Breaking News: ಲೋಕಸಭೆ ಚುನಾವಣೆ ಕಣಕ್ಕೆ ತೆಲಂಗಾಣ ರಾಜ್ಯಪಾಲೆ, ಹುದ್ದೆ ತೊರೆದ ತಮಿಳಿಸೈ ಸೌಂದರರಾಜನ್
ಕನ್ನಡ ಸುದ್ದಿ  /  ಚುನಾವಣೆಗಳು  /  Breaking News: ಲೋಕಸಭೆ ಚುನಾವಣೆ ಕಣಕ್ಕೆ ತೆಲಂಗಾಣ ರಾಜ್ಯಪಾಲೆ, ಹುದ್ದೆ ತೊರೆದ ತಮಿಳಿಸೈ ಸೌಂದರರಾಜನ್

Breaking News: ಲೋಕಸಭೆ ಚುನಾವಣೆ ಕಣಕ್ಕೆ ತೆಲಂಗಾಣ ರಾಜ್ಯಪಾಲೆ, ಹುದ್ದೆ ತೊರೆದ ತಮಿಳಿಸೈ ಸೌಂದರರಾಜನ್

Lok Sabha Elections 2024: ಲೋಕಸಭೆ ಚುನಾವಣೆ ಘೋಷಣೆಯಾಗುತ್ತಲೇ ಚಟುವಟಿಕೆ ಗರಿಗೆದರಿವೆ. ಈಗ ರಾಜ್ಯಪಾಲರೊಬ್ಬರು ಚುನಾವಣೆ ಕಣಕ್ಕಿಳಿಯಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯಪಾಲ ಹುದ್ದೆ ತೊರೆದ ತಮಿಳುಸಾಯಿ.
ರಾಜ್ಯಪಾಲ ಹುದ್ದೆ ತೊರೆದ ತಮಿಳುಸಾಯಿ.

ಹೈದರಾಬಾದ್: ತೆಲಂಗಾಣ ರಾಜ್ಯಪಾಲರಾಗಿದ್ದ ತಮಿಳು ಸಾಯಿ ಸೌಂದರ್‌ ರಾಜನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸೋಮವಾರ ತೆಲಂಗಾಣ ರಾಜ್ಯ ಪಾಲರ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಐದು ವರ್ಷದಿಂದ ತೆಲಂಗಾಣ ರಾಜ್ಯಪಾಲರಾಗಿ ತಮಿಳ್‌ ಸಾಯಿ ಸೌಂದರ್‌ ರಾಜನ್‌ ಅವರು ಕೆಲಸ ಮಾಡುತ್ತಿದ್ದರು. ಇದಲ್ಲದೇ ಪುದುಚೇರಿ ಲೆಫ್ಟಿನೆಂಟ್‌ ಗವರ್ನರ್‌ ಆಗಿಯೂ ತಮಿಳುಸಾಯಿ ಅವರು ಹೆಚ್ಚುವರಿ ಕಾರ್ಯಭಾರವವನ್ನು ಮೂರು ವರ್ಷದಿಂದ ಹೊಂದಿದ್ದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪುದುಚೇರಿಯಿಂದ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದ್ದು. ಈ ಕಾರಣದಿಂದ ಅವರು ರಾಜ್ಯಪಾಲರ ಹುದ್ದೆ ತೊರೆದಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಪುದುಚೇರಿ ಮೂಲದವರಾದ ತಮಿಳುಸಾಯಿ ಅವರು ಈ ಹಿಂದೆ ಬಿಜೆಪಿಯಲ್ಲಿಯೇ ಸಕ್ರಿಯರಾಗಿದ್ದರು. ಅವರನ್ನು ಬಿಜೆಪಿ ರಾಜ್ಯಪಾಲರನ್ನಾಗಿ ನೇಮಿಸಿತ್ತು. ಇನ್ನೂ ಒಂದು ವರ್ಷದ ಅವಧಿ ಇರುವಾಗಲೇ ಅವರು ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಪುದುಚೇರಿಯಲಿ ಎನ್‌. ರಂಗಸ್ವಾಮಿ ನೇತೃತ್ವದ ಎನ್‌ಆರ್‌ ಕಾಂಗ್ರೆಸ್‌ ಜತೆಗೆ ಬಿಜೆಪಿ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿದೆ. ಈ ಕಾರಣದಿಂದ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದ್ದು. ತಮಿಳುಸಾಯಿ ಅವರ ಹೆಸರು ಪರಿಗಣಿಸಿದೆ. ಒಂದೆರಡು ದಿನದಲ್ಲಿ ಅಧಿಕೃತವಾಗಿ ಅವರ ಹೆಸರು ಪ್ರಕಟವಾಗಬಹುದು ಎನ್ನಲಾಗುತ್ತಿದೆ.

Whats_app_banner