ಕನ್ನಡ ಸುದ್ದಿ  /  Entertainment  /  Actress Enjoying With Her Kid In Goa Beach

4 ತಿಂಗಳ ಕಂದಮ್ಮನೊಂದಿಗೆ ಗೋವಾ ಬೀಚ್​​​​​​​​ನಲ್ಲಿ ಎಂಜಾಯ್​​​​​​​​​​​​​​​ ಮಾಡ್ತಿರೋ ಖ್ಯಾತ ನಟಿ...ಯಾರಿದು ನೋಡಿ

ಕಳೆದ ತಿಂಗಳು ತಮ್ಮ ಹುಟ್ಟುಹಬ್ಬದ ದಿನ ಮೊದಲ ಬಾರಿಗೆ ಕಂದನ ಮುಖವನ್ನು ರಿವೀಲ್ ಮಾಡಿದ್ದ ಕಾಜಲ್ ಅಗರ್​​ವಾಲ್, ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುತ್ತಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳಿಗೆ ಅಪ್​​ಡೇಟ್ ನೀಡುತ್ತಾ ಬಂದಿದ್ದಾರೆ.

ಕಂದನೊಂದಿಗೆ ಕಾಜಲ್ ಅಗರ್​ವಾಲ್
ಕಂದನೊಂದಿಗೆ ಕಾಜಲ್ ಅಗರ್​ವಾಲ್

ಸೋಷಿಯಲ್ ಮೀಡಿಯಾದಲ್ಲಿ ಸೆಲಬ್ರಿಟಿಗಳು ಹಾಗೂ ಅವರ ಕುಟುಂಬದ ಫೋಟೋಗಳನ್ನು ನೋಡಲು ಅಭಿಮಾನಿಗಳು ಸದಾ ಉತ್ಸುಕರಾಗಿರುತ್ತಾರೆ. ಆ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸುತ್ತಾರೆ. ಇದೀಗ ತೆಲುಗು ನಟಿ ಕಾಜಲ್ ಅಗರ್​​ವಾಲ್ ಕೂಡಾ ತಮ್ಮ ಮುದ್ದು ಕಂದನ ಮತ್ತೊಂದು ಫೋಟೋ ಹಂಚಿಕೊಂಡಿದ್ದು ಅಭಿಮಾನಿಗಳು ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ಏಪ್ರಿಲ್​​​​​​​ನಲ್ಲಿ ಕಾಜಲ್ ಅಗರ್​ವಾಲ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗನಿಗೆ ನೀಲ್ ಕಿಚ್ಲು ಎಂದು ಈಗಾಗಲೇ ಕಾಜಲ್ ಅಗರ್​​ವಾಲ್ ಹೆಸರಿಟ್ಟಿದ್ದಾರೆ. ಇದೀಗ ಅವರು ಪುಟ್ಟ ಕಂದನೊಂದಿಗೆ ಗೋವಾ ಬೀಚ್​​​​​​ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಮಗುವಿನ ಮುದ್ದು ಕಾಲುಗಳ ಫೋಟೋವನ್ನು ಕಾಜಲ್ ಅಗರ್​​ವಾಲ್ ತಮ್ಮ ಇನ್​​ಸ್ಟಾಗ್ರಾಮ್​​​​ನಲ್ಲಿ ಹಂಚಿಕೊಂಡಿದ್ದು ನೀಲ್​​ ಮೊದಲ ವೆಕೇಷನ್ ಎಂದು ಬರೆದುಕೊಂಡಿದ್ದಾರೆ. ಕಾಜಲ್ ಫೋಟೋಗೆ ಹನ್ಸಿಕಾ ಮೋಟ್ವಾನಿ, ರಾಶಿ ಖನ್ನಾ ಸೇರಿದಂತೆ ಹಲವಾರು ಸೆಲಬ್ರಿಟಿಗಳು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ನಿಮ್ಮ ಮಗುವನ್ನು ನೋಡಲು ಕಾತರದಿಂದ ಕಾಯುತ್ತಿದ್ದೇವೆ ಎಂದಿದ್ದಾರೆ.

ಇದಕ್ಕೂ ಮುನ್ನ ಕಾಜಲ್ ಅಗರ್​​ವಾಲ್ ಕಂದನೊಂದಿಗೆ ಇರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ತಮ್ಮ ಹುಟ್ಟುಹಬ್ಬದ ದಿನ ಮೊದಲ ಬಾರಿಗೆ ಕಂದನ ಮುಖವನ್ನು ರಿವೀಲ್ ಮಾಡಿದ್ದರು. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ನಟಿ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳಿಗೆ ಅಪ್​​ಡೇಟ್ ನೀಡುತ್ತಾ ಬಂದಿದ್ದಾರೆ.

ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲು ಸಿದ್ಧರಾದ ಕಾಜಲ್ ಅಗರ್​ವಾಲ್

ತೆಲುಗು, ತಮಿಳು ಭಾಷೆಗಳಲ್ಲಿ ಟಾಪ್ ಹೀರೋಯಿನ್ ಆಗಿ ಧೂಳೆಬ್ಬಿಸಿರುವ ಕಾಜಲ್ ಅಗರ್​​ವಾಲ್​​​​​​​​​​​​​ ಬಹಳ ದಿನಗಳಿಂದ ತಾವು ಪ್ರೀತಿಸುತ್ತಿದ್ದ ಗೌತಮ್ ಕಿಚ್ಲು ಅವರನ್ನು 2020ರಲ್ಲಿ ಮದುವೆಯಾಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಅನೇಕ ನಾಯಕಿಯರು ಮದುವೆಯ ನಂತರವೂ ನಟನೆಯನ್ನು ಮುಂದುವರೆಸುತ್ತಾರೆ. ಆದರೆ ಸದ್ಯಕ್ಕೆ ಕಾಜಲ್ ಅಗರ್​​ವಾಲ್ ನಟನೆಯಿಂದ ವಿರಾಮ ತೆಗೆದುಕೊಂಡು ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಕಳೆದ ಏಪ್ರಿಲ್​​​​ನಲ್ಲಿ ಮಗುವಿಗೆ ಜನ್ಮ ನೀಡಿರುವ ಕಾಜಲ್ ಅಗರ್​ವಾಲ್​ ಸದ್ಯಕ್ಕೆ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಆಪ್ತ ಮೂಲಗಳ ಮಾಹಿತಿ ಪ್ರಕಾರ, ಇನ್ನು ಕೆಲವೇ ದಿನಗಳಲ್ಲಿ ಕಾಜಲ್ ಒಂದೊಳ್ಳೆ ಸ್ಕ್ರಿಪ್ಟ್​ ಜೊತೆ ರೀ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

ಮದುವೆಯಾದ ನಂತರ ಮೆಗಾಸ್ಟಾರ್ ಅಭಿನಯದ 'ಆಚಾರ್ಯ' ಚಿತ್ರದಲ್ಲಿ ಕಾಜಲ್ ಅಗರ್​​​ವಾಲ್ ನಟಿಸಿದ್ದರು. ಆದರೆ ಅಷ್ಟರಲ್ಲಿ ಆಕೆ ಗರ್ಭಿಣಿ ಆದ್ದರಿಂದ ಚಿತ್ರದಿಂದ ಹೊರ ಬಂದರು. ಆ ಕಾರಣದಿಂದ ಕಾಜಲ್ ನಟಿಸಿದ್ದ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಕಾಜಲ್ ಅಭಿನಯದ ಮತ್ತೊಂದು ಅದ್ಧೂರಿ ಚಿತ್ರ 'ಇಂಡಿಯನ್-2'. ಶಂಕರ್ ನಿರ್ದೇಶನದ ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಆರಂಭದಿಂದಲೂ ನಾನಾ ವಿವಾದಗಳು, ಕಾರಣಗಳಿಂದಾಗಿ ಸಿನಿಮಾ ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ನಿರ್ದೇಶಕ ಶಂಕರ್ ಸದ್ಯ ರಾಮ್ ಚರಣ್ ಅಭಿನಯದ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ನಂತರ 'ಇಂಡಿಯನ್ 2' ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟರಲ್ಲಿ ಕಾಜಲ್ ಕೂಡಾ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

IPL_Entry_Point