ಮೂರನೇ ಮಗುವಿಗೆ ಅಮ್ಮನಾದ ನಟಿ ಶ್ರೀಲೀಲಾ; ಮದುವೆಯಾಗದ ಸಿಂಗಲ್‌ ಪೇರೆಂಟ್‌ ಭಾರತದಲ್ಲಿ ಮಗು ದತ್ತು ಪಡೆಯಬಹುದೇ?
ಕನ್ನಡ ಸುದ್ದಿ  /  ಮನರಂಜನೆ  /  ಮೂರನೇ ಮಗುವಿಗೆ ಅಮ್ಮನಾದ ನಟಿ ಶ್ರೀಲೀಲಾ; ಮದುವೆಯಾಗದ ಸಿಂಗಲ್‌ ಪೇರೆಂಟ್‌ ಭಾರತದಲ್ಲಿ ಮಗು ದತ್ತು ಪಡೆಯಬಹುದೇ?

ಮೂರನೇ ಮಗುವಿಗೆ ಅಮ್ಮನಾದ ನಟಿ ಶ್ರೀಲೀಲಾ; ಮದುವೆಯಾಗದ ಸಿಂಗಲ್‌ ಪೇರೆಂಟ್‌ ಭಾರತದಲ್ಲಿ ಮಗು ದತ್ತು ಪಡೆಯಬಹುದೇ?

ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಶ್ರೀಲೀಲಾ ಇನ್ನೊಂದು ಮಗುವನ್ನು ದತ್ತುಪಡೆದಿದ್ದಾರೆ. ಈ ಹಿಂದೆ ಅನಾಥಾಶ್ರಮದಿಂದ ಗುರು, ಶೋಭಿತಾ ಎಂಬ ಇಬ್ಬರು ವಿಶೇಷಚೇತನ ಮಕ್ಕಳನ್ನು ದತ್ತು ಪಡೆದಿದ್ದರು. ಭಾರತದಲ್ಲಿ ಸಿಂಗಲ್‌ ಪೇರೆಂಟ್‌ ಮಕ್ಕಳನ್ನು ದತ್ತು ಪಡೆಯಬಹುದೇ ಎಂಬ ವಿವರವೂ ಇಲ್ಲಿದೆ.

ಮೂರನೇ ಮಗುವಿಗೆ ಅಮ್ಮನಾದ ನಟಿ ಶ್ರೀಲೀಲಾ; ಸಿಂಗಲ್‌ ಪೇರೆಂಟ್‌ ದತ್ತು ಪಡೆಯಬಹುದೇ?
ಮೂರನೇ ಮಗುವಿಗೆ ಅಮ್ಮನಾದ ನಟಿ ಶ್ರೀಲೀಲಾ; ಸಿಂಗಲ್‌ ಪೇರೆಂಟ್‌ ದತ್ತು ಪಡೆಯಬಹುದೇ?

ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಶ್ರೀಲೀಲಾ ಅವರಿಗೆ ಮಕ್ಕಳ ಮೇಲೆ ವಿಶೇಷ ಪ್ರೀತಿ, ಮಮತೆ. ಇದೀಗ ಇವರು ಮೂರನೇ ಮಗುವಿಗೆ ಅಮ್ಮನಾಗಿದ್ದಾರೆ. ಹೆಣ್ಣು ಮಗುವನ್ನು ಇವರು ದತ್ತು ಪಡೆದಿದ್ದು, ಮುದ್ದಾದ ಮಗಳ ಹೃದಯಸ್ಪರ್ಶಿ ಫೋಟೋಗಳನ್ನು ಮತ್ತು ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಅನಾಥಾಶ್ರಮದಿಂದ ಗುರು, ಶೋಭಿತಾ ಎಂಬ ಇಬ್ಬರು ವಿಶೇಷಚೇತನ ಮಕ್ಕಳನ್ನು ದತ್ತು ಪಡೆದಿದ್ದರು.

ಇನ್‌ಸ್ಟಾಗ್ರಾಂನಲ್ಲಿ ಹೃದಯಸ್ಪರ್ಶಿ ಪೋಸ್ಟ್‌

ದಕ್ಷಿಣ ಭಾರತದ ಜನಪ್ರಿಯ ನಟಿ ಶ್ರೀಲೀಲಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 'ಮನೆಗೆ ಹೊಸ ಸೇರ್ಪಡೆ' ಎಂದು ತನ್ನ ಮೂರನೇ ಮಗುವನ್ನು ಪರಿಚಯಿಸಿದ್ದಾರೆ. ಈ ಮಗುವನ್ನು ನಟಿ ಅತಿಯಾಗಿ ಮುದ್ದು ಮಾಡುತ್ತಿರುವುದು ವಿಡಿಯೋದಲ್ಲಿದೆ. ಕಿಸ್‌ ಕಿಸ್ಸಿಕ್‌ ಹಾಡಿಗೆ ಮಗುವಿನೊಂದಿಗೆ ನಟಿ ಶ್ರೀಲೀಲಾ ಪೋಸ್‌ ನೀಡಿದ್ದಾರೆ. "ಮನೆಗೆ ಬರುವೆಯಾ" ಎಂದು ಆ ಮಗುವನ್ನು ಮುದ್ದೆಗೆರೆಯುತ್ತ ನಟಿ ಪ್ರೀತಿಸುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈಕೆಯ ಈ ವಿಡಿಯೋ ಮತ್ತು ಪೋಸ್ಟ್‌ಗಳು ನೆಟ್ಟಿಗರ ಹೃದಯ ಗೆದ್ದಿದೆ. ಮೊದಲ ಫೋಟೋದಲ್ಲಿ ಇವರು ಆ ಪುಟ್ಟ ಮಗುವಿನ ಕೆನ್ನೆಗೆ ಪ್ರೀತಿಯ ಸಿಹಿಮುತ್ತು ನೀಡಿದ್ದಾರೆ. ಎರಡನೇ ಫೋಟೋದಲ್ಲಿ ಇವರಿಬ್ಬರು ನಗುತ್ತಿದ್ದಾರೆ ಈ ಫೋಟೋಗಳ ಜತೆಗೆ ಮನೆಗೆ ಹೊಸ ಸೇರ್ಪಡೆ ಎಂದು ಬರೆದಿದ್ದಾರೆ. ಬಿಳಿಯ ಹೃದಯ ಮತ್ತು ದುಷ್ಟ ಕಣ್ಣಿನ ಎಮೋಜಿಯನ್ನು ಹಾಕಿದ್ದಾರೆ.

ನಟಿ ಶ್ರೀಲೀಲಾ ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ತನ್ನ 21ನೇ ವಯಸ್ಸಿನಲ್ಲಿ 2022ರಲ್ಲಿ ಅನಾಥಾಶ್ರಮಕ್ಕೆ ಭೇಟಿ ನೀಡಿದ ನಂತರ ಗುರು ಮತ್ತು ಶೋಭಿತಾ ಎಂಬಿಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ಪಡೆದಿದ್ದಾರೆ. ಅಂದಿನಿಂದ ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ.

ಮದುವೆಯಾಗದೆ ಇದ್ದರೂ ಭಾರತದಲ್ಲಿ ಮಗು ದತ್ತು ಪಡೆಯಬಹುದೇ?

ಈ ಸಂದೇಹ ಸಾಕಷ್ಟು ಜನರಲ್ಲಿ ಇರಬಹುದು. ಭಾರತದ ದತ್ತು ನಿಯಮದಲ್ಲಿ ಈ ಹಿಂದೆ 25-60 ವರ್ಷ ವಯಸ್ಸಿನ ಯಾರೂ ದಂಪತಿಗೆ ಮಕ್ಕಳನ್ನು ದತ್ತು ಪಡೆಯಲು ಅವಕಾಶ ನೀಡಲಾಗಿತ್ತು. ಆದರೆ, ಸಿಂಗಲ್‌ ಪೇರೆಂಟ್‌ ಪುರುಷನಿಗೆ ಹೆಣ್ಣು ಮಗುವನ್ನು ದತ್ತು ಪಡೆಯಲು ಅವಕಾಶ ನೀಡಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ದತ್ತು ನಿಯಮಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮದುವೆಯಾಗದೆ ಇದ್ದರೂ 25-60 ವರ್ಷ ವಯಸ್ಸಿನ ಯಾರೂ ಬೇಕಾದರೂ ಮಗುವನ್ನು ದತ್ತು ಪಡೆಯಲು ಅವಕಾಶ ನೀಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಪ್ರಕಾರ ಅವಿವಾಹಿತರು, ವಿವಾಹಿತರು, ಡಿವೋರ್ಸ್‌ ಪಡೆದವರು, ಕಾನೂನು ಪ್ರಕಾರ ಬೇರ್ಪಟ್ಟವರು, ಏಕ ಪೋಷಕ ಮಹಿಳೆ, ಏಕ ಪೋಷಕ ಪುರುಷ ಮಗುವನ್ನು ದತ್ತು ಪಡೆಯಬಹುದಾಗಿದೆ. ಇದಕ್ಕೂ ಮುನ್ನ ಇದ್ದ ಕಾನೂನಿನಲ್ಲಿ ಮದುವೆಯಾದವರಿಗೆ ಮತ್ತು ಸಹ ಜೀವನ ನಡೆಸುತ್ತಿರುವ ದಂಪತಿಗೆ ಸೆಂಟ್ರಲ್‌ ಅಡಾಪ್ಷನ್‌ ಅಥಾರಿಟಿಯು ದತ್ತು ಪಡೆಯಲು ಅವಕಾಶ ನೀಡಿತ್ತು.

ಭಾರತದಲ್ಲಿ ಸಿಂಗಲ್‌ ಪೇರೆಂಟ್‌ ಪುರುಷ ಮಗುವನ್ನು ದತ್ತು ಪಡೆಯಲು ಅವಕಾಶವಿಲ್ಲ. ಆದರೆ, ಸಿಂಗಲ್‌ ಪೇರೆಂಟ್‌ ಮಹಿಳೆಯು ಹೆಣ್ಣು ಅಥವಾ ಗಂಡು ಮಗುವನ್ನು ದತ್ತು ಪಡೆಯಬಹುದು. ಮಗುವಿಗೂ ದತ್ತು ಪಡೆಯುವವರಿಗೂ 25 ವರ್ಷ ವಯೋಮಿತಿಯಲ್ಲಿ ಅಂತರ ಇರಬೇಕು. ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ವಿವರ ಪಡೆಯಲು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ (ಸೆಂಟ್ರಲ್‌ ಅಡಾಪ್ಷನ್‌ ಅಥಾರಿಟಿ) ವೆಬ್‌ಸೈಟ್‌ carings.wcd.gov.in/ಗೆ ಭೇಟಿ ನೀಡಿ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in