Sreeleela: ಇಬ್ಬರು ಮಕ್ಕಳನ್ನು ದತ್ತು ಪಡೆದ ನಟಿ ಶ್ರೀಲೀಲಾ; ನಟಿಯ ಆಂತರಿಕ ಸೌಂದರ್ಯಕ್ಕೆ ಸೋತ ಅಭಿಮಾನಿಗಳು
Sreeleela: ಶ್ರೀಲೀಲಾ ಅಭಿಮಾನಿಗಳ ಮನವನ್ನು ಮತ್ತೊಮ್ಮೆ ಗೆದ್ದಿದ್ದಾರೆ. ಅನಾಥಾಶ್ರಮಕ್ಕೆ ಹೋದಾಗ ಇಬ್ಬರು ಮಕ್ಕಳನ್ನು ಶ್ರೀಲೀಲಾ ದತ್ತು ಪಡೆದ ವಿಚಾರ ಈಗ ವೈರಲ್ ಆಗುತ್ತಿದೆ.

ನಟಿ ಶ್ರೀಲೀಲಾ ಗುರು ಮತ್ತು ಶೋಭಿತಾ ಎಂಬ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ. ಕೆಲ ವರ್ಷಗಳ ಹಿಂದೆಯೇ ಅವರು ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ. ವರದಿಗಳ ಪ್ರಕಾರ ಶ್ರೀಲಿಲಾ ಅನಾಥಾಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗುರು ಮತ್ತು ಶೋಭಿತಾ ಎಂಬ ಇಬ್ಬರು ಮಕ್ಕಳನ್ನು ನೇರವಾಗಿ ಭೇಟಿಯಾಗಿದ್ದರು. ಆ ಮಕ್ಕಳನ್ನು ನೋಡಿ ಅವರ ಜೀವನವನ್ನು ಸುಂದರಗೊಳಿಸಬೇಕು ಎಂದು ನಿರ್ಧಾರ ಮಾಡಿದ ಶ್ರೀಲೀಲಾ ಆ ಮಕ್ಕಳನ್ನು ದತ್ತು ಪಡೆದಿದ್ದಾರೆ. ‘ಬೈ ಟು ಲವ್’ ಎಂಬ ಸಿನಿಮಾ ಬಿಡುಗಡೆಗೆ ಕೆಲವು ದಿನಗಳಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಕೇವಲ 23 ವರ್ಷ ವಯಸ್ಸಿನ ಶ್ರೀಲೀಲಾ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಸಿನಿಪ್ರಿಯರ ಮನ ಗೆದ್ದಿದ್ದಾರೆ. ಸಾಂಪ್ರದಾಯಿಕ ಕುಟುಂಬದಿಂದ ಬಂದ ಶ್ರೀಲೀಲಾ ವಿದ್ಯಾವಂತೆಯೂ ಹೌದು. ವೈದ್ಯಕೀಯ ಅಧ್ಯಯನವನ್ನು ಪೂರ್ಣಗೊಳಿ ನಂತರ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. 2021 ರಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ಧಾರೆ. ನಟಿ ಶ್ರೀಲೀಲಾ ಕಿಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಶ್ರೀಲೀಲಾ ಆಂತರಿಕ ಸೌಂದರ್ಯ ಮೆಚ್ಚಿದ ಅಭಿಮಾನಿಗಳು
ಶ್ರೀಲೀಲಾಗೆ ಸಾಲು ಸಾಲು ಸಿನಿಮಾದಲ್ಲಿ ನಟಿಸುವ ಅವಕಾಶಗಳು ಬರುತ್ತಲೇ ಸಾಗಿತು. ಅದರಂತೆ ಶ್ರೀಲೀಲಾ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಹೆಸರು ಗಳಿಸುತ್ತಾ ಬಂದಿದ್ದಾರೆ. ನಟನೆ ಮಾತ್ರವಲ್ಲ ಅವರು ಉತ್ತಮ ಡಾನ್ಸರ್ ಕೂಡ ಹೌದು. ನೃತ್ಯಾಭ್ಯಾಸ ಮಾಡಿ ಭರತನಾಟ್ಯದಲ್ಲಿ ಪರಿಣಿತಿ ಹೊಂದಿದ್ದಾರೆ. ಹೀಗೆ ಸಾಕಷ್ಟು ವಿಚಾರಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿದ್ಯೆ, ಕಲೆ ಹಾಗೂ ಕರುಣೆ ಮತ್ತು ಪ್ರೀತಿ ಹೊಂದಿರುವ ನಟಿ ಶ್ರೀಲೀಲಾ ಎನ್ನಬಹುದು. ಶ್ರೀಲೀಲಾ ಬಾಹ್ಯ ಸೌಂದರ್ಯ ಮಾತ್ರವಲ್ಲದೆ ಆಂತರಿಕ ಸೌಂದರ್ಯದಿಂದಲೂ ಜನಮನ ಸೆಳೆದಿದ್ದಾರೆ.
2025ರಲ್ಲಿ ಸಾಲು ಸಾಲು ಅವಕಾಶ
2024ರಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ ಕೇವಲ ಒಂದೇ ಒಂದು ಸಿನಿಮಾ ಬಿಡುಗಡೆ ಆಗಿತ್ತು. ಮಹೇಶ್ ಬಾಬು ಜತೆಗಿನ ಗುಂಟೂರು ಖಾರಂನಲ್ಲಿ ನಟಿಸಿದರೂ, ಗೆಲುವು ದಕ್ಕಲಿಲ್ಲ. ಅಲ್ಲಿಂದಾಚೆಗೆ ಅವರ ಬೇರಾವ ಸಿನಿಮಾಗಳು ಬಿಡುಗಡೆ ಆಗಲಿಲ್ಲ. ಈಗ ಸೋಲಿನ ಸುಳಿಯಿಂದ ಹೊರಬಂದಿದ ಶ್ರೀಲೀಲಾ, ಒಂದಲ್ಲ ಎರಡಲ್ಲ ಐದು ಸಿನಿಮಾಗಳು ಇವರ ಬತ್ತಳಿಕೆಯಲ್ಲಿವೆ.
