ಬೆಂಗಳೂರಿನ ಚೌಡಯ್ಯ ಮೆಮೋರಿಯಲ್‌ನಲ್ಲಿ ಅಮಿತಾಬ್ ಬಚ್ಚನ್ ಅಭಿನಯದ ಅವಿಸ್ಮರಣೀಯ ಚಿತ್ರಗೀತೆಗಳ ರಸಮಂಜರಿ
ಕನ್ನಡ ಸುದ್ದಿ  /  ಮನರಂಜನೆ  /  ಬೆಂಗಳೂರಿನ ಚೌಡಯ್ಯ ಮೆಮೋರಿಯಲ್‌ನಲ್ಲಿ ಅಮಿತಾಬ್ ಬಚ್ಚನ್ ಅಭಿನಯದ ಅವಿಸ್ಮರಣೀಯ ಚಿತ್ರಗೀತೆಗಳ ರಸಮಂಜರಿ

ಬೆಂಗಳೂರಿನ ಚೌಡಯ್ಯ ಮೆಮೋರಿಯಲ್‌ನಲ್ಲಿ ಅಮಿತಾಬ್ ಬಚ್ಚನ್ ಅಭಿನಯದ ಅವಿಸ್ಮರಣೀಯ ಚಿತ್ರಗೀತೆಗಳ ರಸಮಂಜರಿ

ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ‌ಸಭಾಂಗಣದಲ್ಲಿ ಮೇ 31ರಂದು ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಅವಿಸ್ಮರಣೀಯ ಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಬೆಂಗಳೂರಿನ ಚೌಡಯ್ಯ ಮೆಮೋರಿಯಲ್‌ನಲ್ಲಿ ಅಮಿತಾಬ್ ಬಚ್ಚನ್ ಅಭಿನಯದ ಅವಿಸ್ಮರಣೀಯ ಚಿತ್ರಗೀತೆಗಳ ರಸಮಂಜರಿ
ಬೆಂಗಳೂರಿನ ಚೌಡಯ್ಯ ಮೆಮೋರಿಯಲ್‌ನಲ್ಲಿ ಅಮಿತಾಬ್ ಬಚ್ಚನ್ ಅಭಿನಯದ ಅವಿಸ್ಮರಣೀಯ ಚಿತ್ರಗೀತೆಗಳ ರಸಮಂಜರಿ

ಮೇ 31ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ‌ಸಭಾಂಗಣದಲ್ಲಿ ಭಾರತ ಕಂಡ ಲೆಜೆಂಡರಿ ಕಲಾವಿದ, ಬಾಲಿವುಡ್ ಶೆಹೆಂಶಾ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಅವಿಸ್ಮರಣೀಯ ಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ರಿಂದ ಸುಮಾರು 4 ಘಂಟೆಗಳ ಕಾಲ ನಡೆಯಲಿರುವ ಈ ರಸಮಂಜರಿ ಕಾರ್ಯಕ್ರಮದಲ್ಲಿ ಭಾರತದ ಅತ್ಯದ್ಭುತ ಗಾಯಕರಿಂದ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಜಯಾ ಭಾಧುರಿ ಹಾಗೂ ಐಶ್ವರ್ಯ ರೈ ಅಭಿನಯದ ಸೂಪರ್ ಹಿಟ್ ಹಾಡುಗಳ ಗೀತ ಗಾಯನದ ಬ್ಲಾಕ್ಬಸ್ಟರ್ ಕಾರ್ಯಕ್ರಮದ ನಡೆಯಲಿದೆ.

AV ಕಾರ್ಪ್ ಸಂಸ್ಥೆ (ಅಶೋಕ್ ಬೊಹ್ರ- ಡಾ ವಿದ್ಯಾ ಸಾಗರ್) ಆಯೋಜಿಸಿರುವ ಈ ಕಾರ್ಯಕ್ರಮವು ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಉತ್ತಮ ಗುಣಮಟ್ಟದ ಪರಿಕಲ್ಪನೆ ಆಧಾರಿತ ಸಂಗೀತ ಕಚೇರಿಗಳನ್ನು ಮನೆ ತುಂಬಿದ ಪ್ರೇಕ್ಷಕರಿಗೆ ಕ್ಯುರೇಟ್ ಮಾಡಿ ನಡೆಸುವಲ್ಲಿ ಎವಿ ಕಾರ್ಪ್‌ ಸಂಸ್ಥೆ ಮುಂಚೂಣಿಯಲ್ಲಿದೆ.

iAsia News Music (ಅಮೆರಿಕದ ಡಲ್ಲಾಸ್- ಟೆಕ್ಸಾಸ್‌ನ ಅದರ ಪ್ರಧಾನ ಕಚೇರಿಯೊಂದಿಗೆ) ಕಳೆದ ಕೆಲವು ವರ್ಷಗಳಿಂದ ಬೆಂಗಳೂರು, ಹೈದರಾಬಾದ್- ಸಿಕಂದರಾಬಾದ್, ಕೋಲ್ಕತ್ತಾ, ಕಣ್ಣೂರು ಅಲ್ಲದೆ ಇತ್ತೀಚೆಗೆ ಅಮೆರಿಕಾದಲ್ಲಿ ಶ್ರೇಯಾ ಘೋಷಾಲ್ ಮತ್ತು ರಾಜೇಶ್ ಕೃಷ್ಣನ್ ಅವರ ಪ್ರದರ್ಶನಗಳನ್ನು ನೀಡಿ ಯಶಸ್ಸನ್ನು ಕಂಡಿದೆ.

ಈ ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ವಿವಿಧ ಸಂಗೀತ ಕಾರ್ಯಕ್ರಮಗಳಿಗೆ ಮಾಧ್ಯಮ ಪಾಲುದಾರರಾಗಿದ್ದಾರೆ. ಆನ್‌ಲೈನ್ ಸ್ಟ್ರೀಮಿಂಗ್ ಮತ್ತು ಹಂಚಿಕೆಯನ್ನು ಅಭಿನಂದಿಸುವ ಮೂಲಕ ವಿಶ್ವದ 195 ದೇಶಗಳಲ್ಲಿ 180 ದೇಶಗಳಲ್ಲಿ ಲಕ್ಷಾಂತರ ವೀಕ್ಷಕರು ಇವರ ಕಾರ್ಯಕ್ರಮಗಳನ್ನು ನೋಡಿ ಆನಂದಿಸುತ್ತಾರೆ.

ಮೇ 31 ರಂದು ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಮುಂಬೈನ ಹೆಸರಾಂತ ಹಿನ್ನೆಲೆ ಗಾಯಕರಾದ ನಯನ್ ರಾಥೋಡ್, ಕನ್ನಡದ ಗೋಲ್ಡನ್ ಗರ್ಲ್ ಶ್ರುತಿ ಭಿಡೆ, ಮಸೂದ್ ಅಲಿ, ಗೋವಿಂದ್ ಕರ್ನೂಲ್, ಅನಿತಾ ಭಟ್, ಜುಬಿಲಿ ರಾಯ್ ಮತ್ತು ತಪಶ್ ರಾಯ್ ವರ್ಣರಂಜಿತ ವೇದಿಕೆಯಲ್ಲಿ ತಮ್ಮ ಅಮೋಘ ಕಂಠದಿಂದ ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ. ಬೆಂಗಳೂರಿನ ರೋಹಿತ್ ಕುಮಾರ್ ಮತ್ತು ಅಮಿತ್ ರಾಜ್ ಮತ್ತವರ ತಂಡದ ಸಂಗೀತದಲ್ಲಿ ಹಾಡುಗಳು ಮೂಡಿಬರಲಿವೆ. ಬೆಂಗಳೂರಿನ ಬಾಲ ಗಾಯನ ಪ್ರತಿಭೆಗಳಾದ ಸಿರಿ ಚಂದ್ರಶೇಖರ್ ಮತ್ತು ಧ್ರುವ್ ಭಾರದ್ವಾಜ್ ಕೂಡಾ ಈ ವೇದಿಕೆಯಲ್ಲಿರುತ್ತಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.