ಕನ್ನಡ ಸುದ್ದಿ  /  Entertainment  /  Actress Aishwarya Rai Announced Ponniyin Selvan 2 Trailer Release Date

Ponniyin Selvan 2: ಚೋಳ ಸಿಂಹಾಸನಕ್ಕಾಗಿ ಮತ್ತೆ ಹರಿಯಲಿದೆ ರಕ್ತ!; ‘ಪೊನ್ನಿಯನ್‌ ಸೇಲ್ವನ್‌ 2’ ಮಹಾಯುದ್ಧಕ್ಕೆ ಐಶ್ವರ್ಯಾ ರೈ ಮುನ್ಸೂಚನೆ..

ನಿರ್ದೇಶಕ ಮಣಿರತ್ನಂ ಬತ್ತಳಿಕೆಯಲ್ಲಿನ ‘ಪೊನ್ನಿಯನ್‌ ಸೇಲ್ವನ್‌ 2’ ಚಿತ್ರ ಇದೀಗ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಮೊದಲಾರ್ಥ ಚಿತ್ರದ ಇಂದು ಚಿತ್ರದ ಟ್ರೇಲರ್‌ ರಿಲೀಸ್‌ ಆಗಲಿದೆ.

ಚೋಳ ಸಿಂಹಾಸನಕ್ಕಾಗಿ ಮತ್ತೆ ಹರಿಯಲಿದೆ ರಕ್ತ!; ‘ಪೊನ್ನಿಯನ್‌ ಸೇಲ್ವನ್‌ 2’ ಮಹಾಯುದ್ಧಕ್ಕೆ ಐಶ್ವರ್ಯಾ ರೈ ಮುನ್ಸೂಚನೆ..
ಚೋಳ ಸಿಂಹಾಸನಕ್ಕಾಗಿ ಮತ್ತೆ ಹರಿಯಲಿದೆ ರಕ್ತ!; ‘ಪೊನ್ನಿಯನ್‌ ಸೇಲ್ವನ್‌ 2’ ಮಹಾಯುದ್ಧಕ್ಕೆ ಐಶ್ವರ್ಯಾ ರೈ ಮುನ್ಸೂಚನೆ..

Ponniyin Selvan 2 Trailer: ‘ಪೊನ್ನಿಯನ್‌ ಸೇಲ್ವನ್‌ 1’ .. ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಈ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿತ್ತು. ಮೇಕಿಂಗ್, ಸ್ಟಾರ್‌ ಕಾಸ್ಟ್‌ ಮೂಲಕವೇ ಗಮನ ಸೆಳೆದ ಈ ಚಿತ್ರ ನೋಡುಗರಿಂದಲೂ ಮೆಚ್ಚುಗೆ ಪಡೆದಿದ್ದಲ್ಲದೆ, ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿಚಾರದಲ್ಲಿಯೂ ಕಮಾಲ್‌ ಮಾಡಿತ್ತು. ಹೀಗೆ ಮೊದಲ ಭಾಗವನ್ನು ಮೆಚ್ಚಿಕೊಂಡಿದ್ದ ಪ್ರೇಕ್ಷಕರಿಗೆ ಎರಡನೇ ಭಾಗದ ಮೇಲೂ ಕೌತುಕ ಮೂಡಿತ್ತು. ಇದೀಗ ಎರಡನೇ ಭಾಗವನ್ನು ನೋಡುಗನ ಮುಂದಿಡಲು ನಿರ್ಧರಿಸಿದ್ದಾರೆ ನಿರ್ದೇಶಕರು. ಅದರಂತೆ ಇಂದು (ಮಾ. 29) ಈ ಚಿತ್ರದ ಟ್ರೇಲರ್‌ ಬಿಡುಗಡೆ ಆಗಲಿದೆ. ಆ ಟ್ರೇಲರ್‌ನ ಸಣ್ಣ ಝಲಕ್‌ನಲ್ಲಿ ಐಶ್ವರ್ಯಾ ರೈ ಮತ್ತಷ್ಟು ಮಿನುಗಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್ 30 ರಂದು ತಮಿಳು, ಹಿಂದಿ, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ‘ಪೊನ್ನಿಯನ್‌ ಸೇಲ್ವನ್‌ 1’ ಚಿತ್ರ ತೆರೆಕಂಡಿತ್ತು. ಈ ಚಿತ್ರವನ್ನು ಮದ್ರಾಸ್ ಟಾಕೀಸ್ ಹಾಗೂ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಜಂಟಿಯಾಗಿ ನಿರ್ಮಾಣ ಮಾಡಿದ್ದವು. 500 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸರಣಿ ಸಿನಿಮಾಗಳ ಪೈಕಿ ಮೊದಲ ಭಾಗ 327 ಕೋಟಿ ಗಳಿಕೆ ಕಂಡಿತ್ತು. ಇದೀಗ ಎರಡನೇ ಭಾಗದ ರಿಲೀಸ್‌ ಅಪ್‌ಡೇಟ್‌ ಮಾಹಿತಿ ಲಭ್ಯವಾಗಿದೆ.

ಟ್ರೇಲರ್‌ ಬಿಡುಗಡೆಗೆ ಆಮಂತ್ರಣದಂತೆ ಐಶ್ವರ್ಯಾ ಅವರ ಸಣ್ಣ ವಿಡಿಯೋ ತುಣುಕನ್ನು ಹೊರಬಿಟ್ಟಿರುವ ತಂಡ, ಅದರಲ್ಲಿ ಐಶ್ವರ್ಯಾ ರೈ ಅವರ ನಂದಿನಿ ಲುಕ್‌ ಅನಾವರಣಗೊಳಿಸಿದ್ದಾರೆ. ಈ ವಿಡಿಯೋವನ್ನು ಸ್ವತಃ ಐಶ್ವರ್ಯಾ ಶೇರ್‌ ಮಾಡಿದ್ದು, 'ಅವಳ ಕಣ್ಣುಗಳಲ್ಲಿ ಬೆಂಕಿಯಿದೆ. ಹೃದಯದಲ್ಲಿ ಪ್ರೀತಿಯಿದೆ. ಕತ್ತಿಗಳ ಮೇಲೆ ರಕ್ತವೂ ಇದೆ. ಸಿಂಹಾಸನಕ್ಕಾಗಿ ಹೋರಾಡಲು ಚೋಳರು ಮತ್ತೆ ಬರುತ್ತಿದ್ದಾರೆ' ಎಂಬರ್ಥದಲ್ಲಿ ಕ್ಯಾಪ್ಷನ್‌ ನೀಡಿದ್ದಾರೆ. ಈ ಕಿರು ವಿಡಿಯೋ ನೋಡಿದ ನೆಟ್ಟಿಗರು, ನಟಿ ಐಶ್ವರ್ಯಾ ಅವರನ್ನು ಮನತುಂಬಿ ಹರಸುತ್ತಿದ್ದಾರೆ. ಮಾಸದ ಅಂದ ಚೆಂದ ಎಂದೆಲ್ಲ ವರ್ಣಿಸುತ್ತಿದ್ದಾರೆ.

ಏಪ್ರಿಲ್‌ 29ಕ್ಕೆ ಪೊನ್ನಿಯನ್‌ ಸೇಲ್ವನ್‌ 2 ರಿಲೀಸ್...‌

ಚಿತ್ರತಂಡ ಈ ಹಿಂದೆ ಮೊದಲ ಭಾಗ ಬಿಡುಗಡೆಯಾದ ಆರೇಳು ತಿಂಗಳಿಗೆ ಎರಡನೇ ಭಾಗ ರಿಲೀಸ್‌ ಆಗಲಿದೆ ಎಂದು ಹೇಳಿಕೊಂಡಿತ್ತು. ಅದರಂತೆ, ಇದೀಗ ಏಪ್ರಿಲ್‌ 29ರಂದು ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇಂದಿನಿಂದ ಸರಿಯಾಗಿ ಒಂದು ತಿಂಗಳಿಗೆ ಸಿನಿಮಾ ತೆರೆಗೆ ಬರುವುದರಿಂದ ಟ್ರೇಲರ್‌ ಲಾಂಚ್‌ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿದೆ. ಅಂದಹಾಗೆ, ಮಣಿರತ್ನಂ ಅವರ ಈ ಚೋಳರ ಕಥೆಯಲ್ಲಿ ಕಲಾವಿದರ ದಂಡೇ ಇದೆ. ನಟ ಚಿಯಾನ್‌ ವಿಕ್ರಂ, ಐಶ್ವರ್ಯಾ ರೈ ಬಚ್ಚನ್‌, ಜಯಮ್‌ ರವಿ, ಕಾರ್ತಿ, ತ್ರಿಶಾ, ಜಯರಾಮ್‌, ಐಶ್ವರ್ಯಾ ಲಕ್ಷ್ಮೀ, ಪ್ರಭು, ಶರತ್‌ಕುಮಾರ್‌ ಸೇರಿ ಇನ್ನೂ ಹಲವು ಕಲಾವಿರು ನಟಿಸಿದ್ದಾರೆ.

IPL_Entry_Point