ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆದ ಅಭಿಷೇಕ್ - ಅವಿವಾ ಮಗನ ನಾಮಕರಣ; ಅಂಬಿ ಮೊಮ್ಮಗ ಹೆಸರು ಇಲ್ಲಿದೆ
ಕನ್ನಡ ಸುದ್ದಿ  /  ಮನರಂಜನೆ  /  ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆದ ಅಭಿಷೇಕ್ - ಅವಿವಾ ಮಗನ ನಾಮಕರಣ; ಅಂಬಿ ಮೊಮ್ಮಗ ಹೆಸರು ಇಲ್ಲಿದೆ

ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆದ ಅಭಿಷೇಕ್ - ಅವಿವಾ ಮಗನ ನಾಮಕರಣ; ಅಂಬಿ ಮೊಮ್ಮಗ ಹೆಸರು ಇಲ್ಲಿದೆ

ಇಂದು ಮಾರ್ಚ್ 16ರಂದು ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಅಭಿ, ಅವಿವಾ ಮಗನ ನಾಮಕರಣ ನಡೆದಿದೆ. ಕುಟುಂಬಸ್ಥರು, ಸಂಬಂಧಿಕರು, ಹಿತೈಷಿಗಳು, ರಾಜಕೀಯ ಮತ್ತು ಚಿತ್ರರಂಗದ ಹಲವರು ನಾಮಕರಣದಲ್ಲಿ ಭಾಗಿಯಾಗಿದ್ದರು

ಅಭಿಷೇಕ್ - ಅವಿವಾ ಮಗನ ನಾಮಕರಣ
ಅಭಿಷೇಕ್ - ಅವಿವಾ ಮಗನ ನಾಮಕರಣ

ಕಳೆದ ವರ್ಷ ನವೆಂಬರ್ 12 ರಂದು ಅಭಿಷೇಕ್ ಮತ್ತು ಅವಿವಾಗೆ ಮಗು ಜನಿಸಿತ್ತು. ಇಷ್ಟು ದಿನಗಳ ಕಾಲ ಸಾಕಷ್ಟು ಜನ ಮಗುವಿನ ಹೆಸರೇನಿರಬಹುದು ಎಂದು ಅಂದಾಜಿಸುತ್ತಲೇ ಇದ್ದರು. ನಟ ಅಂಬರೀಶ್ ಅವರ ಮೊಮ್ಮಗನ ಹೆಸರೇನೆಂದು ತಿಳಿದುಕೊಳ್ಳುವ ಕಾತರ ನಿಮಗೂ ಇರಬಹುದು. ಇಂದು ಮಾರ್ಚ್ 16ರಂದು ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಾಮಕರಣ ನಡೆದಿದೆ. ಸಿನಿ ತಾರೆಯರು ಕೂಡ ಆಗಮಿಸಿ ಅಂಬಿ ಮೊಮ್ಮಗನನ್ನು ಕಣ್ತುಂಬಿಕೊಂಡು ಹಾರೈಸಿದ್ದಾರೆ.

ಅಂಬಿ ಮೊಮ್ಮಗನ ಹೆಸರೇನು?

ಕುಟುಂಬಸ್ಥರು, ಸಂಬಂಧಿಕರು, ಹಿತೈಷಿಗಳು, ರಾಜಕೀಯ ಮತ್ತು ಚಿತ್ರರಂಗದ ಹಲವರು ನಾಮಕರಣದಲ್ಲಿ ಭಾಗಿಯಾಗಿದ್ದರು. 'ರೆಬೆಲ್‌ ಸ್ಟಾರ್‌' ಅಂಬರೀಶ್‌ ಮತ್ತು ಸುಮಲತಾ ಅವರ ಮೊಮ್ಮಗನಿಗೆ ಅಂಬರೀಶ್‌ ಅವರ ಹೆಸರನ್ನೇ ಇಡಲಾಗಿದೆಯಂತೆ. ಅಂಬರೀಶ್‌ ಅವರ ಮೊದಲ ಹೆಸರು ʻಅಮರ್‌ನಾಥ್‌ʼ. ಆ ಕಾರಣದಿಂದ ʻರಾಣಾ ಅಮರ್‌ ಅಂಬರೀಶ್' ಎಂಬುದಾಗಿ ಅಭಿಷೇಕ್ ಹಾಗೂ ಅವಿವಾ ಮಗನಿಗೆ ನಾಮಕರಣ ಮಾಡಲಾಗಿದೆ. ಸಾಕಷ್ಟು ಕಡೆಗಳಲ್ಲಿ ತಾತನ ಹೆಸರನ್ನು ಮೊಮ್ಮಗನಿಗೆ ಇಡುವ ಸಂಪ್ರದಾಯವಿದೆ. ಇಲ್ಲೂ ಅದೇ ರೀತಿ ಮಾಡಲಾಗಿದೆ.

ಸಾಕಷ್ಟು ಜನರ ಮೆಚ್ಚುಗೆಗಳಿಸಿ ತಮ್ಮ ಅಭಿನಯದ ಮೂಲಕವೇ ಹೆಸರಾದ ಅಂಬರೀಶ್‌ ಅವರ ಹೆಸರನ್ನೇ ಈಗ ಮತ್ತೆ ಅವರ ಮೊಮ್ಮಗನಿಗೆ ಇಟ್ಟಿರುವುದು ಸಾಕಷ್ಟು ಜನರಿಗೆ ಖುಷಿ ಕೊಟ್ಟಿದೆ. ʻರಾಣಾʼ ಎಂದರೆ ʻರಾಜʼ ಎಂಬ ಅರ್ಥ ಬರುತ್ತದೆ.

ತಮ್ಮ ಮಗನಿಗೆ ಅಭಿ-ಅವಿವಾ ಉತ್ತಮ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ಧಾರೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದೆ. ಅಭಿಷೇಕ್‌ ಅಂಬರೀಶ್‌ ಪುತ್ರನ ನಾಮಕರಣ ಸಮಾರಂಭಕ್ಕೆ ಸಾಕಷ್ಟು ಗಣ್ಯರು ಆರಂಭಿಸಿದ್ದರು. ಕಿಚ್ಚ ಸುದೀಪ್ ಕೂಡ ಆಗಮಿಸಿದ್ದರು. ಆದರೆ, ದರ್ಶನ್ ಬಂದಿರಲಿಲ್ಲ. ಕಿಚ್ಚ ಸುದೀಪ್‌ ಮತ್ತು ಅವರ ಪತ್ನಿ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಮೊಮ್ಮಗನ ನಾಮಕರಣದಲ್ಲಿ ಸುಮಲತಾ ಖುಷಿಯಿಂದ ಓಡಾಡಿಕೊಂಡು ಎಲ್ಲರನ್ನೂ ಸ್ವಾಗತಿಸುತ್ತಿದ್ದಾರೆ.

ಜೂನ್‌ 5, 2023ರಂದು ಅಂಬರೀಶ ಮಗ ಅಭಿಷೇಕ್‌ ವಿವಾಹವಾಗಿತ್ತು. ಮಂಡ್ಯದ ಸೊಸೆಯಾಗಿ ಅವಿವಾ ಆಗಮಿಸಿದ್ದರು. ಈಗ ಮಂಡ್ಯದ ಮಣ್ಣಿಗೆ ಮತ್ತೊಂದು ಮಗು ಕಾಲಿಟ್ಟಿದೆ. ಸಪ್ಟೆಂಬರ್ 18, 2024ರಂದು ಅವಿವಾ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು. ನವೆಂಬರ್ 12, 2024ರಂದು ಅವರು ತಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸ್ಯಾಂಡಲ್‌ವುಡ್‌ ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಅದ್ಧೂರಿಯಾಗಿ ಮಗನ ನಾಮಕರಣ ಮಾಡಿದ್ದಾರೆ.

ಕಳೆದ ಜೂನ್‌ ಜುಲೈ ತಿಂಗಳಲ್ಲಿ ಅವಿವಾ ಗರ್ಭಿಣಿ ಅನ್ನೋ ವಿಚಾರ ಹೊರಬಿದ್ದಿತ್ತು. ಅಂದಿನಿಂದ ಅಂಬರೀಶ್‌ ಅಭಿಮಾನಿ ವಲಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಇಂದು ಆ ಸಂಭ್ರಮ ಇನ್ನಷ್ಟು ಇಮ್ಮಡಿಯಾಗಿದೆ. ಯಾಕೆಂದರೆ ಮೊಮ್ಮಗನಿಗೆ ಅಂಬರೀಶ್‌ ಹೆಸರನ್ನೇ ಇಟ್ಟಿದ್ದಾರೆ.

Suma Gaonkar

eMail
Whats_app_banner