Paatal Lok Season 2: ಮತ್ತಷ್ಟು ಥ್ರಿಲ್‌, ಮಗದಷ್ಟು ಕ್ರೈಂ! ಸೀಸನ್‌ 2ರ ಜತೆಗೆ ಆಗಮಿಸುತ್ತಿದೆ ಪಾತಾಳ್‌ ಲೋಕ್‌ ವೆಬ್‌ಸಿರೀಸ್‌
ಕನ್ನಡ ಸುದ್ದಿ  /  ಮನರಂಜನೆ  /  Paatal Lok Season 2: ಮತ್ತಷ್ಟು ಥ್ರಿಲ್‌, ಮಗದಷ್ಟು ಕ್ರೈಂ! ಸೀಸನ್‌ 2ರ ಜತೆಗೆ ಆಗಮಿಸುತ್ತಿದೆ ಪಾತಾಳ್‌ ಲೋಕ್‌ ವೆಬ್‌ಸಿರೀಸ್‌

Paatal Lok Season 2: ಮತ್ತಷ್ಟು ಥ್ರಿಲ್‌, ಮಗದಷ್ಟು ಕ್ರೈಂ! ಸೀಸನ್‌ 2ರ ಜತೆಗೆ ಆಗಮಿಸುತ್ತಿದೆ ಪಾತಾಳ್‌ ಲೋಕ್‌ ವೆಬ್‌ಸಿರೀಸ್‌

Paatal Lok Season 2 First Poster: ಹಿಂದಿಯಲ್ಲಿ ಪಾತಾಳ್‌ ಲೋಕ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆದ ವೆಬ್‌ಸಿರೀಸ್‌ಗಳಲ್ಲೊಂದು. ಮೊದಲ ಸಿರೀಸ್‌ ಮುಗಿದ ಬಳಿಕ, ಎರಡನೇ ಸೀಸನ್‌ ಯಾವಾಗ ಎಂಬ ಪ್ರಶ್ನೆ ಸೋಷಿಯಲ್‌ ಮೀಡಿಯಾದಲ್ಲಿ ಕೇಳಿಬಂದರೂ, ಮೇಕರ್ಸ್‌ ಕಡೆಯಿಂದ ಉತ್ತರ ಸಿಕ್ಕಿರಲಿಲ್ಲ. ಇದೀಗ ಸದ್ದಿಲ್ಲದೆ ಎರಡನೇ ಸೀಸನ್‌ ಘೋಷಣೆ ಮಾಡಿದ್ದಾರೆ.

ಸೀಸನ್‌ 2ರ ಜತೆಗೆ ಆಗಮಿಸುತ್ತಿದೆ ಪಾತಾಳ್‌ ಲೋಕ್‌ ವೆಬ್‌ಸಿರೀಸ್‌
ಸೀಸನ್‌ 2ರ ಜತೆಗೆ ಆಗಮಿಸುತ್ತಿದೆ ಪಾತಾಳ್‌ ಲೋಕ್‌ ವೆಬ್‌ಸಿರೀಸ್‌

Paatal Lok Season 2: ಅಮೆಜಾನ್‌ ಪ್ರೈಂನ ಜನಪ್ರಿಯ ಕ್ರೈಮ್ ಥ್ರಿಲ್ಲರ್ ಸರಣಿ ಪಾತಲ್ ಲೋಕ್ ವೆಬ್‌ಸಿರೀಸ್‌ ಕಡೆಯಿಂದ ಬಿಗ್‌ ಅಪ್‌ಡೇಟ್‌ ಸಿಕ್ಕಿದೆ. ಸದ್ದಿಲ್ಲದೆ ಸೀಸನ್ 2 ಘೋಷಣೆ ಮಾಡಿ, ಒಟಿಟಿ ವೀಕ್ಷಕರಿಗೆ ಸರ್ಪ್ರೈಸ್‌ ನೀಡಿದೆ. ಹಿಂದಿಯಲ್ಲಿ ಪಾತಾಳ್‌ ಲೋಕ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆದ ವೆಬ್‌ಸಿರೀಸ್‌ಗಳಲ್ಲೊಂದು. ಮೊದಲ ಸಿರೀಸ್‌ ಮುಗಿದ ಬಳಿಕ, ಎರಡನೇ ಸೀಸನ್‌ ಯಾವಾಗ ಎಂಬ ಪ್ರಶ್ನೆ ಸೋಷಿಯಲ್‌ ಮೀಡಿಯಾದಲ್ಲಿ ಕೇಳಿಬಂದರೂ, ಮೇಕರ್ಸ್‌ ಕಡೆಯಿಂದ ಉತ್ತರ ಸಿಕ್ಕಿರಲಿಲ್ಲ. ಇದೀಗ ಎರಡನೇ ಸೀಸನ್‌ ಘೋಷಣೆ ಮಾಡಿದ್ದಾರೆ. ಹಾಥಿರಾಮ್‌ ಚೌಧರಿ ಮತ್ತೆ ಆಗಮಿಸುತ್ತಿದ್ದಾರೆ.

ಫಸ್ಟ್‌ ಪೋಸ್ಟರ್‌ ಬಿಡುಗಡೆ

ಪ್ರೈಮ್ ವಿಡಿಯೋ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದೆ. ಪೋಸ್ಟರ್‌ನಲ್ಲಿ ಹಾಥೀರಾಮ್ ಚೌಧರಿ ಅಲಿಯಾಸ್ ಜೈದೀಪ್ ಅಹ್ಲಾವತ್ ಕಾಣಿಸಿಕೊಂಡಿದ್ದಾರೆ. ಹಾಥೀರಾಮನ ಕಣ್ಣುಗಳ ಮುಂದೆ ರಕ್ತ ತೊಟ್ಟಿಕ್ಕುವ ಚಾಕು ಕಂಡಿದೆ. ಬಳಿಕ ಪಾತಾಳ್ ಲೋಕ್, ಹೊಸ ಸೀಸನ್ ಶೀಘ್ರದಲ್ಲೇ ಬರಲಿದೆ ಎಂದಷ್ಟೇ ಕ್ಯಾಪ್ಷನ್‌ ನೀಡಿದೆ. ಯಾವಾಗ ಬರಲಿದೆ ಎಂಬ ಮಾಹಿತಿ ಸದ್ಯಕ್ಕಿಲ್ಲ.

4 ವರ್ಷಗಳ ಬಳಿಕ

ಈ ಹಿಂದೆ ಪ್ರೈಂನಲ್ಲಿ ಮಿರ್ಜಾಪುರ ಸೀಸನ್‌ 3 ಸ್ಟ್ರೀಮ್‌ ಆದ ಬಳಿಕ, ಒಟಿಟಿ ವೀಕ್ಷಕರಲ್ಲಿ ಪಾತಾಳ್‌ ಲೋಕ್‌ ಸಿರೀಸ್‌ ಬಗ್ಗೆ ಅತೀವ ಕುತೂಹಲವಿತ್ತು. ಈ ಸಿರೀಸ್‌ನ ಮೊದಲ ಭಾಗವು 2020ರಲ್ಲಿ ಸ್ಟ್ರೀಮ್‌ ಆಗಿತ್ತು. ಜೈದೀಪ್ ಅಹ್ಲಾವತ್, ಅಭಿಷೇಕ್ ಬ್ಯಾನರ್ಜಿ, ನೀರಜ್ ಕಬಿ, ಗುಲ್ ಪನಾಗ್, ಇಶ್ವಾಕ್ ಸಿಂಗ್, ಸ್ವಸ್ತಿಕಾ ಮುಖರ್ಜಿ ಮತ್ತು ಬೋಧಿಸತ್ವ ಶರ್ಮಾ ಮುಂತಾದ ಕಲಾವಿದರು ಈ ಸಿರೀಸ್‌ನ ಭಾಗವಾಗಿದ್ದರು. ಇದರಲ್ಲಿನ ಹಾಥೀರಾಮ್ ಚೌಧರಿ ಮತ್ತು ಹತೋಡಿ ತ್ಯಾಗಿ ಕಾಂಬಿನೇಷನ್‌ ಮೆಚ್ಚುಗೆ ಪಡೆದಿತ್ತು.

ಶೀಘ್ರದಲ್ಲಿ ರಿಲೀಸ್‌ ದಿನಾಂಕ ಬಹಿರಂಗ 

ಹತೋಡಿ ತ್ಯಾಗಿ ಪಾತ್ರ ಮೊದಲ ಸೀಸನ್‌ ಕೊನೆಯಲ್ಲಿ ಅಂತ್ಯವಾಗುತ್ತಿದ್ದಂತೆ, ಎರಡನೇ ಸೀಸನ್‌ನಲ್ಲಿ ಏನಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಹಿಂದೆ ಸಂದರ್ಶನಗಳಲ್ಲಿಯೂ ಮೊದಲ ಭಾಗಕ್ಕಿಂತ ಎರಡನೇ ಸೀಸನ್‌ ಹೆಚ್ಚು ಭಯಾನಕವಾಗಿರಲಿದೆ ಎಂದಿದ್ದರು. ಅದರಂತೆ ಈಗ ಎರಡನೇ ಸೀಸನ್‌ ಘೋಷಣೆ ಆಗುತ್ತಿದ್ದಂತೆ, ವೀಕ್ಷಕ ವಲಯದಿಂದಲೂ ತರಹೇವಾರಿ ಕಾಮೆಂಟ್‌ಗಳು ಆಗಮಿಸುತ್ತಿವೆ. "ಇಷ್ಟೊಂದು ವರ್ಷಗಳ ಕಾಲ ಕಾಯಿಸಿದ್ದು ಎಷ್ಟು ಸರಿ? ಎಂದರೆ, ಇನ್ನು ಕೆಲವರು, ಆದಷ್ಟು ಬೇಗ ರಿಲೀಸ್‌ ದಿನಾಂಕ ಹೇಳಿ ಎಂದೂ ಕಾಮೆಂಟಿಸುತ್ತಿದ್ದಾರೆ.

Whats_app_banner