ಐಟಂ ಡಾನ್ಸರ್‌ಗೆ ಕಿಮ್ಮತ್ತಿಲ್ವಾ? ವೇದಿಕೆ ಮೇಲೆಯೇ ಊರ್ವಶಿ ರೌಟೇಲಾಗೆ ಇದೆಂಥ ಅವಮಾನ, ಬಾಲಣ್ಣನ ನಡೆಗೆ ಕಣ್ಣರಳಿಸಿದ ನಟಿ VIDEO
ಡಾಕು ಮಹಾರಾಜ್ ಸಿನಿಮಾ ಬಿಡುಗಡೆ ಆಗಿ 3 ವಾರದ ಮೇಲಾಯಿತು. ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಇದೇ ಸಿನಿಮಾದ ಸಕ್ಸಸ್ ಪಾರ್ಟಿ ಆಯೋಜಿಸಿತ್ತು ಚಿತ್ರತಂಡ. ವೇದಿಕೆ ಮೇಲೆ ಚಿತ್ರದಲ್ಲಿ ನಟಿಸಿದ ಪ್ರಮುಖ ಕಲಾವಿದರು ಹಾಜರಾಗಿದ್ದರು. ಆದರೆ, ನಟಿ ಊರ್ವಶಿ ರೌಟೇಲಾ ಅವರನ್ನು ಕಡೆಗಣಿಸಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Urvashi Rautela: ಟಾಲಿವುಡ್‌ನ ಹಿರಿಯ ನಟ ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್ ಸಿನಿಮಾ ಜನವರಿ 12ರಂದು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ವಿಮರ್ಶೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಈ ಸಿನಿಮಾ, ಕಲೆಕ್ಷನ್ ವಿಚಾರದಲ್ಲಿ ಸದ್ದು ಮಾಡಿತ್ತು. ಬಾಬಿ ಕೊಲ್ಲಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರವನ್ನು ಸಂಗೀತದ ಮೂಲಕವೇ ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದರು ಎಸ್.ಎಸ್. ತಮನ್. ಬಾಲಿವುಡ್ ನಟ ಬಾಬಿ ಡಿಯೋಲ್ ಖಳನಾಯಕನಾಗಿ ನಟಿಸಿದರೆ, ಪ್ರಗ್ಯಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್, ಚಾಂದಿನಿ ಚೌಧರಿ ಈ ಚಿತ್ರದ ನಾಯಕಿಯರು. ಊರ್ವಶಿ ರೌಟೇಲಾ ಐಟಂ ಹಾಡಿನಲ್ಲಿ ಮಿಂಚಿದ್ದರು.
ಇದೀಗ ಸಿನಿಮಾ ಬಿಡುಗಡೆ ಆಗಿ 3 ವಾರದ ಮೇಲಾಯಿತು. ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಇದೇ ಸಿನಿಮಾದ ಸಕ್ಸಸ್ ಪಾರ್ಟಿಯನ್ನು ಆಯೋಜಿಸಿತ್ತು ಚಿತ್ರತಂಡ. ವೇದಿಕೆ ಮೇಲೆ ಚಿತ್ರದಲ್ಲಿ ನಟಿಸಿದ ಪ್ರಮುಖ ಕಲಾವಿದರು ಹಾಜರಾಗಿದ್ದರು. ಆದರೆ, ವೇದಿಕೆ ಮೇಲಿದ್ದ ನಟಿ ಊರ್ವಶಿ ರೌಟೇಲಾ ಅವರನ್ನು ಕಡೆಗಣಿಸಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಿತ್ರತಂಡದ ನಡೆಯನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ. ಬಾಲಯ್ಯ ಅವರನ್ನೂ ಟ್ರೋಲ್ ಮಾಡುತ್ತಿದ್ದಾರೆ. ಕಲಾವಿದರನ್ನು ಒಂದೇ ರೀತಿ ನೋಡುವ ಮನಸ್ಥಿತಿ ಬೆಳೆಸಿಕೊಳ್ಳಿ ಎಂದೂ ನೆಟ್ಟಿಗರು ಕಾಮೆಂಟ್ ಹಾಕುತ್ತಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಡಾಕು ಮಹಾರಾಜ್ ಸಿನಿಮಾ ಗೆದ್ದ ಬೆನ್ನಲ್ಲೇ, ಹೈದರಾಬಾದ್‌ನಲ್ಲಿ ಸಕ್ಸಸ್ ಪಾರ್ಟಿ ಆಯೋಜಿಸಲಾಗಿತ್ತು ಚಿತ್ರತಂಡ. ಬಹುತೇಕ ಎಲ್ಲ ಮುಖ್ಯ ಪಾತ್ರಧಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೀಗಿರುವಾಗಲೇ ವೇದಿಕೆ ಮೇಲೆ ಚಿತ್ರದ ನಾಯಕಿಯರಾದ ಪ್ರಗ್ಯಾ ಜೈಸ್ವಾಲ್ ಮತ್ತು ಶ್ರದ್ಧಾ ಶ್ರೀನಾಥ್ ಅವರನ್ನು ತಮ್ಮ ಎಡ ಬಲಕ್ಕೆ ನಿಲ್ಲಿಸಿಕೊಂಡ ಬಾಲಕೃಷ್ಣ ಫೋಟೋಗಳಿಗೆ ಪೋಸ್ ನೀಡಿದರು. ಆದರೆ, ನಾಯಕ ನಟಿಯರ ಆಗಮನಕ್ಕೂ ಮುನ್ನವೇ ವೇದಿಕೆ ಮೇಲಿದ್ದ ಊರ್ವಶಿ ರೌಟೇಲಾ ಅವರನ್ನು ನೋಡಿಯೂ ನೋಡದಂತಿದ್ದ ಬಾಲಣ್ಣ, ಅವರನ್ನು ಫೋಟೋಕ್ಕೆ ಆಹ್ವಾನಿಸಲಿಲ್ಲ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟೀಕೆಗಳು ವ್ಯಕ್ತವಾಗುತ್ತಿವೆ.
ಕಣ್ಣರಳಿಸಿದ ಊರ್ವಶಿ
ಊರ್ವಶಿ ಅವರನ್ನು ಬಿಟ್ಟು ಇನ್ನಿಬ್ಬರು ನಟಿಯರನ್ನಷ್ಟೇ ಕರೆದು, ಫೋಟೋಗಳಿಗೆ ಬಾಲಕೃಷ್ಣ ಪೋಸ್ ನೀಡಿದ್ದಾರೆ. ಇತ್ತ ಅವರ ಹಿಂದೆಯೇ ನಿಂತಿದ್ದ ಊರ್ವಶಿ ಕಣ್ಣರಳಿಸಿದ್ದಾರೆ. ಮುಖದ ಭಾವನೆಗಳ ಮೂಲಕವೇ ತಮ್ಮೊಳಗಿನ ಅಸಮಾಧಾನವನ್ನು ವೇದಿಕೆ ಮೇಲೆಯೇ ತೋರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಬಗೆಬಗೆ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. "ಇದರ ಅರ್ಥ ಏನೆಂದರೆ, ಪ್ರತಿ ಸಲವೂ ಬ್ಯೂಟಿ ವರ್ಕ್ ಆಗಲ್ಲ..", "ನಾಯಕ ನಟನಿಂದ ಕಡೆಗಣಿಸಲ್ಪಟ್ಟ ಭಾರತದ ಮೊದಲ ನಾಯಕಿ", "ಇದರಿಂದಲೇ ಬಹುತೇಕ ನಟಿಯರು ಡಿಪ್ರೆಷನ್‌ಗೆ ಹೋಗ್ತಾರೆ" ಎಂಬ ತರಹೇವಾರು ಕಾಮೆಂಟ್ ಸಂದಾಯವಾಗುತ್ತಿವೆ.
ದಬಿದಿ ದಿಬಿಡಿ ಹಾಡಿಗೆ ಕಟು ಟೀಕೆ..
ಡಾಕು ಮಹಾರಾಜ್ ಚಿತ್ರದ 'ದಬಿಡಿ ದಿಬಿಡಿ..' ಸಾಹಿತ್ಯದ ಟಪ್ಪಾಂಗುಚ್ಚಿ ಹಾಡೂ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಹಾಡಿನಲ್ಲಿ ನಂದಮೂರಿ ಬಾಲಕೃಷ್ಣ ಜತೆಗೆ ಊರ್ವಶಿ ರೌಟೇಲಾ ಸಖತ್ ಬೋಲ್ಡ್ ಆಗಿಯೇ ಹೆಜ್ಜೆ ಹಾಕಿದ್ದರು. ಕೆಟ್ಟ ಭಂಗಿಯಲ್ಲಿನ, ಅಸಭ್ಯ ನೃತ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. 64 ವರ್ಷದ ಬಾಲಕೃಷ್ಣ ಅವರು 30 ವರ್ಷದ ಮಗಳ ವಯಸ್ಸಿನ ನಟಿ ಊರ್ವಶಿ ರೌಟೇಲಾ ಅವರೊಂದಿಗೆ ತೀರಾ ಕೆಟ್ಟದಾಗಿ ಹೆಜ್ಜೆ ಹಾಕಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು “ಯುವತಿಯೊಬ್ಬಳು ತನ್ನ ತಾತನ ಜತೆ ನೃತ್ಯ ಮಾಡುತ್ತಿದ್ದಾಳೆ” ಎಂದೂ ಕಾಮೆಂಟ್ ಮಾಡಿದ್ದರು.
ಇಲ್ಲಿದೆ ವೈರಲ್ ಆದ ವಿಡಿಯೋ
