Rashmika Mandanna: ರಶ್ಮಿಕಾ ಮಂದಣ್ಣ ಅಭಿನಯದ ಹೊಸ ಸಿನಿಮಾ ‘ದಿ ಗರ್ಲ್‌ಫ್ರೆಂಡ್’ ಟೀಸರ್ ರಿಲೀಸ್; ಇಲ್ಲೇ ಇದೆ ನೋಡಿ ವಿಡಿಯೋ
ರಶ್ಮಿಕಾ ಮಂದಣ್ಣ ಅಭಿನಯದ ಮತ್ತೊಂದು ಸಿನಿಮಾ ‘ದಿ ಗರ್ಲ್‌ಫ್ರೆಂಡ್’ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ ಅಭಿಮಾನಿಗಳು ಈ ಚಿತ್ರಕ್ಕಾಗಿ ತುಂಬಾ ದಿನ ಕಾಯಲು ಸಾಧ್ಯವಿಲ್ಲ ಬೇಗ ಬಿಡುಗಡೆ ಮಾಡಿ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಪ್ರಸ್ತುತ ಸುಕುಮಾರ್ ಅವರ ಪುಷ್ಪ 2 ದಿ ರೂಲ್‌ನಲ್ಲಿ ನಾಯಕ ನಟಿಯಾಗಿ ಅಭಿನಯಿಸಿ ಸಾಕಷ್ಟು ಪ್ರಶಂಸೆ ಪಡೆದುಕೊಂಡಿದ್ದಾರೆ. ಈ ಚಿತ್ರದ ಬೆನ್ನಲ್ಲೇ ಇನ್ನೊಂದು ಹೊಸ ಸಿನಿಮಾದ ಬಗ್ಗೆ ಸುದ್ದಿ ಹಂಚಿಕೊಂಡಿದ್ದರು. ಈಗ ಅವರ ಹೊಸ ಸಿನಿಮಾ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಟೀಸರ್ ರಿಲೀಸ್ ಆಗಿದೆ. ರಶ್ಮಿಕಾ ಮತ್ತೆ ಒಂದು ರೀತಿಯಲ್ಲಿ ಸಾನ್ವಿ ಜೋಸೆಫ್ ರೀತಿಯಲ್ಲೇ ಕಾಣಿಸಿಕೊಂಡಿದ್ದಾರೆ. ಅಲ್ಲಿ ಕಾಲೇಜ್ ಲೆಕ್ಚರ್ ಆದರೆ ಇಲ್ಲಿ ಸ್ಟೂಡೆಂಟ್.
ದಿ ಗರ್ಲ್‌ಫ್ರೆಂಡ್‌ನ ಟೀಸರ್ ವಿಜಯ್ ದೇವರಕೊಂಡ ಅವರ ಧ್ವನಿಯೊಂದಿಗೆ ಆರಂಭವಾಗುತ್ತದೆ. ಆದರೆ ಟೀಸರ್ ಕೊನೆಯ ವರೆಗೂ ರಶ್ಮಿಕಾ ಮಂದಣ್ಣ ಮಾತ್ರ ಕಾಣಿಸಿಕೊಳ್ಳುತ್ತಾರೆ. ಅವರು ತಮ್ಮ ಕಾಲೇಜಿಗೆ ಬಂದ ಮೊದಲ ದಿನದ ಅನುಭವದಿಂದ ಹಿಡಿದು ನಂತರ ಅವರು ಅಲ್ಲಿಗೆ ಹೇಗೆ ಹೊಂದಾಣಿಕೆಯಾದರು ಎಂದು ಈ ಟೀಸರ್‌ನಲ್ಲಿ ಕೆಲ ಸುಳಿವುಗಳು ಸಿಗುತ್ತಾ ಹೋಗುತ್ತದೆ. ವಿಜಯದೇವರಕೊಂಡ ಕೂಡ ಈ ಸಿನಿಮಾದ ಟೀಸರ್‌ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಕೂಡ ಹಂಚಿಕೊಂಡಿದ್ದಾರೆ.
ಇದು ಅವರ ಹೊಸ ತೆಲುಗು ಸಿನಿಮಾ ಆಗಿದೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅವರ ಅಭಿಮಾನಿಗಳು ಒಂದಾದ ನಂತರ ಇನ್ನೊಂದು ಸಿನಿಮಾವನ್ನು ನೋಡಲು ಕಾದು ಕುಳಿತಿರುತ್ತಾರೆ. ನ್ಯಾಷನಲ್ ಕ್ರಶ್ ಎಂದೇ ಹೆಸರು ಪಡೆದಿರುವ ರಶ್ಮಿಕಾ ಅವರ ಅಭಿನಯವನ್ನು ಜನರು ಮೆಚ್ಚಿಕೊಂಡಿದ್ದಾರೆ.
ಹೇಗಿದೆ ಟೀಸರ್
ಈ ಟೀಸರ್ ತುಂಬಾ ಸುಂದರವಾಗಿ ಮೂಡಿ ಬಂದಿದೆ ಎಂದು ಸಾಕಷ್ಟು ಜನರು ಹೊಗಳುತ್ತಿದ್ದಾರೆ. ಅಂತಹ ಸುಂದರವಾದ ಟೀಸರ್ ರಶ್ಮಿಕಾ + ವಿಜಯ್ ಅವರ ಧ್ವನಿ+ ಹೇಶಮ್ ಅವರ ಸಂಗೀತ ತುಂಬಾ ಉತ್ತಮವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಈ ಸಿನಿಮಾ ಯಾವಾಗ ಬರುತ್ತದೆ ಎಂದು ಕಾಯಲು ಸಾಧ್ಯವಾಗುತ್ತಿಲ್ಲ. ಈ ಸಿನಿಮಾವನ್ನು ಆದಷ್ಟು ಬೇಗ ಬಿಡುಗಡೆ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ಎಲ್ಲವನ್ನು ನೋಡುತ್ತಿದ್ದರೆ ಅಭಿಮಾನಿಗಳು ಎಷ್ಟು ಕುತೂಹಲ ಹಾಗೂ ಕಾತರತೆ ಹೊಂದಿದ್ದಾರೆ ಎಂದು ಅರ್ಥವಾಗುತ್ತದೆ.
ವಿಜಯ್ ಹಾಗೂ ರಶ್ಮಿಕಾ ಕೊಟ್ಟ ಸೂಚನೆಯಾ ಇದು?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್‌ನಂತಹ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈಗ ಮತ್ತೊಂದು ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಸದ್ದು ಮಾಡಿದ್ದಾರೆ. ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ ಇವರು ಈ ಸಿನಿಮಾದ ಹೆಸರು ಹೇಗಿದೆ ನೋಡಿ ದಿ ಗರ್ಲ್ ಫ್ರೆಂಡ್ ಇದು ಅವರಿಬ್ಬರು ಕೊಟ್ಟ ಸೂಚನೆ ಇರಬಹುದು ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ವಿಜಯ್ ಹಾಗೂ ರಶ್ಮಿಕಾ ಅವರಿಬ್ಬರ ಕಾಂಬಿನೇಷನ್ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳುತ್ತಿದ್ದಾರೆ.