Kannada News  /  Entertainment  /  100 Days Of Gandhada Gudi Producer Ashwini Puneeth Rajkumar Shares Special Note
ಅಪ್ಪು ‘ಗಂಧದ ಗುಡಿ’ಗೆ  ನೂರು ದಿನ; ಒಟಿಟಿ ರಿಲೀಸ್‌ ಯಾವಾಗ? ಅಶ್ವಿನಿ ಪುನೀತ್‌ ಹೊಸ ಪೋಸ್ಟ್‌..
ಅಪ್ಪು ‘ಗಂಧದ ಗುಡಿ’ಗೆ ನೂರು ದಿನ; ಒಟಿಟಿ ರಿಲೀಸ್‌ ಯಾವಾಗ? ಅಶ್ವಿನಿ ಪುನೀತ್‌ ಹೊಸ ಪೋಸ್ಟ್‌..

100 Days of Gandhada Gudi: ಅಪ್ಪು ‘ಗಂಧದ ಗುಡಿ’ಗೆ ನೂರು ದಿನ; ಒಟಿಟಿ ರಿಲೀಸ್‌ ಯಾವಾಗ? ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಹೊಸ ಪೋಸ್ಟ್‌..

05 February 2023, 10:40 ISTHT Kannada Desk
05 February 2023, 10:40 IST

‘ಗಂಧದ ಗುಡಿ’ ಚಿತ್ರ ನೂರು ದಿನಗಳನ್ನು ಪೂರೈಸಿದೆ. ಈ ವಿಚಾರವನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

100 Days of Gandhada Gudi: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಪುನೀತ್‌ ಆಗಿಯೇ ಕಾಣಿಸಿಕೊಂಡ, ಮೊದಲ ಸಾಕ್ಷ್ಯಚಿತ್ರ ‘ಗಂಧದ ಗುಡಿ’ (Gandhada Gudi) ಬಿಡುಗಡೆ ಆಗಿ ನೂರು ದಿನವಾಯಿತು. ಅಕ್ಟೋಬರ್‌ 28ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದ್ದ, ಈ ಸಾಕ್ಷ್ಯಚಿತ್ರಕ್ಕೆ ಅಮೋಘವರ್ಷ ನಿರ್ದೇಶನ ಮಾಡಿದ್ದರು. ಈ ಕನಸಿನ ಪ್ರಾಜೆಕ್ಟ್‌ಅನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ನಿರ್ಮಿಸಿದ್ದರು. ಈಗ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ನಿರ್ಮಾಪಕಿ ಅಶ್ವಿನಿ ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದ ಕಾನನ ಪರಿಚಯಿಸುವ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿ, ಅಷ್ಟೇ ನೈಜವಾಗಿ ಅದನ್ನು ನಾಡಿನ ಜನತೆಗೆ ಅಪ್ಪು ಅರ್ಪಿಸಿದ್ದರು. ಆ ‘ಗಂಧದಗುಡಿ’ ಕಂಡ ಇಡೀ ಕರುನಾಡು ಸಲಾಮ್‌ ಹೊಡೆದಿತ್ತು. ಅವರ ಅನುಪಸ್ಥಿತಿಯಲ್ಲಿಯೇ ಅಭಿಮಾನಿಗಳು ಈ ಚಿತ್ರವನ್ನು ಅಪ್ಪಿ ಒಪ್ಪಿದ್ದರು. ಅಭಿಮಾನಿಗಳು ಮಾತ್ರವಲ್ಲ ಸ್ಯಾಂಡಲ್‌ವುಡ್‌ನ ಸಿನಿಮಾ ಸ್ನೇಹಿತರು, ಆಪ್ತರು ಸಹ ಚಿತ್ರದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ಪೋಸ್ಟ್‌ ಸಹ ಹಂಚಿಕೊಂಡಿದ್ದರು.

ಈಗ ಇದೇ ‘ಗಂಧದ ಗುಡಿ’ ಚಿತ್ರ ನೂರು ದಿನಗಳನ್ನು ಪೂರೈಸಿದೆ. ಈ ವಿಚಾರವನ್ನು ಟ್ವಿಟರ್‌ನಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಶೇರ್‌ ಮಾಡಿದ್ದಾರೆ. "100 ದಿನಗಳನ್ನು ಪೂರೈಸಿದ ನಿಜವಾದ ನಾಯಕನ #ಗಂಧದಗುಡಿ ಪಯಣ! ಅಪ್ಪು ಅವರ ಕನಸಿನ ಪಯಣವಾಗಿದ್ದ ಈ ಚಿತ್ರವು, ಕರ್ನಾಟಕದ ಅದ್ಭುತ ಕಾಡು ಹಾಗೂ ವನ್ಯಜೀವಿಗಳ ವಿಶೇಷ ಆಚರಣೆ" ಎಂದು ಚಿತ್ರದ ವಿಡಿಯೋ ಜತೆ ಪೋಸ್ಟ್‌ ಮಾಡಿದ್ದಾರೆ.

ನನ್ನ ಹೆಮ್ಮೆಯ ಪ್ರಾಜೆಕ್ಟ್‌ ಇದು..

‘ಗಂಧದ ಗುಡಿ’ ಮಾಡಲು ಮುಖ್ಯ ಕಾರಣ; ಸುತ್ತಾಟ. ನಾನು ಮತ್ತೆ ಅಪ್ಪು ಸದಾ ಟ್ರಾವೆಲ್‌ ಮಾಡ್ತಾ ಇದ್ವಿ. ಇದೇ ಕಾನ್ಸೆಪ್ಟ್‌ ಅನ್ನು ನಾವೇಕೆ, ನಮ್ಮ ಕರ್ನಾಟಕದಲ್ಲಿ ಮಾಡಬಾರದು? ರಾಜ್ಯದಲ್ಲಿನ ದಟ್ಟಾರಣ್ಯವನ್ನು ಏಕೆ ತೋರಿಸಬಾರದು ಎಂದು ನಿರ್ಧರಿಸಿದಾಗ, ‘ಗಂಧದ ಗುಡಿ’ ಆರಂಭವಾಯ್ತು. ಅದಕ್ಕೆ ಅಪ್ಪು ಇದೀಗ ರಾಯಭಾರಿಯಾಗಿದ್ದಾರೆ. ಅವರ ದೃಷ್ಟಿಕೋನದಲ್ಲಿ ನಾವು ಕರುನಾಡ ಕಾನನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದೇವೆ" ಎಂದು ಬಿಡುಗಡೆ ಸಂದರ್ಭದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೇಳಿಕೊಂಡಿದ್ದರು.

ಒಟಿಟಿಯಲ್ಲಿ ಯಾವಾಗ ರಿಲೀಸ್..‌

ಅಮೋಘವರ್ಷ ನಿರ್ದೇಶನದ ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ಅಮೇಜಾನ್‌ ಪ್ರೈಂನವರು ಖರೀದಿಸಿದ್ದಾರೆ ನಿಜ. ಆದರೆ, ಸಿನಿಮಾ ತೆರೆಕಂಡು 100ದಿನಗಳು ಕಳೆದರೂ, ಚಿತ್ರದ ಒಟಿಟಿ ಪ್ರಸಾರ ಮಾತ್ರ ಇನ್ನೂ ಆಗಿಲ್ಲ. ಇತ್ತ ಚಿತ್ರಮಂದಿರದಲ್ಲಿ ನೋಡದ ಜನ ಒಟಿಟಿಯಲ್ಲಿ ಯಾವಾಗ ರಿಲೀಸ್‌ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸದ್ಯಕ್ಕೆ ಅದ್ಯಾವುದರ ಬಗ್ಗೆಯೂ ಅಪ್‌ಡೇಟ್‌ ಮಾಹಿತಿ ಹೊರಬಿದ್ದಿಲ್ಲ.

ಈ ಸಿನಿಮಾ ಸುದ್ದಿಗಳನ್ನೂ ಓದಿ..

Akhil Akkineni Agent: ಅಖಿಲ್ ಅಕ್ಕಿನೇನಿ ‘ಏಜೆಂಟ್’ ಬಿಡುಗಡೆಗೆ ಡೇಟ್ ಫಿಕ್ಸ್; ಏಪ್ರಿಲ್‌ನಲ್ಲಿ ಕನ್ನಡದಲ್ಲೂ ರಿಲೀಸ್..‌

Akhil Akkineni Agent: ತೆಲುಗಿನ ಸ್ಟಾರ್‌ ನಟ ನಾಗಾರ್ಜುನ್‌ ಅವರ ಕಿರಿ ಮಗ ಅಖಿಲ್‌ಗೆ ಟಾಲಿವುಡ್‌ ಇಂಡಸ್ಟ್ರಿ ಇನ್ನೂ ಕೈ ಹಿಡಿದಿಲ್ಲ. ಅವರ ಬತ್ತಳಿಕೆಯಿಂದ ಹಿಟ್‌ ಪ್ರಾಡಕ್ಟ್‌ ಹೊರಬಂದಿಲ್ಲ. ಇದೀಗ ಶತಾಯಗತಾಯ ಗೆಲ್ಲಲೇಬೇಕು ಎಂದು ನಿರ್ಧರಿಸಿದ್ದಾರೆ. ಹಾಗಾಗಿಯೇ ಲೇಟ್‌ ಆದರೂ ಲೇಟೆಸ್ಟ್‌ ಆಗಿಯೇ ಏಜೆಂಟ್‌ ಮೂಲಕ ಬರುತ್ತಿದ್ದಾರೆ. ಈ ಚಿತ್ರಕ್ಕಾಗಿ ಮೈ ಹುರಿಗೊಳಿಸಿರುವ ಅಖಿಲ್‌, ಸಿಕ್ಸ್‌ ಪ್ಯಾಕ್‌ನಲ್ಲಿ ರಗಡ್‌ ಅವತಾರ ಎತ್ತಿದ್ದಾರೆ. ಈಗ ಹೊಸ ಅಪ್‌ಡೇಟ್‌ ಏನೆಂದರೆ ಈ ಚಿತ್ರದ ಬಿಡುಗಡೆ ದಿನಾಂ ಘೋಷಣೆ ಆಗಿದೆ. ಪೂರ್ಣ ವಿವರಕ್ಕೆ ಕ್ಲಿಕ್ ಮಾಡಿ