Roja Reaction for Troll: ಅಣ್ಣ ನನಗೆ ಮುತ್ತು ಕೊಟ್ಟಿದ್ದನ್ನೂ ಟ್ರೋಲ್ ಮಾಡೋ ನೀವು ಮನುಷ್ಯರಲ್ಲ...ಕಣ್ಣೀರಿಟ್ಟ ಸಚಿವೆ ರೋಜಾ
ರೋಜಾ ಅಣ್ಣ, ತಂಗಿ ಮಿನಿಸ್ಟರ್ ಆದ ಖುಷಿಗೆ ಆಕೆಗೆ ಹಗ್ ಮಾಡಿ ಮುತ್ತು ಕೊಟ್ಟಿದ್ದರು. ಆದರೆ ಈ ಫೋಟೋ ಹಾಗೂ ವಿಡಿಯೋ ಸಂಬಂಧ ಕೆಲವರು ಅಸಭ್ಯವಾಗಿ ಟ್ರೋಲ್ ಮಾಡಿದ್ದರು. ಈ ರೀತಿ ಮುತ್ತು ಕೊಟ್ಟಿದ್ದು ಅವಶ್ಯಕತೆ ಇದೆಯಾ...? ಎಂದು ವ್ಯಂಗ್ಯವಾಡಿದ್ದರು.
ಸೆಲೆಬ್ರಿಟಿಗಳು ಟ್ರೋಲ್‌ಗೆ ಒಳಗಾಗುವುದು ಇತ್ತೀಚೆಗೆ ಸಾಮಾನ್ಯ ಎನಿಸಿದೆ. ಆದರೆ ಕೆಲವೊಮ್ಮೆ ಅವರು ಮಾಡದ ತಪ್ಪಿಗೂ ಟ್ರೋಲ್ ಆಗುತ್ತಾರೆ. ಇದರಿಂದ ಸೆಲೆಬ್ರಿಟಿಗಳು ಕಿರಿಕಿರಿ ಅನುಭವಿಸುತ್ತಾರೆ. ಇದೀಗ ನಟಿ, ಆಂಧ್ರ ಸಚಿವೆ ರೋಜಾ (Roja) ಕೂಡಾ ತಮ್ಮ ವೈಯಕ್ತಿಕ ವಿಚಾರಕ್ಕೆ ಟ್ರೋಲ್ ಆಗಿದ್ದು ಈ ವಿಚಾರವಾಗಿ ರೋಜಾ ಬೇಸರ ವ್ಯಕ್ತಪಡಿಸಿದ್ದಾರೆ. ಟ್ರೋಲ್ ಮಾಡಿದವರು ಮನುಷ್ಯರಲ್ಲ ಎಂದು ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.
ರೋಜಾ ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದು ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ವೈಎಸ್‌ಆರ್ (YSR Congress) ಕಾಂಗ್ರೆಸ್‌ನಲ್ಲಿ ರೋಜಾ ಗುರುತಿಸಿಕೊಂಡಿದ್ದು ಇತ್ತೀಚೆಗೆ ಅವರು ಸಚಿವೆ ಸ್ಥಾನ ಕೂಡಾ ಪಡೆದಿದ್ದಾರೆ. ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಸಚಿವ ಸಂಪುಟದಲ್ಲಿ ರೋಜಾ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವಜನ ಅಭಿವೃದ್ಧಿ ಸಚಿವೆಯಾಗಿದ್ದಾರೆ. ಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ರೋಜಾ, ತಾವು ಜಡ್ಜ್ ಆಗಿದ್ದ ಜಬರ್ದಸ್ತ್ ಕಾರ್ಯಕ್ರಮದಿಂದ ಹೊರ ಬಂದಿದ್ದರು. ಇನ್ನು ಮುಂದೆ ರಾಜಕೀಯದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುತ್ತೇನೆ ಎಂದು ಕೂಡಾ ಹೇಳಿದ್ದರು.
ಇನ್ನು ರೋಜಾಗೆ ಸಚಿವೆ ಸ್ಥಾನ ದೊರೆತ ನಂತರ ಅಭಿಮಾನಿಗಳು, ಸ್ನೇಹಿತರು, ಕುಟುಂಬ ವರ್ಗ ರೋಜಾಗೆ ಅಭಿನಂದಿಸಿತ್ತು. ರೋಜಾ ಅಣ್ಣ, ತಂಗಿ ಮಿನಿಸ್ಟರ್ ಆದ ಖುಷಿಗೆ ಆಕೆಗೆ ಹಗ್ ಮಾಡಿ ಮುತ್ತು ಕೊಟ್ಟಿದ್ದರು. ಆದರೆ ಈ ಫೋಟೋ ಹಾಗೂ ವಿಡಿಯೋ ಸಂಬಂಧ ಕೆಲವರು ಅಸಭ್ಯವಾಗಿ ಟ್ರೋಲ್ ಮಾಡಿದ್ದರು. ಈ ರೀತಿ ಮುತ್ತು ಕೊಟ್ಟಿದ್ದು ಅವಶ್ಯಕತೆ ಇದೆಯಾ...? ಎಂದು ವ್ಯಂಗ್ಯವಾಡಿದ್ದರು. ಈ ಟ್ರೋಲ್ ಬಗ್ಗೆ ಇದೀಗ ರೋಜಾ ಸ್ಪಂದಿಸಿದ್ದಾರೆ. ಒಡಹುಟ್ಟಿದ ಅಣ್ಣ, ತನ್ನ ತಂಗಿಗೆ ಮುತ್ತು ಕೊಡುವುದರಲ್ಲಿ ಏನು ತಪ್ಪಿದೆ? ಎಂದು ರೋಜಾ ಪ್ರಶ್ನಿಸಿದ್ದಾರೆ. ಅಶ್ಲೀಲ ಮನಸ್ಸುಗಳ ವರ್ತನೆಗೆ ಕಣ್ಣೀರು ಹಾಕಿದ್ದಾರೆ.
ಇತ್ತೀಚೆಗೆ ಸುಮನ್ ಟಿವಿ ಎಂಬ ತೆಲುಗು ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ ರೋಜಾ, ಟ್ರೋಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ' 'ನನ್ನ ಬಗ್ಗೆ ಇದುವರೆಗೂ ಸಾಕಷ್ಟು ಟ್ರೋಲ್ ಮಾಡಿದ್ದಾರೆ. ಆದರೆ ಅದರ ಬಗ್ಗೆ ನನಗೆ ಬೇಸರ ಆಗಲಿಲ್ಲ. ಈ ಟ್ರೋಲ್ ನನ್ನ ಮನಸ್ಸಿಗೆ ಬಹಳ ನೋವುಂಟುಮಾಡಿದೆ. ನನಗೆ ಅಣ್ಣ ಎಂದರೆ ಬಹಳ ಇಷ್ಟ. ಅಪ್ಪ-ಅಮ್ಮ ನಿಧನರಾದ ನಂತರ ಇಬ್ಬರು ಅಣ್ಣಂದಿರೇ ಅವರ ಸ್ಥಾನದಲ್ಲಿ ನನ್ನನ್ನು ನೋಡಿಕೊಂಡರು. ಏನೇ ಕಷ್ಟ, ಸುಖ ಇದ್ದರೂ ನಾವು ಮೂವರೂ ಜೊತೆಯಾಗಿದ್ದೇವೆ. ಚಿಕ್ಕ ಅಣ್ಣ ರಾಮ್ ಪ್ರಸಾದ್ ರೆಡ್ಡಿ ಎಂದರೆ ನನಗೆ ಸ್ವಲ್ಪ ಹೆಚ್ಚಿಗೆ ಪ್ರೀತಿ. ಚಿಕ್ಕಂದಿನಲ್ಲಿ ಇಬ್ಬರೂ ಅಣ್ಣಂದಿರೇ ನನ್ನನ್ನು ಟ್ಯೂಷನ್, ಸ್ಕೂಲ್, ಕಾಲೇಜ್ ನಂತರ ನನ್ನ ಶೂಟಿಂಗ್ ಲೊಕೇಶನ್‌ಗೆ ಕರೆದೊಯ್ಯುತ್ತಿದ್ದರು. ಮಿನಿಸ್ಟರ್ ಆದ ನಂತರವೂ ಇಬ್ಬರೂ ನನಗೆ ಬೆಂಬಲ ನೀಡುತ್ತಿದ್ದಾರೆ. ''
''ತಮ್ಮ ಜೀವನಕ್ಕಿಂತ ಹೆಚ್ಚಾಗಿ ನನ್ನ ಬಗ್ಗೆ ಅವರಿಗೆ ಹೆಚ್ಚು ಜವಾಬ್ದಾರಿ ಇದೆ. ನನ್ನನ್ನು ಅಷ್ಟು ಇಷ್ಟ ಪಡುವ ಅಣ್ಣಂದಿರು, ನಾನು ಸಚಿವೆ ಆದಾಗ ಖುಷಿಯಿಂದ ಹಗ್ ಮಾಡಿ ಮುತ್ತು ಕೊಟ್ಟು ಶುಭ ಕೋರಿದ್ದನ್ನು ಕೆಲವರು ಅಸಭ್ಯವಾಗಿ ಬರೆದಿದ್ದಾರೆ. ಅವರಿಗೆ ಅಂತಹ ಕೆಟ್ಟ ಮನಸ್ಸು ಹೇಗೆ ಬಂತೋ ನನಗೆ ತಿಳಿಯುತ್ತಿಲ್ಲ. ಮನೆಯಲ್ಲಿ ಅಣ್ಣ, ತಂಗಿ, ಅಕ್ಕ, ತಮ್ಮ ಇರುವವರಿಗೆ ಆ ಅನುಬಂಧ ಏನು ಎಂಬುದು ತಿಳಿಯುತ್ತದೆ. ಆದರೆ ಯಾರೂ ಇಲ್ಲದವರು ಈ ರೀತಿ ಟ್ರೋಲ್ ಮಾಡುತ್ತಾರೆ. ಈ ರೀತಿ ಕೆಟ್ಟದಾಗಿ ಟ್ರೋಲ್ ಮಾಡುವವರು ನಿಜವಾಗಿಯೂ ಮನುಷ್ಯರಲ್ಲ. ದೇವರು ಅವರಿಗೆ ಖಂಡಿತ ಶಿಕ್ಷೆ ನೀಡುತ್ತಾನೆ'' ಎಂದು ಹೇಳಿಕೊಂಡು ರೋಜಾ ಕಣ್ಣೀರಿಟ್ಟಿದ್ದಾರೆ.
''ಈ ಟ್ರೋಲ್‌ನಿಂದ ನನ್ನ ಮಕ್ಕಳಿಗೂ ಬಹಳ ನೋವಾಗಿದೆ. ಟ್ರೋಲ್ ಮಾಡಿದವರಿಗೆ ಇದರಿಂದ ಏನು ಪ್ರಯೋಜನ? ನಾನು ಯಾರಿಗೂ ತೊಂದರೆ ಮಾಡಿಲ್ಲ. ರಾಜಕೀಯದಲ್ಲಿ ಏನಾದರೂ ತಪ್ಪಿದ್ದರೆ, ಮಂತ್ರಿಯಾಗಿ ಏನಾದರೂ ತಪ್ಪು ಮಾಡಿದ್ದರೆ ಪ್ರಶ್ನೆ ಮಾಡಲಿ. ಆದರೆ ಅಣ್ಣ-ತಂಗಿಯ ಪವಿತ್ರ ಸಂಬಂಧವನ್ನು ಈ ರೀತಿ ಟ್ರೋಲ್ ಮಾಡುವುದು ತಪ್ಪು. ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ಬಹಳ ಗೌರವ ಇದೆ. ಆದರೆ ಇಂತಹ ಜನಗಳಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿರುವುದು ನಿಜಕ್ಕೂ ಬೇಸರದ ವಿಚಾರ'' ಎಂದು ರೋಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.