Samantha Ruth Prabhu: ವಿಚ್ಛೇದನದ ಬಳಿಕ ಸೆಕೆಂಡ್‌ ಹ್ಯಾಂಡ್‌ ಎಂದು ಟ್ರೋಲ್ ಮಾಡಿದವರ ಬಗ್ಗೆ ಅಸಮಾಧಾನ; ತನಗಾದ ನೋವು ತೋಡಿಕೊಂಡ ಸಮಂತಾ
ಕನ್ನಡ ಸುದ್ದಿ  /  ಮನರಂಜನೆ  /  Samantha Ruth Prabhu: ವಿಚ್ಛೇದನದ ಬಳಿಕ ಸೆಕೆಂಡ್‌ ಹ್ಯಾಂಡ್‌ ಎಂದು ಟ್ರೋಲ್ ಮಾಡಿದವರ ಬಗ್ಗೆ ಅಸಮಾಧಾನ; ತನಗಾದ ನೋವು ತೋಡಿಕೊಂಡ ಸಮಂತಾ

Samantha Ruth Prabhu: ವಿಚ್ಛೇದನದ ಬಳಿಕ ಸೆಕೆಂಡ್‌ ಹ್ಯಾಂಡ್‌ ಎಂದು ಟ್ರೋಲ್ ಮಾಡಿದವರ ಬಗ್ಗೆ ಅಸಮಾಧಾನ; ತನಗಾದ ನೋವು ತೋಡಿಕೊಂಡ ಸಮಂತಾ

ಸಮಂತಾ ವಿಚ್ಛೇದನದ ಬಳಿಕ ಅನುಭವಿಸಿದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ. ಸೆಕೆಂಡ್‌ ಹ್ಯಾಂಡ್‌ ಎಂದು ಟ್ರೋಲ್ ಮಾಡಿದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಂತಾ ತುಂಬಾ ಬೇಸರ ಮಾಡಿಕೊಂಡು ಕೆಲ ಮಾತುಗಳನ್ನಾಡಿದ್ದಾರೆ.

ವಿಚ್ಛೇದನದ ಬಳಿಕ ಸೆಕೆಂಡ್‌ ಹ್ಯಾಂಡ್‌ ಎಂದು ಟ್ರೋಲ್ ಮಾಡಿದವರ ಬಗ್ಗೆ ಅಸಮಾಧಾನ
ವಿಚ್ಛೇದನದ ಬಳಿಕ ಸೆಕೆಂಡ್‌ ಹ್ಯಾಂಡ್‌ ಎಂದು ಟ್ರೋಲ್ ಮಾಡಿದವರ ಬಗ್ಗೆ ಅಸಮಾಧಾನ

ಸಂದರ್ಶನವೊಂದರಲ್ಲಿ ಮಾತನಾಡಿರುವ ಸಮಂತಾ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದ ಬಗ್ಗೆ ಹಲವು ವಿಷಯಗಳನ್ನು ತೆರೆದಿಟ್ಟಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಆದ ನಂತರದಲ್ಲಿ ಏನಾಯ್ತು? ಆ ದಿನಗಳು ಹೇಗಿತ್ತು ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಟ್ರೋಲಿಂಗ್ ಕುರಿತ ಪ್ರಶ್ನೆಗೆ ಸಮಂತಾ ಭಾವುಕವಾಗಿ ಉತ್ತರಿಸಿದ್ದಾರೆ. ನನ್ನ ಬಗ್ಗೆ ಅನೇಕ ಅಸತ್ಯಗಳು ಟ್ರೋಲ್ ಆಗುತ್ತಿದೆ. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸೆಕೆಂಡ್ ಹ್ಯಾಂಡ್ ಎಂದು ಟ್ಯಾಗ್ ಬಳಕೆ ಮಾಡುತ್ತಿದ್ದರು. ಆ ದಿನಗಳು ನನಗೆ ಮತ್ತು ನನ್ನ ಕುಟುಂಬ ಎರಡಕ್ಕೂ ತುಂಬಾ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ. ಅಂತಹ ಮಾತುಗಳು ನೋವುಂಟುಮಾಡುತ್ತವೆ ಎಂದಿದ್ದಾರೆ.

ಕುಟುಂಬ ಮತ್ತು ಸ್ನೇಹಿತರ ಬೆಂಬಲ ಇತ್ತು

ನಾವೇನು ​​ಮಾಡುವುದು? ಇಂತಹ ಸಮಾಜದಲ್ಲಿ ಬದುಕುತ್ತಿದ್ದೇವೆ. ಕಷ್ಟದ ಸಮಯದಲ್ಲಿ ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನ ಬೆಂಬಲಕ್ಕೆ ನಿಂತರು ಎಂದು ಸಮಂತಾ ಹೇಳಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು 2017 ರಲ್ಲಿ ವಿವಾಹವಾಗಿದ್ದರು. ಆದರೆ ಅವರ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. 2021 ರಲ್ಲಿ, ದಂಪತಿಗಳು ಭಿನ್ನಾಭಿಪ್ರಾಯಗಳಿಂದ ವಿಚ್ಛೇದನ ಪಡೆದರು. ಅದರ ನಂತರ, ಸಮಂತಾ ಒಂಟಿಯಾಗಿದ್ದರು. ಇದೀಗ ಅವರ ಪತಿ ನಾಗ ಚೈತನ್ಯ ಎರಡನೇ ಮದುವೆ ಆಗುತ್ತಿದ್ದಾರೆ.

ನಾಗ ಚೈತನ್ಯ ಡಿಸೆಂಬರ್ 4 ರಂದು ಅವರನ್ನು ವರಿಸಲಿದ್ದಾರೆ. ನಾಗ ಚೈತನ್ಯ ಅವರ ಮದುವೆಯ ಸುದ್ದಿ ಹೊರಬಿದ್ದಾಗ ಮತ್ತೆ ಎಲ್ಲರ ಚಿತ್ತ ಸಮಂತಾ ಕಡೆ ಇತ್ತು. ಸಮಂತಾ ಈಗ ಹೇಗೆ ರಿಯಾಕ್ಟ್‌ ಮಾಡುತ್ತಾರೆ ಎಂದು ಜನರಿಗೆ ಕುತೂಹಲ ಇತ್ತು. ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಮಂತಾ ತಮ್ಮ ಮದುವೆಯ ಗೌನ್ ಅನ್ನು ಮರುರೂಪಗೊಳಿಸಿ ಕಪ್ಪು ಬಣ್ಣದಲ್ಲಿ ತೊಟ್ಟಿದ್ದರು. ಆದರೆ ಆ ರೀತಿ ಮಾಡಲು ತನಗೆ ಮನಸ್ಸಿರಲಿಲ್ಲ ಎಂದೂ ಸಹ ಅವರೇ ಹೇಳಿಕೊಂಡಿದ್ದಾರೆ.

ಮನಬಿಚ್ಚಿ ಮಾತನಾಡಿದ ಸಮಂತಾ

ಆದರೆ ಕೆಲವು ಸಂದರ್ಭಗಳಲ್ಲಿ ಬದುಕು ಮುಗಿಯುತ್ತದೆ. ಅಲ್ಲಿಂದ ಮತ್ತೆ ಶುರುವಾಗುತ್ತದೆ ಎಂದಿದ್ದಾರೆ. 2022ರಲ್ಲಿ ಮಯೋಸಿಟಿಸ್‌ನಿಂದ ತೀವ್ರ ತೊಂದರೆ ಎದುರಿಸಿದ್ದ ಸಮಂತಾ ಕೆಲ ದಿನಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದರು. ಅದೇ ಸಮಯಕ್ಕೆ ಸಿಟಾಡೆಲ್ ಹನಿ ಬನ್ನಿ ವೆಬ್ ಸಿರೀಸ್ ಕೂಡ ಶೂಟಿಂಗ್ ಆಗ್ತಿತ್ತು. ಒಂದು ಸಂದರ್ಭದಲ್ಲಿ ತಾನು ಶೂಟಿಂಗ್‌ ಮಾಡುವುದು ಬೇಡ ಎಂದು ಕೂಡ ನಿರ್ಧಾರ ಮಾಡಿದ್ದರಂತೆ. ಈ ರೀತಿಯಾಗಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದರು.

Whats_app_banner