Upendra on Election: ಎಲೆಕ್ಷನ್ ರಿಸಲ್ಟ್‌ಗೆ 2 ದಿನ ಬೇಕಾ ಎಂದ ಉಪ್ಪಿ.. ಜನರ ಕಮೆಂಟ್ ನೋಡಿ ಮತ್ತೊಂದು ಸವಾಲ್ ಹಾಕಿದ ಯುಪಿಪಿ ಸಂಸ್ಥಾಪಕ
ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ? ಏಕೆಂದು ಬಲ್ಲವರು ತಿಳಿಸುತ್ತೀರಾ ? ಎಂದು ಉಪ್ಪಿ ಪ್ರಶ್ನಿಸಿದ್ದಾರೆ. ಉಪೇಂದ್ರ ಪೋಸ್ಟ್‌ಗೆ 700ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆಗಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಎಲೆಕ್ಷನ್ ದಿನಾಂಕ ಘೋಷಣೆ ಆಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪಕ್ಷಗಳು ಬಹಿರಂಗ ಪ್ರಚಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಚುನಾವಣೆ ಫಲಿತಾಂಶ ಪ್ರಕಟಿಸಲು 2 ದಿನಗಳು ಬೇಕಾ ಎಂದ ಉಪ್ಪಿ
ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದಿಂದ ಕೂಡಾ ಈ ಬಾರಿ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ಈ ನಡುವೆ ಮತದಾನ ಹಾಗೂ ಕೌಂಟಿಗ್ ವಿಚಾರವಾಗಿ ಉಪೇಂದ್ರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಜನರಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆದರೆ ಉಪ್ಪಿ ಪ್ರಶ್ನೆಗೆ ಜನರು ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ? ಏಕೆಂದು ಬಲ್ಲವರು ತಿಳಿಸುತ್ತೀರಾ ? ಎಂದು ಉಪ್ಪಿ ಪ್ರಶ್ನಿಸಿದ್ದಾರೆ. ಉಪೇಂದ್ರ ಪೋಸ್ಟ್‌ಗೆ 700ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.
ಅತಿ ಬುದ್ಧಿವಂತಿಕೆ ದಡ್ಡತನದ ಪರಮಾವಧಿ. ಸಿನಿಮಾ ಶೂಟಿಂಗ್ ಮುಗಿದ ದಿನವೇ ರಿಲೀಜ್ ಮಾಡ್ತಿರಾ? ಎಂದು ಒಬ್ಬರು ನೆಟಿಜನ್ ಮರುಪ್ರಶ್ನೆ ಹಾಕಿದ್ದಾರೆ. ಉಪೇಂದ್ರ ಅವರೇ, ಯಾಕ್ರೀ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಜನರಲ್ಲಿ ಗೊಂದಲ ಮೂಡಿಸುತ್ತೀರಾ? ಮತ ಎಣಿಕೆ ಮಾಡಲು ಬೇಕಾದ ಭದ್ರತೆ, ಲೆಕ್ಕಾಚಾರಕ್ಕೆ ಕಾಗದ ಪತ್ರ, ಸಿಬ್ಬಂದಿ-ಭದ್ರತಾ ಪಡೆಗಳ ವರ್ಗಾವಣೆ ಸೇರಿದಂತೆ ನೂರಾರು ಪ್ರೊಟೊಕಾಲ್‌ಗಳಿರುತ್ತದೆ. ಅದನ್ನೆಲ್ಲಾ ಮಾಡಲು ಎರಡು ದಿನಗಳು ಬೇಕಾಗುತ್ತದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಜನರಿಗೆ ಮತ್ತೊಂದು ಸವಾಲ್ ಹಾಕಿದ ಉಪೇಂದ್ರ
ತಮ್ಮ ಪ್ರಶ್ನೆಗೆ ಜನರು ಬೈಯ್ತು ಕಮೆಂಟ್ ಮಾಡಿರುವುದಕ್ಕೆ ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ಉಪ್ಪಿ, ಡಿಜಿಟಲ್ ವೋಟಿಂಗ್ ಅಲ್ವಾ ? ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ….ಅಬ್ಬಬ್ಬಾ ಏನು ಕಾಮೆಂಟ್ಸ್‌ಗಳು ?! ವಾರೆ ವಾಹ್, ವ್ಯಾಪಾರಿ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂಬಾಲಕರು ಎಂದು ಸವಾಲ್ ಹಾಕಿದ್ದಾರೆ.
ಉಪ್ಪಿ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಇತ್ತೀಚೆಗೆ ಅವರು ಅಭಿನಯಿಸಿರುವ ಕಬ್ಜ ಸಿನಿಮಾ ತೆರೆ ಕಂಡಿತ್ತು. ಈ ಚಿತ್ರವನ್ನು ಆರ್. ಚಂದ್ರು ನಿರ್ದೇಶಿಸಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಸುದೀಪ್, ಶಿವಣ್ಣ ಕೂಡಾ ನಟಿಸಿದ್ದಾರೆ. ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್, ಶ್ರೀ ಸಿದ್ದೇಶ್ವರ ಎಂಟರ್ಟೈನರ್ಸ್ ಹಾಗೂ ಇನ್ವೇನಿಯೊ ಒರಿಜಿನ್ ಬ್ಯಾನರ್‌ಗಳು ಜೊತೆ ಸೇರಿ ಚಿತ್ರಕ್ಕೆ ಬಂಡವಾಳ ಹೂಡಿವೆ. ಶ್ರಿಯಾ ಸರನ್, ಮುರಳಿ ಶರ್ಮಾ, ನವಾಬ್ ಷಾ, ಸುನಿಲ್ ಪುರಾಣಿಕ್, ಪ್ರಮೋದ್ ಶೆಟ್ಟಿ, ಅವಿನಾಶ್ ನಟಿಸಿರುವ ಚಿತ್ರದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಇದನ್ನು ಹೊರತುಪಡಿಸಿ ತ್ರಿಶೂಲಂ, ಬುದ್ಧಿವಂತ 2 ಹಾಗೂ ಯುಐ ಸಿನಿಮಾಗಳಲ್ಲಿ ಉಪೇಂದ್ರ ಬ್ಯುಸಿ ಇದ್ದಾರೆ.