ಐಶ್ವರ್ಯಾ ರಾಜೇಶ್ ಅಭಿನಯದ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ಡ್ರೈವರ್ ಜಮುನಾ’; ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 3 ವರ್ಷಕ್ಕೆ ಒಟಿಟಿ ಪ್ರವೇಶ
ಕನ್ನಡ ಸುದ್ದಿ  /  ಮನರಂಜನೆ  /  ಐಶ್ವರ್ಯಾ ರಾಜೇಶ್ ಅಭಿನಯದ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ಡ್ರೈವರ್ ಜಮುನಾ’; ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 3 ವರ್ಷಕ್ಕೆ ಒಟಿಟಿ ಪ್ರವೇಶ

ಐಶ್ವರ್ಯಾ ರಾಜೇಶ್ ಅಭಿನಯದ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ಡ್ರೈವರ್ ಜಮುನಾ’; ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 3 ವರ್ಷಕ್ಕೆ ಒಟಿಟಿ ಪ್ರವೇಶ

Driver Jamuna: ಐಶ್ವರ್ಯಾ ರಾಜೇಶ್ ಅಭಿನಯದ ಕಾಲಿವುಡ್ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ಡ್ರೈವರ್ ಜಮುನಾ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೂರು ವರ್ಷಗಳ ನಂತರ ಅಮೆಜಾನ್ ಪ್ರೈಮ್ ಒಟಿಟಿಗೆ ಪಾದಾರ್ಪಣೆ ಮಾಡಿದೆ.

ಐಶ್ವರ್ಯಾ ರಾಜೇಶ್ ಅಭಿನಯದ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ಡ್ರೈವರ್ ಜಮುನಾ’ ಒಟಿಟಿ ಪ್ರವೇಶ
ಐಶ್ವರ್ಯಾ ರಾಜೇಶ್ ಅಭಿನಯದ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ಡ್ರೈವರ್ ಜಮುನಾ’ ಒಟಿಟಿ ಪ್ರವೇಶ

ಐಶ್ವರ್ಯಾ ರಾಜೇಶ್ ನಾಯಕಿಯಾಗಿ ನಟಿಸಿರುವ 'ಡ್ರೈವರ್ ಜಮುನಾ' ಚಿತ್ರ ಬಿಡುಗಡೆಯಾದ ಮೂರು ವರ್ಷಗಳ ನಂತರ ಒಟಿಟಿಗೆ ಪಾದಾರ್ಪಣೆ ಮಾಡಿದೆ. ಈ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರ ಈಗಾಗಲೇ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಆಹಾ ಒಟಿಟಿಯಲ್ಲಿ ಲಭ್ಯವಿದೆ. ತಮಿಳು ಆವೃತ್ತಿ ಮಾತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ.

ಕ್ರೈಮ್ ಥ್ರಿಲ್ಲರ್ ಕಥಾಹಂದರ

ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾ ‘ಡ್ರೈವರ್ ಜಮುನಾ’. ಈ ಸಿನಿಮಾವನ್ನು ಕಿನ್‌ಸ್ಲಿನ್‌ ನಿರ್ದೇಶಿಸಿದ್ದಾರೆ. 2022ರಲ್ಲಿ ಬಿಡುಗಡೆಯಾದ ಈ ಚಿತ್ರವು ಆ ಸಂದರ್ಭದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಐಶ್ವರ್ಯಾ ರಾಜೇಶ್ ಅಭಿನಯ ಮತ್ತು ಕಥೆಯಲ್ಲಿನ ತಿರುವುಗಳು ಪ್ರೇಕ್ಷಕರನ್ನು ಆಕರ್ಷಿಸಿದ್ದವು. ವಿಶೇಷವಾಗಿ ಕ್ಲೈಮ್ಯಾಕ್ಸ್ ಟ್ವಿಸ್ಟ್ಅನ್ನು ನಿರ್ದೇಶಕರು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಸೇಡು ತೀರಿಸಿಕೊಳ್ಳುವ ಕೆಲ ಸನ್ನಿವೇಷಗಳು ಸಿನಿಮಾದಲ್ಲಿ ಬರುತ್ತವೆ. ಆ ಸನ್ನಿವೇಷಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಿಬ್ರಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಇದು ಡ್ರೈವರ್ ಜಮುನಾ ಕಥೆ

ಜಮುನಾ (ಐಶ್ವರ್ಯಾ ರಾಜೇಶ್) ತಂದೆ ಸುಂದರಂ ಕೊಲೆಯಾಗುತ್ತಾನೆ. ತಾಯಿ ಅನಾರೋಗ್ಯಕ್ಕೆ ಒಳಗಾಗುವುದರಿಂದ ಕುಟುಂಬದ ಜವಾಬ್ದಾರಿಗಳು ಜಮುನಾ ಮೇಲೆ ಬೀಳುತ್ತವೆ. ಆಕೆಯ ತಂದೆ ಕ್ಯಾಬ್ ಓಡಿಸುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿರುತ್ತಾರೆ. ಆದರೆ ಅವರು ಮೃತರಾದ ನಂತರ ವಿಧಿ ಇಲ್ಲದೆ ಜಮುನಾ ಆ ಕೆಲಸ ಆರಂಭಿಸುತ್ತಾಳೆ. ಒಂದು ದಿನ ಅವಳ ಕ್ಯಾಬ್ಅನ್ನು ಮೂವರು ವ್ಯಕ್ತಿಗಳು ಬುಕ್ ಮಾಡುತ್ತಾರೆ. ಕಾರಿನಲ್ಲಿರುವ ಮೂವರು ಕೊಲೆಗಡುಕರು ಎಂಬ ಸಂಗತಿ ಜಮುನಾಗೆ ಗೊತ್ತಾಗುತ್ತದೆ.

ಕೊಲೆಗಾರರನ್ನು ಪೊಲೀಸರಿಗೆ ಒಪ್ಪಿಸುವ ಪ್ರಯತ್ನವನ್ನು ಜಮುನಾ ಮಾಡುತ್ತಾಳೆ. ಆದರೆ ಅದು ವಿಫಲವಾಗುತ್ತದೆ. ಕೊಲೆಗಾರರಿಗೆ ಇವಳ ಮೇಲೆ ಅನುಮಾನ ಬರುತ್ತದೆ. ಅವರು ಜಮುನಾಳನ್ನೇ ಕೊಲ್ಲುವ ಪ್ರಯತ್ನ ಮಾಡುತ್ತಾರೆ. ಅದರ ನಂತರ ಏನಾಯಿತು? ಕೊಲೆಗಾರರಿಂದ ಜಮುನಾ ಹೇಗೆ ತಪ್ಪಿಸಿಕೊಂಡಳು? ವೆಂಕಟರಾವ್ ಅವರನ್ನು ಯಾಕೆ ಕೊಲ್ಲುವ ಪ್ರಯತ್ನ ನಡೆದಿತ್ತು? ಈ ಎಲ್ಲ ವಿಚಾರಗಳು ಸಹ ಸಿನಿಮಾದಲ್ಲಿ ಥ್ರಿಲ್ ನೀಡುತ್ತಾ ಸಾಗುತ್ತದೆ.

ಅತಿದೊಡ್ಡ ಬ್ಲಾಕ್ಬಸ್ಟರ್

ಐಶ್ವರ್ಯಾ ರಾಜೇಶ್ ಅಭಿನಯದ ಸಿನಿಮಾಗಳ ಕಥೆ ಚೆನ್ನಾಗಿರುತ್ತದೆ. ಅವರ ಅಭಿನಯದಿಂದಲೇ ಸಿನಿಮಾ ಇನ್ನಷ್ಟು ಸುಂದರಗೊಳ್ಳುತ್ತವೆ ಎಂಬ ಪ್ರಶಂಸೆಯನ್ನು ಐಶ್ವರ್ಯಾ ರಾಜೇಶ್ ಪಡೆದುಕೊಂಡಿದ್ದಾರೆ. ಐಶ್ವರ್ಯಾ ರಾಜೇಶ್ ಮಲಯಾಳಂ ಭಾಷೆಗಳಲ್ಲಿ ಆರು ಹೊಸ ಸಿನಿಮಾಗಳನ್ನು ಮಾಡಲು ಒಪ್ಪಿಕೊಂಡಿದ್ದಾರಂತೆ. ಸಿನಿಮಾ ರಂಗಕ್ಕೆ ಅಪಾರವಾದ ಕೊಡುಗೆಗಳನ್ನು ಅವರು ನೀಡುತ್ತಾ ಬಂದಿದ್ದಾರೆ. ಅಭಿಮಾನಗಳ ಸಂಖ್ಯೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥೆ ಇಷ್ಟಪಡುವ ಸಾಕಷ್ಟು ಜನರಿದ್ದಾರೆ. ಅವರೆಲ್ಲರಿಗೂ ಈ ಸಿನಿಮಾ ಇನ್ನಷ್ಟು ಖುಷಿ ಕೊಡಲಿದೆ. ಅಮೆಜಾನ್‌ ಪ್ರೈಂ ವಿಡಿಯೋ ಅಥವಾ ಆಹಾ ಒಟಿಟಿಯಲ್ಲಿ ನೀವು ಈ ಸಿನಿಮಾ ವೀಕ್ಷಿಸಬಹುದು.

ಚಿತ್ರರಂಗದಲ್ಲಿ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ, ಕಿರುಕುಳ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತಿದ ನಟಿ ಐಶ್ವರ್ಯಾ ರಾಜೇಶ್. ಕಲಾವಿದೆಯರಿಗೆ ಚಿತ್ರೀಕರಣ ಸ್ಥಳಗಳಲ್ಲಿ ಅಗತ್ಯವಿರುವ ವ್ಯವಸ್ಥೆ ಮಾಡಬೇಕು. ಸರಿಯಾದ ಶೌಚಾಲಯ ವ್ಯವಸ್ಥೆ ಸಿಗಬೇಕು ಎಂಬ ವಿಚಾರವನ್ನು ಇತ್ತೀಚಿಗೆ ಹಂಚಿಕೊಂಡಿದ್ದಾರೆ.

Suma Gaonkar

eMail
Whats_app_banner