ಕನ್ನಡ ಸುದ್ದಿ  /  Entertainment  /  Actor Dhruva Sarja Blessed With Baby Girl

Dhruva Sarja Good News: ಧ್ರುವ- ಪ್ರೇರಣಾ ದಂಪತಿಯ ಮಡಿಲು ಸೇರಿದ ಕಂದಮ್ಮ; ಸರ್ಜಾ ಕುಟುಂಬದಲ್ಲಿ ಸಂಭ್ರಮ

ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಯ ಮಡಿಲಿಗೆ ಹೆಣ್ಣು ಮಗು ಆಗಮನವಾಗಿದೆ. ಭಾನುವಾರ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗಳು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಧ್ರುವ- ಪ್ರೇರಣಾ ದಂಪತಿಗೆ ಮಡಿಲು ಸೇರಿದ ಕಂದಮ್ಮ; ಸರ್ಜಾ ಕುಟುಂಬದಲ್ಲಿ ಸಂಭ್ರಮ
ಧ್ರುವ- ಪ್ರೇರಣಾ ದಂಪತಿಗೆ ಮಡಿಲು ಸೇರಿದ ಕಂದಮ್ಮ; ಸರ್ಜಾ ಕುಟುಂಬದಲ್ಲಿ ಸಂಭ್ರಮ (Instagram/ Dhruva Sarja)

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಯ ಮಡಿಲಿಗೆ ಹೆಣ್ಣು ಮಗು ಆಗಮನವಾಗಿದೆ. ಭಾನುವಾರ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗಳು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಪ್ರೇರಣಾ ಹೆರಿಗೆಗೆ ದಿನಾಂಕ ನಿಗದಿಯಾಗಿದ್ದರಿಂದ ಶೂಟಿಂಗ್‌ ಬದಿಗಿರಿಸಿ ಪತ್ನಿ ಜತೆಗಿದ್ದರು. ಶನಿವಾರ ಪ್ರೇರಣಾಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ, ಕೆ.ಆರ್‌ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ನಾರ್ಮಲ್‌ ಹೆರಿಗೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಖುಷಿಯ ವಿಚಾರವನ್ನು ನಟ ಧ್ರುವ ಸರ್ಜಾ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದು, ಮನೆಗೆ ಮಗಳ ಆಗಮನವಾಗಿದೆ. ನಾರ್ಮಲ್‌ ಡೆಲಿವರಿಯಾಗಿದೆ. ಧನ್ಯವಾದಗಳು ಡಾಕ್ಟರ್‌. ಜೈ ಹನುಮಾನ್‌" ಎಂದು ಧ್ರುವ ಪೋಸ್ಟ್‌ ಮಾಡಿದ್ದಾರೆ.

ಇತ್ತ ಅಭಿಮಾನಿ ವಲಯದಲ್ಲಿಯೂ ನೆಚ್ಚಿನ ನಟನ ಖುಷಿ ಸುದ್ದಿಗೆ ಸೋಷಿಯಲ್‌ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೇ ಹರಿಯುತ್ತಿದೆ. 2019ರಲ್ಲಿ ನವೆಂಬರ್‌ 24ರಂದು ಈ ಜೋಡಿಯ ಮದುವೆಯಾಗಿತ್ತು. ಇತ್ತೀಚೆಗಷ್ಟೇ ಅದ್ದೂರಿಯಾಗಿಯೇ ಸೀಮಂತ ಕಾರ್ಯವನ್ನೂ ಮಾಡಲಾಗಿತ್ತು.

<p>ಸೋಷಿಯಲ್‌ ಮೀಡಿಯಾದಲ್ಲಿ ಖುಷಿ ಸುದ್ದಿ ಹಂಚಿಕೊಂಡ ಧ್ರುವ ಸರ್ಜಾ</p>
ಸೋಷಿಯಲ್‌ ಮೀಡಿಯಾದಲ್ಲಿ ಖುಷಿ ಸುದ್ದಿ ಹಂಚಿಕೊಂಡ ಧ್ರುವ ಸರ್ಜಾ
IPL_Entry_Point