Shamita Shetty: ಮುರಿದು ಬಿತ್ತು ಶಿಲ್ಪಾ ಶೆಟ್ಟಿ ತಂಗಿಯ ಪ್ರೀತಿ!; ರಾಕೇಶ್‌ ಬಾಪಟ್‌ ಜತೆಗೆ ದೂರವಾಗುತ್ತಿದ್ದೇನೆ ಎಂದ ಶಮಿತಾ...-actress shamita shetty confirms break up with raqesh bapat we are no longer together and have not been for a while ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Shamita Shetty: ಮುರಿದು ಬಿತ್ತು ಶಿಲ್ಪಾ ಶೆಟ್ಟಿ ತಂಗಿಯ ಪ್ರೀತಿ!; ರಾಕೇಶ್‌ ಬಾಪಟ್‌ ಜತೆಗೆ ದೂರವಾಗುತ್ತಿದ್ದೇನೆ ಎಂದ ಶಮಿತಾ...

Shamita Shetty: ಮುರಿದು ಬಿತ್ತು ಶಿಲ್ಪಾ ಶೆಟ್ಟಿ ತಂಗಿಯ ಪ್ರೀತಿ!; ರಾಕೇಶ್‌ ಬಾಪಟ್‌ ಜತೆಗೆ ದೂರವಾಗುತ್ತಿದ್ದೇನೆ ಎಂದ ಶಮಿತಾ...

ಸೆಲೆಬ್ರಿಟಿ ವಲಯದಲ್ಲಿ ಬ್ರೇಕ್‌ ಅಪ್‌, ಪ್ರೇಮಾಂಕುರ, ಡಿವೋರ್ಸ್‌ ವಿಚಾರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ. ಇದೀಗ ಇದೇ ಬ್ರೇಕ್‌ಅಪ್‌ ಬಿರುಗಾಳಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬಾಳಲ್ಲಿಯೂ ಘಟಿಸಿದೆ.

<p>ಮುರಿದು ಬಿತ್ತು ಶಿಲ್ಪಾ ಶೆಟ್ಟಿ ತಂಗಿಯ ಪ್ರೀತಿ!; ರಾಕೇಶ್‌ ಬಾಪಟ್‌ ಜತೆಗೆ ದೂರವಾಗುತ್ತಿದ್ದೇನೆ ಎಂದ ಶಮಿತಾ...</p>
<p>ಮುರಿದು ಬಿತ್ತು ಶಿಲ್ಪಾ ಶೆಟ್ಟಿ ತಂಗಿಯ ಪ್ರೀತಿ!; ರಾಕೇಶ್‌ ಬಾಪಟ್‌ ಜತೆಗೆ ದೂರವಾಗುತ್ತಿದ್ದೇನೆ ಎಂದ ಶಮಿತಾ...</p>

ಮುಂಬೈ: ಸೆಲೆಬ್ರಿಟಿ ವಲಯದಲ್ಲಿ ಬ್ರೇಕ್‌ ಅಪ್‌, ಪ್ರೇಮಾಂಕುರ, ಡಿವೋರ್ಸ್‌ ವಿಚಾರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ. ಇದೀಗ ಇದೇ ಬ್ರೇಕ್‌ಅಪ್‌ ಬಿರುಗಾಳಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬಾಳಲ್ಲಿಯೂ ಘಟಿಸಿದೆ. ಕಲೆ ತಿಂಗಳಿಂದ ಡೇಟಿಂಗ್‌ನಲ್ಲಿದ್ದ ರಾಕೇಶ್‌ ಬಾಪಟ್‌ ಜತೆಗಿನ ಸಂಬಂಧ ಇನ್ನು ಮೇಲೆ ಮುಂದುವರಿಯಲ್ಲ ಎಂದು ಶಮಿತಾ ಶೆಟ್ಟಿ ಹೇಳಿಕೊಂಡಿದ್ದಾರೆ.

ಕಳೆದ ಹಿಂದಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದ ಈ ಜೋಡಿ, ಬಿಗ್‌ ಮನೆಯಲ್ಲಿದ್ದಷ್ಟು ದಿನ ಅನೋನ್ಯವಾಗಿತ್ತು. ಆ ಸ್ನೇಹ, ಬಿಗ್‌ಬಾಸ್‌ ಮುಗಿದ ಬಳಿಕ ಪ್ರೀತಿಯಾಗಿ ಬದಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಜೋಡಿಹಕ್ಕಿಗಳಂತೆ ವಿವರಿಸಿದ್ದರು. ಇದೀಗ ಕಾರಣಾಂತರಗಳಿಂದ ಬೇರೆ ಬೇರೆಯಾಗುತ್ತಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌

ಈ ಬ್ರೇಕ್‌ಅಪ್‌ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಶಮಿತಾ, "ಇದನ್ನು ಸ್ಪಷ್ಟಪಡಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ರಾಕೇಶ್ ಮತ್ತು ನಾನು ಈಗ ಒಟ್ಟಿಗೆ ಇಲ್ಲ. ಆದರೆ ನಮ್ಮಿಬ್ಬರ ಮ್ಯೂಸಿಕ್‌ ಆಲ್ಬಂಗೆ ನೀವು ತುಂಬಾ ಪ್ರೀತಿ ಮತ್ತು ಬೆಂಬಲ ನೀಡಿದ್ದೀರಿ. ಅದಕ್ಕೆ ಧನ್ಯವಾದ" ಎಂದು ಶಮಿತಾ ಬರೆದುಕೊಂಡಿದ್ದಾರೆ.

"ಈವರೆಗೂ ನೀಡಿದ ಪ್ರೀತಿಯನ್ನೇ ಇನ್ನು ಮುಂದೆಯೂ ನೀಡಿ. ನಿಮ್ಮೆಲ್ಲರಿಗೂ ಪ್ರೀತಿಯಿಂದ ಕೃತಜ್ಞತೆಗಳು" ಎಂದು ಅಭಿಮಾನಿಗಳಿಗೂ ಶಮಿತಾ ಮನವಿ ಮಾಡಿದ್ದಾರೆ. ಅಂದಹಾಗೆ, ಶಮಿತಾ ಈ ರೀತಿ ತಮ್ಮ ಸಂಬಂಧವನ್ನು ಘೋಷಣೆ ಮಾಡಿಕೊಳ್ಳುವುದಕ್ಕೂ ಮೊದಲು, ಈ ಜೋಡಿಯ ನಡುವೆ ಯಾವುದೂ ಸರಿ ಇಲ್ಲ ಎಂಬುದು ಕಳೆದ ಕೆಲ ದಿನಗಳಿಂದ ಕೇಳಿಬಂದಿತ್ತು. ಆದರೆ, ಅದು ಅಧಿಕೃತವಾಗಿರಲಿಲ್ಲ.

<p>ಬ್ರೇಕ್‌ಅಪ್‌ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಶಮಿತಾ</p>
ಬ್ರೇಕ್‌ಅಪ್‌ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಶಮಿತಾ

ರಾಕೇಶ್‌ ಬಾಪಟ್‌ ಪೋಸ್ಟ್‌

"ಶಮಿತಾ ಮತ್ತು ನಾನು ಇನ್ನು ಮುಂದೆ ಒಟ್ಟಿಗೆ ಇಲ್ಲ ಎಂಬುದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ವಿಧಿಯು ನಮ್ಮ ಹಾದಿಯನ್ನು ಅತ್ಯಂತ ಅಸಾಮಾನ್ಯ ಸಂದರ್ಭಗಳಲ್ಲಿ ಭೇಟಿ ಮಾಡಿಸಿತು. ನಿಮ್ಮ ಈ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ಖಾಸಗಿ ವ್ಯಕ್ತಿಯಾಗಿರುವ ನಾನು, ಬ್ರೇಕ್‌ಅಪ್‌ ವಿಚಾರವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ಬಯಸುವುದಿಲ್ಲ. ಆದರೂ ಈ ವಿಚಾರ ನಿಮ್ಮ ಹೃದಯವನ್ನು ಒಡೆಯಲಿದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಮೇಲಿನ ಈ ನಿಮ್ಮ ಪ್ರೀತಿ, ಬೆಂಬಲ ಹೀಗೆ ಮುಂದುವರಿಯಲಿ" ಎಂದು ರಾಕೇಶ್‌ ಸಹ ಹೇಳಿಕೊಂಡಿದ್ದಾರೆ.

<p>ಬ್ರೇಕ್‌ಅಪ್‌ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಕೇಶ್‌ ಬಾಪಟ್</p>
ಬ್ರೇಕ್‌ಅಪ್‌ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಕೇಶ್‌ ಬಾಪಟ್

ಕಳೆದ ವರ್ಷದ ಬಿಗ್ ಬಾಸ್‌ನಲ್ಲಿ ಭೇಟಿಯಾದ ಶಮಿತಾ ಮತ್ತು ರಾಕೇಶ್ ಬಾಪಟ್ ಜೋಡಿಯನ್ನು ಜನತೆಯೂ ಮೆಚ್ಚಿಕೊಂಡಿತ್ತು. ಶೋ ಮುಗಿದ ಬಳಿಕ ತಮ್ಮ ಸಂಬಂಧವನ್ನು ಅಧಿಕೃತ ಮಾಡಿದ್ದರು. ಅಷ್ಟೇ ಅಲ್ಲ ಮಾರ್ಚ್‌ನಲ್ಲಿ ಪುಣೆಯಲ್ಲಿನ ರಾಕೇಶ್‌ ಮನೆಗೂ ತೆರಳಿ, ಅವರ ಕುಟುಂಬದವರನ್ನು ಭೇಟಿ ಮಾಡಿ ಬಂದಿದ್ದರು. ಇನ್ನೇನು ಶೀಘ್ರದಲ್ಲಿ ಮದುವೆ ಆಗಲಿದೆ ಎಂದೇ ಪುಕಾರು ಹಬ್ಬಿತ್ತು. ಆದರೆ, ಇದೀಗ ಈ ಜೋಡಿ ತಮ್ಮ ಪ್ರೀತಿ ಸಂಬಂಧದಿಂದಲೇ ದೂರವಾಗಿದ್ದಾರೆ.

ಟ್ರೋಲ್‌ ಮಾಡಿದವರಿಗೆ ಗುನ್ನ ಕೊಟ್ಟಿದ್ದ ರಾಕೇಶ್..

ಶಮಿತಾ ಮತ್ತು ರಾಕೇಶ್‌ ನಡುವಿನ ಬ್ರೇಕ್‌ ಅಪ್‌ ವದಂತಿ ಸುದ್ದಿಯಾಗುತ್ತಿದ್ದಂತೆ, ಇಬ್ಬರನ್ನು ಟಾರ್ಗೇಟ್‌ ಮಾಡಿ ಟ್ರೋಲ್‌ ಮಾಡಲಾಗಿತ್ತು. ಈ ವಿಚಾರಕ್ಕೆ ಮೌನ ಮುರಿದಿದ್ದ ರಾಕೇಶ್‌, "ಯಾರು ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ? ಯಾರು ಯಾರನ್ನು ಮೋಸ ಮಾಡುತ್ತಿದ್ದಾರೆ? ಯಾರು ಏನು ಧರಿಸುತ್ತಾರೆ? ಯಾರ ಕುಟುಂಬ ಉತ್ತಮ ಅಥವಾ ಕೆಟ್ಟದು? ನನ್ನ ಉದ್ದೇಶ ಏನು? ನನ್ನ ದೀರ್ಘಾವಧಿಯ ಗುರಿಗಳು ಯಾವುವು? ನನ್ನ ಅಲ್ಪಾವಧಿಯ ಗೋಲ್ಸ್‌ ಏನು? ನನ್ನ ವೈಯಕ್ತಿಕ ಹಣದ ಹರಿವು ಎಷ್ಟು ಮತ್ತು ನಾನು ಹೇಗೆ ಉಳಿತಾಯ ಮಾಡುವುದು, ಹೇಗೆ ಹೂಡಿಕೆ ಮಾಡುವುದು? ನಾನು ಯಾವ ಕೌಶಲ್ಯಗಳನ್ನು ಕಲಿಯುತ್ತಲೇ ಇರುತ್ತೇನೆ?" ಹೀಗೆ ಒಂದಷ್ಟು ಪ್ರಶ್ನೆಗಳನ್ನು ಹಂಚಿಕೊಂಡ ರಾಕೇಶ್‌, ಟ್ರೋಲ್‌ ಮಾಡುವವರಿಗೆ ಟಾಂಗ್‌ ಕೊಟ್ಟಿದ್ದರು.

mysore-dasara_Entry_Point