ಕನ್ನಡ ಸುದ್ದಿ  /  ಮನರಂಜನೆ  /  Samantha About Chittibabu:'ಶಾಕುಂತಲಂ' ಸೋಲು: ತನ್ನನ್ನು ನಿಂದಿಸಿದ ನಿರ್ದೇಶಕನಿಗೆ ಭಗವದ್ಗೀತೆ ಪಾಠ ಮಾಡಿದ ಸಮಂತಾ

Samantha about Chittibabu:'ಶಾಕುಂತಲಂ' ಸೋಲು: ತನ್ನನ್ನು ನಿಂದಿಸಿದ ನಿರ್ದೇಶಕನಿಗೆ ಭಗವದ್ಗೀತೆ ಪಾಠ ಮಾಡಿದ ಸಮಂತಾ

ಸಮಂತಾ ಬರೆದಿರುವ ಈ ಸಾಲುಗಳು, ಅವರು ಪರೋಕ್ಷವಾಗಿ ತಮ್ಮನ್ನು ನಿಂದಿಸಿದ ಚಿಟ್ಟಿಬಾಬು ಅವರಿಗೆ ಎಂದು ಸಿನಿಪ್ರಿಯರು ಹೇಳುತ್ತಿದ್ದಾರೆ. ಸಮಂತಾ ಐರನ್‌ ಲೇಡಿ, ನಾಗಚೈತನ್ಯ ಅವರೊಂದಿಗೆ ಡಿವೋರ್ಸ್‌ ಪಡೆದ ನಂತರ ಕೆಲವು ದಿನಗಳ ಕಾಲ ಡಿಪ್ರೆಷನ್‌ನಲ್ಲಿದ್ದ ಆಕೆ, ಮಯೋಸಿಟಿಸ್‌ ಎಂಬ ಕಾಯಿಲೆಗೆ ತುತ್ತಾಗಿದ್ದರು.

ನಿರ್ದೇಶಕ ಚಿಟ್ಟಿಬಾಬುಗೆ ಸಮಂತಾ ತಿರುಗೇಟು
ನಿರ್ದೇಶಕ ಚಿಟ್ಟಿಬಾಬುಗೆ ಸಮಂತಾ ತಿರುಗೇಟು (PC: Twitter)

ಗುಣಶೇಖರ್‌ ನಿರ್ದೇಶನದಲ್ಲಿ ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಶಾಕುಂತಲಂ' ಸಿನಿಮಾ ಏಪ್ರಿಲ್‌ 14ಕ್ಕೆ ತೆರೆ ಕಂಡಿದೆ. ಸಿನಿಮಾ ಬಗ್ಗೆ ಜನರಿಗೆ ಸಾಕಷ್ಟು ಕುತೂಹಲ ಇತ್ತು. ಆದರೆ 65 ಕೋಟಿ ರೂಪಾಯಿ ಖರ್ಚು ಮಾಡಿ ತೆಗೆಯಲಾದ ಸಿನಿಮಾ 10 ಕೋಟಿ ಲಾಭ ಮಾಡುವಲ್ಲಿ ಕೂಡಾ ಸಾಧ್ಯವಾಗಿಲ್ಲ.

ಟ್ರೆಂಡಿಂಗ್​ ಸುದ್ದಿ

'ಶಾಕುಂತಲಂ' ಸಿನಿಮಾ ಬಗ್ಗೆ ಸಿನಿಪ್ರಿಯರಿಗೆ ಬಹಳ ಕುತೂಹಲ ಇತ್ತು. ಆದರೆ ಬಿಡುಗಡೆ ಆಗಿ 2 ದಿನಗಳಲ್ಲೇ ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಮುಗ್ಗರಿಸಿದೆ. ಇದರಿಂದ ಮತ್ತೆ ಸಮಂತಾ ಟ್ರೋಲ್‌ ಆಗಿದ್ದಾರೆ. ಇದಕ್ಕೂ ಮುನ್ನ ತೆರೆ ಕಂಡಿದ್ದ ಸಮಂತಾ ಅಭಿನಯದ 'ಯಶೋಧ' ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಈ ಸಿನಿಮಾ ಸಕ್ಸಸ್‌ ಕಾಣುತ್ತಿದ್ದಂತೆ ಸಮಂತಾ ಸಿನಿಮಾಗಳ ಬಗ್ಗೆ ಸಹಜವಾಗಿಯೇ ಅಭಿಮಾನಿಗಳು, ಸಿನಿಮಾ ಮಂದಿಗೆ ನಿರೀಕ್ಷೆ ಕೂಡಾ ಹೆಚ್ಚಾಯ್ತು. ಆದರೆ ಇದೀಗ 'ಶಾಕುಂತಲಂ' ಮತ್ತೆ ಸಮಂತಾಗೆ ಪೆಟ್ಟು ನೀಡಿದೆ. ಜನ ಸಾಮಾನ್ಯರಿರಲಿ, ಟಾಲಿವುಡ್‌ ನಿರ್ದೇಶಕ ನಿರ್ಮಾಪಕರೇ ಸಮಂತಾ ಅವರ ಕಾಲೆಳೆಯುತ್ತಿದ್ದಾರೆ.

ಟಾಲಿವುಡ್‌ ನಿರ್ಮಾಪಕ, ನಿರ್ದೇಶಕ ಚಿಟ್ಟಿಬಾಬು, ಸಮಂತಾ ಅವರನ್ನು ಕುರಿತು, ''ಇನ್ನು ಸಮಂತಾ ಅಧ್ಯಾಯ ಮುಗಿಯಿತು'' ಎಂದು ವ್ಯಂಗ್ಯವಾಡಿದ್ದಾರೆ. ಚಿಟ್ಟಿಬಾಬು ಅವರ ಮಾತುಗಳು ವೈರಲ್‌ ಆಗುತ್ತಿದ್ದು ಇದು ಸಮಂತಾ ಕಿವಿಗೂ ಬಿದ್ದಿದೆ. ಇದಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ತಮ್ಮ ಫೋಟೋ ಜೊತೆಗೆ ಅವರು ಭಗವದ್ಗೀತೆಯ ಕೆಲವೊಂದು ಸಾಲುಗಳನ್ನು ಬರೆದಿದ್ದಾರೆ.

''ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ, ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ, ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ, ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ''

''ನಿನಗೆ ನಿನ್ನ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷೆಯಾಗಿ ಫಲಕ್ಕೆ ಕಾರಣನೂ ನೀನೆಂದುಕೊಳ್ಳಬೇಡ ಮತ್ತು ಕರ್ಮ ಮಾಡದೇ ಜೀವಿಸಬೇಕೆಂಬ ಹಂಬಲ ನಿನ್ನಲ್ಲಿ ಹುಟ್ಟದಿರಲಿ. ಹಾಗೆ ಗೆಲವು-ಸೋಲುಗಳಿಗೆ ಕುಂದದೆ ಎರಡನ್ನೂ ಸಮಾನಚಿತ್ತದಿಂದ ಸ್ವೀಕರಿಸುತ್ತ ನಿನ್ನ ಕರ್ತವ್ಯಗಳನ್ನು ಮಾಡು. ಈ ಸಮತ್ತ್ವಭಾವವೇ ಯೋಗ'' ಎಂಬುದು ಈ ಶ್ಲೋಕದ ಅರ್ಥ.

ಸಮಂತಾ ಬರೆದಿರುವ ಈ ಸಾಲುಗಳು, ಅವರು ಪರೋಕ್ಷವಾಗಿ ತಮ್ಮನ್ನು ನಿಂದಿಸಿದ ಚಿಟ್ಟಿಬಾಬು ಅವರಿಗೆ ಎಂದು ಸಿನಿಪ್ರಿಯರು ಹೇಳುತ್ತಿದ್ದಾರೆ. ಸಮಂತಾ ಐರನ್‌ ಲೇಡಿ, ನಾಗಚೈತನ್ಯ ಅವರೊಂದಿಗೆ ಡಿವೋರ್ಸ್‌ ಪಡೆದ ನಂತರ ಕೆಲವು ದಿನಗಳ ಕಾಲ ಡಿಪ್ರೆಷನ್‌ನಲ್ಲಿದ್ದ ಆಕೆ, ಮಯೋಸಿಟಿಸ್‌ ಎಂಬ ಕಾಯಿಲೆಗೆ ತುತ್ತಾಗಿದ್ದರು. ಈಗ ಅವರು ಮಾನಸಿಕ, ದೈಹಿಕ ನೋವಿನಿಂದ ಹೊರಗೆ ಬರುತ್ತಿದ್ದಾರೆ. ಯಾರು ಎಷ್ಟು ನೋಯಿಸಿದರೂ ಆಕೆ ಮತ್ತಷ್ಟು ಸ್ಟ್ರಾಂಗ್‌ ಆಗುತ್ತಲೇ ಇರುತ್ತಾರೆ ಎಂದು ಅಭಿಮಾನಿಗಳು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನು ಹೊರತುಪಡಿಸಿ ಸಮಂತಾ ವಿಜಯ್‌ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸಿರೀಸ್ ಖ್ಯಾತಿಯ ರಾಜ್ & ಡಿಕೆ ನಿರ್ದೇಶಿಸುತ್ತಿರುವ 'ಸಿಟಾಡೆಲ್‌' ವೆಬ್‌ ಸೀರೀಸ್‌ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಸದ್ಯಕ್ಕೆ ಲಂಡನ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಸ್ಯಾಮ್‌ ಕೂಡಾ ಲಂಡನ್‌ಗೆ ಹಾರಿದ್ದಾರೆ.

ಟಿ20 ವರ್ಲ್ಡ್‌ಕಪ್ 2024