ಕನ್ನಡ ಸುದ್ದಿ  /  Entertainment  /  Adipurush Teaser Netizens Trolled Film For Cartoonish Vfx

Adipurush Teaser Trolled: ಟ್ರೋಲರ್ಸ್‌ ಕೈಗೆ ಸಿಕ್ಕ ‘ಆದಿಪುರುಷ್‌’ ವಿಲ ವಿಲ!; ಇಲ್ಲಿವೆ ನೋಡಿ ಬಗೆ ಬಗೆ ಮೀಮ್‌ಗಳು..

ಆದಿಪುರುಷ್ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ನೋಡುಗರು ಅಚ್ಚರಿ ಕಣ್ಣಿನಿಂದ ನೋಡಿದರೆ, ಇನ್ನು ಕೆಲವರು ಕಾರ್ಟೂನ್‌ಗೆ ಹೋಲಿಕೆ ಮಾಡಿದ್ದಾರೆ. ಟೀಸರ್‌ನಲ್ಲಿನ ಅತಿಯಾದ ವಿಎಫ್‌ಎಕ್ಸ್‌ ಗ್ರಾಫಿಕ್ಸ್‌ ಬಳಕೆ ಕಂಡು ಬೇರೆ ಬೇರೆ ಸಿನಿಮಾಗಳಿಗೂ ಕಂಪೇರ್‌ ಮಾಡುತ್ತಿದ್ದಾರೆ.

‘ಆದಿಪುರುಷ್‌’ ಚಿತ್ರದ ಟೀಸರ್‌ ಹುರಿದು ಮುಕ್ಕಿದ ನೆಟ್ಟಿಗರು; ಈ ಮೀಮ್‌ಗಳನ್ನು ನೋಡಿ ನಕ್ಕುಬಿಡಿ..
‘ಆದಿಪುರುಷ್‌’ ಚಿತ್ರದ ಟೀಸರ್‌ ಹುರಿದು ಮುಕ್ಕಿದ ನೆಟ್ಟಿಗರು; ಈ ಮೀಮ್‌ಗಳನ್ನು ನೋಡಿ ನಕ್ಕುಬಿಡಿ.. (Twitter)

ತಾನಾಜಿ ಸಿನಿಮಾ ಮಾಡಿ ಗೆದ್ದಿದ್ದ ನಿರ್ದೇಶಕ ಓಂ ರಾವತ್‌, ಇದೀಗ ‘ಆದಿಪುರುಷ್‌’ ಸಿನಿಮಾ ಹೊರತರುವ ಪ್ರಯತ್ನದಲ್ಲಿದ್ದಾರೆ. ಮೊದಲಾರ್ಥ ಈ ಚಿತ್ರದ ಮೊದಲ ಟೀಸರ್‌ ಬಿಡುಗಡೆಯಾಗಿದೆ. ಪೌರಾಣಿಕ ಕಥಾನಕ ರಾಮಾಯಣ ಆಧರಿತ ಈ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್‌ ಕಾಣಿಸಿಕೊಂಡರೆ, ರಾವಣನಾಗಿ ಸೈಫ್‌ ಅಲಿಖಾನ್‌ ಅಬ್ಬರಿಸಿದ್ದಾರೆ. ಈ ಸಿನಿಮಾ ನಿರ್ಮಾಣಕ್ಕೆ ಬರೋಬ್ಬರಿ 700 ಕೋಟಿಯನ್ನು ವ್ಯಯಿಸಿದೆಯಂತೆ ನಿರ್ಮಾಣ ಸಂಸ್ಥೆ.

ಹೀಗೆ ಬಿಡುಗಡೆ ಆಗಿರುವ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ನೋಡುಗರು ಅಚ್ಚರಿ ಕಣ್ಣಿನಿಂದ ನೋಡಿದರೆ, ಇನ್ನು ಕೆಲವರು ಕಾರ್ಟೂನ್‌ಗೆ ಹೋಲಿಕೆ ಮಾಡಿದ್ದಾರೆ. ಟೀಸರ್‌ನಲ್ಲಿನ ಅತಿಯಾದ ವಿಎಫ್‌ಎಕ್ಸ್‌ ಗ್ರಾಫಿಕ್ಸ್‌ ಬಳಕೆ ಕಂಡು ಬೇರೆ ಬೇರೆ ಸಿನಿಮಾಗಳಿಗೂ ಕಂಪೇರ್‌ ಮಾಡುತ್ತಿದ್ದಾರೆ. ಒಂದಷ್ಟು ಮಂದಿ ಕೊಂಚ ಏರು ಧ್ವನಿಯಲ್ಲಿಯೇ ಸಿನಿಮಾ ತಂಡಕ್ಕೆ ತರಾಟೆ ತೆಗೆದುಕೊಂಡಿದ್ದಾರೆ. 700 ಕೋಟಿಯ ಟೆಂಪಲ್‌ ರನ್‌ ಎಂದು ಟ್ರೋಲ್‌ ಮಾಡಿದರೆ, ರಾವಣನ ಆರ್ಮಿ ಕಟಿಂಗ್‌ ಬಗ್ಗೆಯೂ ತೆಗಳಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆದ ಟೀಸರ್‌

IPL_Entry_Point