Meghana Raj: ‘ಜೀವನಕ್ಕೆ ಫುಲ್‌ಸ್ಟಾಪ್‌ ಬಿದ್ದಾಗೆಲ್ಲ, ಅಲ್ಲಿಂದ ಹೊಸ ವಾಕ್ಯ ಶುರುಮಾಡುತ್ತಿದ್ದೆ..’ ಮೇಘನಾ ರಾಜ್‌ ಕಂಬ್ಯಾಕ್‌ ಮಾತು..
ಕನ್ನಡ ಸುದ್ದಿ  /  ಮನರಂಜನೆ  /  Meghana Raj: ‘ಜೀವನಕ್ಕೆ ಫುಲ್‌ಸ್ಟಾಪ್‌ ಬಿದ್ದಾಗೆಲ್ಲ, ಅಲ್ಲಿಂದ ಹೊಸ ವಾಕ್ಯ ಶುರುಮಾಡುತ್ತಿದ್ದೆ..’ ಮೇಘನಾ ರಾಜ್‌ ಕಂಬ್ಯಾಕ್‌ ಮಾತು..

Meghana Raj: ‘ಜೀವನಕ್ಕೆ ಫುಲ್‌ಸ್ಟಾಪ್‌ ಬಿದ್ದಾಗೆಲ್ಲ, ಅಲ್ಲಿಂದ ಹೊಸ ವಾಕ್ಯ ಶುರುಮಾಡುತ್ತಿದ್ದೆ..’ ಮೇಘನಾ ರಾಜ್‌ ಕಂಬ್ಯಾಕ್‌ ಮಾತು..

ನಟಿ ಮೇಘನಾ ರಾಜ್‌ ಮತ್ತೆ ಸಿನಿಮಾಕ್ಕೆ ಕಂಬ್ಯಾಕ್‌ ಮಾಡುವುದಕ್ಕೂ ಕಾರಣವಿದೆ. ಏನೂ ಬೇಡ, ಮಗನ ಭವಿಷ್ಯದಲ್ಲಿಯೇ ಮುಳುಗಿದ್ದ ಅವರು, ಈ ಕಾರಣಕ್ಕೆ ಮತ್ತೆ ಬಣ್ಣದ ಲೋಕದತ್ತ ಹೊರಳಿದ್ದಾರೆ.

‘ಜೀವನಕ್ಕೆ ಪುಲ್‌ಸ್ಟಾಪ್‌ ಬಿದ್ದಾಗೆಲ್ಲ, ಅಲ್ಲಿಂದ ಹೊಸ ವಾಕ್ಯ ಶುರುಮಾಡುತ್ತಿದ್ದೆ..’ ಮೇಘನಾ ರಾಜ್‌ ಕಂಬ್ಯಾಕ್‌ ಮಾತು..
‘ಜೀವನಕ್ಕೆ ಪುಲ್‌ಸ್ಟಾಪ್‌ ಬಿದ್ದಾಗೆಲ್ಲ, ಅಲ್ಲಿಂದ ಹೊಸ ವಾಕ್ಯ ಶುರುಮಾಡುತ್ತಿದ್ದೆ..’ ಮೇಘನಾ ರಾಜ್‌ ಕಂಬ್ಯಾಕ್‌ ಮಾತು..

Meghana Raj Sarja on Comeback: ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಸರ್ಜಾ ಸಿನಿಮಾದಿಂದ ದೂರವೇ ಉಳಿದಿದ್ದಾರೆ. ಚಿರು ಅಗಲಿಕೆಯ ಬಳಿಕ ಮಗನ ಆರೈಕೆಯಲ್ಲಿಯೇ ತೊಡಗಿಸಿಕೊಂಡು, ಎರಡು ವರ್ಷ ದೂಡಿದ್ದಾರೆ. ಇದೀಗ ಈ ನಟಿ ಕಂಬ್ಯಾಕ್‌ ಕಾತರದಲ್ಲಿದ್ದಾರೆ. ಹಾಗಂತ ಈ ಕಂಬ್ಯಾಕ್‌ ಅಷ್ಟು ಸುಲಭದ್ದಾಗಿರಲಿಲ್ಲ. ಸಿನಿಮಾ ಬೇಡವೇ ಬೇಡ, ಒಬ್ಬ ತಾಯಿಯಾಗಿ ಮಗನ ಭವಿಷ್ಯದ ಕನಸಿನಲ್ಲಿಯೇ ಖುಷಿ ಕಾಣುವ ನಿರ್ಧಾರಕ್ಕೆ ಮೇಘನಾ ಬದ್ಧರಾಗಿದ್ದರು. ಆದರೆ, ಮುಂದೇನು ಎಂಬ ಪ್ರಶ್ನೆ ಎದುರಾದಾಗ ಆ ಕ್ಷಣ ಮೇಘನಾ ಸಹ ಮೂಖರಾಗಿದ್ದರು! ಅದೆಲ್ಲವನ್ನು ವಿಚಾರಿಸಿಯೇ ಇದೀಗ ತತ್ಸಮ ತದ್ಭವ ಮೂಲಕ ಆಗಮಿಸುತ್ತಿದ್ದಾರೆ. ಈ ವಿಚಾರವನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕಮ್‌ಬ್ಯಾಕ್‌ ಜರ್ನಿ ನೆನೆದ ಮೇಘನಾ..

ಆರಂಭದ ದಿನಗಳನ್ನು ನೆನೆದ ಮೇಘನಾ, "ನಾನು ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾರಂಗಕ್ಕೆ ಬಂದವಳು. ಮನೆಯಲ್ಲಿ ಅಪ್ಪ, ಅಮ್ಮ ಕಲಾವಿದರಾಗಿದ್ದರಿಂದ ನಟನೆ ಮೇಲಿನ ಆಸಕ್ತಿ ಚಿಕ್ಕ ವಯಸ್ಸಿನಲ್ಲಿಯೇ ನನ್ನೊಳಗೂ ಮೂಡಿತ್ತು. ದಿನಗಳೆದಂತೆ ಸಿನಿಮಾನೇ ನನಗೆ ಎಲ್ಲವೂ ಆಯಿತು. ಅದೇ ಕ್ಷಣ ನನಗೆ ಪ್ರೀತಿ ಎರಡು ರೂಪದಲ್ಲಿ ಸಿಕ್ಕಿತು. ಒಂದು ಸಿನಿಮಾ, ಮತ್ತೊಂದು ಚಿರು!"

ಇಬ್ಬರಿಗೂ ಸಿನಿಮಾ ಎಮೋಷನ್‌..

"ಸಿನಿಮಾ ಎಂದರೆ ನನಗೂ ಅದೆನೋ ಎಮೋಷನ್.‌ ಅದೇ ರೀತಿ ಚಿರು ನನ್ನ ಎಮೋಷನ್.‌ ಇಬ್ಬರಿಗೂ ಸಿನಿಮಾ ಅಂದ್ರೆ ಪ್ರೀತಿ, ವ್ಯಾಮೋಹ. ಹೀಗಿರುವಾಗಲೇ 2108ರಲ್ಲಿ ಇಬ್ಬರ ಮದುವೆ ಆಯ್ತು. ಒಂದು ದಿನ ಎಲ್ಲವೂ ಬದಲಾಯ್ತು. 2020ನೇ ವರ್ಷ ನನ್ನ ಬದುಕಿಗೆ ಪೂರ್ಣವಿರಾಮ ಬಿತ್ತು! ಅದಾದ ಮೇಲೆ ಮತ್ತೆ ಬದುಕಬೇಕೆಂಬ ಆಸಕ್ತಿ ಮೂಡಿದ್ದು ರಾಯನ್‌ ಬಂದ ಮೇಲೆ"

ಸಿನಿಮಾ ಬೇಡ ಎಂದು ನಿರ್ಧರಿಸಿದ್ದೆ...

"ರಾಯನ್‌ ಬಂದ ಮೇಲೆ ನಾನು ಸಿನಿಮಾ ಬೇಡವೇ ಬೇಡ ಎಂದು ನಿರ್ಧರಿಸಿದ್ದೆ. ಅವನಲ್ಲಿಯೇ ನನ್ನ ಭವಿಷ್ಯ ಕಾಣುತ್ತಿದ್ದೆ. ಒಬ್ಬ ಒಳ್ಳೆಯ ತಾಯಿಯಾದರೆ ಸಾಕು ಎಂದಷ್ಟೇ ನಿರ್ಧರಿಸಿದ್ದೆ. ಮಗುವಿಗೆ ತಂದೆ ತಾಯಿ ನೀನೇ ಆಗು ಎಂದು ಆ ವಿಧಿಯೇ ಹೇಳಿತ್ತು. ಹೀಗಿರುವಾಗ ಚಿರು ನನಗೆ ಬಿಟ್ಟು ಹೋದ ಮತ್ತೊಂದು ಆಸ್ತಿ ಎಂದರೆ ಅದು ಫ್ರೆಂಡ್ಸ್‌"

ಸ್ನೇಹಿತರು ದೊಡ್ಡ ಸಪೋರ್ಟ್‌ ಸಿಸ್ಟಮ್..

"ಜೀವನದಲ್ಲಿ ಏನೂ ಬೇಡ ಎಂದು ಸುಮ್ಮನಿದ್ದ ನನಗೆ, ದೊಡ್ಡ ಸಪೋರ್ಟ್‌ ಸಿಸ್ಟಮ್‌ ಥರ ಬಂದಿದ್ದು, ಪನ್ನಗಾ ಭರಣ, ನಿನಗೋಸ್ಕರ ನೀನು ಏನು ಮಾಡ್ಕೋತಿಯಾ ಎಂದಾಗ ನನ್ನ ಬಳಿ ಉತ್ತರ ಇರಲಿಲ್ಲ. ಪನ್ನ ಪ್ರೊಡಕ್ಷನ್‌ ಹೌಸ್‌ ತೆರೆಯುತ್ತಿರುವುದು ಮೊದಲೇ ಗೊತ್ತಿತ್ತು. ಬಳಿಕ ವಿಶಾಲ್‌ ಎಂಬುವವರನ್ನು ಮನೆಗೆ ಕಳಿಸಿ ಕಥೆ ಹೇಳಿಸಿದ. ಕಥೆ ಇಷ್ಟವಾಯ್ತು. ಕೊನೆಗೆ ಆ ಸಿನಿಮಾ ನೀನೇ ಮಾಡಬೇಕು ಎಂದ. ನೀನ್ಯಾರು ಎಂಬುದನ್ನು ತಿಳಿಯುವುದಕ್ಕಾದರೂ ಸಿನಿಮಾ ಮಾಡಬೇಕು ಎಂದ. ಆವತ್ತೇ ಸಿನಿಮಾ ಮಾಡಲೇಬೇಕು ಎಂದು ನಿರ್ಧಾರ ಮಾಡಿದೆ" ‌

ಇದೀಗ ಹೊಸ ಜರ್ನಿ ಆರಂಭ

"ಎಷ್ಟೇ ಅಡೆತಡೆ ಬರಲಿ, ಫುಲ್‌ಸ್ಟಾಪ್‌ ಹಾಕಲು ಜೀವನ ಟ್ರೈ ಮಾಡಿದರೆ, ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ. ಪ್ರತಿ ಸಲ ಫುಲ್‌ಸ್ಟಾಪ್‌ ಹಾಕಿದಾಗ, ನಾನು ಅಲ್ಲಿಂದ ಹೊಸ ವಾಕ್ಯ ಬರೆಯುತ್ತೇನೆ. ತತ್ಸಮ ತದ್ಬವ ಸಿನಿಮಾ ಇದೀಗ ಶುರುವಾಗಿದೆ. 2020ರಲ್ಲಿನ ನನ್ನ ಸಿನಿಮಾ ಕೆರಿಯರ್‌ ತತ್ಸಮವಾದರೆ ಈಗನಿದ್ದು ತದ್ಬವ" ಎಂಬುದು ಮೇಘನಾ ಮಾತು.

Whats_app_banner