ಕನ್ನಡ ಸುದ್ದಿ  /  Entertainment  /  Acharya Satyendra Das Call For Boycott Adipurush Movie

Acharya Satyendra Das about Adipurush'ಆದಿಪುರುಷ್‌' ಚಿತ್ರವನ್ನು ನಿಷೇಧಿಸಬೇಕು..ರಾಮಮಂದಿರ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್

ಪೌರಾಣಿಕ ಕಥೆಗಳ ಮೇಲೆ ಸಿನಿಮಾ ಮಾಡುವುದು ತಪ್ಪಲ್ಲ, ಆದರೆ ವಿವಾದ ಸೃಷ್ಟಿಸುವ ಉದ್ದೇಶದಿಂದ ಪೌರಾಣಿಕ ಕಥೆಗಳನ್ನು ತಿರುಚುವುದು ಅಕ್ಷಮ್ಯ ಅಪರಾಧ. ಆದಿಪುರುಷ್‌ ಚಿತ್ರವನ್ನು ನಿಷೇಧಿಸಬೇಕು ಎಂದು ಅಯೋಧ್ಯೆಯ ರಾಮಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಹೇಳಿದ್ದಾರೆ.

ಶ್ರೀ ರಾಮನ ಪಾತ್ರಧಾರಿ ಪ್ರಭಾಸ್
ಶ್ರೀ ರಾಮನ ಪಾತ್ರಧಾರಿ ಪ್ರಭಾಸ್

ಪ್ರಭಾಸ್ ಅಭಿನಯದ 'ಆದಿಪುರುಷ್‌' ಚಿತ್ರದ ಟೀಸರ್ ಇತ್ತೀಚೆಗೆ ಅಯೋಧ್ಯೆಯಲ್ಲಿ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ರಾಮನ ಜೊತೆಗೆ ಹನುಮಂತ ಮತ್ತು ರಾವಣನ ಪಾತ್ರಗಳನ್ನು ತೋರಿಸಿರುವ ರೀತಿಗೆ ಟೀಕೆಗಳು ವ್ಯಕ್ತವಾಗಿವೆ. ದೃಶ್ಯಗಳನ್ನು ಬದಲಿಸುವಂತೆ ಒತ್ತಡ ಹೆಚ್ಚಾಗುತ್ತಿದೆ.

ಅದರಲ್ಲೂ ಸೈಫ್ ಅಲಿ ಖಾನ್ ರಾವಣನಾಗಿ ಸ್ಟೈಲಿಶ್ ಆಗಿ ಅನಾವರಣಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್‌ಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಟೀಸರ್‌ನಲ್ಲಿ ರಾವಣನನ್ನು ಧಾರ್ಮಿಕ ವ್ಯಕ್ತಿಯಾಗಿ ತೋರದೆ ಉದ್ದನೆಯ ಗಡ್ಡ ಮತ್ತು ಚರ್ಮದ ಜಾಕೆಟ್‌ನೊಂದಿಗೆ ಚಿತ್ರಿಸಲಾಗಿದೆ ಎಂಬ ಕಾಮೆಂಟ್‌ಗಳು ವ್ಯಕ್ತವಾಗುತ್ತಿವೆ. 'ಆದಿಪುರುಷ್‌' ಚಿತ್ರದ ಟೀಸರ್ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಿದೆ ಎಂದು ಯುಪಿ ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಆಕ್ರೋಶ ವ್ಯಕ್ತಪಡಿಸಿದ್ದು ಗೊತ್ತೇ ಇದೆ. ಮಧ್ಯಪ್ರದೇಶದ ಗೃಹ ಸಚಿವರ ಜೊತೆಗೆ ಹಲವು ರಾಜಕೀಯ ಮುಖಂಡರು ಸಿನಿಮಾದಿಂದ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕುವಂತೆ ಒತ್ತಾಯಿಸುತ್ತಿದ್ದಾರೆ.

ಅಯೋಧ್ಯೆಯ ರಾಮಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಆದಿಪುರುಷ್‌ ಚಿತ್ರವನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ. ಪೌರಾಣಿಕ ಕಥೆಗಳ ಮೇಲೆ ಸಿನಿಮಾ ಮಾಡುವುದು ತಪ್ಪಲ್ಲ, ಆದರೆ ವಿವಾದ ಸೃಷ್ಟಿಸುವ ಉದ್ದೇಶದಿಂದ ಪೌರಾಣಿಕ ಕಥೆಗಳನ್ನು ತಿರುಚುವುದು ಅಕ್ಷಮ್ಯ ಅಪರಾಧ. 'ಆದಿಪುರುಷ್‌' ಚಿತ್ರದ ಟೀಸರ್‌ನಲ್ಲಿ ರಾಮ, ರಾವಣ, ಹನುಮಂತನ ಪಾತ್ರಗಳನ್ನು ತೋರಿಸಿರುವ ರೀತಿಗೆ ಸತ್ಯೇಂದ್ರದಾಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿನ ಪಾತ್ರಗಳು ರಾಮಾಯಣಕ್ಕಿಂತ ಭಿನ್ನವಾಗಿ ಕಾಣುತ್ತವೆ. ಅದನ್ನು ನೋಡುತ್ತಿದ್ದರೆ ಅದು ರಾಮಾಯಣವೇ ಅಲ್ಲ ಎಂದೆನಿಸುತ್ತಿದೆ. ಆದ್ದರಿಂದ ಈ ಚಿತ್ರವನ್ನು ನಿಷೇಧಿಸಲೇಬೇಕು ಎಂದ ಸತ್ಯೇಂದ್ರನಾಥ್, 'ಆದಿಪುರುಷ್‌' ಚಿತ್ರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ಓಂ ರಾವುತ್ ರಾಮಾಯಣ ಕಥೆಯನ್ನಾಧರಿಸಿ 'ಆದಿಪುರುಷ್‌' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ರಾಮನಾಗಿ ಪ್ರಭಾಸ್, ಜಾನಕಿಯಾಗಿ ಕೃತಿ ಸನನ್ ಮತ್ತು ರಾವಣನಾಗಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಸುಮಾರು ಐದು ನೂರು ಕೋಟಿ ವೆಚ್ಚದಲ್ಲಿ ಮೋಷನ್ ಕ್ಯಾಪ್ಚರ್ 3ಡಿ ತಂತ್ರಜ್ಞಾನದಲ್ಲಿ ಸಿನಿಮಾ ಚಿತ್ರೀಕರಣವಾಗುತ್ತಿದೆ. ಆದಿಪುರುಷ 12 ಜನವರಿ 2023 ರಂದು ಬಿಡುಗಡೆಯಾಗಲಿದೆ.

ಚಿತ್ರತಂಡಕ್ಕೆ ಪತ್ರ ಬರೆದ ಮಧ್ಯಪ್ರದೇಶ ಗೃಹಮಂತ್ರಿ

'ಆದಿಪುರುಷ್‌' ಸಿನಿಮಾವನ್ನು ಈ ರೀತಿ ಚಿತ್ರಿಸಿರುವುದು ರಾಮಾಯಣಕ್ಕೆ ಹಾಗೂ ಹಿಂದೂ ಧರ್ಮಕ್ಕೆ ಮಾಡಿರುವ ಅವಮಾನ. ಈ ವಿಚಾರವಾಗಿ ನಾನು ಚಿತ್ರತಂಡಕ್ಕೆ ಪತ್ರ ಬರೆಯುತ್ತಿದ್ದೇನೆ. ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಧ್ಯಪ್ರದೇಶದ ಗೃಹಮಂತ್ರಿ ಮಾತ್ರವಲ್ಲದೆ ಬಹುತೇಕ ಎಲ್ಲರೂ ಈ ಚಿತ್ರದ ಟೀಸರ್‌ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಟೀಸರ್‌ ನೋಡಿದರೆ ಕಾರ್ಟೂನ್‌ ನೋಡಿದಂತೆ ಆಗುತ್ತದೆ ಎಂದು ಕೂಡಾ ಅಭಿಪ್ರಾಯಗಳು ವ್ಯಕ್ತವಾಗಿವೆ.

ಸೈಫ್‌ ಅಲಿ ಖಾನ್‌ ಗೆಟಪ್‌ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಮಾಳವಿಕಾ ಅವಿನಾಶ್

ಚಿತ್ರತಂಡ ಈಗಾಗಲೇ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಟ್ರೋಲ್‌ ನಡುವೆ ಮತ್ತೆ ವಿಎಫ್‌ಎಕ್ಸ್‌ ಬದಲಾಯಿಸಲು ಇನ್ನಷ್ಟು ಖರ್ಚು ಮಾಡಬೇಕಿದೆ. ಈಗಾಗಲೇ ಬಾಯ್‌ಕಾಟ್‌ ಆದಿಪುರುಷ್‌ ಟ್ರೆಂಡ್‌ ಶುರುವಾಗಿದೆ. ಪ್ರಭಾಸ್‌ಗೆ ಮತ್ತೊಮ್ಮೆ ಸೋಲಿನ ಭೀತಿ ಎದುರಾಗಿದೆ. ಸ್ಯಾಂಡಲ್‌ವುಡ್‌ ನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್‌ ಕೂಡಾ ಟೀಸರ್‌ ಬಗ್ಗೆ ವಿರೋಧ ವ್ಯಕ್ತಪಡಿಸಿ, ಬಾಲಿವುಡ್ ನವರಿಗೆ ಅದೆಷ್ಟು ಅಸಡ್ಡೆ ಮಿನಿಮಮ್ ರಿಸರ್ಚ್ ಮಾಡಬೇಕಲ್ಲವೇ ಎಂದು ಬೇಸರ ವ್ಯಕ್ತಪಡಿಸಿದ್ದರು.

IPL_Entry_Point

ವಿಭಾಗ