Top 10 Movies: 2024ರಲ್ಲಿ ಸಿನಿಪ್ರಿಯರು ಹೆಚ್ಚು ಹುಡುಕಾಟ ನಡೆಸಿದ 10 ಸಿನಿಮಾಗಳಿವು, ಇವುಗಳಲ್ಲಿ ಯಾವುದು ನಿಮ್ಮ ಫೇವರಿಟ್
ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಟಾಪ್ 10 ಚಲನಚಿತ್ರಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಸ್ತ್ರೀ 2 ಸಿನಿಮಾ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 2024ರಲ್ಲಿ ಅತಿ ಹೆಚ್ಚು ಸರ್ಚ್ ಆದ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ.
ಪ್ರತಿ ವರ್ಷ ಡಿಸೆಂಬರ್ ತಿಂಗಳು ಬಂದಾಗ Google ಟ್ರೆಂಡ್‌ಗಳ ಪಟ್ಟಿ ಬರುತ್ತದೆ. ಈ ವರ್ಷ ಅತಿ ಹೆಚ್ಚು ಬಾರಿ ಜನರು ಹುಡುಕಿದ ಸಿನಿಮಾ ಯಾವುದು ಟಾಪ್ 10ನಲ್ಲಿ ಯಾವ ಸಿನಿಮಾಗಳಿವೆ ಎಂಬ ಕುತೂಹಲ ನಿಮಗಿದ್ದರೆ ಸಂಪೂರ್ಣ ಸುದ್ದಿಯನ್ನು ಓದಿ. ಈ ವರ್ಷ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿದ್ದು ಹಿಟ್ ಸಿನಿಮಾಗಳ ಸಂಖ್ಯೆಯೂ ಹೆಚ್ಚಾಗೇ ಇದೆ. ಜನರ ಆಸಕ್ತಿಗೆ ತಕ್ಕಂತೆ ಸಿನಿಮಾಗಳು ನಿರ್ಮಾಣವಾಗಿದ್ದು ಥಿಯೇಟರ್ ಮಾತ್ರವಲ್ಲದೇ ಒಟಿಟಿಯಲ್ಲೂ ಜನರು ಸಿನಿಮಾ ವೀಕ್ಷಿಸಿದ್ದಾರೆ. ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಚಲನಚಿತ್ರಗಳ ಪಟ್ಟಿಯನ್ನು ನಾವಿಲ್ಲಿ ನೀಡಿದ್ದೇವೆ.
1. ಸ್ತ್ರೀ 2
2. ಕಲ್ಕಿ 2898
3. ಟ್ವೆಲ್ತ್ ಫೇಲ್
4. ಲಾಪತಾ ಲೇಡಿಸ್
5. ಹನುಮಾನ್
6. ಮಹಾರಾಜ್
7. ಮಂಜುಮೆಲ್ ಬಾಯ್ಸ್
8. ದ ಗ್ರೇಟೆಸ್ಟ್ ಆಫ್ ಆಲ್ ಟೈಮ್
9. ಸಲಾರ್
10. ಆಮೇಶಮ್
ಈ ಹತ್ತು ಸಿನಿಮಾಗಳು 2024ರಲ್ಲಿ ಅತಿ ಹೆಚ್ಚು ಸರ್ಚ್ ಆದ ಸಿನಿಮಾಗಳಾಗಿದೆ.
ಆದರೆ ಈ ಟಾಪ್ 10 ಸಿನಿಮಾಗಳಲ್ಲಿ ಕನ್ನಡದ ಸಿನಿಮಾ ಹೆಸರು ಕಂಡುಬಂದಿಲ್ಲ.
ಟಾಪ್ 3 ಸಿನಿಮಾದ ತಾರಾಗಣ
ಈ ವರ್ಷ, ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅವರ ಸ್ಟ್ರೀ 2 ಹೆಚ್ಚು ಹುಡುಕಲ್ಪಟ್ಟ ಚಲನಚಿತ್ರ ಎಂದು ಗೂಗಲ್ ಬಹಿರಂಗಪಡಿಸಿದೆ.
ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿದ್ದ ಕಲ್ಕಿ ಸಿನಿಮಾ ಎರಡನೇ ಸ್ಥಾನದಲ್ಲಿದೆ.
ವಿಕ್ರಾಂತ್ ಮಾಸ್ಸೆ ನಾಯಕನಾಗಿ ನಟಿಸಿರುವ ಟ್ವೆಲ್ತ್ ಫೇಲ್ ಸಿನಿಮಾ ಮೂರನೇ ಸ್ಥಾನ ಪಡೆದುಕೊಂಡಿದೆ.
ಯಾವ ಒಟಿಟಿಯಲ್ಲಿ ನೋಡಬಹುದು?
ಈ ಎಲ್ಲ ಸಿನಿಮಾಗಳು ಈಗಲೂ ಒಟಿಟಿಯಲ್ಲಿ ಲಭ್ಯವಿದೆ. ನೀವು ಸ್ತ್ರೀ 2 ಸಿನಿಮಾ ನೋಡಲು ಬಯಸಿದ್ದರೆ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ವೀಕ್ಷಿಸಬಹುದು. ಇನ್ನು ಕಲ್ಕಿ 2898 ಸಿನಿಮಾ ನೋಡಲು ಬಯಸಿದ್ದರೆ ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಬಹುದು. 12th ಪೇಲ್ ಸಿನಿಮಾವನ್ನು ನೀವು ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ವೀಕ್ಷಿಸಬಹುದು.