ಅಮೆರಿಕ ಪ್ರಜೆಯನ್ನು ಮದುವೆಯಾದರೂ ಮಕ್ಕಳನ್ನು ಹಿಂದೂಗಳನ್ನಾಗಿ ಬೆಳೆಸುತ್ತಿದ್ದಾರಂತೆ ನಟಿ ಪ್ರೀತಿ ಜಿಂಟಾ
ಬಾಲಿವುಡ್ ನಟಿ ಹಾಗೂ ಪಂಜಾಬ್ ಕಿಂಗ್ಸ್ ಸಹ-ಮಾಲಕಿಯೂ ಆದ ಪ್ರೀತಿ ಜಿಂಟಾ ಮದುವೆಯಾಗಿ ಅಮೆರಿಕದಲ್ಲಿ ವಾಸಿಸುತ್ತಿದ್ದರೂ, ಮಕ್ಕಳನ್ನು ಹಿಂದೂಗಳನ್ನಾಗಿ ಬೆಳೆಸುತ್ತಿದ್ದೇವೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಐಪಿಎಲ್ ಹವಾ ಜೋರಾಗಿದೆ. ಈ ನಡುವೆ ಬಾಲಿವುಡ್ ನಟಿ ಹಾಗೂ ಪಂಜಾಬ್ ಕಿಂಗ್ಸ್ ಸಹ-ಮಾಲಕಿಯೂ ಆದ ಪ್ರೀತಿ ಜಿಂಟಾ ಅವರು ತಮ್ಮ ಮಕ್ಕಳ ಬಗ್ಗೆ ಅಭಿಮಾನಿಗಳಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಪ್ರೀತಿ ಜಿಂಟಾ ಅಮೆರಿಕನ್ ಪ್ರಜೆ ಜೀನ್ ಗುಡೆನೊಫ್‍ನನ್ನು ಮದುವೆಯಾಗಿ ಅಮೆರಿಕದಲ್ಲಿ ವಾಸಿಸುತ್ತಿದ್ದರೂ ಮಕ್ಕಳನ್ನು ಹಿಂದೂಗಳನ್ನಾಗಿ ಬೆಳೆಸುತ್ತಿದ್ದೇವೆ ಎಂದು ಬಹಿರಂಗಪಡಿಸಿದ್ದಾರೆ.
ಮಕ್ಕಳನ್ನು ಹಿಂದೂಗಳನ್ನಾಗಿ ಬೆಳೆಸುತ್ತಿದ್ದಾರಂತೆ ಪ್ರೀತಿ ಜಿಂಟಾ
ಎಕ್ಸ್‌ನಲ್ಲಿ ತನ್ನ ಅಭಿಮಾನಿಗಳೊಂದಿಗೆ ನಡೆಸಿದ ಸಣ್ಣ ಮಾತುಕತೆಯಲ್ಲಿ, ಪ್ರೀತಿ ಜಿಂಟಾ ಈ ವಿಚಾರ ಹೊರ ತಂದಿದ್ದಾರೆ. ತಾಯಿಯಾದ ನಂತರ ಮತ್ತು ವಿದೇಶದಲ್ಲಿ ವಾಸಿಸಿದ ನಂತರ ತನ್ನ ಮಕ್ಕಳು ತಾವು ಅರ್ಧ ಭಾರತೀಯರು ಎಂಬುದನ್ನು ಮರೆಯಬಾರದು ಎಂದು ತಾನು ಬಯಸುತ್ತೇನೆ. ತನ್ನ ಪತಿ ನಾಸ್ತಿಕವಾದಿಯಾಗಿರುವುದರಿಂದ ಮಕ್ಕಳನ್ನು ಹಿಂದೂಗಳನ್ನಾಗಿ ಬೆಳೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ದುಃಖಕರ ವಿಷಯವನ್ನು ಹಂಚಿಕೊಂಡ ಪ್ರೀತಿ ಜಿಂಟಾ, ತಾನು ನಿರಂತರವಾಗಿ ಟೀಕೆಗಳನ್ನು ಎದುರಿಸಬೇಕಾಗಿದೆ. ತನ್ನ ಆಯ್ಕೆಯನ್ನು ಯಾವಾಗಲೂ ರಾಜಕೀಯಗೊಳಿಸುವುದರಿಂದ ಈ ಸಂತೋಷವನ್ನು ಕಸಿದುಕೊಳ್ಳಲಾಗುತ್ತಿದೆ. ಮಕ್ಕಳಿಗೆ ಅವರ ಬೇರುಗಳು ಮತ್ತು ಧರ್ಮದ ಬಗ್ಗೆ ಕಲಿಸುವಲ್ಲಿ ಹೆಮ್ಮೆಪಡುವುದಕ್ಕೆ ತಾನು ಯಾವಾಗಲೂ ಉತ್ತರಿಸುತ್ತಲೇ ಇರಬೇಕು ಎಂದು ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಪ್ರೀತಿ ಅವರ ಚಲನವಲನಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯವಾಗಿರುವುದು, ಅವರು ರಾಜಕೀಯಕ್ಕೆ ಪ್ರವೇಶಿಸುವುದನ್ನು ಸೂಚಿಸುತ್ತದೆಯೇ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಲು ಹೊರಟಾಗ ನಟಿ ತನ್ನ ಮಕ್ಕಳನ್ನು ಹಿಂದೂಗಳನ್ನಾಗಿ ಬೆಳೆಸುತ್ತಿದ್ದೇವೆ. ಭಾರತದ ಹೊರಗೆ ವಾಸಿಸುವುದರಿಂದ ತಾಯ್ನಾಡಿನ ನಿಜವಾದ ಮೌಲ್ಯವನ್ನು ಅರಿತುಕೊಂಡೆ ಎಂಬ ವಿಚಾರವನ್ನು ತಿಳಿಸಿದರು.
ಅಂದಹಾಗೆ, ಪ್ರೀತಿ ಮಕ್ಕಳ ಬಗ್ಗೆ ಹೇಳುವುದಾದರೆ, ದಂಪತಿಗಳು 2021 ರಲ್ಲಿ ಬಾಡಿಗೆ ತಾಯಿ ಮೂಲಕ ತಮ್ಮ ಅವಳಿ ಮಕ್ಕಳನ್ನು ಪಡೆದರು. ಜೈ ಎಂಬ ಗಂಡು ಮಗು ಮತ್ತು ಗಿಯಾ ಎಂಬ ಹೆಣ್ಣು ಮಗುವನ್ನು ಅವರು ಹೊಂದಿದ್ದಾರೆ. 5 ವರ್ಷಗಳ ಹಿಂದೆ ಜೀನ್ ಗುಡೆನೊಫ್‍ನನ್ನು ವಿವಾಹವಾದ ನಟಿ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಪತಿ, ಮಕ್ಕಳೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿದ್ದರೂ ಭಾರತದೊಂದಿಗಿನ ಅವರ ಸಂಬಂಧವು ಸ್ಥಿರವಾಗಿದೆ.