Prakash Raj: ಗೆಲ್ಲುವ ಮೊದಲು 'ಜನ ಸೇನಾನಿ', ಗೆದ್ದ ನಂತರ 'ಭಜನಾ ಸೇನಾನಿʼ, ನಟ ಪ್ರಕಾಶ್ ರಾಜ್- ಪವನ್ ಕಲ್ಯಾಣ್ ವಾಕ್ಸಮರ
Prakash Raj-Pawan Kalyan: ಗೆಲ್ಲುವ ಮೊದಲು 'ಜನ ಸೇನಾನಿ', ಗೆದ್ದ ನಂತರ 'ಭಜನಾ ಸೇನಾನಿʼ ಎಂದು ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಈ ಪವನ್ ಕಲ್ಯಾಣ್‌ಗೆ ಟಾಂಗ್ ನೀಡಿದ್ದಾರೆ. ಪವನ್ ಕಲ್ಯಾಣ್ ನೀಡಿರುವ ಎರಡು ವಿರೋಧಾಭಾಸದ ಹೇಳಿಕೆಗಳನ್ನು ಈ ಟ್ವೀಟ್ ಜತೆಗ ಪ್ರಕಾಶ್ ರಾಜ್ ಅಪ್ಲೋಡ್ ಮಾಡಿದ್ದಾರೆ.

ಗೆಲ್ಲುವ ಮೊದಲು 'ಜನ ಸೇನಾನಿ', ಗೆದ್ದ ನಂತರ 'ಭಜನಾ ಸೇನಾನಿʼ ಎಂದು ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಈ ಪವನ್ ಕಲ್ಯಾಣ್‌ಗೆ ಟಾಂಗ್ ನೀಡಿದ್ದಾರೆ. ಪವನ್ ಕಲ್ಯಾಣ್ ನೀಡಿರುವ ಎರಡು ವಿರೋಧಾಭಾಸದ ಹೇಳಿಕೆಗಳನ್ನು ಈ ಟ್ವೀಟ್ ಜತೆಗ ಪ್ರಕಾಶ್ ರಾಜ್ ಅಪ್ಲೋಡ್ ಮಾಡಿದ್ದಾರೆ. ಹಿಂದೊಮ್ಮೆ ಪವನ್ ಕಲ್ಯಾಣ್ "ಉತ್ತರ ಭಾರತದ ರಾಜಕೀಯ ನಾಯಕರು ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು" ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು. ಇತ್ತೀಚೆಗೆ ಪವನ್ ಕಲ್ಯಾಣ್ ಅವರ ಟ್ವೀಟ್ ಇದಕ್ಕೆ ವಿರುದ್ಧವಾಗಿತ್ತು. ಇದಕ್ಕೆ ಪ್ರಕಾಶ್ ರಾಜ್ ಅವರು ಗೆಲ್ಲುವ ಮೊದಲು 'ಜನ ಸೇನಾನಿ', ಗೆದ್ದ ನಂತರ 'ಭಜನಾ ಸೇನಾನಿʼ ಎಂದು ಟಾಂಗ್ ನೀಡಿದ್ದಾರೆ.
ಪ್ರಕಾಶ್ ರಾಜ್ ಎಕ್ಸ್‌ನಲ್ಲಿ ಮಾಡಿದ ಟ್ವೀಟ್
ಈ ಎಲ್ಲಾ ವಾಕ್ಸಮರ ಇತ್ತೀಚಿನ ಹಿಂದಿ ಹೇರಿಕೆ ಕುರಿತಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ದೇವನಾಗರಿ ಲಿಪಿಯ ರೂಪಾಯಿ ಪರಿಚಯಿಸಿದ್ದರು. ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ಕುರಿತು ಪರ ವಿರೋಧ ಚರ್ಚೆಯಾಗುತ್ತಿದೆ. ಈ ಕುರಿತು ಪವನ್ ಕಲ್ಯಾಣ್ ನಿಲುವಿನ ಕುರಿತು ನಟ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ.
ಪ್ರಕಾಶ್ ರಾಜ್ ಮತ್ತು ಪವನ್ ಕಲ್ಯಾಣ್ ವಾಕ್ಸಮರ
ಪವನ್ ಕಲ್ಯಾಣ್ ಹೇಳಿದ್ದೇನು?: ಹಿಂದಿ ಭಾಷೆಯನ್ನು ನಾನು ಎಂದಿಗೂ ವಿರೋಧ ಮಾಡಿಲ್ಲ. ಆದರೆ, ಅದನ್ನು ಕಡ್ಡಾಯ ಮಾಡುವ ಕುರಿತು ನನ್ನ ವಿರೋಧವಿದೆ. ಎನ್‌ಇಪಿ ಹಿಂದಿ ಹೇರಿಕೆಯನ್ನು 2020ರಲ್ಲಿ ಮಾಡಿಲ್ಲ. ಈ ಕುರಿತು ತಪ್ಪು ಮಾಹಿತಿ ಹರಡಲಾಗುತ್ತದೆ. ಇದು ಜನರ ದಾರಿ ತಪ್ಪಿಸುವ, ದಿಕ್ಕು ತಪ್ಪಿಸುವ ಕಾರ್ಯ ಹೊರತು ಬೇರೆ ಏನೂ ಅಲ್ಲ.
ರಾಷ್ಟ್ರೀಯ ಶಿಕ್ಷಣ ನೀತಿ ಸ್ಪಷ್ಟವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ ವಿದ್ಯಾರ್ಥಿಯು ಎರಡು ಭಾಷೆಗಳನ್ನು ಕಲಿಯಲು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ಇದರಲ್ಲಿ ಫಾರಿನ್ ಲ್ಯಾಂಗ್ವೇಜ್‌ಗಳೂ ಸೇರಿವೆ. ಹಿಂದಿ ಕಲಿಯಲು ಆಸಕ್ತಿ ಇಲ್ಲದೆ ಇದ್ದರೆ ಕನ್ನಡ, ತೆಲುಗು, ಮಲಯಾಳಂ, ಮರಾಠಿ, ಸಂಸ್ಕೃತ ಮುಂತಾದ ಯಾವುದೇ ಭಾರತೀಯ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಪವನ್ ಕಲ್ಯಾಣ್ ಹೇಳಿದ್ದರು. ಇದು ಭಾರತದ ಒಗ್ಗಟ್ಟನ್ನು ಬೆಸೆಯುವ ಆಯ್ಕೆ. ಭಾರತದ ಭಾಷಾ ವೈವಿಧ್ಯತೆಗೆ ಪೂರಕವಾಗಿರುವ ನೀತಿ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಪ್ರಕಾಶ್ ರಾಜ್ ಹೇಳಿಕೆ: ಹಿಂದಿ ಭಾಷೆಯನ್ನು ಹೇರಿಕೆ ಮಾಡಬೇಡಿ ಎನ್ನುವುದು ಬೇರೊಂದು ಭಾಷೆಯನ್ನು ದ್ವೇಷ ಮಾಡಿದಂತೆ ಅಲ್ಲ. ಇದು ನಮ್ಮ ಮಾತೃಭಾಷೆಯನ್ನು ಕಾಪಾಡುವ. ನಮ್ಮ ಪರಂಪರೆಯನ್ನು ಆತ್ಮ ಗೌರವದೊಂದಿಗೆ ಕಾಪಾಡುವ ಕೆಲಸವಾಗಿದೆ. ಇನ್ನು ಪವನ್‌ಕಲ್ಯಾಣ್‌ಗೆ ಯಾರಾದರೂ ತಿಳಿಸಿಕೊಡಿ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದರು. ಇದೀಗ ಗೆಲ್ಲುವ ಮೊದಲು 'ಜನ ಸೇನಾನಿ', ಗೆದ್ದ ನಂತರ 'ಭಜನಾ ಸೇನಾನಿʼ ಎಂದು ಮತ್ತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
