Action OTT: ಸರ್‌, ಈ ಸಿನಿಮಾ ನೋಡಿದ್ದೀರಾ? ಒಟಿಟಿಯಲ್ಲಿದೆ ವೆಟ್ರಿಮಾರನ್ ಆಕ್ಷನ್ ಸಿನಿಮಾ, ಕನ್ನಡದಲ್ಲಿಯೂ ಸ್ಟ್ರೀಮಿಂಗ್
ಕನ್ನಡ ಸುದ್ದಿ  /  ಮನರಂಜನೆ  /  Action Ott: ಸರ್‌, ಈ ಸಿನಿಮಾ ನೋಡಿದ್ದೀರಾ? ಒಟಿಟಿಯಲ್ಲಿದೆ ವೆಟ್ರಿಮಾರನ್ ಆಕ್ಷನ್ ಸಿನಿಮಾ, ಕನ್ನಡದಲ್ಲಿಯೂ ಸ್ಟ್ರೀಮಿಂಗ್

Action OTT: ಸರ್‌, ಈ ಸಿನಿಮಾ ನೋಡಿದ್ದೀರಾ? ಒಟಿಟಿಯಲ್ಲಿದೆ ವೆಟ್ರಿಮಾರನ್ ಆಕ್ಷನ್ ಸಿನಿಮಾ, ಕನ್ನಡದಲ್ಲಿಯೂ ಸ್ಟ್ರೀಮಿಂಗ್

Action OTT: ವೆಟ್ರಿಮಾರನ್ ತಮಿಳು ಆಕ್ಷನ್ ಸಿನಿಮಾ ಸರ್ ಒಟಿಟಿಗೆ ಆಗಮಿಸಿದೆ. ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಆಹಾ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಚಿತ್ರದಲ್ಲಿ ವಿಮಲ್ ನಾಯಕನಾಗಿ ನಟಿಸಿದ್ದಾರೆ. ತಮಿಳು ಚಲನಚಿತ್ರ ನಟ ಬೋಸ್ ವೆಂಕಟ್ ನಿರ್ದೇಶಿಸಿದ್ದಾರೆ.

ಒಟಿಟಿಯಲ್ಲಿದೆ ವೆಟ್ರಿಮಾರನ್ ಆಕ್ಷನ್ ಸಿನಿಮಾ
ಒಟಿಟಿಯಲ್ಲಿದೆ ವೆಟ್ರಿಮಾರನ್ ಆಕ್ಷನ್ ಸಿನಿಮಾ

Action OTT: ವೆಟ್ರಿಮಾರನ್ ತಮಿಳು ಆಕ್ಷನ್ ಡ್ರಾಮಾ ಸಿನಿಮಾ SIR ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಒಂದೂವರೆ ತಿಂಗಳ ನಂತರ ಒಟಿಟಿಗೆ ಆಗಮಿಸಿದೆ. ಇದು ಅಮೆಜಾನ್ ಪ್ರೈಮ್‌ ವಿಡಿಯೋದಲ್ಲಿ ಕನ್ನಡ ಸೇರಿದಂತೆ ಭಾರತದ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ತಮಿಳು ಸಿನಿಮಾ ತೆಲುಗು, ಹಿಂದಿ, ಮಲಯಾಳಂನಲ್ಲೂ ಲಭ್ಯವಿದೆ. ಆಹಾ ಒಟಿಟಿಯಲ್ಲಿ ಇದು ಮೂಲ ತಮಿಳು ಭಾಷೆಯಲ್ಲಿ ಮಾತ್ರ ಲಭ್ಯವಿದೆ.

ಕಾಲಿವುಡ್‌ ನಟನ ಸಿನಿಮಾ

ಸರ್ ಚಿತ್ರದಲ್ಲಿ ವಿಮಲ್ ನಾಯಕನಾಗಿ ಮತ್ತು ಛಾಯಾದೇವಿ ನಾಯಕಿಯರಾಗಿ ನಟಿಸಿದ್ದಾರೆ. ಕಾಲಿವುಡ್ ನಟ ಬೋಸ್ ವೆಂಕಟ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾದ ನಿರೂಪಕರಾಗಿ ಕಾಲಿವುಡ್ ಸ್ಟಾರ್ ಡೈರೆಕ್ಟರ್ ವೆಟ್ರಿಮಾರನ್ ಕಾರ್ಯನಿರ್ವಹಿಸಿರುವುದು ಗಮನಾರ್ಹ. ವೆಟ್ರಿಮಾರನ್ ಕ್ರೇಜ್‌ನಿಂದಾಗಿ ಈ ಕಿರುಚಿತ್ರ ತಮಿಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಹೇಗಿದೆ ಸಿನಿಮಾ?

ಶಿಕ್ಷಣ ವ್ಯವಸ್ಥೆಗೆ ಸಂಬಂಧಪಟ್ಟ ಸಂದೇಶವನ್ನು ಈ ಸಿನಿಮಾ ಹೊಂದಿದೆ. ಜತೆಗೆ, ಕಮರ್ಷಿಯಲ್ ಟಚ್ ಇರುವ ಈ ಕಥೆಯನ್ನು ನಿರ್ದೇಶಕ ಬೋಸ್ ವೆಂಕಟ್ ಬರೆದಿದ್ದಾರೆ. ಪಾಯಿಂಟ್ ಚೆನ್ನಾಗಿದ್ದರೂ ಅದನ್ನು ಎಂಗೇಜಿಂಗ್ ಮಾಡುವಲ್ಲಿ ನಿರ್ದೇಶಕರು ಸೋತಿದ್ದಾರೆ ಎಂದು ವಿಮರ್ಶಕರು ಹೇಳಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷೆ ಮಾಡಿದ್ದಷ್ಟು ಈ ಚಿತ್ರ ಗಳಿಕೆ ಮಾಡಿಲ್ಲ.

ಸರ್ ಸಿನಿಮಾದ ಕಥೆ

ಜನನ್ (ವಿಮಲ್) ತನ್ನ ತಂದೆ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಶಾಲೆಗೆ ಶಿಕ್ಷಕನಾಗಿ ಕೆಲಸಕ್ಕೆ ಸೇರುತ್ತಾನೆ. ಟೀಚಿಂಗ್‌ ಕೆಲಸ ಇಷ್ಟವಿಲ್ಲದಿದ್ದರೂ ಅಪ್ಪನ ಮಾತನ್ನು ಅಲ್ಲಗಳೆಯುವಂತಿಲ್ಲ. ತಾನು ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಹಳ್ಳಿಯಲ್ಲಿ ಅನೇಕ ಕೆಳಜಾತಿಯ ಮಕ್ಕಳು ಶಾಲೆ ಬಿಟ್ಟಿರುವುದು ಜ್ಞಾನ್‌ಗೆ ತಿಳಿಯುತ್ತದೆ. ಅವರೆಲ್ಲರನ್ನೂ ಶಾಲೆಗೆ ಸೇರಿಸುವ ಪ್ರಯತ್ನದಲ್ಲಿ ಜ್ಞಾನ್ ಗ್ರಾಮದ ಹಿರಿಯ ಶಕ್ತಿವೇಲ್ ಜೊತೆ ಸಂಘರ್ಷಕ್ಕೆ ಇಳಿಯಬೇಕಾಗುತ್ತದೆ. ವಿದ್ಯಾಭ್ಯಾಸ ಮಾಡಿದರೆ ಎಲ್ಲರೂ ಬುದ್ಧಿವಂತರಾಗುತ್ತಾರೆ, ನನ್ನ ಸೇವೆಗೆ, ಕೆಲಸಕ್ಕೆ ಯಾರೂ ಇರುವುದಿಲ್ಲ ಎಂದು ಶಕ್ತಿವೇಲ್‌ ಆ ಶಾಲೆಯನ್ನು ನಾಶಪಡಿಸಲು ಯತ್ನಿಸುತ್ತಾನೆ. ತನ್ನ ಶಾಲೆಯನ್ನು ರಾಜಕೀಯ ಮತ್ತು ಆರ್ಥಿಕ ಶಕ್ತಿಯಿಂದ ಹೇಗೆ ಜನನ್‌ ರಕ್ಷಿಸಿದನು? ಈ ಹೋರಾಟದಲ್ಲಿ ವಲ್ಲಿ ಹೇಗೆ ಬೆಂಬಲವಾಗಿ ನಿಂತಳು? ಎಂಬುದು ಈ ಸಿನಿಮಾದ ಕಥೆ.

ನಿರ್ದೇಶಕರಾಗಿ ಇದು ಬೋಸ್ ವೆಂಕಟ್ ಅವರ ಎರಡನೇ ಸಿನಿಮಾ. ಈ ಹಿಂದೆ ವಿಮಲ್ ಜೊತೆ ಕನ್ನಿಮಾಡಂ ಸಿನಿಮಾ ಮಾಡಿದ್ದರು. ನಟನಾಗಿ ಬೋಸ್ ವೆಂಕಟ್ ತಮಿಳಿನಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ.

ಭೂಲ್‌ ಭುಲ್ಲಯ್ಯ 3 ಸಿನಿಮಾ ಒಟಿಟಿಗೆ ಯಾವಾಗ?

ಭೂಲ್ ಭುಲ್ಲಯ್ಯ 3 ಸಿನಿಮಾ ಈ ವರ್ಷದ ನಾಲ್ಕನೇ ಅತಿ ಹೆಚ್ಚು ಗಳಿಕೆ ಕಂಡ ಹಾರರ್ ಕಾಮಿಡಿ ಸಿನಿಮಾವಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ 420 ಕೋಟಿ ರೂ. ಗಳಿಸಿರುವ ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ತೃಪ್ತಿ ಡಿಮ್ರಿ ಮತ್ತು ಮಾಧುರಿ ದೀಕ್ಷಿತ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇದೇ ತಿಂಗಳು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಲಿದೆ ಎಂದು ವರದಿಗಳು ತಿಳಿಸಿವೆ. ಡಿಸೆಂಬರ್‌ 27ರಂದು ಈ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರುವ ಸಾಧ್ಯತೆಗಳಿವೆ.

Whats_app_banner