ರಾಜ್ಯದ ಎಸ್‌ಟಿ ವಸತಿ ಶಾಲೆ, ರಾಯಚೂರು ವಿವಿಗೆ ಮಹರ್ಷಿ ವಾಲ್ಮಿಕಿ ಹೆಸರು; ಸರ್ಕಾರದ ನಡೆಗೆ ನಟ ಚೇತನ್‌ ಅಹಿಂಸಾ ವಿರೋಧ
ಕನ್ನಡ ಸುದ್ದಿ  /  ಮನರಂಜನೆ  /  ರಾಜ್ಯದ ಎಸ್‌ಟಿ ವಸತಿ ಶಾಲೆ, ರಾಯಚೂರು ವಿವಿಗೆ ಮಹರ್ಷಿ ವಾಲ್ಮಿಕಿ ಹೆಸರು; ಸರ್ಕಾರದ ನಡೆಗೆ ನಟ ಚೇತನ್‌ ಅಹಿಂಸಾ ವಿರೋಧ

ರಾಜ್ಯದ ಎಸ್‌ಟಿ ವಸತಿ ಶಾಲೆ, ರಾಯಚೂರು ವಿವಿಗೆ ಮಹರ್ಷಿ ವಾಲ್ಮಿಕಿ ಹೆಸರು; ಸರ್ಕಾರದ ನಡೆಗೆ ನಟ ಚೇತನ್‌ ಅಹಿಂಸಾ ವಿರೋಧ

Chetan Ahimsa: ರಾಜ್ಯದ ಎಲ್ಲ ಎಸ್​ಟಿ ವಸತಿ ಶಾಲೆಗಳಿಗೆ ಮತ್ತು ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಘೋಷಣೆಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಎಸ್‌ಟಿ ವಸತಿ ಶಾಲೆ, ರಾಯಚೂರು ವಿವಿಗೆ ಮಹರ್ಷಿ ವಾಲ್ಮಿಕಿ ಹೆಸರಿಡುವ ನಿರ್ಧಾರಕ್ಕೆ ನಟ ಚೇತನ್‌ ಅಹಿಂಸಾ ವಿರೋಧ
ರಾಜ್ಯದ ಎಸ್‌ಟಿ ವಸತಿ ಶಾಲೆ, ರಾಯಚೂರು ವಿವಿಗೆ ಮಹರ್ಷಿ ವಾಲ್ಮಿಕಿ ಹೆಸರಿಡುವ ನಿರ್ಧಾರಕ್ಕೆ ನಟ ಚೇತನ್‌ ಅಹಿಂಸಾ ವಿರೋಧ

Chetan Ahimsa on Maharshi Valkmiki Jayanthi: ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ. ರಾಜಕೀಯ, ಸಾಮಾಜಿಕ, ಪ್ರಸ್ತುತ ಆಗುಹೋಗುಗಳ ಬಗ್ಗೆ ತಮ್ಮ ಜಾಲತಾಣದ ಪುಟದಲ್ಲಿ ಬರಹಗಳನ್ನು ಪ್ರಕಟಿಸುತ್ತಲೇ ಇರುತ್ತಾರೆ. ಸಿನಿಮಾ ನಟರ ಬಗ್ಗೆ, ರಾಜಕಾರಣಿಗಳ ಬಗ್ಗೆಯೂ ಅನಿಸಿಕೆ ಅಭಿಪ್ರಾಯಗಳನ್ನು ಚೇತನ್‌ ಅಹಿಂಸಾ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮಹರ್ಷಿ ವಾಲ್ಮಿಕಿ ಜಯಂತಿ ನಿಮಿತ್ತ ಸರ್ಕಾರದ ಹೊಸ ಆದೇಶದ ವಿರುದ್ಧ ಮತ್ತೆ ಧ್ವನಿ ಎತ್ತಿದ್ದಾರೆ.

ರಾಜ್ಯದ ಎಲ್ಲ ಎಸ್​ಟಿ ವಸತಿ ಶಾಲೆಗಳಿಗೆ ಮತ್ತು ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಹರ್ಷಿ ವಾಲ್ಮಿಕಿ ಜಯಂತಿ ಪ್ರಯುಕ್ತ ನಡೆದ ಕಾರ್ಯಕ್ರಮದ ಉದ್ಘಾಟಿಸಿ ಐವರು ಮಹನೀಯರಿಗೆ ವಾಲ್ಮೀಕಿ ಪ್ರಶಸ್ತಿ ವಿತರಿಸಿ ಹೊಸ ಘೋಷಣೆ ಮಾಡಿದ್ದಾರೆ.

ಎಸ್​ಎಸ್​ಪಿ/ ಟಿಎಸ್​ಪಿ ಮೂಲಕ ಎಸ್​ಸಿ/ ಎಸ್​ಟಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ಆಯವ್ಯಯದಲ್ಲಿ ಮೊದಲಿಗೆ ಮೀಸಲಿಟ್ಟಿದ್ದು ನಮ್ಮ ಸರ್ಕಾರ. ತಳ ಸಮುದಾಯಗಳಿಗೆ ವಸತಿ ಶಾಲೆಗಳನ್ನು ಮೊದಲು ಆರಂಭಿಸಿದ್ದು ನಾನು. ಪ್ರತೀ ಹೋಬಳಿಗೂ ಒಂದು ವಸತಿ ಶಾಲೆ ಮಾಡಿಯೇ ಮಾಡ್ತೀನಿ ಎಂದಿದ್ದಾರೆ ಸಿಎಂ.

ಇದೀಗ ಇದೇ ಸಿಎಂ ಸಿದ್ದರಾಮಯ್ಯನವರ ಘೋಷಣೆಯ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಮಿತ್ತ ತಮ್ಮ ಸೋಷಿಯಲ್‌ ಮೀಡಿಯಾ ಪುಟದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಚೇತನ್‌, ನಾನು ಸಿದ್ದರಾಮಯ್ಯನವರ ಈ ನಡೆಯನ್ನು ಒಪ್ಪುವುದಿಲ್ಲ ಎಂದಿದ್ದಾರೆ.

ಚೇತನ್‌ ಅಹಿಂಸಾ ವಿರೋಧ

"ಎಲ್ಲಾ ಎಸ್ಟಿ ವಸತಿ ಶಾಲೆಗಳು ಹಾಗೂ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ನಾನು ಈ ನಡೆಯನ್ನು ಒಪ್ಪುವುದಿಲ್ಲ. ಕರ್ನಾಟಕದಲ್ಲಿ 50+ ST (ಬುಡಕಟ್ಟು) ಗುಂಪುಗಳಿವೆ. ವಾಲ್ಮೀಕಿ ನಾಯಕರು ಅಂತಹ ಒಂದು ಗುಂಪು. ಇತರ 49 ಗುಂಪುಗಳ ಸಾಂಸ್ಕೃತಿಕ/ ಐತಿಹಾಸಿಕ ಐಕಾನ್‌ಗಳನ್ನು ಸೇರಿಸಬೇಕು" ಎಂದಿದ್ದಾರೆ.

ಎಚ್‌. ಸಿ ಮಹದೇವಪ್ಪ ಬಗ್ಗೆಯೂ ಕಾಮೆಂಟ್‌

"ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು ಬೌದ್ಧ ಧರ್ಮ ಸ್ವೀಕರಿಸಲು ಉದ್ದೇಶಿಸಿದ್ದಾರೆ- ಇದು ಅವರ ಆಯ್ಕೆ ಮತ್ತು 25 ನೇ ವಿಧಿ ಪ್ರಕಾರ ಹಕ್ಕು. ನೆನಪಿಡಿ: ನಮ್ಮ ಧರ್ಮದ ಆಯ್ಕೆ ಅಥವಾ ಯಾವ ಧರ್ಮವನ್ನು ಆಯ್ಕೆ ಮಾಡದೆರೋದು ವೈಯಕ್ತಿಕ ವಿಷಯವಾಗಿದೆ; ಇದು ಸಮಾಜದಲ್ಲಿ ಬೆಳೆಯುತ್ತಿರುವ/ ಬೇರೂರಿರುವ ಸಾಮಾಜಿಕ- ಆರ್ಥಿಕ-ಭಾಷಾ- ಇತ್ಯಾದಿ ಅಸಮಾನತೆಗಳನ್ನು ರಚನಾತ್ಮಕವಾಗಿ ಕಿತ್ತುಹಾಕುವುದಿಲ್ಲ. ನಮಗೆ ವೈಚಾರಿಕತೆಯ ಮೂಲಕ ನ್ಯಾಯದ ನೀತಿಗಳು ಮತ್ತು ಯೋಜನೆಗಳು ಬೇಕು" ಎಂದಿದ್ದರು ಚೇತನ್.‌