ್ರ ಪರವಾನಗಿಗಳನ್ನು ರದ್ದುಪಡಿಸಲಾಗಿದೆ, ಸಿಆರ್‌ಪಿಸಿಯ ವಿವಿಧ ಸೆಕ್ಷನ್‌ ಪ್ರಕಾರ 2,173 ಪ್ರಕರಣಗಳನ್ನು ದಾಖಲಿಸಲಾಗಿದೆ, ಅದರಲ್ಲಿ 2,725 ಜನರನ್ನು ಬಂಧಿಸಲಾಗಿದೆ.

ಅಬಕಾರಿ ಇಲಾಖೆಯು 249 ಘೋರ ಪ್ರಕರಣಗಳು, ಪರವಾನಗಿ ಷರತ್ತುಗಳ ಉಲ್ಲಂಘನೆಗಾಗಿ 206 ಪ್ರಕರಣಗಳು, 13 ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್) ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15 (ಎ) ಅಡಿಯಲ್ಲಿ 822 ಪ್ರಕರಣಗಳನ್ನು ದಾಖಲಿಸಿದೆ ಮತ್ತು 156 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಂಡಿದೆ.

ಯಾವ್ಯಾವ ಜಿಲ್ಲೆಗಳಲ್ಲಿ ಏನೇನು ವಶಕ್ಕೆ

ವಿಜಯಪುರ ಸೈಬರ್, ಎಕನಾಮಿಕ್ ಅಂಡ್ ನಾರ್ಕೋಟಿಕ್ಸ್ (ಸಿಇಎನ್) ಪೊಲೀಸ್ ಠಾಣೆ ತಂಡವು ಬಿಜಾಪುರ ಲೋಕಸಭಾ ಕ್ಷೇತ್ರ, ವಿಜಯಪುರ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ 2,93,50,000 ರೂ.ಗಳನ್ನು ವಶಪಡಿಸಿಕೊಂಡಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹೇಳಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನಲ್ಲಿ 32,92,500 ರೂ.ಗಳನ್ನು ಎಸ್ಎಸ್ಟಿ ತಂಡ ವಶಪಡಿಸಿಕೊಂಡಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಬನ್ನಿಕೊಪ್ಪ ಚೆಕ್ ಪೋಸ್ಟ್ ನಲ್ಲಿ ಸ್ಥಿರ ಕಣ್ಗಾವಲು ತಂಡವು 50,00,000 ರೂ.ಗಳನ್ನು ವಶಪಡಿಸಿಕೊಂಡಿದೆ.

ಮತದಾರ ಸಹಾಯವಾಣಿ ನೆರವು

ಮತದಾರರ ಸಹಾಯವಾಣಿ ಮೂಲಕ ಸ್ವೀಕರಿಸಿದ 1,740 ಕರೆಗಳಲ್ಲಿ 1,737 ಜನರು ಮಾಹಿತಿ ಕೋರಿದ್ದಾರೆ. ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮೂವರು ದೂರುಗಳನ್ನು ದಾಖಲಿಸಿದ್ದಾರೆ. ಒಟ್ಟು 1,740 ಕರೆಗಳನ್ನು ವಿಲೇವಾರಿ ಮಾಡಲಾಗಿದೆ. ಇದಲ್ಲದೆ, ಎನ್ಜಿಎಸ್ಪಿ (ರಾಷ್ಟ್ರೀಯ ಕುಂದುಕೊರತೆ ಸೇವಾ ಪೋರ್ಟಲ್) ನಲ್ಲಿ ನಾಗರಿಕರು 6,943 ದೂರುಗಳನ್ನು ನೋಂದಾಯಿಸಿದ್ದಾರೆ, ಅದರಲ್ಲಿ 6,368 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)