68th National Film Awards: ಸೂರ್ಯ, ಅಜಯ್ ದೇವಗನ್ಗೆ ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ.. ಯಾರ್ಯಾರಿಗೆ ಅವಾರ್ಡ್? ಇಲ್ಲಿದೆ ಲಿಸ್ಟ್
ಕಳೆದ ಜುಲೈನಲ್ಲಿ ಘೋಷಣೆಯಾಗಿದ್ದ 2020ನೇ ಸಾಲಿನ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದ್ದಾರೆ. ತಮಿಳು ನಟ ಸೂರ್ಯ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ಗೆ 'ಅತ್ಯುತ್ತಮ ನಟ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನವದೆಹಲಿ: ಕಳೆದ ಜುಲೈನಲ್ಲಿ ಘೋಷಣೆಯಾಗಿದ್ದ 2020ನೇ ಸಾಲಿನ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದ್ದಾರೆ. ತಮಿಳು ನಟ ಸೂರ್ಯ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ಗೆ 'ಅತ್ಯುತ್ತಮ ನಟ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತಮಿಳಿನ 'ಸೂರರೈ ಪೊಟ್ರು' ಚಿತ್ರದ ಅದ್ಭುತ ನಟನೆಗಾಗಿ ಸೂರ್ಯ ಅವರಿಗೆ ಈ ಪ್ರಶಸ್ತಿ ದೊರೆತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ, "ಇದು ದೊಡ್ಡ ಗೌರವ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ತೀರ್ಪುಗಾರರಿಗೆ ಮತ್ತು ಭಾರತ ಸರ್ಕಾರಕ್ಕೆ ನಿಜವಾಗಿಯೂ ಕೃತಜ್ಞರಾಗಿರುತ್ತೇನೆ. ಇದು ನಾನು ಎಂದಿಗೂ ಮರೆಯಲಾಗದ ಕ್ಷಣ" ಎಂದು ಹೇಳಿದರು.
ಸುಧಾ ಕೊಂಗರ ನಿರ್ದೇಶನದ 'ಸೂರರೈ ಪೊಟ್ರು', ಸೇನಾ ಕ್ಯಾಪ್ಟನ್ ಜಿಆರ್ ಗೋಪಿನಾಥ್ ಅವರ ಜೀವನಾಧಾರಿತ ಚಿತ್ರವಾಗಿದ್ದು, ಅತ್ಯುತ್ತಮ ಕಥಾಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಈ ಚಿತ್ರದಲ್ಲಿನ ನಟನೆಗಾಗಿ ಅಪರ್ಣಾ ಬಾಲಮುರಳಿ 'ಅತ್ಯುತ್ತಮ ನಟಿ' ಪ್ರಶಸ್ತಿ ಪಡೆದುಕೊಂಡಿದ್ದಾರೆ. 2020ರ ನವೆಂಬರ್ನಲ್ಲಿ ಒಟಿಟಿಯಲ್ಲಿ ಈ ಸಿನಿಮಾ ತೆರೆಕಂಡಿದ್ದರೂ ಕೂಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿತ್ತು.
ಹಿಂದಿಯ 'ತಾನ್ಹಾಜಿ: ದಿ ಅನ್ಸಂಗ್ ವಾರಿಯರ್ ' ಚಿತ್ರದ ನಟನೆಗಾಗಿ ಅಜಯ್ ದೇವಗನ್ ಅವರಿಗೆ 'ಅತ್ಯುತ್ತಮ ನಟ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಚಿತ್ರವು ಅತ್ಯುತ್ತಮ ಜನಪ್ರಿಯ ಚಿತ್ರ ಹಾಗೂ ಅತ್ಯುತ್ತಮ ವಸ್ತ್ರ ವಿನ್ಯಾಸಕ ವಿಭಾಗದಲ್ಲಿ ಸಹ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಡೊಳ್ಳು ಕನ್ನಡದ ಅತ್ಯುತ್ತಮ ಸಿನಿಮಾ
‘ಡೊಳ್ಳು’ ಸಿನಿಮಾ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಈ ಚಿತ್ರಕ್ಕೆ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದು, ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ನಿರ್ಮಾಣ ಮಾಡಿದ್ದಾರೆ. ಮತ್ತೊಂದು ಕನ್ನಡ ಸಿನಿಮಾ, ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಚಿತ್ರಕ್ಕೆ ‘ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಚಿತ್ರ’ ಪ್ರಶಸ್ತಿಯನ್ನು ನೀಡಲಾಗಿದೆ
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ
ಅತ್ಯುತ್ತಮ ನಟ: ಅಜಯ್ ದೇವಗನ್ ಮತ್ತು ಸೂರ್ಯ
ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ
ಅತ್ಯುತ್ತಮ ಕನ್ನಡ ಸಿನಿಮಾ: ಡೊಳ್ಳು
ಅತ್ಯುತ್ತಮ ಕಥಾಚಿತ್ರ: ಸೂರರೈ ಪೋಟ್ರು
ಅತ್ಯುತ್ತಮ ಜನಪ್ರಿಯ ಚಿತ್ರ: ತಾನ್ಹಾಜಿ
ಅತ್ಯುತ್ತಮ ನಿರ್ದೇಶಕ: ಸಚ್ಚಿದಾನಂದನ್ ಕೆ.ಆರ್.
ಅತ್ಯುತ್ತಮ ಸಂಗೀತ ನಿರ್ದೇಶಕ: ವಿಶಾಲ್ ಭಾರದ್ವಾಜ್
ಅತ್ಯುತ್ತಮ ಸಿನಿಮಾಸ್ನೇಹಿ ರಾಜ್ಯ: ಮಧ್ಯ ಪ್ರದೇಶ
ಅತ್ಯುತ್ತಮ ಆಡಿಯೋಗ್ರಫಿ: ಡೊಳ್ಳು, ಕನ್ನಡ ಸಿನಿಮಾ
ಅತ್ಯುತ್ತಮ ಚಿತ್ರಕಥೆ: ಶಾಲಿನಿ ಉಷಾ ನಾಯರ್, ಸುಧಾ ಕೊಂಗರು (ಸೂರರೈ ಪೋಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕಿ: ನಂಚಮ್ಮ (ಅಯ್ಯಪ್ಪನುಂ ಕೋಶಿಯುಂ)
ಅತ್ಯುತ್ತಮ ಹಿನ್ನೆಲೆ ಗಾಯಕ: ರಾಹುಲ್ ದೇಶಪಾಂಡೆ (ಮಿ ವಸಂತ್ ರಾವ್)
ಅತ್ಯುತ್ತಮ ಮಕ್ಕಳ ಸಿನಿಮಾ: ಸುಮಿ (ಮರಾಠಿ)
ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರ: ತಲೆದಂಡ (ಕನ್ನಡ)
ಅತ್ಯುತ್ತಮ ತುಳು ಸಿನಿಮಾ: ಜೀಟಿಗೆ
ವಿಭಾಗ