Saif Ali Khan: ಚಾಕು ಇರಿತದ ಐದು ದಿನಗಳ ಬಳಿಕ ಲೀಲಾವತಿ ಆಸ್ಪತ್ರೆಯಿಂದ ಮನೆಗೆ ಮರಳಲಿರುವ ಸೈಫ್ ಅಲಿ ಖಾನ್; ಇಲ್ಲಿದೆ ಹೆಲ್ತ್‌ ಅಪ್‌ಡೇಟ್‌
ಕನ್ನಡ ಸುದ್ದಿ  /  ಮನರಂಜನೆ  /  Saif Ali Khan: ಚಾಕು ಇರಿತದ ಐದು ದಿನಗಳ ಬಳಿಕ ಲೀಲಾವತಿ ಆಸ್ಪತ್ರೆಯಿಂದ ಮನೆಗೆ ಮರಳಲಿರುವ ಸೈಫ್ ಅಲಿ ಖಾನ್; ಇಲ್ಲಿದೆ ಹೆಲ್ತ್‌ ಅಪ್‌ಡೇಟ್‌

Saif Ali Khan: ಚಾಕು ಇರಿತದ ಐದು ದಿನಗಳ ಬಳಿಕ ಲೀಲಾವತಿ ಆಸ್ಪತ್ರೆಯಿಂದ ಮನೆಗೆ ಮರಳಲಿರುವ ಸೈಫ್ ಅಲಿ ಖಾನ್; ಇಲ್ಲಿದೆ ಹೆಲ್ತ್‌ ಅಪ್‌ಡೇಟ್‌

ಚಾಕು ಇರಿತದ ಐದು ದಿನಗಳ ನಂತರ ನಟ ಸೈಫ್ ಅಲಿ ಖಾನ್ ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಪಡೆದು ಆಸ್ಪತ್ರೆಯಲ್ಲಿ ಕೆಲ ದಿನ ಉಳಿದುಕೊಂಡು ಆರೋಗ್ಯ ಸುಧಾರಣೆಯನ್ನು ಗಮನಿಸಿ ಅವರು ಮನೆಗೆ ಮರಳಲಿದ್ದಾರೆ.

ಐದು ದಿನಗಳ ಬಳಿಕ ಮನೆಗೆ ಮರಳಲಿರುವ ನಟ ಸೈಫ್ ಅಲಿ ಖಾನ್
ಐದು ದಿನಗಳ ಬಳಿಕ ಮನೆಗೆ ಮರಳಲಿರುವ ನಟ ಸೈಫ್ ಅಲಿ ಖಾನ್ (REUTERS)

ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಇರಿತಕ್ಕೊಳಗಾಗಿದ್ದ ನಟ ಸೈಫ್ ಅಲಿ ಖಾನ್ ಐದು ದಿನಗಳ ನಂತರ ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ. 54 ವರ್ಷದ ಸೈಫ್ ಅಲಿ ಖಾನ್ ಅವರಿಗೆ ಇರಿತದ ಗಾಯಗಳಾಗಿದ್ದು, ನಂತರ ಅವರು ಲೀಲಾವತಿ ಆಸ್ಪತ್ರೆಯಲ್ಲಿ ಐದು ಗಂಟೆಗಳ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆರು ಗಾಯಗಳಾಗಿದ್ದು ಎರಡು, ಮೂರು ಗಾಯಗಳು ತುಂಬಾ ಆಳವಾಗಿದ್ದವು ಎಂಬ ಮಾಹಿತಿ ಇದೆ. ಅವರು ಆಸ್ಪತ್ರೆಗೆ ಸೇರಿದ ದಿನವೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅದಾದ ಬಳಿಕ ಅವರನ್ನು ಐಸಿಯುದಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಈಗ ಮನೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಟಿ ಕರೀನಾ ಕಪೂರ್ ಬಾಂದ್ರಾದಲ್ಲಿರುವ ತಮ್ಮ ನಿವಾಸದಿಂದ ಲೀಲಾವತಿ ಆಸ್ಪತ್ರೆಗೆ ತೆರಳಿದ್ದಾರೆ. ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿಖರ ಸಮಯ ಇನ್ನೂ ತಿಳಿದುಬಂದಿಲ್ಲ. ಶಸ್ತ್ರಚಿಕಿತ್ಸೆಯ ನಂತರ, ಸೈಫ್ ಅಲಿ ಖಾನ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಚಾಕು ದಾಳಿಯಲ್ಲಿ ನಟನಿಗೆ ಗಾಯಗಳಾಗಿವೆ ಎಂದು ಬಹಿರಂಗಪಡಿಸಿದ್ದರು. ಅವರ ಕೈಯಲ್ಲಿ ಎರಡು ಮತ್ತು ಕುತ್ತಿಗೆಯ ಬಲಭಾಗದಲ್ಲಿ ಒಂದು, ಅತ್ಯಂತ ತೀವ್ರವಾದ ಗಾಯವಾಗಿತ್ತು ಎಂದು ತಿಳಿಸಿದ್ದರು. ಒಂದು ಗಾಯ ಬೆನ್ನುಮೂಳೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗಿತ್ತು.

ಗುಣಮುಖನಾಗುತ್ತಿರುವ ನಟ

ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಬೆನ್ನುಮೂಳೆಯಲ್ಲಿದ್ದ ಚಾಕುವಿನ 2.5 ಇಂಚಿನ ತುಂಡನ್ನು ತೆಗೆದುಹಾಕಿದ್ದರು ಮತ್ತು ಅಲ್ಲಿ ಉಂಟಾದ ಹಾನಿಯನ್ನು ಸರಿಪಡಿಸಲಾಗಿತ್ತು. ಸೈಫ್ ಅಲಿ ಖಾನ್ ಚೆನ್ನಾಗಿ ಚೇತರಿಸಿಕೊಂಡರು. ದಾಳಿಯ ಮರುದಿನ ಜನವರಿ 17ರಂದು ತೀವ್ರ ನಿಗಾ ಘಟಕದಿಂದ (ಐಸಿಯು) ವಿಶೇಷ ಕೋಣೆಗೆ ಸ್ಥಳಾಂತರಿಸಲಾಗಿತ್ತು. ಆಗ ವೈದ್ಯರು ಸೈಫ್‌ ಅಲಿ ಖಾನ್ ನಿಜ ಜೀವನದಲ್ಲಿಯೂ ಹೀರೋ ಎಂದು ಹೊಗಳಿದ್ದರು.

ಮುಂಬೈ, ಜನವರಿ 19ರಂದು ನಟ ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದ ಆರೋಪದ ಮೇಲೆ 30 ವರ್ಷದ ಬಾಂಗ್ಲಾದೇಶಿ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ ಎಂದು ಗುರುತಿಸಲಾಗಿದೆ.

ಕಳ್ಳನಿಗೆ ತಾನು ಯಾರ ಮನೆಗೆ ನುಗ್ಗಿದ್ದೇನೆ ಎಂದೇ ತಿಳಿದಿರಲಿಲ್ಲ

ಏಳು ತಿಂಗಳ ಹಿಂದೆ ಭಾರತಕ್ಕೆ ಪ್ರವೇಶಿಸಿದ ನಂತರ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದ. ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಾರೆಯೇ ಎಂದು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆ ವ್ಯಕ್ತಿಗೆ ತಾನು ಬಾಲಿವುಡ್ ತಾರೆಯ ಮನೆಗೆ ಪ್ರವೇಶಿಸಿದ್ದೇನೆ ಎಂದು ತಿಳಿದಿರಲಿಲ್ಲ ಅವನ ಉದ್ದೇಶ ಕಳ್ಳತನವಾಗಿತ್ತು.

ಆರೋಪಿಯು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಮತ್ತು ಹೌಸ್ ಕೀಪಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಡಾಕ್ಟರ್ ಹೇಳಿದ ಮಾತು

ಲೀಲಾವತಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀರಜ್ ಉತ್ತಮಿ, “ಸೈಫ್ ಅಲಿ ಖಾನ್ ನಿಜವಾದ ಹೀರೋ, ಅವರು ಚೆನ್ನಾಗಿದ್ದಾರೆ.. ಆರೋಗ್ಯದಲ್ಲಿ ಸುಧಾರಣೆ ಇದೆ. ಅವರನ್ನು ಐಸಿಯುನಿಂದ ಸಾಮಾನ್ಯ ಕೋಣೆಗೆ ಸ್ಥಳಾಂತರಿಸಲಾಗಿದೆ" ಎಂದು ಹೇಳಿದ್ದಾರೆ. ಲೀಲಾವತಿ ಆಸ್ಪತ್ರೆಯ ವೈದ್ಯರೊಬ್ಬರಿಂದ ಪಡೆದ ಮಾಹಿತಿಯ ಪ್ರಕಾರ, ನಟನ ಕುಟುಂಬದೊಂದಿಗೆ ಚರ್ಚಿಸಿದ ನಂತರ ವೈದ್ಯಕೀಯ ತಂಡವು ಸೈಫ್‌ ಅಲಿ ಖಾನ್‌ರವರನ್ನು ಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲು ನಿರ್ಧರಿಸಿತು ಎಂಬ ಮಾಹಿತಿ ನೀಡಿದ್ದರು

Whats_app_banner