69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಅಲ್ಲು ಅರ್ಜುನ್, ಆಲಿಯಾ ಭಟ್, ಕೃತಿ ಸನೋನ್ ಅತ್ಯುತ್ತಮ ನಾಯಕ, ನಾಯಕಿ
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಈ ಸಲದ ಪ್ರಶಸ್ತಿಯಲ್ಲಿ 14 ಭಾಷೆಗಳ 280ಕ್ಕೂ ಅಧಿಕ ಫೀಚರ್ ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. ಆ ಪೈಕಿ ರಾಕೆಟ್ರಿ ದಿ ನಂಬಿ ಎಫೆಕ್ಟ್ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದರೆ, ಕನ್ನಡದಲ್ಲಿ 777 ಚಾರ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದಿದೆ.
69th National Film Awards: ಸಿನಿಮಂದಿ ಕಾದು ಕುಳಿತಿದ್ದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಈ ಬಾರಿ ಒಟ್ಟು 280 ಸಿನಿಮಾಗಳು ಸ್ಪರ್ಧಾ ಕಣದಲ್ಲಿದ್ದವು. ಆ ಪೈಕಿ ಆರ್ ಮಾಧವನ್ ನಟನೆ ಮತ್ತು ನಿರ್ದೇಶನದ ರಾಕೆಟ್ರಿ; ದಿ ನಂಬಿ ಎಫೆಕ್ಟ್ ಚಿತ್ರ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದರೆ, ಪುಷ್ಪ ಸಿನಿಮಾದ ನಾಯಕ ಅಲ್ಲು ಅರ್ಜುನ್ ಅತ್ಯುತ್ತಮ ನಾಯಕ ನಟನಾಗಿ ಹೊರಹೊಮ್ಮಿದ್ದಾರೆ.
ಅದೇ ರೀತಿ ಅತ್ಯುತ್ತಮ ನಾಯಕಿ ಪಟ್ಟವನ್ನು ಬಾಲಿವುಡ್ನ ಇಬ್ಬರು ನಟಿಯರು ಪಡೆದುಕೊಂಡಿದ್ದಾರೆ. ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದ ನಟನೆಯಾಗಿ ಆಲಿಯಾ ಭಟ್ ಮತ್ತು ಮಿಮಿ ಸಿನಿಮಾದ ನಟನೆಯಾಗಿ ಕೃತಿ ಸನೋನ್ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ಮರಾಠಿಯ ಗೋಧಾವರಿ ಚಿತ್ರದ ನಿಖಿಲ್ ಮಹಾಜನ್ ಪ್ರಶಸ್ತಿ ಪಡೆದಿದ್ದಾರೆ. ಇನ್ನುಳಿದ ವಿಭಾಗಗಳ ವಿವರ ಇಂತಿದೆ.
ಪ್ರಶಸ್ತಿ ಪಟ್ಟಿ
ಅತ್ಯುತ್ತಮ ಚಲನಚಿತ್ರ: ರಾಕೆಟ್ರಿ; ದಿ ನಂಬಿ ಎಫೆಕ್ಟ್
ಅತ್ಯುತ್ತಮ ನಟ: ಅಲ್ಲು ಅರ್ಜುನ್, ಪುಷ್ಪ
ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಾಥಿಯಾವಾಡಿ) ಕೃತಿ ಸನೋನ್ಮಿ ( ಮಿಮಿ)
ಅತ್ಯುತ್ತಮ ನಿರ್ದೇಶಕ: ನಿಖಿಲ್ ಮಹಾಜನ್, ಗೋದಾವರಿ (ಮರಾಠಿ)
ಅತ್ಯುತ್ತಮ ಜನಪ್ರಿಯ ಚಲನಚಿತ್ರ: ಆರ್ಆರ್ಆರ್
ನರ್ಗಿಸ್ ದತ್ ಪ್ರಶಸ್ತಿ: ದ ಕಾಶ್ಮೀರ್ ಫೈಲ್ಸ್ ಕುರಿತ ಅತ್ಯುತ್ತಮ ಚಲನಚಿತ್ರಕ್ಕಾಗಿ
ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ (ಮಿಮಿ)
ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ಕಾಶ್ಮೀರ್ ಫೈಲ್ಸ್)
ಅತ್ಯುತ್ತಮ ಚಿತ್ರಕಥೆ: ನಾಯಟ್ಟು (ಮಲಯಾಳಂ)
ಅತ್ಯುತ್ತಮ ಚಿತ್ರಕಥೆ: ಗಂಗೂಬಾಯಿ ಕಾಥಿಯಾವಾಡಿ (ಹಿಂದಿ)
ಅತ್ಯುತ್ತಮ ಸಂಗೀತ ನಿರ್ದೇಶನ: ಪುಷ್ಪ (ತೆಲುಗು)
ಅತ್ಯುತ್ತಮ ಹಿನ್ನೆಲೆ ಸಂಗೀತ ನಿರ್ದೇಶನ: ಎಂಎಂ ಕೀರವಾಣಿ (ಆರ್ಆರ್ಆರ್)
ಅತ್ಯುತ್ತಮ ಗಾಯಕ: ಆರ್ಆರ್ಆರ್ (ಕಾಲ ಭೈರವ)
ಅತ್ಯುತ್ತಮ ಗಾಯಕಿ: ಇರೈವನ್ ನಿಝಾಲ್ (ಶ್ರೇಯಾ ಘೋಷಾಲ್)
ಅತ್ಯುತ್ತಮ ಸಾಹಿತ್ಯ: ಚಂದ್ರಭೋಸ್ (ಕೊಂಡ ಪೊಲಂ)
ಅತ್ಯುತ್ತಮ ನೃತ್ಯ ಸಂಯೋಜನೆ: ಪ್ರೇಮ್ ರಕ್ಷಿತ್ (RRR)
ಅತ್ಯುತ್ತಮ ಛಾಯಾಗ್ರಹಣ: ಸರ್ದಾರ್ ಉದ್ಧಮ್ (ಮುಖ್ಯೋಫಾಧ್ಯಾಯ)
ಅತ್ಯುತ್ತಮ ವಸ್ತ್ರ ವಿನ್ಯಾಸ: ವೀರ ಕಪೂರ್ (ಸರ್ದಾರ್ ಉಧಮ್)
ಅತ್ಯುತ್ತಮ ನಿರ್ಮಾಣ ವಿನ್ಯಾಸ: ಸರ್ದಾರ್ ಉಧಮ್
ಅತ್ಯುತ್ತಮ ಸಂಕಲನ: ಗಂಗೂಬಾಯಿ ಕಾಥಿಯಾವಾಡಿ
ಅತ್ಯುತ್ತಮ ಮೇಕಪ್: ಗಂಗೂಬಾಯಿ ಕಾಥಿಯಾವಾಡಿ
ಅತ್ಯುತ್ತಮ ಸಾಹಸ ನೃತ್ಯ ಸಂಯೋಜನೆ: ಆರ್ಆರ್ಆರ್
ಅತ್ಯುತ್ತಮ ಹಿಂದಿ ಚಿತ್ರ: ಸರ್ದಾರ್ ಉಧಮ್
ಅತ್ಯುತ್ತಮ ಕನ್ನಡ ಸಿನಿಮಾ: 777 ಚಾರ್ಲಿ
ಅತ್ಯುತ್ತಮ ಮಲಯಾಳಂ ಚಿತ್ರ: ಹೋಮ್
ಅತ್ಯುತ್ತಮ ಗುಜರಾತಿ ಚಿತ್ರ: ಚೆಲೋ ಶೋ
ಅತ್ಯುತ್ತಮ ತಮಿಳು ಚಿತ್ರ: ಕಡೈಸಿ ವಿವಾಸಾಯಿ
ಅತ್ಯುತ್ತಮ ತೆಲುಗು ಚಿತ್ರ: ಉಪ್ಪೇನ
ಅತ್ಯುತ್ತಮ ಮರಾಠಿ ಚಿತ್ರ: ಎಕ್ಡ್ ಕಾಯ್ ಝಾಲ
ಅತ್ಯುತ್ತಮ ಬಂಗಾಳಿ ಚಿತ್ರ: ಕಲ್ಕೊಕ್ಕೊ
ಅತ್ಯುತ್ತಮ ಅಸ್ಸಾಮಿ ಚಿತ್ರ: ಅನುರ್
ಅತ್ಯುತ್ತಮ ಬಾಲ ಕಲಾವಿದ: ಭವೀನ್ ರಬರಿ (ಚೆಲ್ಲೋ ಶೋ)
ಅತ್ಯುತ್ತಮ ಮಕ್ಕಳ ಚಿತ್ರ: ಗಾಂಧಿ ಆಂಡ್ ಕಂಪೆನಿ (ಗುಜರಾತಿ)
ಅತ್ಯುತ್ತಮ ನಾನ್ ಫೀಚರ್ ಸಿನಿಮಾ: ಏಕ್ ಥಾ ಗಾವ್ಂ
ಅತ್ಯುತ್ತಮ ಪರಿಸರ ಚಿತ್ರ: ಮುನ್ನಾಮ್ ಒಲವು (ಮಲಯಾಳಂ)
ಅತ್ಯುತ್ತಮ ತನಿಖಾ ಚಿತ್ರ: ಲುಕಿಂಗ್ ಫಾರ್ ಚಾಲನ್
ಸ್ಪೆಷಲ್ ಮೆನ್ಷನ್: ಬಾಳೆ ಬಂಗಾರ (ಕನ್ನಡ)
ಅತ್ಯುತ್ತಮ ನಾನ್-ಫೀಚರ್ ಚಿತ್ರ: ಏಕ್ ಥಾ ಗಾಂವ್ (ಗಢ್ವಾಲಿ ಮತ್ತು ಹಿಂದಿ)
ಅತ್ಯುತ್ತಮ ನಿರ್ದೇಶಕ: ಸ್ಮೈಲ್ ಪ್ಲೀಸ್ (ಹಿಂದಿ) ಚಿತ್ರಕ್ಕಾಗಿ ಬಾಕುಲ್ ಮತೀಯಾನಿ
ಕೌಟುಂಬಿಕ ಮೌಲ್ಯಗಳ ಮೇಲಿನ ಅತ್ಯುತ್ತಮ ಚಲನಚಿತ್ರ: ಚಾಂದ್ ಸಾನ್ಸೆ (ಹಿಂದಿ)
ಅತ್ಯುತ್ತಮ ಛಾಯಾಗ್ರಾಹಕ: ಪಾತಾಳ ಟೀ (ಭೋಟಿಯಾ) ಚಿತ್ರಕ್ಕಾಗಿ ಬಿಟ್ಟು ರಾವತ್
ಅತ್ಯುತ್ತಮ ತನಿಖಾ ಚಿತ್ರ: ಲುಕಿಂಗ್ ಫಾರ್ ಚಲನ್ (ಇಂಗ್ಲಿಷ್)
ಅತ್ಯುತ್ತಮ ಶೈಕ್ಷಣಿಕ ಚಿತ್ರ :ಸಿರ್ಪಿಗಲಿನ್ ಸಿಪಂಗಲ್ (ತಮಿಳು)
ಅತ್ಯುತ್ತಮ ಅನ್ವೇಷಣಾ ಚಿತ್ರ: ಆಯುಷ್ಮಾನ್
ಅತ್ಯುತ್ತಮ ಕಿರು ಕಾಲ್ಪನಿಕ ಚಿತ್ರ: ದಲ್ ಭಟ್
ಅತ್ಯುತ್ತಮ ಅನಿಮೇಷನ್ ಚಿತ್ರ: ಕಂಡಿತುಂಡು
ಅತ್ಯುತ್ತಮ ನಿರ್ದೇಶನ (ನಾನ್-ಫೀಚರ್ ಫಿಲ್ಮ್): ಬಕುಲ್ ಮತಿಯಾನಿ, ಸ್ಮೈಲ್ ಪ್ಲೀಸ್
ಅತ್ಯುತ್ತಮ ಛಾಯಾಗ್ರಹಣ (ನಾನ್-ಫೀಚರ್ ಫಿಲ್ಮ್): ಬಿಟ್ಟು ರಾವತ್, ಪಟಾಲ್
ಅತ್ಯುತ್ತಮ ನಿರ್ದೇಶಕ : ಸ್ಮೈಲ್ ಪ್ಲೀಸ್ (ಹಿಂದಿ) ಚಿತ್ರಕ್ಕಾಗಿ ಬಾಕುಲ್ ಮತೀಯಾನಿ
ಅತ್ಯುತ್ತಮ ಛಾಯಾಗ್ರಾಹಕ: ಪಾತಾಳ ಟೀ (ಭೋಟಿಯಾ) ಚಿತ್ರಕ್ಕಾಗಿ ಬಿಟ್ಟು ರಾವತ್
ಅತ್ಯುತ್ತಮ ಶೈಕ್ಷಣಿಕ ಚಿತ್ರ: ಸಿರ್ಪಿಗಲಿನ್ ಸಿಪಂಗಲ್ (ತಮಿಳು)
ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಸಿನಿಮಾ: ಮಿಥು ದಿ (ಇಂಗ್ಲಿಷ್), ತ್ರೀ ಟೂ ಒನ್ (ಮರಾಠಿ ಮತ್ತು ಹಿಂದಿ)
ಅತ್ಯುತ್ತಮ ಪರಿಸರ ಚಲನಚಿತ್ರಗಳು : ಮುನ್ನಂ ವಲವು (ಮಲಯಾಳಂ)
ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ: ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರ ಸಂಗೀತ: ರಾಜೀವ್ ವಿಜಯಕರ್ ಅವರ ಇನ್ಕ್ರೆಡಿಬ್ಲಿ ಮೆಲೋಡಿಯಸ್ ಜರ್ನಿ
ಅತ್ಯುತ್ತಮ ಚಲನಚಿತ್ರ ವಿಮರ್ಶಕ: ಪುರುಷೋತ್ತಮ ಚಾರ್ಯುಲು (ತೆಲುಗು)
ಅತ್ಯುತ್ತಮ ಬಯೋಗ್ರಫಿ ಚಿತ್ರ: ರುಕುಮಾತಿರ್ ದುಕುಮಾಜಿ (ಬೆಂಗಾಲಿ)
ಅತ್ಯುತ್ತಮ ಚಲನಚಿತ್ರ ವಿಮರ್ಶಕ (ವಿಶೇಷ ಉಲ್ಲೇಖ): ಬಿ.ಎನ್ ಸುಬ್ರಹ್ಮಣ್ಯ (ಕನ್ನಡ)
ಮನರಂಜನೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ