Sudeep Met Shikhar Dhawan: ಕಿಚ್ಚ ಸುದೀಪ್ - ಶಿಖರ್ ಧವನ್ ಭೇಟಿ...ವೈರಲ್ ಆಗ್ತಿವೆ ಅಪರೂಪದ ಫೋಟೋಗಳು
ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಅಪರೂಪದ ಫೋಟೋಗಳನ್ನು ನೋಡಿ ಅಭಿಮಾನಿಗಳು ಸಂತೋಷದಿಂದ ಕಮೆಂಟ್ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ನಡೆಯಲಿರುವ ಕೆಸಿಎಲ್ ಪಂದ್ಯಗಳನ್ನು ನೋಡಲು ಶಿಖರ್ ಧವನ್ ಅವರನ್ನು ಆಹ್ವಾನಿಸಿ ಎಂದು ಮನವಿ ಮಾಡುತ್ತಿದ್ದಾರೆ.
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಸದ್ಯಕ್ಕೆ ಕೆಸಿಎಲ್ 3ರ ತಯಾರಿಯಲ್ಲಿದ್ದಾರೆ. ಕರ್ನಾಟಕ ಚಲನಚಿತ್ರ ಕಪ್‌ನ ಮೂರನೇ ಸೀಸನ್ ಫೆಬ್ರವರಿ 11 ಮತ್ತು 12 ರಂದು ಮೈಸೂರಿನಲ್ಲಿ ನಡೆಯುತ್ತಿದೆ. ಈ ನಡುವೆ ಸುದೀಪ್ ಖ್ಯಾತ ಕ್ರಿಕೆಟರ್ ಶಿಖರ್ ಧವನ್ ಅವರನ್ನು ಭೇಟಿ ಮಾಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಶಿಖರ್ ಧವನ್ ಜೊತೆಗಿನ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸುದೀಪ್, ''ಎಂತಹ ಅದ್ಭುತ ವ್ಯಕ್ತಿಯೊಂದಿಗೆ ಪರಿಪೂರ್ಣ ಸಮಯ ಕಳೆದಿದ್ದೇನೆ. ಮುಂಬರುವ ಐಪಿಎಲ್‌ಗಾಗಿ ನನ್ನ ಸಹೋದರ ಶಿಖರ್ ಧವನ್‌ಗೆ ಶುಭ ಕೋರುತ್ತಿದ್ದೇನೆ'' ಎಂದು ಕಿಚ್ಚ ಬರೆದುಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಅಪರೂಪದ ಫೋಟೋಗಳನ್ನು ನೋಡಿ ಅಭಿಮಾನಿಗಳು ಸಂತೋಷದಿಂದ ಕಮೆಂಟ್ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ನಡೆಯಲಿರುವ ಕೆಸಿಎಲ್ ಪಂದ್ಯಗಳನ್ನು ನೋಡಲು ಶಿಖರ್ ಧವನ್ ಅವರನ್ನು ಆಹ್ವಾನಿಸಿ ಎಂದು ಮನವಿ ಮಾಡುತ್ತಿದ್ದಾರೆ.
ಸುದೀಪ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಕಳೆದ ವರ್ಷ ಕಿಚ್ಚ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ತೆರೆ ಕಂಡಿತ್ತು. ಸುದೀಪ್ ಸದ್ಯಕ್ಕೆ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಉಪೇಂದ್ರ ಜೊತೆ ಕಿಚ್ಚ ನಟಿಸಿರುವ 'ಕಬ್ಜ' ಸಿನಿಮಾ ಮಾರ್ಚ್ 17, ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ತೆರೆ ಕಾಣುತ್ತಿದೆ. ರಿಯಲ್ ಸ್ಟಾರ್ ಹಾಗೂ ಅಭಿನಯ ಚಕ್ರವರ್ತಿ ಇಬ್ಬರನ್ನೂ ಒಟ್ಟಿಗೆ ತೆರೆ ಮೇಲೆ ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ.
ಇತ್ತೀಚೆಗೆ ಹಾರ್ದಿಕ್ ಪಾಂಡ್ಯಾ ಭೇಟಿ ಮಾಡಿದ್ದ ಯಶ್
ಕೆಲವು ದಿನಗಳ ಹಿಂದೆ ನಟ ಯಶ್ ಟೀಂ ಇಂಡಿಯಾದ ಆಟಗಾರರಾದ ಪಾಂಡ್ಯ ಸಹೋದರರನ್ನು ಭೇಟಿ ಮಾಡಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಟ ಯಶ್ ಸಿನಿಮಾ ಸಂಬಂಧಿ ಕೆಲಸಗಳಿಗೆ ಕರ್ನಾಟಕ ಮಾತ್ರವಲ್ಲ ಹೈದರಾಬಾದ್, ಮುಂಬೈ ಹಾಗೂ ಇನ್ನಿತರ ಸ್ಥಳಗಳಿಗೆ ವಿಸಿಟ್ ಮಾಡುತ್ತಿದ್ದಾರೆ. ಈ ನಡುವೆ ಅವರು ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಫೋಟೋವನ್ನು ಹಾರ್ದಿಕ್ ಪಾಂಡ್ಯ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ 'ಕೆಜಿಎಫ್ 3' ಎಂಬ ಕ್ಯಾಪ್ಶನ್ ನೀಡಿದ್ದರು.
ಮತ್ತಷ್ಟು ಮನರಂಜನೆ ಸುದ್ದಿಗಳು ಇಲ್ಲಿವೆ
ಭಾರತದ ಭೂಪಟಕ್ಕೆ ಅವಮಾನಿಸಿದ್ರಾ ಅಕ್ಷಯ್ ಕುಮಾರ್...ಹೊಸ ಜಾಹೀರಾತಿನ ಬಗ್ಗೆ ನೆಟಿಜನ್ಸ್ ಗರಂ
ಪಾನ್ ಮಸಾಲ ಜಾಹೀರಾತಿಗಾಗಿ ಶಾರುಖ್ ಖಾನ್ ಹಾಗೂ ಅಜಯ್ ದೇವ್ಗನ್ ಇಬ್ಬರನ್ನೂ ಜನರು ತರಾಟೆಗೆ ತೆಗೆದುಕೊಂಡಿದ್ದರು. ನಂತರ ಅದೇ ಜಾಹೀರಾತಿನಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದರು. ಇದೀಗ ಹೊಸ ಜಾಹೀರಾತಿನ ವಿಚಾರವಾಗಿ ಮತ್ತೆ ಅಕ್ಷಯ್ ಕುಮಾರ್ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಪೂರ್ತಿ ಸ್ಟೋರಿಗೆ ಇಲ್ಲಿ ಕ್ಲಿಕ್ ಮಾಡಿ.
ಶತದಿನೋತ್ಸವ ಕಾರ್ಯಕ್ರಮದಲ್ಲಿ 'ಕಾಂತಾರ' ಪ್ರೀಕ್ವೆಲ್ ಬಗ್ಗೆ ಮಾಹಿತಿ ನೀಡಿದ ರಿಷಬ್ ಶೆಟ್ಟಿ
ಕಾಂತಾರದ ಗೆಲುವು ಖುಷಿ ಕೊಟ್ಟಿದೆ. ಮೊದಲು ಕಾರ್ತಿಕ್ ಗೌಡ ನಂತರ ವಿಜಯ್ ಸರ್ ಬಳಿ ಚಿತ್ರದ ಕಥೆ ಹೇಳಿದೆ. ತಕ್ಷಣ ಒಪ್ಪಿ, ಸಿನಿಮಾವನ್ನು ನಿರ್ಮಿಸಲು ಒಪ್ಪಿಗೆ ನೀಡಿದರು. ಈ ಸಿನಿಮಾವನ್ನು ನಾನು ಅಂದುಕೊಂಡಂತೆ ತರಲು ಸಂಪೂರ್ಣ ಸಹಕಾರ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ನಾನು ಆಭಾರಿ. ಸಂಪೂರ್ಣ ಮಾಹಿತಿಗೆ ಈ ಲಿಂಕ್ ಒತ್ತಿ.