ಕನ್ನಡ ಸುದ್ದಿ  /  Elections  /  West Bengal Politics Calcutta High Court Justice Abhijit Gangopadhy Resigned Joined Bjp Cm Mamata Banerji Dares Kub

Lok Sabha Elections2024: ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಸೇರಿದ ನ್ಯಾಯಮೂರ್ತಿ, ಮಮತಾ ಹಾಕಿದ ಸವಾಲೇನು

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ನಾನಾ ಕ್ಷೇತ್ರದವರು ಪಕ್ಷ ಸೇರುತ್ತಿದ್ದು ಕೋಲ್ಕತ್ತಾ ನ್ಯಾಯಮೂರ್ತಿಯಾಗಿದ್ದ ಅಭಿಷೇಕ್‌ ಗಂಗೋಪಾಧ್ಯಾಯ ಬಿಜೆಪಿ ಸೇರಿದ್ದಾರೆ. ಅವರ ವಿರುದ್ದ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಟೀಕಾ ಪ್ರಹಾರ ನಡೆಸಿದ್ದಾರೆ.

ಪಶ್ಚಿಮ ಬಂಗಾಲದಲ್ಲಿ ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ ಬಿಜೆಪಿ ಸೇರಿದ್ದು ಅವರಿಗೆ ಸಿಎಂ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.
ಪಶ್ಚಿಮ ಬಂಗಾಲದಲ್ಲಿ ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ ಬಿಜೆಪಿ ಸೇರಿದ್ದು ಅವರಿಗೆ ಸಿಎಂ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.

ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿ ಹಗರಣ ಸೇರಿದಂತೆ ಹಲವಾರು ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಆದೇಶಿಸಿ ಆಡಳಿತಾರೂಢ ಟಿಎಂಸಿ ಪಕ್ಷದ ಕೆಂಗೆಣ್ಣಿಗೆ ಗುರಿಯಾಗಿದ್ದ ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ ಬಿಜೆಪಿ ಸೇರಿದ್ದಾರೆ. ಬುಧವಾರವಿನ್ನೂ ನ್ಯಾಯಮೂರ್ತಿಗೆ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ಮರುದಿನವೇ ರಾಜಕೀಯ ಪ್ರವೇಶಿಸಿದ್ದು. ಬಿಜೆಪಿ ಸೇರಿದ್ದಾರೆ. ಅವರು ಮುಂಬರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ.

ಅಭಿಜಿತ್‌ ಗಂಗೋಪಾಧ್ಯಾಯ ಬಿಜೆಪಿ ಸೇರುತ್ತಿದ್ದಂತೆ ಟೀಕಾ ಪ್ರಹಾರ ನಡೆಸಿರುವ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಗಂಗೋಪಧ್ಯಾಯ ಅವರು ಈವರೆಗೂ ನ್ಯಾಯಪೀಠದಲ್ಲಿ ಕುಳಿತು ರಾಜಕೀಯ ಮಾಡುತ್ತಿದ್ದರು. ಈಗ ಅಧಿಕೃತವಾಗಿಯೇ ರಾಜಕೀಯಕ್ಕೆ ಧುಮುಕಿದ್ದಾರೆ. ಅವರು ಚುನಾವಣೆಗೆ ಎಲ್ಲಿಯೇ ನಿಂತರೂ ಸೋಲಿಸುವುದೇ ನಮ್ಮ ಗುರಿ. ಇದಕ್ಕಾಗಿ ನಮ್ಮ ತಂತ್ರ ಹೇಗಿರಲಿದೆ ನೋಡುತ್ತೀರಿ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದರು.

ಅವರ ಮುಖವಾಡ ಈಗ ಬಯಲಾಗಿದೆ. ನ್ಯಾಯಪೀಠದಲ್ಲಿ ಕುಳಿತು ಇವರು ನಮ್ಮ ಸರ್ಕಾರದ ವಿರುದ್ದ ತೀರ್ಪು ನೀಡುತ್ತಿದ್ದರು. ಆಗಲೇ ಅವರ ವಿರುದ್ದ ನಮ್ಮ ಭಿನ್ನಾಭಿಪ್ರಾಯಗಳಿದ್ದವು. ಅದನ್ನು ಹೇಳಿದ್ದೆವು ಕೂಡ. ಒಂದು ಪಕ್ಷದ ಪರವಾಗಿರುವ ಇಂತಹ ಬಾಬುಗಳಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವೇ ಎಂದು ಕೋಲ್ಕತ್ತಾದಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಮಮತಾ ಪ್ರಶ್ನಿಸಿದರು.

ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರವಾಗಿದೆ. ಲೋಪಗಳಾಗಿವೆ ಎಂದು ಕೇಂದ್ರೀಯ ಸಂಸ್ಥೆಗಳಿಗೆ ತನಿಖೆಗೆ ವಹಿಸಿ ಅಡ್ಡಿಪಡಿಸಿದರು. ಇದರಿಂದ ಅದೆಷ್ಟೋ ಯುವಕರು ಕೆಲಸ ಸಿಗದೇ ಇನ್ನೂ ಕಾಯುತ್ತಿದ್ದಾರೆ. ನಮ್ಮ ಬಳಿ ಐದು ಲಕ್ಷ ಉದ್ಯೋಗಗಳಿವೆ. ಆದರೆ ಇಂತಹ ಅಪಾಯಕಾರಿ ಹಾವುಗಳು ಬಂಗಾಲದ ಯುವಕರ ಉದ್ಯೋಗ ಕಿತ್ತುಕೊಳ್ಳುತ್ತಿದ್ದಾರೆ. ಇವರು ಚುನಾವಣೆಗೆ ನಿಲ್ಲಲಿ. ಅಲ್ಲಿಗೆ ನಿರುದ್ಯೋಗಿ ಯುವಕರನ್ನು ಕಳುಹಿಸಿಯೇ ಸೋಲಿಸಿ ತೋರಿಸುತ್ತೇನೆ ಎಂದು ಮಮತಾ ಸವಾಲು ಎಸೆದರು.

ಇದಕ್ಕೂ ಮುನ್ನ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಗಂಗೋಪಾಧ್ಯಾಯ ನಾನು ಇಂದು ಬಿಜೆಪಿ ಸೇರಿಕೊಂಡಿದ್ದೇನೆ. ನಾನು ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತೇನೆ. ನಮ್ಮ ಉದ್ದೇಶ ಪಶ್ಚಿಮ ಬಂಗಾಲದಲ್ಲಿರುವ ಭ್ರಷ್ಟ ಸರ್ಕಾರದ ಆಡಳಿತವನ್ನು ಅಂತ್ಯಗೊಳಿಸಿವುದು. ಇದಕ್ಕಾಗಿ ಹೋರಾಟ ಮಾಡುವೆ ಎಂದು ಹೇಳಿದರು.

ಗಂಗೋಪಾಧ್ಯಾಯ ಹಲವಾರು ವರ್ಷಗಳಿಂದ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದು. ವಿವಾದಾತ್ಮಕ ತೀರ್ಪು, ಆದೇಶ ನೀಡಿದ ಟೀಕೆಗೆ ಗುರಿಯಾಗಿದ್ದರು. ಅವರು ರಾಜಕೀಯಕ್ಕೆ ಬರುವುದು ಸೂಕ್ತ ಎಂದು ಟಿಎಂಸಿ ಟೀಕಾ ಪ್ರಹಾರ ನಡೆಸಿದ್ದರು. ಇದಕ್ಕೆ ಸದ್ಯವೇ ಸಮಯ ಕೂಡಿ ಬರಲಿದೆ ಎಂದು ಗಂಗೋಪಾಧ್ಯಾಯ ಉತ್ತರ ನೀಡಿದ್ದರು. ಇದಾದ ಕೆಲವೇ ದಿನದಲ್ಲಿ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡಿದ್ಧಾರೆ.