Aattam OTT: ಮೂರು ರಾಷ್ಟ್ರಪ್ರಶಸ್ತಿ ಗೆದ್ದ ಈ ಮಲಯಾಳಂ ಚಿತ್ರವನ್ನು ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು?-aattam ott 70th national awards best film winner aattam movie streaming on amazon prime video ott platform malayalam prs ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Aattam Ott: ಮೂರು ರಾಷ್ಟ್ರಪ್ರಶಸ್ತಿ ಗೆದ್ದ ಈ ಮಲಯಾಳಂ ಚಿತ್ರವನ್ನು ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು?

Aattam OTT: ಮೂರು ರಾಷ್ಟ್ರಪ್ರಶಸ್ತಿ ಗೆದ್ದ ಈ ಮಲಯಾಳಂ ಚಿತ್ರವನ್ನು ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು?

Aattam OTT: ಮೂರು ರಾಷ್ಟ್ರಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಮಲಯಾಳಂನ ಆಟಂ ಸಿನಿಮಾವನ್ನು ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು? ಇಲ್ಲಿದೆ ವಿವರ.

ಮೂರು ರಾಷ್ಟ್ರಪ್ರಶಸ್ತಿ ಗೆದ್ದಿರುವ ಈ ಮಲಯಾಳಂ ಸಿನಿಮಾವನ್ನು ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು?
ಮೂರು ರಾಷ್ಟ್ರಪ್ರಶಸ್ತಿ ಗೆದ್ದಿರುವ ಈ ಮಲಯಾಳಂ ಸಿನಿಮಾವನ್ನು ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು?

Aattam OTT: ಆಗಸ್ಟ್​ 16ರ ಶುಕ್ರವಾರ ನಡೆದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮಲಯಾಳಂನಲ್ಲಿ ಅತ್ಯುತ್ತಮ ಪ್ರದರ್ಶನ ಕಂಡ 'ಆಟಂ' ಚಿತ್ರವು ಅತ್ಯುತ್ತಮ ಚಲನಚಿತ್ರದ ಜೊತೆಗೆ ಇತರೆ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಆಟಂ ಚಿತ್ರವು ಇದೇ ವರ್ಷ ಜನವರಿ 5 ರಂದು ಬಿಡುಗಡೆಯಾಗಿತ್ತು. 2022ರಲ್ಲೇ ಸೆನ್ಸಾರ್ ಪೂರ್ಣಗೊಳಿಸಿದ್ದ ಕಾರಣ ಈ ಸಿನಿಮಾವನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಈ ಚಿತ್ರ ಅನೇಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿತ್ತು. ಥಿಯೇಟರ್‌ಗಳಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.

ಆಟಂ ಓಟಿಟಿ ಸ್ಟ್ರೀಮಿಂಗ್ ವಿವರ

ಆಟಂ ಚಿತ್ರ ಅಮೆಜಾನ್ ಪ್ರೈಮ್​ ವಿಡಿಯೋ ಓಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಸ್ಪೆನ್ಸ್ ಥ್ರಿಲ್ಲರ್ ​ಚಿತ್ರವು ಮಾರ್ಚ್‌ನಲ್ಲೇ ಓಟಿಟಿಗೆ ಬಿಡುಗಡೆಯಾಗಿತ್ತು. ಮಲಯಾಳಂ ಭಾಷೆಯಲ್ಲಿರುವ ಈ ಸಿನಿಮಾಗೆ ತೆಲುಗು ಮತ್ತು ಇಂಗ್ಲಿಷ್ ಸಬ್​ಟೈಟಲ್ಸ್ ಕೂಡ ಇದೆ. ಅಚ್ಚರಿ ಏನೆಂದರೆ ಓಟಿಟಿಯಲ್ಲಿ ಬಿಡುಗಡೆಯಾದ ನಂತರ ಆಟಂಗೆ ಬೇಡಿಕೆ ಹೆಚ್ಚಾಯಿತು. ಓಟಿಟಿಯಲ್ಲಿ ಕಣ್ತುಂಬಿಕೊಂಡ ಬಹುತೇಕ ಮಂದಿ, ತುಂಬಾ ಚೆನ್ನಾಗಿದೆ. ನೋಡಲೇಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್​​ಗಳನ್ನು ಹಾಕಿದ್ದರು.

ಆಟಂ ತಾರಾಗಣ

ಆನಂದ್ ಏಕರ್ಷಿ ನಿರ್ದೇಶಿಸಿದ್ದರೆ, ಅಜಿತ್ ಜಾಯ್ ಬಂಡವಾಳ ಹಾಕಿದ್ದಾರೆ. ಜರೀನ್ ಶಿಹಾಬ್, ವಿನಯ್ ಫೋರ್ಟ್, ಕಲಾಭವನ್ ಶರೋಜನ್, ಜಾಲಿ ಅಂತೋನಿ, ಅಜಿ ತಿರುವಂಕುಳಂ, ಮದನ್ ಬಾಬು, ನಂದನ್ ಉನ್ನಿ ಮತ್ತು ಪ್ರಶಾಂತ್ ಮಾಧವನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಟಕ ತಂಡದಲ್ಲಿ ಒಂಟಿ ಹುಡುಗಿಯೊಬ್ಬಳು ಲೈಂಗಿಕ ದೌರ್ಜನ್ಯಕ್ಕೊಳಗಾದ ಕಥೆಯ ಸುತ್ತ ಸುತ್ತುವುದು ಮತ್ತು ಅಪರಾಧ ಎಸೆಗಿದವರನ್ನು ಕಂಡುಹಿಡಿಯುವುದು ಈ ಚಿತ್ರದ ಕಥೆಯಾಗಿದೆ.

ಮಹಿಳೆಯರ ಬಗ್ಗೆ ಪುರುಷರು ಹೇಗೆ ಯೋಚಿಸುತ್ತಾರೆ? ಮಹಿಳೆಯರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ತೆರೆಯ ಮೇಲೆ ಆನಂದ್ ತೋರಿಸಿದ್ದಾರೆ. ಸಾಮಾಜಿಕ ಸ್ಥಿತಿಗತಿಗಳನ್ನು ಈ ಚಿತ್ರದಲ್ಲಿ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಆನಂದ್ ಅವರ ನಿರ್ದೇಶನವು ಅದ್ಭುತವಾಗಿದ್ದು, ಅದಕ್ಕಾಗಿ ಭಾರೀ ಪ್ರಶಂಸೆ ಪಡೆದಿದ್ದಾರೆ. ಜಾಯ್ ಮೂವಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಜಿತ್ ಜಾಯ್ ನಿರ್ಮಿಸಿದ್ದಾರೆ. ಬಾಸಿಲ್ ಸಿಜೆ ಸಂಗೀತ ಸಂಯೋಜಿಸಿದ್ದು, ಅನುರುದ್ ಅನೀಶ್ ಅವರ ಛಾಯಾಗ್ರಹಣ ಇದೆ.

3 ರಾಷ್ಟ್ರೀಯ ಪ್ರಶಸ್ತಿ

70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಆಟಂ 3 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯ ಜೊತೆಗೆ ಈ ಚಿತ್ರಕ್ಕಾಗಿ ನಿರ್ದೇಶಕ ಆನಂದ್ ಏಕರ್ಶಿ ಅವರು ಅತ್ಯುತ್ತಮ ಚಿತ್ರಕಥೆಗಾಗಿ ಪ್ರಶಸ್ತಿ ಪಡೆದರು. ಮಹೇಶ್ ಭುವನೇಂದ್ ಅವರು ರಾಷ್ಟ್ರೀಯ ಅತ್ಯುತ್ತಮ ಸಂಕಲನ ಪ್ರಶಸ್ತಿ ಪಡೆದರು.

ಆಟಂ ಸ್ಟೋರಿ

ಕೇರಳದಲ್ಲಿ ನಾಟಕಗಳನ್ನು ಪ್ರದರ್ಶಿಸುವ 13 ಸದಸ್ಯರ ತಂಡವೊಂದು ಇರುತ್ತದೆ. ಈ ತಂಡದಲ್ಲಿ ಒಬ್ಬಳೇ ಹುಡುಗಿ ಇರುತ್ತಾಳೆ. ಉಳಿದವರು ಪುರುಷರು. ಆದರೆ ಒಂದು ದಿನ ಹುಡುಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. ಆದಾಗ್ಯೂ, ಆ 12 ಪುರುಷರಲ್ಲಿ ಯಾರು ಆಕೆಯ ಮೇಲೆ ಈ ಅಪರಾಧ ಮಾಡಿದ್ದಾರೆ ಎಂಬ ವಿಷಯದ ಸುತ್ತ ಚಲನಚಿತ್ರವು ಸುತ್ತುತ್ತದೆ. ಈ ಪ್ರಕ್ರಿಯೆಯಲ್ಲಿ ಜನರ ವ್ಯಕ್ತಿತ್ವ, ಸಮಯಕ್ಕೆ ಅನುಗುಣವಾಗಿ ಹಲವರು ವಿಭಿನ್ನವಾಗಿ ಮಾತನಾಡುವ ಮತ್ತು ವರ್ತಿಸುವ ಗುಣಗಳು ಹೊರಬರುತ್ತವೆ.