ನಟಿ ಎಂದಿದ್ದಕ್ಕೆ ಮನೆ ಕಟ್ಟಲು ಸಾಲ ಸಿಕ್ಕಿರಲಿಲ್ಲ; ಆಗಿನ ಕಷ್ಟ ಹೇಳಿಕೊಂಡ ಮಾಳವಿಕಾ ಅವಿನಾಶ್
ಕನ್ನಡ ಸುದ್ದಿ  /  ಮನರಂಜನೆ  /  ನಟಿ ಎಂದಿದ್ದಕ್ಕೆ ಮನೆ ಕಟ್ಟಲು ಸಾಲ ಸಿಕ್ಕಿರಲಿಲ್ಲ; ಆಗಿನ ಕಷ್ಟ ಹೇಳಿಕೊಂಡ ಮಾಳವಿಕಾ ಅವಿನಾಶ್

ನಟಿ ಎಂದಿದ್ದಕ್ಕೆ ಮನೆ ಕಟ್ಟಲು ಸಾಲ ಸಿಕ್ಕಿರಲಿಲ್ಲ; ಆಗಿನ ಕಷ್ಟ ಹೇಳಿಕೊಂಡ ಮಾಳವಿಕಾ ಅವಿನಾಶ್

ನಟಿ ಮಾಳವಿಕಾ ಅವಿನಾಶ್ ತಾವು ಮನೆ ಕಟ್ಟುವಾಗ ಎದುರಿಸಿದ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಮನೆ ಕಟ್ಟುವ ಸಂದರ್ಭದಲ್ಲಿ ಏನೆಲ್ಲ ಕಷ್ಟ ಅನುಭವಿಸಬೇಕಾಗಿಬಂತು ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.

ಮನೆ ಕಟ್ಟುವಾಗಿನ ಕಷ್ಟ ಹೇಳಿಕೊಂಡ ಮಾಳವಿಕಾ ಅವಿನಾಶ್
ಮನೆ ಕಟ್ಟುವಾಗಿನ ಕಷ್ಟ ಹೇಳಿಕೊಂಡ ಮಾಳವಿಕಾ ಅವಿನಾಶ್

ಕೆಜಿಎಫ್  ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿರುವ ನಟಿ ಮಾಳವಿಕಾ ಅವಿನಾಶ್ ಅವರು ಗಲಾಟೆ ಬಿನ್ ಯೂಟ್ಯೂಬ್ ಚಾನೆಲ್ ನಲ್ಲಿ ಮನೆ ಕಟ್ಟಿರುವ ಕಥೆಯನ್ನು ಹಂಚಿಕೊಂಡಿದ್ದಾರೆ.ಈ ಕುರಿತು ಮಾತನಾಡಿದ ಅವರು, ‘ಸಿನಿಮಾ ಜೀವನ ಶಾಶ್ವತವಲ್ಲ ಎಂಬುದು ಎಲ್ಲರಿಗೂ ಗೊತ್ತು, 20 ವರ್ಷಗಳ ಹಿಂದೆ ನಾವು ಬದುಕಿದ ಜೀವನ ಶೈಲಿಯೇ ಬೇರೆ ಎಂದಿದ್ದಾರೆ.

ಆಗ ನಮಗೆಲ್ಲರಿಗೂ ಕೊರೊನಾ ಸೋಂಕು ತಗುಲುತ್ತದೆ. ಆ ಸಮಯದಲ್ಲಿ ನಮ್ಮ ಜೇಬಿನಲ್ಲಿ ಒಂದು ಪೈಸೆಯೂ ಉಳಿದಿರಲಿಲ್ಲ. ಆದರೆ ಮನೆಯ ಹಿರಿಯರಿಗೆ ಈ ಹಿಂದೆಯೇ ಗೊತ್ತಿತ್ತು. ಇಷ್ಟು ದೊಡ್ಡ ಜಾಗ ಖರೀದಿಸಿ ಇಟ್ಟವರು ನನ್ನ ತಂದೆಯಾಗಿದ್ದರು ಎಂದಿದ್ದಾರೆ. ಆದರೆ ಅವರ ಪತಿ ಅವಿನಾಶ್‌ ಈ ಬಗ್ಗೆ ಸಮ್ಮತಿ ಸೂಚಿಸಿರಲಿಲ್ಲವಂತೆ. ಅವರು ತಾನೇ ಒಂದು ಜಾಗ ಹುಡುಕಿ ಆ ನಂತರ ಮನೆ ಕಟ್ಟಬೇಕು ಎಂದುಕೊಂಡಿದ್ದರು ಎಂದಿದ್ದಾರೆ.

ಸಾಲಕ್ಕಾಗಿ ಬ್ಯಾಂಕ್‌ಗೆ ಹೋದಾಗ ನಾನು ನಟಿ ಎಂಬ ಕಾರಣಕ್ಕೆ ಸಾಲ ನೀಡಲು ನಿರಾಕರಿಸಿದ್ದರು ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಆಗ ನನ್ನ ತಂದೆ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಅದರ ಆಧಾರದ ಮೇಲೆ ನನಗೆ ಸಾಲ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ನಟಿಯಾದರೂ ಮನೆ ಕಟ್ಟುವುದು ಸುಲಭದ ಮಾತಾಗಿರಲಿಲ್ಲ. ನಮ್ಮ ಸಂಪಾದನೆ 5 ಲಕ್ಷ ಇದೆ ಎಂದಾದರೆ ನಾವು 10 ಲಕ್ಷದ ಮನೆ ಕಟ್ಟುತ್ತೇವೆ. 10 ಎಂದಾದರೆ 20 ಲಕ್ಷ ಹೀಗೆ ನಮ್ಮಿಷ್ಟದ ಮನೆಯನ್ನೇ ಕಟ್ಟಬೇಕು ಎಂದರೆ ಅಷ್ಟು ಹಣ ಖರ್ಚಾಗಿಬಿಡುತ್ತದೆ ಎಂದಿದ್ದಾರೆ.

ಆಗ ಮಗನಿಗೆ ಮೂರು ವರ್ಷ

ನಾವು ಮನೆಯ ಅರ್ಧ ಭಾಗವನ್ನು ಮಾತ್ರ ನಿರ್ಮಿಸುತ್ತೇವೆ. ಅಷ್ಟರೊಳಗೆ ನಮ್ಮ ಸಾಲದ ಹಣ ಖರ್ಚಾಗುತ್ತದೆ. ಬಳಿಕ ಸ್ನೇಹಿತರು, ಸಂಬಂಧಿಕರಿಂದ ಸಾಲ ಪಡೆದು ಮನೆ ಕಟ್ಟುತ್ತೇವೆ. ಎಲ್ಲರಿಗೂ ಹೀಗೆ ಆಗುತ್ತದೆ. ಮನೆಯನ್ನು ನಿರ್ಮಿಸಲು ಸುಮಾರು 8 ತಿಂಗಳು ಬೇಕಾಯಿತು. ಪ್ರತಿದಿನ ನಾನು ಈ ಸೈಟ್‌ಗೆ ಭೇಟಿ ನೀಡುತ್ತೇನೆ. ಆಗ ನನ್ನ ಮಗನಿಗೆ ಮೂರು ವರ್ಷ ಆಗಿತ್ತು ಎಂದು ಮಾಳವಿಕಾ ಹೇಳಿದ್ದಾರೆ. 

ಮನೆತುಂಬಾ ದೊಡ್ಡದಾಗಿ ಬಂದಿತ್ತು. ಆಗ ನಾನು ನನ್ನ ತಂದೆ ಬಳಿ ಪ್ರಶ್ನೆ ಮಾಡಿದ್ದೆ. ಯಾಕೆ ಇಷ್ಟು ದೊಡ್ಡ ಮನೆ? ಈ ಮನೆಯನ್ನು ಕ್ಲೀನ್ ಮಾಡಲು ಯಾರು ಬರುತ್ತಾರೆ? ಎಂದೆಲ್ಲ ಪ್ರಶ್ನೆ ಮಾಡಿದ್ದೆ. ಎಲ್ಲರೂ ಓದು ಬರಹ ಎಂದು ಕಲಿತುಕೊಂಡು ಉದ್ಯೋಗ ಮಾಡುತ್ತಾರೆ. ಮನೆ ಕೆಲಸಕ್ಕೆ ಬರೋದಿಲ್ಲ ಎಂದು ಹೇಳಿದ್ದರಂತೆ. ಆದರೆ ಅವರ ತಂದೆ ನಾನು ಈ ಮನೆಯಲ್ಲೇ ಪ್ರಾಣಬಿಡುತ್ತೇನೆ ಎಂದಿದ್ದರಂತೆ. ಈ ಎಲ್ಲ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.

 

Whats_app_banner