Lok Sabha Elections2024: ಲೋಕಸಭೆ ಚುನಾವಣೆಯಲ್ಲಿ ಮನೇಕಾ ಗಾಂಧಿಗೆ ಬಿಜೆಪಿ ಟಿಕೆಟ್‌, ವರುಣ್‌ ಗಾಂಧಿ ಔಟ್‌
ಕನ್ನಡ ಸುದ್ದಿ  /  ಚುನಾವಣೆಗಳು  /  Lok Sabha Elections2024: ಲೋಕಸಭೆ ಚುನಾವಣೆಯಲ್ಲಿ ಮನೇಕಾ ಗಾಂಧಿಗೆ ಬಿಜೆಪಿ ಟಿಕೆಟ್‌, ವರುಣ್‌ ಗಾಂಧಿ ಔಟ್‌

Lok Sabha Elections2024: ಲೋಕಸಭೆ ಚುನಾವಣೆಯಲ್ಲಿ ಮನೇಕಾ ಗಾಂಧಿಗೆ ಬಿಜೆಪಿ ಟಿಕೆಟ್‌, ವರುಣ್‌ ಗಾಂಧಿ ಔಟ್‌

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹಳಷ್ಟು ಬದಲಾವಣೆಗಳನ್ನು ಮಾಡಿದೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ ಕಾರಣಕ್ಕೆ ವರುಣ್‌ ಗಾಂಧಿಗೆ ಟಿಕೆಟ್‌ ತಪ್ಪಿದೆ.

ಟಿಕೆಟ್‌ ತಪ್ಪಿಸಿಕೊಂಡ ವರುಣ್‌ ಗಾಂಧಿ,  ಮತ್ತೆ ಅವಕಾಶ ಪಡೆದ ಮನೇಕಾ ಗಾಂಧಿ
ಟಿಕೆಟ್‌ ತಪ್ಪಿಸಿಕೊಂಡ ವರುಣ್‌ ಗಾಂಧಿ, ಮತ್ತೆ ಅವಕಾಶ ಪಡೆದ ಮನೇಕಾ ಗಾಂಧಿ

ದೆಹಲಿ: ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ಉತ್ತರ ಪ್ರದೇಶದಲ್ಲಿ ಈ ಬಾರಿ ಕೇಂದ್ರದ ಮಾಜಿ ಸಚಿವೆ ಮನೇಕಾ ಗಾಂಧಿ ಅವರಿಗೆ ಮತ್ತೊಮ್ಮೆ ಟಿಕೆಟ್‌ ನೀಡಿದೆ. ಆದರೆ ಅವರ ಪುತ್ರ ವರುಣ್‌ ಗಾಂಧಿ ಅವರನ್ನು ಕೈ ಬಿಡಲಾಗಿದೆ. ವಿವಾದಾತ್ಮಕ ಹೇಳಿಕೆಗಳ ಮೂಲಕ ವರಿಷ್ಠರ ಕೆಂಗೆಣ್ಣಿಗೆ ಗುರಿಯಾಗಿದ್ದ ವರುಣ್‌ ಸಂಜಯ್‌ ಗಾಂಧಿ ಬಹುತೇಕ ಸಮಾಜವಾದಿ ಪಕ್ಷದ ಸಂಪರ್ಕದಲ್ಲಿದ್ದು, ಆ ಪಕ್ಷದಿಂದ ಕಣಕ್ಕೆ ಇಳಿಯುವ ಸಾಧ್ಯತಗಳಿವೆ.

ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಉತ್ತರ ಭಾರತದ ಬಹುತೇಕ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಅನ್ನು ಭಾನುವಾರ ಅಂತಿಮಗೊಳಿಸಿದೆ. ಇದರಲ್ಲಿ ಕೆಲವರಿಗೆ ಹೊಸಬರಿಗೆ ಅವಕಾಶ ಸಿಕ್ಕಿದ್ದರೆ. ಮತ್ತೆ ಹಳೆಬರೇ ಟಿಕೆಟ್‌ ಪಡೆದಿದ್ದಾರೆ.

ಅದರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಟಿಕೆಟ್‌ ಪಡೆದಿದ್ದ ಅಮ್ಮ- ಮಗ ಮನೇಕಾ ಗಾಂಧಿ ಹಾಗೂ ವರುಣ್‌ ಗಾಂಧಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಚರ್ಚೆಗಳು ನಡೆದಿದ್ದವು. ಎರಡು ಬಾರಿ ಫಿಲಿಬಿಟ್‌ ಮತ್ತೊಂದು ಬಾರಿ ಸುಲ್ತಾನಪುರದಿಂದ ಗೆದ್ದಿದ್ದ ವರುಣ್‌ ಗಾಂಧಿ ಈ ಬಾರಿ ಎಲ್ಲಿಯೂ ಟಿಕೆಟ್‌ ನೀಡಿಲ್ಲ. ಅವರು ಪ್ರತಿನಿಧಿಸುತ್ತಿದ್ದ ಫಿಲಿಬಿಟ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿಂದ ಬಿಜೆಪಿ ಸೇರಿದ್ದ ಜಿತಿನ್‌ ಪ್ರಸಾದ ಅವರಿಗೆ ಅವಕಾಶ ಮಾಡಿಕೊಡಲಾಗಿದೆ.

ಆದರೆ ಎಂಟು ಬಾರಿ ಸಂಸದರಾಗಿ., ಕೇಂದ್ರದಲ್ಲಿ ಹಲವು ಬಾರಿ ಮಂತ್ರಿಯೂ ಆಗಿರುವ ಮನೇಕಾ ಗಾಂಧಿ ಅವರು ಸುಲ್ತಾನಪುರ ಕ್ಷೇತ್ರ ಉಳಿಸಿಕೊಂಡಿದ್ದಾರೆ. ಹಿಂದೆ ಫಿಲಿಬಿಟ್‌ ಕ್ಷೇತ್ರದಲ್ಲಿ ಜನತಾದಳ, ಪಕ್ಷೇತರ, ಬಿಜೆಪಿಯಿಂದ ಮನೇಕಾ ಗಾಂಧಿ ಗೆದ್ದು ಕಳೆದ ಬಾರಿ ಸುಲ್ತಾನಪುರದಿಂದ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿಯೂ ಅಲ್ಲಿಯೇ ಟಿಕೆಟ್‌ ದೊರೆತಿದೆ.

Whats_app_banner