ಕನ್ನಡ ಸುದ್ದಿ  /  Entertainment  /  Actress Manvita Kamat S Mother Sujata Passed Away Mnk

Manvita Kamat: ನಟಿ ಮಾನ್ವಿತಾ ಕಾಮತ್‌ಗೆ ಮಾತೃವಿಯೋಗ; ಚಿಕಿತ್ಸೆಗೆ ನೆರವು ನೀಡಿದ್ದ ಸೋನು ಸೂದ್‌!

ಚಂದನವನದ ನಟಿ ಮಾನ್ವಿತಾ ಕಾಮತ್‌ ಅವರ ತಾಯಿ ಸುಜಾತಾ ನಿಧನರಾಗಿದ್ದಾರೆ.

ನಟಿ ಮಾನ್ವಿತಾ ಕಾಮತ್‌ಗೆ ಮಾತೃವಿಯೋಗ; ಚಿಕಿತ್ಸೆಗೆ ನೆರವು ನೀಡಿದ್ದ ಸೋನು ಸೂದ್‌!
ನಟಿ ಮಾನ್ವಿತಾ ಕಾಮತ್‌ಗೆ ಮಾತೃವಿಯೋಗ; ಚಿಕಿತ್ಸೆಗೆ ನೆರವು ನೀಡಿದ್ದ ಸೋನು ಸೂದ್‌!

Manvita Kamat: ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ಅವರ ತಾಯಿ ಸುಜಾತಾ ನಿಧನರಾಗಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುಜಾತಾ, ಚಿಕಿತ್ಸೆ ಫಲಿಸದೇ ಇಂದು (ಏ. 15) ಸಾವನಪ್ಪಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸುಜಾತಾ ಅವರಿಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ತಾಯಿಯನ್ನು ಉಳಿಸಿಕೊಳ್ಳಲು ನಟಿ ಮಾನ್ವಿತಾ ಹತ್ತಾರು ಪ್ರಯತ್ನ ಮಾಡಿದ್ದರು. ಬಾಲಿವುಡ್‌ ನಟ ಸೋನು ಸೂದ್‌ ಸಹ ತಮ್ಮ ಫೌಂಡೇಶನ್‌ನಿಂದ ಸಹಾಯ ಹಸ್ತ ಚಾಚಿದ್ದರು.

ಕಳೆದ ಆಗಸ್ಟ್‌ನಲ್ಲಿ ಸೋನು ಸೂದ್‌ ನೆರವು

ಮಾನ್ವಿತಾ ಕಾಮತ್‌ ಅವರ ತಾಯಿ ಕಳೆದ ಕೆಲ ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಸೂಕ್ತ ಚಿಕಿತ್ಸೆಗಾಗಿ ಕಳೆದ ಕೆಲ ವರ್ಷಗಳಿಂದ ಸುತ್ತಾಡಿದರೂ, ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿತ್ತು. ಹೀಗಿರುವಾಗಲೇ ಕಳೆದ ವರ್ಷದ ಆಗಸ್ಟ್‌ನಲ್ಲಿ ತಾಯಿಯ ಸಮಸ್ಯೆ ಬಗ್ಗೆ ಸ್ಟೇಟಸ್‌ ಹಾಕಿದ್ದರು ಮಾನ್ವಿತಾ. ಅದನ್ನು ಗಮನಿಸಿದ್ದ ಮಂಗಳೂರಿನ ಸೋನು ಸೂದ್‌ ಫೌಂಡೇಷನ್‌ ಸದಸ್ಯರೊಬ್ಬರು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅನುವು ಮಾಡಿಕೊಟ್ಟಿದ್ದರು.

ಮನರಂಜನೆ, ಬಿಗ್‌ಬಾಸ್ ಕನ್ನಡ 10 ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ,ನೋಡಿ.