ಬಹುಭಾಷಾ ನಟ ಮುಕುಲ್‌ ದೇವ್‌ ನಿಧನ: ಕನ್ನಡದ ರಜನಿ, ನಾಗರಹಾವು ಸಿನಿಮಾಗಳಲ್ಲಿ ನಟಿಸಿದ್ದ ಖಳನಾಯಕ ಇನ್ನು ನೆನಪು
ಕನ್ನಡ ಸುದ್ದಿ  /  ಮನರಂಜನೆ  /  ಬಹುಭಾಷಾ ನಟ ಮುಕುಲ್‌ ದೇವ್‌ ನಿಧನ: ಕನ್ನಡದ ರಜನಿ, ನಾಗರಹಾವು ಸಿನಿಮಾಗಳಲ್ಲಿ ನಟಿಸಿದ್ದ ಖಳನಾಯಕ ಇನ್ನು ನೆನಪು

ಬಹುಭಾಷಾ ನಟ ಮುಕುಲ್‌ ದೇವ್‌ ನಿಧನ: ಕನ್ನಡದ ರಜನಿ, ನಾಗರಹಾವು ಸಿನಿಮಾಗಳಲ್ಲಿ ನಟಿಸಿದ್ದ ಖಳನಾಯಕ ಇನ್ನು ನೆನಪು

ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದ ಮುಕುಲ್‌ ದೇವ್‌ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಇವರು ಕನ್ನಡ ನಟ ಉಪೇಂದ್ರ ಜತೆ ರಜನಿ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದರು.

ಬಹುಭಾಷಾ ನಟ ಮುಕುಲ್‌ ದೇವ್‌ ನಿಧನ
ಬಹುಭಾಷಾ ನಟ ಮುಕುಲ್‌ ದೇವ್‌ ನಿಧನ

ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದ ಮುಕುಲ್‌ ದೇವ್‌ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಇವರು ಕನ್ನಡ ನಟ ಉಪೇಂದ್ರ ಜತೆ ರಜನಿ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದರು. ಇವರಿಗೆ ದೆಹಲಿಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕನ್ನಡದ ನಾಗರಹಾವು ಸಿನಿಮಾದಲ್ಲಿಯೂ ಇವರು ನಟಿಸಿದ್ದರು.

"ನನ್ನ ಸಹೋದರ ಮುಕುಲ್‌ ದೇವ್‌ ಅವರಿಗೆ ಶಾಂತಿ ಸಿಗಲಿ! ನಿಮ್ಮೊಂದಿಗೆ ಕಳೆದ ಸಮಯ ಯಾವಾಗಲೂ ಅಮೂಲ್ಯವಾಗಿರುತ್ತದೆ. SonOfSardaar2 ನಿಮ್ಮ ಹಂಸಗೀತೆ, ಇದರ ಮೂಲಕ ಜನರಿಗೆ ಸಂತೋಷ ಮತ್ತು ಖುಷಿ ಹಂಚುವಿರಿ. ಅವರೆಲ್ಲರನ್ನು ನಗಿಸುವಿರಿ" ಎಂದು ವಿಂದು ದಾರಾ ಸಿಂಗ್ ಟ್ವೀಟ್ ಮಾಡಿದ್ದಾರೆ.

"ತನ್ನ ಹೆತ್ತವರ ಸಾವಿನ ನಂತರ ಮುಕುಲ್ ತನ್ನಷ್ಟಕ್ಕೆ ಇದ್ದ. ಅವನ ಜೀವನ ಅವನೇ ನೋಡಿಕೊಳ್ಳುತ್ತಿದ್ದ. ಕಳೆದ ಕೆಲವು ದಿನಗಳಲ್ಲಿ ಅವನ ಆರೋಗ್ಯ ಹದಗೆಟ್ಟಿತ್ತು. ಅವನು ಆಸ್ಪತ್ರೆಯಲ್ಲಿದ್ದನು. ಅವನನ್ನು ಇಷ್ಟಪಟ್ಟ ಎಲ್ಲರಿಗೂ ನನ್ನ ಸಂತಾಪಗಳು. ಅವನು ಅದ್ಭುತ ವ್ಯಕ್ತಿ. ನಾವೆಲ್ಲರೂ ಅವನನ್ನು ಮಿಸ್ ಮಾಡಿಕೊಳ್ಳುತ್ತೇವೆ. ಎಂದು ಅವರು ಹೇಳಿದ್ದಾರೆ.

ನಟನ ಸಾವಿಗೆ ಖ್ಯಾತ ನಟ ಮನೋಜ್ ಬಾಜಪೇಯಿ ಸಂತಾಪ ವ್ಯಕ್ತಪಡಿಸಿದ್ದಾರೆ. "ನನಗಾಗುತ್ತಿರುವ ನೋವುಗಳನ್ನು ಪದಗಳಲ್ಲಿ ಹೇಳಲು ಅಸಾಧ್ಯ. ಮುಕುಲ್ ಒಬ್ಬ ಸಹೋದರ, ಕಲಾವಿದ, ಅವರ ಉತ್ಸಾಹ ಅಪ್ರತಿಮ. ಅವರು ತುಂಬಾ ಬೇಗನೆ ನಿಧನರಾದರು. ತುಂಬಾ ಚಿಕ್ಕವರಾಗಿದ್ದರು. ಅವರ ಕುಟುಂಬ ಮತ್ತು ಈ ನಷ್ಟದಿಂದ ದುಃಖಿಸುತ್ತಿರುವ ಎಲ್ಲರಿಗೂ ದುಃಖ ಸಹಿಸಿಕೊಳ್ಳುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಮೇರಿ ಜಾನ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾವು ಮತ್ತೆ ಭೇಟಿಯಾಗುವವರೆಗೆ, ಓಂ ಶಾಂತಿ" ಎಂದು ಮನೋಜ್ ಬಾಜಪೇಯಿ ಟ್ವೀಟ್ ಮಾಡಿದ್ದಾರೆ.

ಮುಕುಲ್ ದೇವ್ ಅವರು 1970ರ ಸೆಪ್ಟೆಂಬರ್‌ 17ರಂದು ನವದೆಹಲಿಯಲ್ಲಿ ಜನಿಸಿದರು. ಹಿಂದಿ, ಪಂಜಾಬಿ, ತೆಲುಗು, ತಮಿಳು, ಕನ್ನಡ, ಬಂಗಾಳಿ ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. 1996 ರಲ್ಲಿ ಮಮ್ಕಿನ್ ಎಂಬ ಟಿವಿ ಸರಣಿಯಲ್ಲಿ ವೃತ್ತಿ ಆರಂಭಿಸಿದ್ದರು. ಅದೇ ವರ್ಷ ಸುಶ್ಮಿತಾ ಸೇನ್ ಅವರೊಂದಿಗೆ ದಸ್ತಕ್ ಚಿತ್ರದಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು.ಇವರು ಉಪೇಂದ್ರ ಅಭಿನಯದ ರಜನಿ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದರು. ನಾಗರಹಾವು ಎಂಬ ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರೆ. ವಿವಿಧ ಭಾಷೆಗಳಲ್ಲಿ ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in